ಪ್ರಭಾಸ್ 'ರಾಧೆ ಶ್ಯಾಮ್' ಚಿತ್ರಕ್ಕೆ ಅಮಿತಾಬ್ ಬಚ್ಚನ್ ನಿರೂಪಣೆ: ಕನ್ನಡ, ಸೇರಿದಂತೆ 4 ಭಾಷೆಗಳಿಗ್ಯಾರು?

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ 'ರಾಧೆ ಶ್ಯಾಮ್' ಚಿತ್ರಕ್ಕೆ ಇದೇ ದೇಶವೇ ಕಾಯುತ್ತಿದೆ. ಮತ್ತೆ ತೆಲುಗಿನ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್‌ರನ್ನು ಲವ್‌ಸ್ಟೋರಿಯಲ್ಲಿ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಸಿನಿಮಾದ ಹಾಡುಗಳು, ಪೋಸ್ಟರ್, ಫಸ್ಟ್ ಲುಕ್ ಎಲ್ಲವೂ ಹಿಟ್ ಆಗಿದೆ. ಸೋಶಿಯಲ್ ಮೀಡಿಯಾಗಳಲ್ಲೂ ಸಿನಿಮಾ ಕಥೆ ಬಗ್ಗೆ, ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಜೋಡಿ ಬಗ್ಗೆ ಬೇಜಾನ್ ಚರ್ಚೆಯಾಗುತ್ತಿದೆ. ಇದೇ ವರ್ಷ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಬೇಕಿದ್ದ 'ರಾಧೆ ಶ್ಯಾಮ್' ಕೊರೊನಾ ಕಾರಣದಿಂದ ಬಿಡುಗಡೆ ದಿನವನ್ನು ಮುಂದೂಡಿತ್ತು. ಈ ಸಮಯದ ಲಾಭ ಪಡೆಯುತ್ತಿರುವ ಚಿತ್ರತಂಡ ಸಿನಿಮಾಗೆ ಹೊಸತನ್ನು ಸೇರಿಸಲು ಮುಂದಾಗಿದೆ. ಹೊಸ ವಿಷಯ ಏನಂದರೆ, 'ರಾಧೆ ಶ್ಯಾಮ್' ಚಿತ್ರತಂಡದ ಜೊತೆ ಅಮಿತಾಬ್ ಬಚ್ಚನ್ ಕೂಡ ಸೇರಿಕೊಂಡಿದ್ದಾರೆ.

Recommended Video

ತನ್ನ ಕನಸು ಈಡೇರಿದಕ್ಕೆ ಪ್ರಭಾಸ್ ಹೇಳಿದ್ದು ಹೀಗೆ.

ಅಮಿತಾಬ್ ಬಚ್ಚನ್ ಸ್ಟಾರ್‌ಡಮ್ ಹಾಗೂ ಧ್ವನಿ ಯಾವುದೇ ಸಿನಿಮಾಗೆ ಸಿಕ್ಕರೂ ಅದಕ್ಕೆ ಮತ್ತಷ್ಟು ತಾಕತ್ತು ಬಂದು ಬಿಡುತ್ತೆ. ಈ ಕಾರಣಕ್ಕೆ 'ರಾಧೆ ಶ್ಯಾಮ್' ತಂಡ ಕೂಡ ಬಿಗ್ ಬಿ ಧ್ವನಿಯನ್ನು ಬಳಸಿಕೊಳ್ಳಲು ನಿರ್ಧರಿಸಿತ್ತು. ಅದರಂತೆ ಪ್ರಭಾಸ್ ಸಿನಿಮಾಗೆ ಬಿಗ್ ಬಿ ಧ್ವನಿ ನೀಡಿದ್ದಾರೆ.

