'ಆದಿಪುರುಷ್' ಡೈಲಾಗ್ ವಿವಾದ.. ಕೊನೆಗೂ ಜನರಿಗೆ ಭೇಷರತ್ ಕ್ಷಮೆಯಾಚಿಸಿದ ಡೈಲಾಗ್ ರೈಟರ್!

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಸಿನಿಮಾ 'ಆದಿಪುರುಷ್' ವಿವಾದಕ್ಕೆ ಒಳಗಾಗಿದ್ದು ಗೊತ್ತೇ ಇದೆ. ಸಿನಿಮಾದ ಪಾತ್ರಗಳು ಹಾಗೂ ಡೈಲಾಗ್ ಬಗ್ಗೆ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅದರಲ್ಲೂ ಡೈಲಾಗ್ ರೈಟರ್ ಮನೋಜ್ ಮುಂತಾಶಿರ್ ವಿರುದ್ಧ ಕಿಡಿಕಾರಿದ್ದರು.

'ಆದಿಪುರುಷ್' ಸಿನಿಮಾದ ಟೀಸರ್ ರಿಲೀಸ್ ಆದಾಗಾ, ಕಳಪೆ VFX ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದರು. ಆದರೆ, ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಡೈಲಾಗ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಸಿನಿಮಾದ ಡೈಲಾಗ್ ರೈಟರ್ ಮನೋಜ್ ಮುಂತಾಶಿರ್ ಹಲವು ಬಾರಿ ಸಮಜಾಯಿಷಿ ಕೊಡುವುದಕ್ಕೆ ಯತ್ನಿಸಿದ್ದರು. ಆದರೆ, ಪ್ರೇಕ್ಷಕರ ಆಕ್ರೋಶದ ಮುಂದೆ ಅದ್ಯಾವುದೂ ನಡೆಯಲಿಲ್ಲ.

Amid controversy Adipurush dialogue writer Manoj Muntashir asks for an apology

ಹನುಮಂತನ ಪಾತ್ರಗಳಿಗೆ ಬರೆದ ಡೈಲಾಗ್‌ಗಳು ಪ್ರೇಕ್ಷಕರ ನಿದ್ದೆ ಕೆಡಿಸಿತ್ತು. ಕೆಲವರು ಮನೋಜ್ ಮುಂತಾಶಿರ್‌ಗೆ ಬೆದರಿಕೆ ಕರೆಗಳನ್ನೂ ಮಾಡಿದ್ದರು. ಹೀಗಾಗಿ ಪೊಲೀಸರು ಭದ್ರತೆಯನ್ನು ನೀಡಿದ್ದರು. ಇಂದು ಮನೋಜ್ ಮುಂತಾಶಿರ್ ಸೋಶಿಯಲ್ ಮೀಡಿಯಾ ಮೂಲಕ ಕ್ಷಮೆಯಾಚಿಸಿದ್ದಾರೆ.

ಮನೋಜ್ ಮುಂತಾಶಿರ್ ಕ್ಷಮೆ

ಜೀವ ಬೆದರಿಕೆ ಕರೆಗಳನ್ನು ಸ್ವೀಕರಿಸಿದ ಬಳಿಕ 'ಆದಿಪುರುಷ್' ಸಿನಿಮಾ ಡೈಲಾಗ್ ರೈಟರ್ ಮನೋಜ್ ಮುಂತಾಶಿರ್ ಭೇಷರತ್ ಕ್ಷಮೆ ಯಾಚಿಸಿದ್ದಾರೆ. ಕೆಲವು ವರ್ಗದ ಜನರು ಮನೋಜ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕೊನೆಗೂ ಕ್ಷಮೆ ಕೇಳಿದ್ದಾರೆ.

