For Quick Alerts
  ALLOW NOTIFICATIONS  
  For Daily Alerts

  ಗಲ್ಲಿ ಬಾಯ್ ಲವ್‌ನಲ್ಲಿ ಬಿದ್ದ ಅಮಿತಾಬ್ ಮೊಮ್ಮಗಳು

  |

  ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯ ನವೇಲಿ ನಂದಾ ಲವ್ ಸ್ಟೋರಿ ಆಗಾಗ ಹೆಡ್‌ಲೈನ್ ಆಗುತ್ತಲೇ ಇರುತ್ತೆ. ಬಹಳ ದಿನಗಳಿಂದ ಬಾಲಿವುಡ್ ಮೆಗಾಸ್ಟಾರ್ ಬಿಗ್ ಬಿ ಮೊಮ್ಮಗಳು ಮತ್ತೊಬ್ಬ ಬಾಲಿವುಡ್ ನಟ ಜಾವಿದ್ ಜಾಫ್ರಿ ಪುತ್ರ ಮೀಜಾನ್ ಜೊತೆ ಡೇಟಿಂಗ್ ಮಾಡುತ್ತಿದ್ದಾಳೆ ಅನ್ನುವ ಸುದ್ದಿನೇ ಹರಿದಾಡುತ್ತಿತ್ತು. ಆದ್ರೀಗ ಬಾಲಿವುಡ್ ಅಂಗಳದಲ್ಲಿ ಬೇರೆಯದ್ದೇ ಸುದ್ದಿ ಹರಿದಾಡುತ್ತಿದೆ.

  ಹಲವು ಬಾರಿ ಜಾವಿದ್ ಜಾಫ್ರಿ ಪುತ್ರ ಮೀಜಾನ್ ಬಳಿಕ ಅಮಿತಾಬ್ ಮೊಮ್ಮಗಳನ್ನು ಪ್ರೀತಿಸುತ್ತಿದ್ದೀರಾ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಆದರೆ, ಪ್ರತಿ ಬಾರಿ ಈ ಪ್ರಶ್ನೆ ಕೇಳಿದಾಗಲೂ ನವ್ಯ ನವೇಲಿ ನಂದಾ ನನ್ನ ಬೆಸ್ಟ್ ಫ್ರೆಂಡ್ ಅಂತ ಹೇಳಿದ್ದಾನೆ. ಅಲ್ಲದೆ ಇಂತಹ ಪ್ರಶ್ನೆಗಳು ನನಗೆ ಮುಜುಗರ ತರಿಸುತ್ತವೆ ಅಂತ ಹಲವು ಬಾರಿ ಮೀಜಾನ್ ಉತ್ತರಿಸಿದ್ದಾನೆ. ಆದರೆ, ಈಗ ಅಮಿತಾಬ್ ಮೊಮ್ಮಗಳ ಪ್ರೇಮ್ ಕಹಾನಿ ಗಲ್ಲಿ ಬಾಯ್ ಜೊತೆ ತಳುಕು ಹಾಕೊಂಡಿದೆ. ಅಸಲಿಗೆ ಬಿಗ್ ಬಿ ಮೊಮ್ಮಗಳ ಪ್ರೇಮ್ ಕಹಾನಿ ಬಗ್ಗೆ ಎದ್ದಿರುವ ಸುದ್ದಿ ಏನು ಅಂತ ತಿಳಿದುಕೊಳ್ಳಲು ಮುಂದೆ ಓದಿ.

  ಗಲ್ಲಿ ಬಾಯ್ ಪ್ರೀತಿಗೆ ನವ್ಯ ಬೋಲ್ಡ್

  ಗಲ್ಲಿ ಬಾಯ್ ಪ್ರೀತಿಗೆ ನವ್ಯ ಬೋಲ್ಡ್

  ಅಮಿತಾಬ್ ಮೊಮ್ಮಗಳು ನವ್ಯ ನವೇಲಿ ನಂದಾ ಗಲ್ಲಿ ಬಾಯ್ ಸಿದ್ದಾಂತ್ ಚತುರ್ವೇದಿ ಲವ್‌ನಲ್ಲಿ ಬಿದ್ದಿದ್ದಾಳೆ. ಇಬ್ಬರೂ ಸೀರಿಯಸ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಅಂತ ಬಾಲಿವುಡ್ ಮಾತಾಡಿಕೊಳ್ಳುತ್ತಿದೆ. ಸಿದ್ದಾಂತ್ ಚತುರ್ವೇದಿ ಈಗೀಗ ಬಾಲಿವುಡ್‌ನಲ್ಲಿ ನೆಲೆಯೂರುತ್ತಿದ್ದಾನೆ. ರಣ್‌ವೀರ್ ಸಿಂಗ್ ನಟಿಸಿದ ಗಲ್ಲಿ ಬಾಯ್ ಚಿತ್ರದ ಅಸಲಿ ಹೀರೋ ಇದೇ ಸಿದ್ದಾಂತ್ ಚತುರ್ವೇದಿ. ಸದ್ಯ ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ಸಿದ್ದಾಂತ್ ಸಿನಿಮಾ ಮಂದಿಯ ಫೇವರಿಟ್ ನಟ ಏನಿಸಿಕೊಂಡಿದ್ದಾನೆ.