 'ರಾಧೆ ಶ್ಯಾಮ್' ಸಿನಿಮಾಗೆ ಬಿಗ್ ಬಿ ನಿರೂಪಣೆ

'ರಾಧೆ ಶ್ಯಾಮ್' ಸಿನಿಮಾಗೆ ಬಿಗ್ ಬಿ ನಿರೂಪಣೆ

ಪ್ಯಾನ್ ಇಂಡಿಯಾ ಸಿನಿಮಾ ಅಂದ್ಮೇಲೆ ಅದರದ್ದೇ ಆದ ತಾಕತ್ತು ಇರುತ್ತೆ. ಪ್ರತಿಯೊಂದು ಭಾಷೆಗೂ ಅದರ ನೇಟಿವಿಟಿಗೆ ತಕ್ಕಂತೆ ಕೆಲವು ಮಾರ್ಪಾಡುಗಳನ್ನು ಮಾಡಬೇಕಾಗುತ್ತೆ. 'ರಾಧೆ ಶ್ಯಾಮ್' ಚಿತ್ರತಂಡ ಕೂಡ ಬಾಲಿವುಡ್ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಬಳಿ ಈ ಸಿನಿಮಾಗೆ ಧ್ವನಿ ಕೊಡಿಸಲಾಗಿದೆ. ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ಈ ಸಿನಿಮಾವನ್ನು ಬಿಗ್ ಬಿ ಅಮಿತಾಬ್ ಬಚ್ಚನ್ ನಿರೂಪಣೆ ಮಾಡಲಿದ್ದಾರೆ. ಈಗಾಗಲೇ ಧ್ವನಿ ನೀಡುವ ಕೆಲಸ ಕೂಡ ಮುಗಿದಿದೆ.

ಬಿಗ್ ಬಿಗೆ ಚಿತ್ರತಂಡದಿಂದ ಧನ್ಯವಾದ

'ರಾಧೆ ಶ್ಯಾಮ್‌'ಗೆ ಅಮಿತಾಬ್ ಬಚ್ಚನ್ ಧ್ವನಿ ನೀಡಿದರೆ ಎಲ್ಲಿವರೆಗೆ ತಲುಪಬಹುದು ಅನ್ನುವುದು ಚಿತ್ರತಂಡಕ್ಕೆ ಗೊತ್ತಿದೆ. ಹೀಗಾಗಿಯೇ ಬಿಗ್ ಬಿಗೆ ರಾಧೆ ಶ್ಯಾಮ್ ಪಾತ್ರಗಳನ್ನು ನಿರೂಪಿಸುವಂತೆ ಕೇಳಿಕೊಳ್ಳಲಾಗಿತ್ತು. ಅದಕ್ಕೆ ಬಿಗ್ ಬಿ ಕೂಡ ಗ್ರೀನ್ ಸಿಗ್ನಲ್ ನೀಡಿದ್ದರು. " 1970ರ ಕಾಲ ಘಟ್ಟದಲ್ಲಿ ಈ ಸಿನಿಮಾದ ಕಥೆ ಸಾಗುತ್ತೆ. ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಬೇಕು ಅಂದಾಗ, ಇಡೀ ದೇಶವೇ ಮೆಚ್ಚುವಂತಹ ಧ್ವನಿ ಬೇಕಿತ್ತು. ಅಮಿತಾಬ್ ಬಚ್ಚನ್ ಅವರಂತಹ ಧ್ವನಿ ಸೂಕ್ತವೆನಿಸಿತ್ತು. ಈ ಧ್ವನಿಯನ್ನು ಎಲ್ಲರೂ ಗುರುತಿಸುತ್ತಾರೆ. ಅಮಿತಾಬ್ ಬಚ್ಚನ್ 'ರಾಧೆ ಶ್ಯಾಮ್' ಸಿನಿಮಾ ನಿರೂಪಕರಾಗಿದ್ದಕ್ಕೆ ನಮಗೆ ಖುಷಿಯಾಗಿದೆ." ಎಂದು ನಿರ್ದೇಶಕ ರಾಧ ಕೃಷ್ಣ ಕುಮಾರ್ ತಿಳಿಸಿದ್ದಾರೆ.