"ಆದಿಪುರುಷ್ ಸಿನಿಮಾದಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಒಪ್ಪಿಕೊಳ್ಳುತ್ತೇನೆ. ಈ ಮೂಲಕ ಕೈ ಮುಗಿದು ಭೇಷರತ್ ಕ್ಷಮೆಯಾಚಿಸುತ್ತೇನೆ. ಪ್ರಭು ಭಜರಂಗ್ ಬಲಿ ನಮ್ಮೆಲ್ಲರನ್ನು ಒಗ್ಗಟ್ಟಾಗಿ ಇಟ್ಟು, ಶಕ್ತಿ ನೀಡಲಿ." ಎಂದು ಪೋಸ್ಟ್ ಮಾಡಿದ್ದಾರೆ.

"ಭಜರಂಗ ಬಲಿ ದೇವರಲ್ಲ"

'ಆದಿಪುರುಷ್' ಸಿನಿಮಾ ವಿವಾದಕ್ಕೆ ಒಳಗಾಗುತ್ತಿದ್ದಂತೆ ಡೈಲಾಗ್ ರೈಟರ್ ಮನೋಜ್ ಮುಂತಾಶಿರ್ ಸಂದರ್ಶನ ನೀಡಿದ್ದರು. ಈ ವೇಳೆ ಕೆಲ ಖಾಸಗಿ ವಾಹಿನಿಗಳಲ್ಲಿ ಭಜರಂಗ ಬಲಿ ದೇವರಲ್ಲ ಎಂದು ಹೇಳಿಕೆ ನೀಡಿದ್ದರು. ಮೊದಲ ಸಿನಿಮಾದಲ್ಲಿ ಹನುಮಂತನ ಡೈಲಾಗ್‌ಗಳನ್ನು ಕೇಳಿ ಕೆರಳಿದ್ದ ಜನರು ಈ ಹೇಳಿಕೆಯಿಂದ ಕೆಂಡಾಮಂಡಲವಾಗಿದ್ದರು.

"ಭಜರಂಗ ಬಲಿ ದೇವರಲ್ಲ. ಆದರೆ ಒಬ್ಬ ಭಕ್ತ. ನಾವು ಅವನನ್ನು ದೇವರನ್ನಾಗಿ ಮಾಡಿದ್ದೇವೆ. ಯಾಕಂದರೆ, ಅವನ ಭಕ್ತಿಯಲ್ಲಿ ಅಂತ ಶಕ್ತಿ ಇತ್ತು." ಎಂದು ಹೇಳಿದ್ದರು. ಈ ಹೇಳಿಕೆಯನ್ನು ಕೇಳಿದ ಮೇಲಂತೂ ಜನರು ಮನೋಜ್ ಮುಂತಾಶಿರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.

'ಆದಿಪುರುಷ್' ಸಿನಿಮಾಗೆ ನಷ್ಟ

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ 'ಆದಿಪುರುಷ್' ಸಿನಿಮಾ ಜನರಿಗೆ ಇಷ್ಟ ಆಗಿಲ್ಲ. ಓಂ ರಾವುತ್ ನಿರ್ದೇಶನಕ್ಕೆ ಪ್ರೇಕ್ಷಕರು ಕಿಡಿಕಾರಿದ್ದರು ಹೀಗಾಗಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿದೆ. 500 ಕೋಟಿ ರೂ. ಬಜೆಟ್ ಸಿನಿಮಾ ಬಾಕ್ಸಾಪೀಸ್‌ನಲ್ಲಿ ಕೇವಲ 410 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಇದರಲ್ಲಿ ನಿರ್ಮಾಪಕ ಜೇಬು ಸೇರಿದ್ದೆಷ್ಟು ಅನ್ನೋದು ಇನ್ನೋದು ಇನ್ನೂ ಅಧಿಕೃತವಾಗಿ ತಿಳಿದು ಬಂದಿಲ್ಲ. ಮೂಲಗಳ ಪ್ರಕಾರ, 'ಆದಿಪುರುಷ್' ನಿರ್ಮಿಸಿದ ಟಿ ಸೀರಿಸ್ ಸಂಸ್ಥೆಗೆ ತುಂಬಾನೇ ನಷ್ಟ ಆಗಿದೆ ಎಂದು ವರದಿ ಮಾಡಲಾಗಿದೆ.

More from Filmibeat

English summary
Amid controversy Adipurush dialogue writer Manoj Muntashir asks for an apology, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X