'ಹೃದಯ ಬಡಿತ, ಕಾಳಜಿ,ಭರವಸೆ' ಅಂತ ಭಯ ಹುಟ್ಟಿಸಿದ್ದ ಅಮಿತಾಭ್ ಟ್ವೀಟ್ ರಹಸ್ಯ ಬಯಲು
ಅಮಿತಾಭ್ ಬಚ್ಚನ್ ಸಿನಿಮಾಗಳಲ್ಲಿ ಎಷ್ಟು ಆಕ್ವೀವ್ ಆಗಿರುತ್ತಾರೋ ಅಷ್ಟೇ ಆಕ್ವೀವ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಇರುತ್ತಾರೆ. ಸೋಶಿಯಲ್ ಮೀಡಿಯಾ ಅಷ್ಟೇ ಯಾಕೆ ಪ್ರಪಂಚದಲ್ಲಿ ನಡೆಯುವ ಎಲ್ಲಾ ಘಟನೆಗಳ ಬಗ್ಗೆನೂ ಅಮಿತಾಭ್ ಬಳಿ ಮಾಹಿತಿ ಇರುತ್ತೆ. ಚಿತ್ರೀಕರಣದಲ್ಲಿ ಅಷ್ಟೊಂದು ಬ್ಯುಸಿಯಾಗಿದ್ದರೂ ಬಿಗ್ ಬಿ ಸೋಶಿಯಲ್ ಮೀಡಿಯಾ ಬ್ಯುಸಿಯಾಗಿರುತ್ತಾರೆ. ಆದರೆ, ಅಮಿತಾಭ್ ಮಾಡುವ ಕೆಲವೊಂದು ಟ್ವೀಟ್ ಆತಂಕಕ್ಕೆ ಎಡೆ ಮಾಡಿಕೊಡುತ್ತೆ. ಬಿಗ್ ಬಿ ನಿನ್ನೆ(ಫೆ 27) ಮಾಡಿದ ಒಂದು ಟ್ವೀಟ್ ಕೂಡ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು.
ಅಮಿತಾಭ್ ಬಚ್ಚನ್ ಆರೋಗ್ಯದ ಬಗ್ಗೆ ಅವರ ಅಭಿಮಾನಿಗಳಿಗೆ ಗೊತ್ತೇ ಇದೆ. ಹೀಗಾಗಿ ಅಮಿತಾಭ್ ಏನಾದರೂ, ವಿಚಿತ್ರವಾಗಿ ಟ್ವೀಟ್ ಮಾಡಿದರೆ ಫ್ಯಾನ್ ಗೊಂದಲಕ್ಕೆ ಒಳಗಾಗುತ್ತಾರೆ. ನಿನ್ನೆ ಕೂಡ ಬಿಗ್ ಹೀಗೆ ಮಾಡಿದ ಒಂದು ಟ್ವೀಟ್‌ನಿಂದ ಫ್ಯಾನ್ಸ್ ಕಂಗಾಲಾಗಿದ್ದರು. ಮಾರ್ಮಿಕ ಟ್ವೀಟ್‌ಗೆ ಅಮಿತಾಬ್ ಬಚ್ಚನ್ ಉತ್ತರ ಕೊಡಲು ಮುಂದಾಗಿರಲಿಲ್ಲ. ಹೀಗಾಗಿ ಮತ್ತೆ ಬಿಗ್ ಬಿ ಆರೋಗ್ಯ ಹದಗೆಟ್ಟಿದೆ ಎಂದೇ ನಂಬಲಾಗಿತ್ತು. ಆದ್ರೀಗ ಆ ಟ್ವೀಟ್‌ಗೆ ಟ್ವಿಸ್ಟ್ ಸಿಕ್ಕಿದೆ.

ಬಿಗ್ ಬಿ ಆರೋಗ್ಯ ಹೇಗಿದೆ?