 ಬಾಲಿವುಡ್ ಅವರತಣಿಗೆ ಈ ಕಸರತ್ತು

ಬಾಲಿವುಡ್ ಅವರತಣಿಗೆ ಈ ಕಸರತ್ತು

ಬಾಲಿವುಡ್‌ ಬಾಕ್ಸಾಫೀಸ್‌ ಅನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನೂರೆಂಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದೆ. 'ರಾಧೆ ಶ್ಯಾಮ್' ಸಿನಿಮಾ ಟಿ ಸಿರೀಸ್ ಮಾಲೀಕ ಭೂಷಣ್ ಕುಮಾರ್ ಕೂಡ ಹಣ ಹೂಡಿದ್ದಾರೆ. ಈ ಕಾರಣಕ್ಕೆ ಬಾಲಿವುಡ್ ಅವತರಣಿಕೆಗಾಗಿಯೇ ಎರಡು ಹಾಡುಗಳನ್ನು ಪ್ರತ್ಯೇಕವಾಗಿ ಕಂಪೋಸ್ ಮಾಡಲಾಗಿತ್ತು. ಅರಿಜಿತ್ ಸಿಂಗ್ ಹಾಡಿದ ಆ ಎರಡೂ ಹಾಡುಗಳೂ ಹಿಂದಿಯಲ್ಲಿ ಸೂಪರ್ ಹಿಟ್ ಆಗಿವೆ. ಈಗ ಅಮಿತಾಬ್ ಬಚ್ಚನ್ ನಿರೂಪಣೆ ಮಾಡಿದ್ದು, 'ರಾಧೆ ಶ್ಯಾಮ್ ಹಿಂದಿ ಅವತರಣಿಕೆಗೆ ಮತ್ತಷ್ಟು ಬಲ ಬಂದಂತಾಗಿದೆ.

 ಕನ್ನಡದಲ್ಲಿ ನಿರೂಪಣೆ ಮಾಡುವವರು ಯಾರು?

ಕನ್ನಡದಲ್ಲಿ ನಿರೂಪಣೆ ಮಾಡುವವರು ಯಾರು?

ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ಸಿನಿಮಾ 'ರಾಧೆ ಶ್ಯಾಮ್' ಮಾರ್ಚ್ 11ರಂದು ಬಿಡುಗಡೆಯಾಗುತ್ತಿದೆ. ಈ ಕಾರಣಕ್ಕೆ ತ್ವರಿತವಾಗಿ ಒಂದಿಷ್ಟು ಬದಲಾವಣೆಗಳನ್ನು ಮಾಡಿದೆ. ಹಿಂದಿಗೆ ಅಮಿತಾಬ್ ಬಚ್ಚನ್ ಧ್ವನಿ ನೀಡಿದರೆ, ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಿಗೆ ಧ್ವನಿ ನೀಡುವವರು ಯಾರು? ಎಂಬ ಪ್ರಶ್ನೆ ಹುಟ್ಟುವುದು ಸಹಜ. ಆದರೆ, ಇದೂವರೆಗೂ ಚಿತ್ರತಂಡ ಆ ಬಗ್ಗೆ ಮಾಹಿತಿ ನೀಡಿಲ್ಲ. ಕೇವಲ ಹಿಂದಿ ವರ್ಷನ್‌ಗೆ ಮಾತ್ರ ಅಮಿತಾಬ್ ಬಚ್ಚನ್ ನಿರೂಪಣೆ ಮಾಡಲಿದ್ದು, ಉಳಿದ ಭಾಷೆಗಳಿಗೆ ನಿರೂಪಣೆ ಮಾಡದೆಯೇ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ.

More from Filmibeat

English summary
Amitabh Bachchan became narrator for Prabhas and Pooja Hegde starrer Pan India movie Radhe Shyam. Amitabh Bachchan with his iconic voice and stardom brings much weight to the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X