  ಬಿಗ್ ಬಿ ಮೊಮ್ಮಗಳೀಗ ಉದ್ಯಮಿ'

  ಬಿಗ್ ಬಿ ಮೊಮ್ಮಗಳೀಗ ಉದ್ಯಮಿ'

  ಸಿದ್ದಾಂತ್ ಚತುರ್ವೇದಿ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ರೆ, ಇತ್ತ ಬಿಗ್ ಬಿ ಮೊಮ್ಮಗಳು ಉದ್ಯಮಿಯಾಗಿ ಬಡ್ತಿ ಪಡೆದಿದ್ದಾಳೆ. ಮಹಿಳೆಯ ಆರೋಗ್ಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾಳೆ ಎನ್ನಲಾಗಿದೆ. ಇತ್ತೀಚೆಗ ತಂಪು ಪಾನೀಯ ಕಂಪನಿ ಪೆಪ್ಸಿಗೆ ತನ್ನ ಯೋಜನೆಯನ್ನು ಕಳುಹಿಸಿಕೊಟ್ಟಿದ್ದಳು. ನವ್ಯಾ ಆಲೋಚನೆಯನ್ನು ಪೆಪ್ಸಿ ಸಿಇಒ ಇಂದಿರಾ ನೂಯಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಾಗಿ ಇಬ್ಬರು ಯಶಸ್ಸಿನ ಹಾದಿ ಹಿಡಿದಿದ್ದು, ವೃತ್ತಿ ಪಯಣದ ಜೊತೆ ಜೊತೆಗೆ ಪ್ರೇಮ ಪಯಣ ಕೂಡ ನಡೀತಿದೆ ಅಂತ ಬಾಲಿವುಡ್ ಮಾತಾಡಿಕೊಳ್ಳುತ್ತಿದೆ.

  ನಂದಾ ಕುಟುಂಬದ 4ನೇ ಪೀಳಿಗೆ ನಂದಾ

  ನಂದಾ ಕುಟುಂಬದ 4ನೇ ಪೀಳಿಗೆ ನಂದಾ

  ಅಮಿತಾಬ್ ಮಗಳು ಶ್ವೇತಾ ನಂದಾ ಅವರ ಮಗಳು ನವ್ಯ ನವೇಲಿ ನಂದಾ. ಶ್ವೇತಾ ಮುಂಬೈನ ಪ್ರತಿಷ್ಟಿತ ಉದ್ಯಮಿ ನಿಖಿಲ್ ನಂದಾರನ್ನು ವಿವಾಹವಾಗಿದ್ದಾರೆ. ಇವರಿಬ್ಬರ ಮಗಳೇ ನವ್ಯ ನವೇಲಿ ನಂದಾ. ಇದೂವರೆಗೂ ಈ ಉದ್ಯಮಿ ಕುಟುಂಬ ಹೆಣ್ಣುಗಳು ಉದ್ಯಮಕ್ಕೆ ಇಳಿದಿಲ್ಲ. ನಂದಾ ಕುಟುಂಬದಿಂದ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ಮೊದಲ ಹೆಣ್ಣು ಮಗಳು ನವ್ಯ ನವೇಲಿ ನಂದಾ. ಹೀಗಾಗಿ ಆಗಾಗ ನವ್ಯ ಹೆಸರು ಬಾಲಿವುಡ್‌ನಲ್ಲಿ ಚರ್ಚೆ ಆಗುತ್ತಲೇ ಇರುತ್ತೆ.

  ಬಬ್ಲಿ ಸಿದ್ಧಾಂತ್ ಚಮತ್ಕಾರ

  ಬಬ್ಲಿ ಸಿದ್ಧಾಂತ್ ಚಮತ್ಕಾರ

  ಗಲ್ಲಿಬಾಯ್ ಮೂಲಕ ಬಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸಿದ್ದಾಂತ್ ಚತುರ್ವೇದಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಸದ್ಯ ಸೈಫ್ ಅಲಿಖಾನ್ ಹಾಗೂ ರಾಣಿಮುಖರ್ಜಿ ಜೊತೆ ನಟಿಸಿದ ಬಂಟಿ ಔರ್ ಬಬ್ಲಿ 2 ಸಿನಿಮಾದಲ್ಲಿ ನಟಿಸಿದ್ದು, ಸಿದ್ದಾಂತ್ ಲುಕ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ವೇಳೆ ಸಿದ್ದಾಂತ್ ಹಾಗೂ ನವ್ಯ ನವೇಲಿ ಪ್ರೇಮ್ ಕಹಾನಿ ಬಗ್ಗೆ ಪುಕಾರು ಹಬ್ಬಿದ್ದು, ಒಂದು ವೇಳೆ ನಿಜವೇ ಆಗಿದ್ದರೆ, ಬಾಲಿವುಡ್‌ನಲ್ಲಿ ಮತ್ತೊಂದು ಜೋಡಿ ಹಕ್ಕಿಗಳ ಪ್ರೇಮದಾಟ ಆರಂಭ ಆದಂತೆ.

  English summary
  There have been reports doing round that Amithabh Bachchan grand daughter Navya Naveli Nanda and Gully Boy fame Siddhant Chaturvedi are dating each other.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X