'ಪ್ರಾಜೆಕ್ಟ್‌ ಕೆ' ಶೂಟಿಂಗ್ ವೇಳೆ ಅಮಿತಾಭ್ ಬಚ್ಚನ್‌ಗೆ ಗಂಭೀರ ಗಾಯ: ಬಿಗ್ ಬಿ ಬ್ಲಾಗ್‌ನಲ್ಲೇನಿದೆ?

ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್‌ಗೆ ಮತ್ತೆ ಗಂಭೀರ ಪೆಟ್ಟು ಬಿದ್ದಿದೆ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಅಭಿನಯದ 'ಪ್ರಾಜೆಕ್ಟ್ ಕೆ' ಶೂಟಿಂಗ್ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದರು. ತಮ್ಮ ಆರೋಗ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನಾಗ ಅಶ್ವಿನ್ ನಿರ್ದೇಶನದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಲೀಡ್‌ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಈ ಸಂಬಂಧ ಅಮಿತಾಭ್ ಬಚ್ಚನ್ ಹೈದರಾಬಾದ್‌ನಲ್ಲಿ ಸಿನಿಮಾದ ಶೂಟಿಂಗ್‌ನಲ್ಲಿ ನಿರತರಾಗಿದ್ದರು. ಈ ವೇಳೆ ಬಿಗ್‌ಬಿಯ ಪಕ್ಕೆಲುಬು (Rib Cartilage Popped Broke) ಮುರಿದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದೇ ವೇಳೆ ಅಮಿತಾಭ್ ಬಚ್ಚನ್ ಕೂಡ ತಮ್ಮ ಬ್ಲಾಗ್‌ನಲ್ಲಿ ಆರೋಗ್ಯದ ಬಗ್ಗೆ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

Amitabh Bachchan Injured During Prabhas Project K Shooting Taking Rest At Mumbai Home

" ಹೈದರಾಬಾದ್‌ನಲ್ಲಿ ಪ್ರಾಜೆಕ್ಟ್ ಕೆ ಶೂಟಿಂಗ್ ನಡೆಯುತ್ತಿತ್ತು. ಆಕ್ಷನ್ ಶೂಟ್ ನಡೆಯುವ ವೇಳೆ ನನಗೆ ಪಟ್ಟು ಬಿದ್ದಿದೆ. ನನ್ನ ಪಕ್ಕೆಲುಗಿ ಮುರಿದಿದ್ದು, ಮಾಂಸಖಂಡಗಳಿಗೂ ಏಟು ಬಿದ್ದಿದೆ. ಹೀಗಾಗಿ ಚಿತ್ರೀಕರಣವನ್ನು ಕ್ಯಾನ್ಸಲ್ ಮಾಡಲಾಗಿದೆ. ಹೈದರಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಲಾಗಿದ್ದು, ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದೇನೆ. ಸದ್ಯ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ. ಹೌದು. ಉಸಿರಾಡುವಾಗ ತುಂಬಾ ನೋವಿದೆ. ಸಹಜ ಸ್ಥಿತಿಗೆ ಮರಳುವುದಕ್ಕೆ ಇನ್ನೊಂದು ಸ್ವಲ್ಪ ಸಮಯ ಹಿಡಿಯಬಹುದು ಎಂದು ವೈದ್ಯರು ಹೇಳಿದ್ದಾರೆ. ನೋವಿಗೆ ಔಷಧಗಳನ್ನು ನೀಡಿದ್ದಾರೆ." ಎಂದು ಅಮಿತಾಬ್ ಬರೆದುಕೊಂಡಿದ್ದಾರೆ.