ಭಾನುವಾರ ರಾತ್ರಿ (ಫೆ.27) ಅಮಿತಾಭ್ ಬಚ್ಚನ್ " ಹೃದಯ ಬಡಿಯುತ್ತಿದೆ.. ಕಾಳಜಿ.. ಭರವಸೆ.." ಅಂತ ಟ್ವೀಟ್ ಮಾಡಿದ್ದರು. ರಾತ್ರಿ ಅದ್ಯಾಕೆ ಹೀಗೆ ಟ್ವೀಟ್ ಮಾಡಿದ್ದಾರೆ ಎಂಬುದು ಅಭಿಮಾನಿಗಳಿಗೆ ಅರ್ಥವಾಗಿರಲಿಲ್ಲ. ಈ ಟ್ವೀಟ್ ನೋಡಿದ ಬಳಿಕ ಬಿಗ್ ಬಿ ಫ್ಯಾನ್ಸ್ ಕಂಗಾಲಾಗಿದ್ದರು. ಮತ್ತೆ ಅಮಿತಾಭ್ ಬಚ್ಚನ್ ಆರೋಗ್ಯದಲ್ಲಿ ಏರು-ಪೇರಾಗಿದೆ ಎಂದೇ ಭಾವಿಸಲಾಗಿತ್ತು. ಆದ್ರೀಗ ಅಮಿತಾಭ್ ಬಚ್ಚನ್ ಯಾಕೆ ಹೀಗೆ ಟ್ವೀಟ್ ಮಾಡಿದ್ದಾರೆ ಎಂಬುದರ ಸೀಕ್ರೆಟ್ ರಿವೀಲ್ ಆಗಿದೆ. ಬಿಗ್ ಬಿ ಹೃದಯ ಬಡಿತದ ಬಗ್ಗೆ ಮಾತಾಡಿದ್ದು, ಅವರ ಆರೋಗ್ಯದ ಬಗ್ಗೆ ಅಲ್ಲ ಎಂದು ಗೊತ್ತಾಗಿದೆ.
ಬಿಗ್ ಬಿ ಟ್ವೀಟ್ ಹಿಂದಿನ ರಹಸ್ಯವೇನು?
ಅಮಿತಾಭ್ ಬಚ್ಚನ್ ಹೇಗೆ ಪ್ರತಿ ದಿನ ಒಂದಲ್ಲ ಒಂದು ವಿಷಯಕ್ಕೆ ಟ್ವೀಟ್ ಮಾಡುತ್ತಾರೋ, ಹಾಗೂ ಅವರು ಬ್ಲಾಕ್‌ನಲ್ಲೂ ಬರೆಯುವುದರಲ್ಲೂ ಆಕ್ಟೀವ್ ಆಗಿರುತ್ತಾರೆ. ಅಮಿತಾಬ್ ಬಚ್ಚನ್ ತನ್ನ ಬ್ಲಾಗ್‌ನಲ್ಲಿ ಬರೆದು ಲೇಖನ ಅಭಿಮಾನಿಗಳನ್ನು ಈ ಆತಂಕದಿಂದ ಹೊರತಂದಿದೆ. ಬ್ಲಾಗ್‌ನಲ್ಲಿ ಭಾನುವಾರ ಕಳೆದ ದಿನವನ್ನು ಬಿಗ್ ಬಿ ಬರೆದುಕೊಂಡಿದ್ದಾರೆ. ಸವಾಲು ಅವರಿಗಾಗಿ ಹೇಗೆ ಕಾದು ಕೂತಿತ್ತು ಎನ್ನುವುದನ್ನು ಬರೆದಿದ್ದಾರೆ. ಮುಂಬೈನ ಮಧ್ ದ್ವೀಪಕ್ಕೆ ಚಿತ್ರೀಕರಣಕ್ಕೆ ತೆರಳಿ ಮನೆಗೆ ಹಿಂತಿರುಗುವಾಗ ಆದ ಅನುಭವವನ್ನು ಬಿಗ್ ಬಿ ಶೇರ್ ಮಾಡಿಕೊಂಡಿದ್ದಾರೆ. ಹೀಗಾಗಿ ಟ್ವೀಟ್ ಹಿಂದಿನ ರಹಸ್ಯವನ್ನು ಬ್ಲಾಗ್‌ನಲ್ಲಿ ರಿವೀಲ್ ಮಾಡಿದ್ದಾರೆ.

