ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಾ ಮಾಜಿ ವಿಶ್ವ ಸುಂದರಿ? ಐಶ್ವರ್ಯಾ ರೈಗಿರುವ ಸಮಸ್ಯೆ ಏನು?

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳಿಂದ ಅಂತೂ ಇವರ ವಿಚ್ಛೇದನದ ಬಗ್ಗೆನೇ ಸುದ್ದಿ ಓಡಾಡುತ್ತಿತ್ತು. ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಾಂಪತ್ಯ ಜೀವನದಲ್ಲಿ ಸಮಸ್ಯೆಯಿದೆ ಅನ್ನೋ ಮಾತುಗಳು ಕೇಳಿ ಬರುತ್ತಲೇ ಇವೆ. ಇದೇ ಬೆನ್ನಲ್ಲೇ ಮತ್ತೊಂದು ಸುದ್ದಿ ಸಂಚಲನ ಸೃಷ್ಟಿಸಿದೆ.

ಬಾಲಿವುಡ್ ನಟಿ ಐಶ್ವರ್ಯಾ ರೈ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಐಶ್ವರ್ಯಾ ರೈ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಅದಕ್ಕಾಗಿಯೇ ಅವರ ದೇಹ ಸಂಪೂರ್ಣ ಬದಲಾಗಿದೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇತ್ತೀಚೆಗೆ ಇವರ ಆರೋಗ್ಯ ಸಮಸ್ಯೆಗೆ ಸಂಬಂಧ ಪಟ್ಟಂತೆ ಪೋಸ್ಟ್ ಒಂದು ವೈರಲ್ ಕೂಡ ಆಗಿತ್ತು.

Amid Divorce rumours another buzz is that Aishwarya Rai Battling Medical Condition Reddit Post went viral

ಇತ್ತೀಚೆಗಷ್ಟೇ ಐಶ್ವರ್ಯಾ ರೈ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಹೆಜ್ಜೆ ಹಾಕಿ ಬಂದಿದ್ದರು. ಆ ವೇಳೆ ಐಶ್ವರ್ಯಾ ರೈ ಧರಿಸಿದ ಕಾಸ್ಟ್ಯೂಮ್ ಹಾಗೂ ಹೇರ್‌ಸ್ಟೈಲ್ ಟ್ರೋಲಿಗರಿಗೆ ಆಹಾರ ಆಗಿತ್ತು. ಭಾರತವನ್ನು ಪ್ರತಿನಿಧಿಸಿದ್ದ ಐಶ್ವರ್ಯಾ ರೈ ಬಗ್ಗೆ ಕೆಲವು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಮತ್ತೆ ಕೆಲವರು ಅತೀಯಾಗಿ ತೂಕವನ್ನು ಹೆಚ್ಚಿಸಿಕೊಂಡಿದ್ದಕ್ಕೆ ಟ್ರೋಲ್ ಮಾಡುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿ ಕೂಡ ಐಶ್ವರ್ಯಾ ರೈ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಐಶ್ವರ್ಯಾ ರೈ ಧರಿಸಿದ್ದ ಕಾಸ್ಟ್ಯೂಮ್ ನೆಟ್ಟಿಗರಿಗೆ ಹಿಡಿಸಿಲ್ಲ. ಈ ನಟಿ ಧರಿಸಿದ್ದ ಡ್ರೆಸ್ ಹಾಗೂ ಹೇರ್‌ಸ್ಟೈಲ್ ಅನ್ನೇ ಇಟ್ಟು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಅದೂ ಅಲ್ಲದೆ ಐಶ್ವರ್ಯಾ ದಪ್ಪಗಾಗಿರುವ ಬಗ್ಗೆನೂ ಟ್ರೋಲ್ ಮಾಡಿದ್ದರು. ನೆಟ್ಟಿಗರು ಕೂಡ ಐಶ್ವರ್ಯಾ ಲುಕ್ ಬಗ್ಗೆ ಕಟು ಟೀಕೆ ಮಾಡಿದ್ದರು.

Amid Divorce rumours another buzz is that Aishwarya Rai Battling Medical Condition Reddit Post went viral

ಇದೇ ವೇಳೆ ರೆಡ್ಡಿಟ್‌ನಲ್ಲಿ ಪೋಸ್ಟ್ ಒಂದು ವೈರಲ್ ಆಗಿತ್ತು. ಈ ಪೋಸ್ಟ್‌ನಲ್ಲಿ ಐಶ್ವರ್ಯಾ ರೈ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಿಂದ ಅವರ ತೂಕ ಹೆಚ್ಚಾಗಿದೆ. ಈ ಕಾರಣಕ್ಕೆ ಸುಲಭವಾಗಿ ಅವರು ತಮ್ಮ ತೂಕವನ್ನು ಇಳಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ತಕ್ಷಣವೇ ಆ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದೆ.

ಅಂದ್ಹಾಗೆ ರೆಡ್ಡಿಟ್ ಯೂಸರ್ ಒಬ್ಬ ಹಾಕಿದ ಪೋಸ್ಟ್‌ನಲ್ಲಿ ಹೀಗಿತ್ತು. "ನನ್ನ ಸ್ನೇಹಿತ ಬಾಲಿವುಡ್‌ನಲ್ಲಿ ಕೆಲಸ ಮಾಡುತ್ತಾಳೆ. ಆಕೆ ಹೇಳಿದ ಪ್ರಕಾರ, ಐಶ್ವರ್ಯಾ ರೈ ಕೆಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದನ್ನು ನಾನು ಇಲ್ಲಿ ಬಹಿರಂಗ ಪಡಿಸುವುದಿಲ್ಲ.

ಆ ಕಾರಣದಿಂದ ಐಶ್ವರ್ಯಾ ಡಯೆಟ್ ಮಾಡುವುದಕ್ಕೆ ಆಗುವುದಿಲ್ಲ. ಅಲ್ಲದೆ ತೂಕ ಇಳಿಸಿಕೊಳ್ಳುವುದಕ್ಕೆ ಔಷಧಿಯ ಮೊರೆ ಹೋಗುವುದಕ್ಕೂ ಆಗುವುದಿಲ್ಲ. ಆಕೆಯ ಹೇರ್ ಸ್ಟೈಲಿಸ್ಟ್ ಅನ್ನು ದೂರಬೇಡಿ. ಆಕೆ ತನ್ನ ದೇಹವನ್ನು ಸಂಪೂರ್ಣವಾಗಿ ಕವರ್ ಮಾಡಿಕೊಳ್ಳುವಂತಹ ಕಾಸ್ಟ್ಯೂಮ್ ಅನ್ನು ಡಿಸೈನ್ ಮಾಡಿಕೊಳ್ಳುತ್ತಿದ್ದಾರೆ" ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಇಷ್ಟೇ ಅಲ್ಲದೆ ಐಶ್ವರ್ಯಾ ರೈ ತಾನು ಧರಿಸುವ ಧಿರಿಸುಗಳ ಜೊತೆ ಪ್ರಯೋಗ ಮಾಡುವುದಕ್ಕೆ ಸಿದ್ಧಳಿಲ್ಲ. ತನ್ನ ದೇಹವನ್ನು ಎಷ್ಟು ಕವರ್ ಮಾಡಿಕೊಳ್ಳಲು ಸಾಧ್ಯವೋ ಅಷ್ಟು ಕವರ್ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾಳೆ. ಸದ್ಯ ಈ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದೆ.

More from Filmibeat

English summary
Is that Aishwarya Rai Battling Medical Condition?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X