ತಂದೆ ಮೇಲಿನ ಸಿಟ್ಟಿಗೆ ಸೋನಾಕ್ಷಿ ಸಿನ್ಹಾ ಮದುವೆಗೆ ಬರ್ಲಿಲ್ವಾ ಅಮಿತಾಭ್? ಶತ್ರುಘ್ನ ಸಿನ್ಹಾ ಜೊತೆ ಯಾಕೀ ಕೋಪ?
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮದುವೆ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 'ದಬಾಂಗ್' ಬ್ಯೂಟಿ ಸೋನಾಕ್ಷಿ ಸಿನ್ಹಾ ತನ್ನ ಬಹುದಿನದ ಗೆಳೆಯ ಜಾಹೀರ್ ಇಕ್ಬಾಲ್ ಜೊತೆ ಮುಂಬೈನಲ್ಲಿ ಜೂನ್ 23, 2024ರಂದು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಗೆ ಕೇವಲ ಅವರ ಆಪ್ತರಷ್ಟೇ ಭಾಗವಹಿಸಿದ್ದರು. ಹೀಗಾಗಿ ತಮ್ಮ ಸಹೋದ್ಯೋಗಿಗಳಿಗಾಗಿ ಆರತಕ್ಷತೆಯನ್ನು ಹಮ್ಮಿಕೊಂಡಿದ್ದರು.
ಬಾಲಿವುಡ್ ನಟಿಯರಾದ ರೇಖಾ, ಕಾಜೋಲ್, ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್‌ನ ದಿಗ್ಗಜರು ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆದರೆ, ಈ ಸಮಾರಂಭದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಹಾಗೂ ಅವರ ಕುಟುಂಬ ಭಾಗಿಯಾಗಿಲ್ಲ ಎಂದು ವರದಿಗಳಾಗಿವೆ. ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹಳೇ ವಿಷಯವೊಂದು ಚರ್ಚೆಗೆ ಬಂದಿದೆ.

ಬಾಲಿವುಡ್ ದಿಗ್ಗಜ ಶತ್ರುಘ್ನ ಸಿನ್ಹಾ ಅವರ ಪುತ್ರ ಸೋನಾಕ್ಷಿ ಸಿನ್ಹಾ. ಕಳೆದ ಹಲವು ವರ್ಷಗಳಿಂದ ಸೋನಾಕ್ಷಿ ಸಿನ್ಹಾ ಬಾಲಿವುಡ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮದುವೆ ತಂದೆ ಶತ್ರುಘ್ನ ಸಿನ್ಹಾಗೆ ಒಪ್ಪಿಗೆ ಇರಲಿಲ್ಲ ಅನ್ನೋ ಮಾತುಗಳು ಕೇಳಿ ಬಂದಿತ್ತು. ಆದರೆ, ಶತ್ರುಘ್ನ ಸಿನ್ಹಾ ಮದುವೆಯಲ್ಲಿ ಭಾಗವಹಿಸುವ ಮೂಲಕ ಆ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದರು.
ಅಷ್ಟಕ್ಕೂ ಈಗ ಚರ್ಚೆಯಾಗುತ್ತಿರುವ ವಿಷಯ ನಟಿ ಸೋನಾಕ್ಷಿ ಸಿನ್ಹಾ ಮದುವೆ ವಿಷಯವಲ್ಲ. ಈ ಮದುವೆ ಅಮಿತಾಭ್ ಬಚ್ಚನ್ ಯಾಕೆ ಬಂದಿಲ್ಲ ಅನ್ನೋ ವಿಷಯ. ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಹಾಗೂ ಶತ್ರುಘ್ನ ಸಿನ್ಹಾ ಹೆಚ್ಚು ಕಡಿಮೆ ಒಂದೇ ಕಾಲಕ್ಕೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಇಬ್ಬರೂ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇವರು ಜೊತೆಯಾಗಿ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡಿದ್ದೂ ಇವೆ.

ಆದರೆ, ಅಮಿತಾಭ್ ಬಚ್ಚನ್ ಹಾಗೂ ಶತ್ರುಘ್ನ ಸಿನ್ಹಾ ಇಬ್ಬರೂ 'ಕಾಲ ಪತ್ಥರ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ವೇಳೆ ಇವರಿಬ್ಬರ ನಡುವೆ ಚಿಕ್ಕದೊಂದು ವಿಷಯಕ್ಕೆ ವೈಮನಸ್ಸು ಶುರುವಾಗಿತ್ತು. ಅಮಿತಾಭ್ ಬಚ್ಚನ್ ತಂಡ ಈ ಸಿನಿಮಾದ ಸ್ಕ್ರೀಪ್ಟ್‌ನಲ್ಲಿ ಇಲ್ಲದ ದೃಶ್ಯಕ್ಕೆ ಒಪ್ಪಿಗೆ ಸೂಚಿಸಿದ್ದರೆಂದು ಶತ್ರುಘ್ನ ಸಿನ್ಹಾ ಆರೋಪ ಮಾಡಿದ್ದರು. ಈ ಸಂಬಂಧ ಶೂಟಿಂಗ್ ಸೆಟ್ಟಿನಲ್ಲಿ ಅಪೋಸ್ ಕೂಡ ಮಾಡಿದ್ದರು.
ಆ ವೇಳೆ ಅಮಿತಾಭ್ ಬಚ್ಚನ್ ವಿರುದ್ಧ ನಿಂತಿದ್ದ ಶತ್ರುಘ್ನ ಸಿನ್ಹಾ ಮಾತುಗಳಿಗೆ ಬೆಲೆ ಸಿಕ್ಕಿರಲಿಲ್ಲ. ಹೀಗಾಗಿ ಇಬ್ಬರ ನಡುವೆ ಚಿಕ್ಕದೊಂದು ವೈಮನಸ್ಸು ಮೂಡಿತ್ತು. ಆ ಬಳಿಕ ಇಬ್ಬರೂ ಒಟ್ಟಿಗೆ ನಟಿಸುವುದನ್ನು ಕಡಿಮೆ ಮಾಡಿದ್ದರು. ಶತ್ರುಘ್ನ ಸಿನ್ಹಾ ಹಲವು ಸಿನಿಮಾಗಳಿಗೆ ಪಡೆದಿದ್ದ ಹಣವನ್ನು ಹಿಂತಿರುಗಿಸಿದ್ದರು. ಇದೇ ಕಾರಣಕ್ಕೆ ಅಮಿತಾಭ್ ಬಚ್ಚನ್ ಹಾಗೂ ಕುಟುಂಬ ಸೋನಾಕ್ಷಿ ಸಿನ್ಹಾ ಮದುವೆ ಬರಲಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.


Click it and Unblock the Notifications











