ಮಗಳಿಗೆ ಆಸ್ತಿ ಕೊಟ್ಟು ಬಡವಾದರಾ ಬಿಗ್ ಬಿ? ಇಷ್ಟಾದ್ರೂ ಸೊಸೆ ಐಶ್ವರ್ಯಾದ್ದೇ ಮೇಲುಗೈ! ಬಚ್ಚನ್ ಮನೆಯಲ್ಲಿ ಏನಾಗ್ತಿದೆ?

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತಮ್ಮ ಮಗಳು ಶ್ವೇತಾಗೆ 50 ಕೋಟಿಯ ಬಂಗಲೆಯನ್ನು ಗಿಫ್ಟ್ ಮಾಡಿದಾಗಿನಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಈ ಒಂದು ಆಸ್ತಿ ಬದಲಾವಣೆಯಿಂದಾಗಿ ಇಡೀ ಬಚ್ಚನ್ ಖಾನ್‌ದಾನ್ ಒಟ್ಟಾರೆ ಆಸ್ತಿಯಲ್ಲಿ ಸ್ವಲ್ಪ ಆಚೀಚೆ ಆಗಿರೋದಂತೂ ಸತ್ಯ.

ಇಷ್ಟು ದೊಡ್ಡ ಮೊತ್ತದ ಆಸ್ತಿಯನ್ನು ಮಗಳಿಗೆ ಉಡುಗೊರೆಯಾಗಿ ಕೊಟ್ಟ ನಂತರ ಅಮಿತಾಭ್ ಆಸ್ತಿ ಕಡಿಮೆಯಾಗಿದ್ರೂ ಆ ಮನೆಯಲ್ಲಿ ಅವರೇ ಇವತ್ತಿಗೂ ಅತೀ ಸಿರಿವಂತರು. ಆದರೆ, ಮುಂಬೈನ ಪ್ರಮುಖ ಏರಿಯಾದಲ್ಲಿ ಅಷ್ಟು ದೊಡ್ಡ ಬಂಗಲೆಯನ್ನು ಪಡೆದ ನಂತರ ಬಿಗ್‌ಬಿ ಮಕ್ಕಳು ಶ್ವೇತಾ ಒಟ್ಟು ಆಸ್ತಿಯ ಮೊತ್ತ ಎರಡು ಪಟ್ಟು ಜಿಗಿದಂತಾಗಿದೆ ಅಂದ್ರೆ ನೀವು ನಂಬ್ಲೇಬೇಕು.

Amitabh Bachchan become poor by giving 50 crore bunglow net worth of Abhishek Aishwarya Rai

ಆದರೂ, ಬಚ್ಚನ್ ಸೊಸೆ ಐಶ್ವರ್ಯಾ ಒಟ್ಟಾರೆ ಆಸ್ತಿ, ಶ್ವೇತಾಗಿಂತ 590% ಜಾಸ್ತಿ ಇದೆ ಎಂದು ಡಿಜಿಟಲ್ ಮಾಧ್ಯಮ ಕೊಯಿಮೊಯಿ ವರದಿ ಮಾಡಿದೆ. ಮಗಳು ಶ್ವೇತಾ ಮತ್ತು ಅವಳ ಇಬ್ಬರು ಮಕ್ಕಳನ್ನೂ ಸೇರಿಸಿದ ನಂತರ ಬಚ್ಚನ್ ಕುಟುಂಬದ ಒಟ್ಟಾರೆ ಆಸ್ತಿ 5000 ಕೋಟಿ ರೂಪಾಯಿ ಮೀರುತ್ತೆ ಎಂದು ಹೇಳಲಾಗುದೆ. ಇದ್ರಲ್ಲಿ ಇವತ್ತಿಗೂ ಸಿಂಹಪಾಲು ಮನೆಯ ಯಜಮಾನ ಅಮಿತಾಭ್ ಅವರದ್ದೇ.

ಪತ್ನಿ ಜಯಾ ಬಚ್ಚನ್ ಏನೂ ಕಮ್ಮಿ ಇಲ್ಲ!

3160 ಕೋಟಿ ಆಸ್ತಿಯಲ್ಲಿ ಈಗ ಪ್ರತೀಕ್ಷಾ ಬಂಗಲೆ ಕೊಟ್ಟ ನಂತರ 50 ಕೋಟಿ ಕಡಿಮೆಯಾಗಿದೆ. 'ಕೌನ್ ಬನೇಗಾ ಕರೋಡ್ಪತಿ' ಹೊಸಾ ಸೀಸನ್ ಮತ್ತು ಕೈಯಲ್ಲಿರೋ 'ಕಲ್ಕಿ 2898 ಎಡಿ', 'ದಿ ಇಂಟರ್ನ್' ರೀಮೇಕ್ ಸಿನಿಮಾದಿಂದ ಬರುವ ಆದಾಯವನ್ನೂ ಅಂದಾಜಿನಲ್ಲಿ ಲೆಕ್ಕ ಹಾಕಿದ್ರೆ, ಈ 50 ಕೋಟಿಯನ್ನು ಸೀನಿಯರ್ ಬಚ್ಚನ್ ಒಂದೇ ವರ್ಷದಲ್ಲಿ ದುಡಿದು ಬಿಡ್ತಾರೆ ಎನ್ನಲಾಗಿದೆ.

