ಪ್ರೊ ಕಬಡ್ಡಿಯಲ್ಲಿ ಪತಿ ತಂಡಕ್ಕೆ ಚೀಯರ್ ಮಾಡಿದ ಐಶ್ವರ್ಯಾ;"ಡಿವೋರ್ಸ್ ಕಥೆ ಏನಾಯ್ತು?" ಎಂದ ನೆಟ್ಟಿಗರು
ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಟಿ ಐಶ್ವರ್ಯಾ ರೈ ವಿಚ್ಛೇದನದ ಬಗ್ಗೆನೇ ಸುದ್ದಿಯಾಗುತ್ತಿತ್ತು. ಐಶ್ವರ್ಯಾ ಹಾಗೂ ಅಭಿಷೇಕ್ ಬೇರೆಯಾಗುತ್ತಿದ್ದಾರೆ. ಐಶ್ವರ್ಯಾ ರೈ ಗಂಡನ ಮನೆ ತೊರೆದು ತಾಯಿ ಮನೆಗೆ ಶಿಫ್ಟ್ ಆಗಿದ್ದಾರೆ. ಅಮಿತಾಭ್ ಬಚ್ಚನ್ ಮಧ್ಯಸ್ಥಿಕೆಯ ಹೊರತಾಗಿ ಏನೂ ವಿಚ್ಚೇದನಕ್ಕೆ ಮುಂದಾಗಿದ್ದಾರೆ. ಇಂತಹದ್ದೇ ಒಂದಿಷ್ಟು ವದಂತಿ ಓಡಾಡಿದ್ದರು.
ಈ ಎಲ್ಲಾ ವದಂತಿಗಳ ಬಳಿಕ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನ ಗ್ಯಾರಂಟಿ ಅಂತಲೇ ಫ್ಯಾನ್ಸ್ ಅಂದುಕೊಂಡಿದ್ದರು. ಇವರಿಬ್ಬರ ಬಗ್ಗೆ ಏನೇ ಸುದ್ದಿ ಹರಿದಾಡಿದ್ದರೂ, ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಈ ಬಗ್ಗೆ ಬಾಯಿಬಿಟ್ಟಿರಲಿಲ್ಲ. ಹೀಗಾಗಿ ಐಶ್ವರ್ಯಾ ಹಾಗೂ ಬಚ್ಚನ್ ಕುಟುಂಬದ ಅಭಿಮಾನಿಗಳು ಗೊಂದಲಕ್ಕೆ ಸಿಲುಕಿದ್ದರು.

ಆದ್ರೀಗ ಈ ಎಲ್ಲಾ ವದಂತಿಗಳಿಗೆ ಐಶ್ವರ್ಯಾ ರೈ ಹಾಗೂ ಬಚ್ಚನ್ ಕುಟುಂಬ ಟಕ್ಕರ್ ಕೊಟ್ಟಿದೆ. ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಪತಿ ಅಭಿಷೇಕ್ ಒಡೆತನದ ಜೈಪುರ ಪಿಂಕ್ ಫ್ಯಾಂಥರ್ಸ್ ಸಪೋರ್ಟ್ ಮಾಡುವುದಕ್ಕೆ ಐಶ್ವರ್ಯಾ ರೈ, ಪುತ್ರಿ ಆರಾಧ್ಯ, ಅಭಿಷೇಕ್ ಬಚ್ಚನ್ ಹಾಗೂ ಅಮಿತಾಭ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬಚ್ಚನ್ ಕುಟುಂಬದೊಂದಿಗೆ ಐಶ್ವರ್ಯಾ ರೈ ಕಾಣಿಸಿಕೊಂಡ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ವೀವ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಹಾಗೂ ಫಾಲೋವರ್ಸ್ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಕೆಲವರು ಕುತೂಹಲದಿಂದ " ಆ ಡಿವೋರ್ಸ್ ಗ್ಯಾಂಗ್ ಈಗ ಎಲ್ಲಿ ಹೋಯ್ತು." ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಹಾಗೇ ಮತ್ತೊಬ್ಬರು " ಇವರಿಬ್ಬರ ವಿಚ್ಛೇದನದ ಸುಳ್ಳು ಸುದ್ದಿಯನ್ನು ಸಂಭ್ರಮಿಸುವ ಜನರು ಈಗ ಎಲ್ಲಿಗೆ ಹೋದರು", "ಓಕೆ.. ಇದೂವರೆಗಿನ ಎಲ್ಲಾ ವದಂತಿಗಳು ಕೇವಲ ವದಂತಿಗಳಾಗಿಯೇ ಉಳಿದವು" ಎಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಕೆಲವು ದಿನಗಳಿಂದ ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಇಬ್ಬರೂ ವಿಚ್ಚೇದನಕ್ಕೆ ಮುಂದಾಗಿದ್ದಾರೆಂದು ವದಂತಿಗಳು ಹಬ್ಬಿದ್ದವು. 50 ವರ್ಷ ಐಶ್ವರ್ಯಾ ಹಾಗೂ 13 ವರ್ಷದ ಆರಾಧ್ಯರನ್ನು ಮನೆಯಿಂದ ಹೊರಹಾಕಿದ್ದಾರೆ. ಐಶ್ವರ್ಯಾ ಅತ್ತೆ ಜಯಬಚ್ಚನ್ ಜೊತೆ ಮುನಿಸಿಕೊಂಡಿದ್ದಾರೆ. ಅಮಿತಾಭ್ ಪುತ್ರಿ ಶ್ವೇತಾ ಬಚ್ಚನ್ ಇವರಿಬ್ಬರ ವಿಚ್ಛೇದನಕ್ಕೆ ಕಾರಣ ಅಂತೆಲ್ಲ ಸುದ್ದಿ ಹಬ್ಬಿದ್ದವು.
ಇಂತಹ ಸುದ್ದಿ ಹಬ್ಬಿದಾಗಲೇ ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ 'ಆರ್ಚೀಸ್' ಸಿನಿಮಾದ ಪ್ರೀಮಿಯರ್‌ನಲ್ಲಿ ಕಾಣಿಸಿಕೊಂಡಿದ್ದರು. ಶ್ವೇತಾ ನಂದಾ ಪುತ್ರ ಅಗಸ್ತ್ಯ ನಂದಾ ಈ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಆ ವೇಳೆನೂ ಈ ಎಲ್ಲಾ ವದಂತಿಗಳಿಗೂ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಬ್ರೇಕ್ ಹಾಕಿದ್ದರು. ಆದರೂ, ಇಬ್ಬರ ವಿಚ್ಚೇದನದ ಸುದ್ದಿಗೆ ಬ್ರೇಕ್ ಬಿದ್ದಿರಲಿಲ್ಲ.


Click it and Unblock the Notifications