ಹಾಗೇ " ಪೆಟ್ಟು ಬಿದ್ದಿರುವ ಕಾರಣ ಎಲ್ಲಾ ಕೆಲಸಗಳನ್ನು ನಿಲ್ಲಿಸಲಾಗಿದೆ. ಗುಣಮುಖರಾಗುವವರೆಗೂ ಎಲ್ಲವನ್ನೂ ಪೋಸ್ಟ್‌ಪೋನ್ ಮಾಡಲಾಗಿದೆ. ಸದ್ಯ ಜಲ್ಸಾದಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದೇನೆ. ಜಲ್ಸಾ ಗೇಟ್ ಮುಂದೆ ನಿಂತಿರುವ ನನ್ನ ಹಿತೈಶಿಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ದಯವಿಟ್ಟು ಬರಬೇಡಿ. ಹಾಗೇ ಯಾರು ಮನೆ ಬಳಿಬರಲು ತಯಾರಿ ನಡೆಸುತ್ತಿದ್ದಾರೋ ಅವರಿಗೂ ಬಾರದೆ ಇರಲು ಹೇಳಿ" ಎಂದು ಅಮಿತಾಭ್ ಬಚ್ಚನ್ ಮನವಿ ಮಾಡಿಕೊಂಡಿದ್ದಾರೆ.

ಅಮಿತಾಭ್ ಬಚ್ಚನ್ ಹಲವು ಬಾರಿ ಶೂಟಿಂಗ್ ವೇಳೆ ಗಾಯ ಮಾಡಿಕೊಳ್ಳುತ್ತಲೇ ಇರುತ್ತಾರೆ. ಹಿಂದೊಮ್ಮೆ 'ಇಂಕ್ವಿಲಾಬ್' ಸಿನಿಮಾ ನಡೆಯುತ್ತಿರುವಾಗ ದೀಪಾವಳಿ ಹಬ್ಬದಂದು ಕೈ ಸುಟ್ಟಿಕೊಂಡಿದ್ದರು. ಆದರೆ, ಈ ಸಿನಿಮಾದ ಶೂಟಿಂಗ್ ಅನ್ನು ಮುಂದುವರೆಸಲೇ ಬೇಕಿತ್ತು. ಹೀಗಾಗಿ 'ಶಾರಾಭಿ' ಅನ್ನೋ ಸಾಂಗ್‌ನಲ್ಲಿ ಕೈಗೆ ಕರ್ಚಿಫ್ ಕಟ್ಟಿಕೊಂಡು ಅದನ್ನು ಜೇಬಿನ್ನಲ್ಲಿ ಇಟ್ಟುಕೊಂಡು ಶೂಟಿಂಗ್ ಮಾಡಿದ್ದರು.

'ಕೂಲಿ' ಸಿನಿಮಾದ ವೇಳೆ ಅಮಿತಾಭ್ ಬಚ್ಚನ್ ಗಂಭೀರವಾಗಿ ಗಾಯಗೊಂಡಿದ್ದರು. ಇನ್ನೇನು ಅಮಿತಾಭ್ ಬಚ್ಚನ್ ಕಥೆ ಮುಗಿದೇ ಹೋಯ್ತು ಅನ್ನುವಷ್ಟು ಗಂಭೀರಗೊಂಡಿದ್ದರು. ಅಭಿಮಾನಿಗಳು ಅಂದೂ ಆತಂಕಗೊಂಡಿದ್ದರು. ಅಮಿತಾಭ್ ಬಚ್ಚನ್ ಕೆಲವು ದಿನಗಳ ಬಳಿಕ ಗುಣಮುಖರಾಗಿ ಹೊರಬಂದು ಹೊಸ ಇನ್ನಿಂಗ್ಸ್ ಆರಂಭಿಸಿದ್ದರು. ಈಗಲೂ ಗಂಭೀರವಾಗಿ ಗಾಯಗೊಂಡಿದ್ದಾರೆ ಅನ್ನೋ ಸುದ್ದಿ ಬಂದಾಗ ಅಂತಕಕ್ಕೆ ಒಳಗಾಗಿದ್ದರು.

More from Filmibeat

English summary
Amitabh Bachchan Injured During Prabhas Project K Shooting Taking Rest At Mumbai Home, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X