ಜಯಾ ಬಚ್ಚನ್ ಕಳೆದ ಬಾರಿ ರಾಜ್ಯಸಭೆ ಚುನಾವಣಾ ಸಂದರ್ಭದಲ್ಲಿ ತಮ್ಮ ಒಟ್ಟು ಆಸ್ತಿ 1000 ಕೋಟಿ ರೂಪಾಯಿ ಎಂದು ಡಿಕ್ಲೇರ್ ಮಾಡಿದ್ದರು. ಒಂದು ವೇಳೆ ಆ ಆಸ್ತಿ ಹೆಚ್ಚಾಗಿಲ್ಲ ಅಂದುಕೊಂಡರೂ ಈಗ ಅವರ ಒಟ್ಟು ಆಸ್ತಿಯ ಮೌಲ್ಯ ಒಂದು ಸಾವಿರ ಕೋಟಿಯಷ್ಟಿದೆ.

Amitabh Bachchan become poor by giving 50 crore bunglow net worth of Abhishek Aishwarya Rai

ಐಶ್ವರ್ಯಾ ರೈ ಬಚ್ಚನ್ ಆಸ್ತಿ ಎಷ್ಟು?

ಇನ್ನು ಸೊಸೆ ಐಶ್ವರ್ಯಾ ರೈ ಬಚ್ಚನ್ 828 ಕೋಟಿ ರೂಪಾಯಿಯ ಒಡತಿ. ಈ ವರ್ಷ ಬಿಡುಗಡೆಯಾದ ತಮಿಳು ಚಿತ್ರ 'ಪೊನ್ನಿಯನ್ ಸೆಲ್ವನ್' ಸಂಭಾವನೆಯೂ ಸೇರಿದ್ರೆ ಇದು ಮತ್ತೂ ಜಾಸ್ತಿಯೇ ಆಗಿರಬಹುದು ಎನ್ನಲಾಗಿದೆ. ಇನ್ನು ಅಭಿಶೇಕ್ ಬಚ್ಚನ್ 280 ಕೋಟಿ ಆಸ್ತಿಯ ಒಡೆಯ. ಹಲವು ವೆಬ್ ಸೀರಿಸ್, ಸಿನಿಮಾ ಹಾಗೂ ಫ್ರಾಂಚೈಸಿಗಳೇ ಇವರ ಸಂಭಾವನೆಯ ಮೂಲ. ಅಕ್ಕ ಶ್ವೇತಾಗೆ ಹೋಲಿಸಿದ್ರೆ ಅಭಿಷೇಕ್ ಶ್ರೀಮಂತನೇ.

ಕೆಲವು ವರದಿಗಳ ಪ್ರಕಾರ, ಶ್ವೇತಾ ಬಚ್ಚನ್ ಒಟ್ಟು ಆಸ್ತಿ ಮೌಲ್ಯ 60 ರಿಂದ 80 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಆದರೆ, ಅದು 100ರಿಂದ 110 ಕೋಟಿ ಅನ್ನೋ ಮಾತುಗಳೂ ಇವೆ. ಈಗಷ್ಟೇ ಸೇರಿರುವ 50 ಕೋಟಿಯ ಬಂಗಲೆಯ ಮೊತ್ತವನ್ನೂ ಸೇರಿಸಿದ್ರೆ ಖಂಡಿತವಾಗ್ಲೂ ಒಟ್ಟಾರೆ ಆಸ್ತಿ 150 ರಿಂದ 170 ಕೋಟಿ ರೂಪಾಯಿಯಷ್ಟಾಗುತ್ತೆ.

ಮೊಮ್ಮಕ್ಕಳ ಬಳಿ ಆಸ್ತಿಯೇನು ಕಮ್ಮಿಯಿಲ್ಲ

ಇನ್ನು ಶ್ವೇತಾ ಬಚ್ಚನ್ ಮಕ್ಕಳಾದ ನವ್ಯಾ ನವೇಲಿ ನಂದಾ ಮತ್ತು ಅಗಸ್ತ್ಯ ನಂದಾ ಏನೂ ಕಮ್ಮಿ ಇಲ್ಲ. ತಮ್ಮ ತಂದೆ ತಾಯಿಯಿಂದ ಅವರಿಬ್ಬರೂ ಪಡೆಯುವ ಆಸ್ತಿಯನ್ನು ಹೊರತುಪಡಿಸಿ ಕೂಡಾ ಶ್ವೇತಾ ಮಗಳು ನವ್ಯಾ 16 ಕೋಟಿ ರೂಪಾಯಿ ಆಸ್ತಿಯ ಒಡತಿಯಾಗಿದ್ದಾರೆ. ಕೆಲವು ವರ್ಷಗಳ ಹಿಂದಷ್ಟೇ ಬ್ಯುಸಿನೆಸ್ ಜಗತ್ತಿಗೆ ಕಾಲಿರಿಸಿದ ಬಚ್ಚನ್ ಮೊಮ್ಮಗಳು ಅನೇಕ ಕಂಪೆನಿ ಮತ್ತು ಸ್ವಯಂಸೇವಾ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.

ಕೊನೆಯದಾಗಿ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಇದೀಗಷ್ಟೇ 'ದಿ ಆರ್ಚಿಸ್' ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಡ್ತಿದ್ದಾರೆ. ಈಗಾಗಲೇ ಇವರ ಆಸ್ತಿಯ ಒಟ್ಟು ಮೌಲ್ಯ ಒಂದರಿಂದ ಎರಡು ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಒಟ್ನಲ್ಲಿ ಬಿಗ್ ಮನೆಯ ಒಟ್ಟು ಆಸ್ತಿ ಕೂಡಾ ಬಿಗ್ ಆಗೇ ಇರೋದಂತೂ ಸತ್ಯ.

More from Filmibeat

English summary
Did Amitabh Bachchan become poorer by giving 50 crore bunglow to daughter? what is net worth of Abhishek and Aishwarya Rai?:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X