ಸಂಕಷ್ಟದಲ್ಲಿದ್ದ 500 ವಲಸಿಗರನ್ನು ಕರೆತರಲು ವಿಮಾನ ವ್ಯವಸ್ಥೆ ಮಾಡಿದ ಅಮಿತಾಬ್ ಬಚ್ಚನ್
ಸಂಕಷ್ಟದಲ್ಲಿ ಸಿಲುಕಿರುವ ಸುಮಾರು 500 ವಲಸಿಗರನ್ನು ಅವರ ಊರುಗಳಿಗೆ ತಲುಪಿಸಲು ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಮೂರು ವಿಶೇಷ ವಿಮಾನಗಳನ್ನು ವ್ಯವಸ್ಥೆ ಮಾಡಿದ್ದಾರೆ ಎಂದು ವರದಿಯಾಗಿದೆ.
Recommended Video
ಮೇ 29ರಂದು ಅವರು ಮುಂಬೈನಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಉತ್ತರ ಪ್ರದೇಶದ ಅವರ ಊರುಗಳಿಗೆ ತಲುಪಿಸಲು ಹತ್ತು ಬಸ್‌ಗಳನ್ನು ವ್ಯವಸ್ಥೆ ಮಾಡಿದ್ದರು. ಸಂಕಷ್ಟದಲ್ಲಿರುವ ವಲಸಿಗ ಕೆಲಸಗಾರರ ಮನವಿಗಳನ್ನು ಕೇಳಿ ಕರಗಿದ ಅಮಿತಾಬ್, ಅವರಿಗೆ ಸಹಾಯ ಮಾಡಲು ನಿರ್ಧರಿಸಿದ್ದರು. ಹೀಗಾಗಿ ಬುಧವಾರ ಬೆಳಿಗ್ಗೆ ಇಂಡಿಗೋ ಏರ್‌ಲೈನ್ಸ್‌ನ ವಾರಣಾಸಿಗೆ ತೆರಳುವ ವಿಮಾನವನ್ನು ಬುಕ್ ಮಾಡಿದ್ದರು.
ಸುಮಾರು 180 ವಲಸಿಗರನ್ನು ಬೆಳಿಗೆ ವಿಮಾನದ ಮೂಲಕ ವಾರಣಾಸಿಗೆ ಕಳುಹಿಸಲಾಯಿತು. ಬಳಿಕ ಮತ್ತೆರಡು ವಿಮಾನಗಳಲ್ಲಿ ವಲಸಿಗ ಕಾರ್ಮಿಕರನ್ನು ಕಳುಹಿಸಲಾಯಿತು. ಮೊದಲು ರೈಲ್ವೆ ಟಿಕೆಟ್ ಖರೀದಿಸಿ ರೈಲಿನಲ್ಲಿ ಕಳುಹಿಸಲು ಉದ್ದೇಶಿಸಲಾಗಿತ್ತು. ಆದರೆ ಅದು ಕಷ್ಟವೆನಿಸಿ ಕೈಬಿಡಲಾಯಿತು. ಇಡೀ ಕಾರ್ಯವನ್ನು ಅಮಿತಾಬ್ ಅವರ ಆಪ್ತರು ನಿಭಾಯಿಸಿದ್ದರು.

ಪಶ್ಚಿಮ ಬಂಗಾಳ, ಬಿಹಾರ, ತಮಿಳು ನಾಡು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬಂದು ಮುಂಬೈನಲ್ಲಿ ಸಿಲುಕಿರುವ ಇನ್ನಷ್ಟು ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಮತ್ತಷ್ಟು ವಿಮಾನಗಳನ್ನು ವ್ಯವಸ್ಥೆ ಮಾಡಲು ಅವರು ಉದ್ದೇಶಿಸಿದ್ದಾರೆ ಎನ್ನಲಾಗಿದೆ.


Click it and Unblock the Notifications