ಬಿಗ್ ಬಿ ಬರೆದ ಬ್ಲಾಗ್‌ನಲ್ಲಿ ಏನಿದೆ?
ಅಮಿತಾಭ್ ಬಚ್ಚನ್ ಮುಂಬೈ ಅಂತಹ ಬ್ಯುಸಿ ನಗರ ಸಣ್ಣ ನಿದ್ದೆಗೆ ಜಾರಿದ್ದಾಗ ಸಿನಿಮಾ ಶೂಟಿಂಗ್‌ಗಾಗಿ ಮನೆ ಬಿಟ್ಟಿದ್ದರು. ಮುಂಬೈ ಸಮೀಪವೇ ಇದ್ದ ಮಧ್ ದ್ವೀಪಕ್ಕೆ ಬೆಳ್ಳಂಬೆಳಗ್ಗೆ ತೆರಳಿದ್ದರು. ಕೆಲಸ ಬೇಗನೇ 5.30ಕ್ಕೆ ಮುಗಿದ್ದಿದ್ದರೂ, ಮುಂಬೈನಲ್ಲಿರುವ ತನ್ನ ಮನೆಗೆ ತಲುಪಲು 8.30 ಆಗಿತ್ತು. ಮನೆಗೆ ಹಿಂತಿರುಗಿದ ಬಳಿಕ ಮಧ್ ದ್ವೀಪದ ಬಗ್ಗೆ ಅದರ ಏಕಾಂತದ ಬಗ್ಗೆ ಅಮಿತಾಬ್ ಬಚ್ಚನ್ ಬರೆದುಕೊಂಡಿದ್ದಾರೆ. ಇದೇ ವೇಳೆ ತಮ್ಮ ಮುಂದಿನ ಸವಾಲು ಚೆಲ್ಸಿಯಾ ವರ್ಸಸ್ ಲಿವರ್‌ಪೂಲ್ ಪುಟ್‌ಬಾಲ್ ಫೈನಲ್ ಪಂದ್ಯವೆಂದು ಹೇಳಿದ್ದಾರೆ. ಈ ಹಿಂದೆ ಅಮಿತಾಬ್ ಟ್ವೀಟ್ ಮಾಡಿದ್ದರ ಹಿಂದೆ ಇಷ್ಟೆಲ್ಲಾ ಕಹಾನಿ ಇದೆ ಎಂಬುದು ಬ್ಲಾಗ್ ಓದಿದವರಿಗೆ ಗೊತ್ತಾಗಿದೆ.

ಬಿಗ್ ಬಿ ಟ್ವೀಟ್‌ಗೆ ಫ್ಯಾನ್ಸ್ ಪ್ರತಿಕ್ರಿಯೆ
ಅಮಿತಾಭ್ ಬಚ್ಚನ್ ಟ್ವೀಟ್ ಮಾಡುತ್ತಿದ್ದಂತೆ ಅವರ ಅಭಿಮಾನಿಗಳು ಪ್ರತಿಕ್ರಿಯಿಸಿದ್ದರು. ಅಮಿತಾಭ್ ಟ್ವೀಟ್ ಅನ್ನು ಮರು ಟ್ವೀಟ್ ಮಾಡಿ ಬೇಗ ಗುಣಮುಖರಾಗಿ ಎಂದೆಲ್ಲಾ ಟ್ವೀಟ್ ಮಾಡಿದ್ದರು. ಕೆಲವರು ಬಿಗ್ ಬಿಗೆ ಏನಾಗಿದೆ ಎಂದು ತಿಳಿಯದೆ ಒದ್ದಾಡಿದ್ದರು. ಅಭಿಮಾನಿಗಳಿಗೆ ಅಮಿತಾಭ್ ಬಚ್ಚನ್ ಇದೂವರೆಗೂ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಆತಂಕ ಪಡುವ ವಿಷಯವೇನಿಲ್ಲ ಎಂಬುದು ತಿಳಿದು ಬಂದಿದೆ.


Click it and Unblock the Notifications











