ಲಾಕ್ ಡೌನ್ ಮಧ್ಯೆಯೇ ಗ್ರಾಜುಯೇಷನ್: ಅಮಿತಾಬ್ ಮೊಮ್ಮಗಳನ್ನು ಟ್ರೋಲ್ ಮಾಡಿದ ನೆಟ್ಟಿಗರು

ಅಮಿತಾಬ್ ಬಚ್ಚನ್ ಮಗಳು ಶ್ವೇತಾ ಬಚ್ಚನ್ ನಂದಾ ಅವರ ಪುತ್ರಿ ನವ್ಯಾ ನವೇಲಿ ನಂದಾ ನ್ಯೂಯಾರ್ಕ್‌ನ ಫೋರ್ಢಮ್ ವಿಶ್ವವಿದ್ಯಾಲಯದಿಂದ ಮೇ 6ರಂದು ಪದವಿ ಪಡೆದಿದ್ದಾರೆ. ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಅವರ ಘಟಿಕೋತ್ಸವ ಸಮಾರಂಭ ನಡೆದಿಲ್ಲ.

Recommended Video

ಮಳೆಯಲ್ಲಿ ಮಗನ ಜೊತೆ ವಿಶೇಷ ವಿಡಿಯೋ ಹಂಚಿಕೊಂಡ ಶ್ರೀಮುರಳಿ | Sri Murali & son

ಹೀಗಾಗಿ ಅವರ ಕುಟುಂಬವೇ ಅಮಿತಾಬ್ ಬಚ್ಚನ್ ಅವರ ಮುಂಬೈನ ಜಲ್ಸಾ ನಿವಾಸದಲ್ಲಿ ವಿಶೇಷ ಘಟಿಕೋತ್ಸವ ಸಮಾರಂಭ ಆಯೋಜಿಸಿ ಸಂಭ್ರಮಿಸಿದೆ. ನವ್ಯಾ ಪದವಿ ಸಮಾರಂಭದ ದಿರಿಸು ತೊಡುವ ಮೂಲಕ ಘಟಿಕೋತ್ಸವದ ಖುಷಿಯನ್ನು ಆಚರಿಸಿದ್ದಾರೆ. ಆಕೆಯ ಸಾಧನೆ ಬಗ್ಗೆ ಅಜ್ಜ ಅಮಿತಾಬ್ ಬಚ್ಚನ್ ಮತ್ತು ಸೋದರ ಮಾವ ಅಭಿಷೇಕ್ ಬಚ್ಚನ್ ಸುದೀರ್ಘ ಬರಹ ಬರೆದು ಶುಭಾಶಯ ಕೋರಿದ್ದಾರೆ. ಆದರೆ ಈ ಸಂಭ್ರಮಾಚರಣೆ ನೆಟ್ಟಿಗರ ಕೆಂಗಣ್ಣಗೆ ಗುರಿಯಾಗಿದೆ. ನವ್ಯಾ ಹಾಗೂ ಅಮಿತಾಬ್ ಕುಟುಂಬವನ್ನು ನೆಟಿಜನ್‌ಗಳು ಟ್ರೋಲ್ ಮಾಡಿದ್ದಾರೆ. ಮುಂದೆ ಓದಿ...

ನಾವು ಕೆಲಸದ ಬಗ್ಗೆ ಯೋಚಿಸುತ್ತೇವೆ

ನಾವು ಕೆಲಸದ ಬಗ್ಗೆ ಯೋಚಿಸುತ್ತೇವೆ

'ನಾವು ಪದವಿ ಪೂರೈಸಿದಾಗ ಕೆಲಸ, ಹಣಕಾಸಿನ ವಿಚಾರದ ಬಗ್ಗೆ ಆಲೋಚನೆ ಮಾಡುತ್ತೇವೆ. ಆದರೆ ಶ್ರೀಮಂತ ವ್ಯಕ್ತಿಗಳು ಸಂಭ್ರಮಿಸುತ್ತಾರೆ. ಏಕೆಂದರೆ ಅವರು ತಾವೇನೋ ಮಹಾನ್ ಸಾಧನೆ ಮಾಡಿದ್ದೇವೆ ಎಂಬ ಭಾವನೆಯಲ್ಲಿರುತ್ತಾರೆ. ಆದರೆ ನಾವು ಜಿಆರ್‌ಇ/ಸಿಎಟಿ ಮುಂತಾದವುಗಳ ಬಗ್ಗೆ ಯೋಚಿಸುತ್ತೇವೆ. ಇದರ ಮೂಲಕ ನಾವು ಮುಂದೆ ಓದಲು ಒಳ್ಳೆಯ ಸಂಸ್ಥೆಗೆ ಹೋಗಬಹುದು ಎನ್ನುವುದು ನಮ್ಮ ಉದ್ದೇಶ' ಎಂದು ಅಭಿಷೇಕ್ ವರ್ಮಾ ಎಂಬುವವರು ಹೇಳಿದ್ದಾರೆ.

ಇದೆಂತಾ ಭಯಾನಕ ಜೀನ್ಸ್?

ಇದೆಂತಾ ಭಯಾನಕ ಜೀನ್ಸ್?

ಮಹಿಳಾ ವಿದ್ಯಾರ್ಥಿಗೆ ಸೂಕ್ತವಾದ ಪದವಿ ಗೌನ್ ಹೊಲಿಯುವ ಪ್ರಯತ್ನ ಮುಗಿದ ಬಳಿಕ ಆಕೆ ಅಂತಹ ಭಯಾನಕವಾದ ಜೀನ್ಸ್ ಪ್ಯಾಂಟ್ ಧರಿಸಿದ್ದಾಳೆ. ಯಾಕಣ್ಣ? ಎಂದು ಆರ್ಟಿ ಮಾರ್ಟಿನ್ ಎಂಬುವವರು ನವ್ಯಾ ಧರಿಸಿರುವ ಉಡುಗೆಯನ್ನು ಲೇವಡಿ ಮಾಡಿದ್ದಾರೆ.

ಎಲ್ಲದಕ್ಕೂ ಭಾರತ ಬೇಕು..

ಎಲ್ಲದಕ್ಕೂ ಭಾರತ ಬೇಕು..

'ಅಭಿನಂದನೆಗಳು. ಆದರೆ ನ್ಯೂಯಾರ್ಕ್ ಏಕೆ? ನಾವು ಭಾರತದಲ್ಲಿ ಅನ್ನ ತಿನ್ನುತ್ತೇವೆ, ಭಾರತದಲ್ಲಿ ಸಂಪಾದಿಸುತ್ತೇವೆ, ಭಾರತದಲ್ಲಿ ಬದುಕುತ್ತೇವೆ, ಭಾರತದಲ್ಲಿ ಜನಪ್ರಿಯತೆ ಪಡೆಯುತ್ತೇವೆ, ಇತ್ಯಾದಿ... ಆದರೆ ಶಿಕ್ಷಣಕ್ಕೆ ನ್ಯೂಯಾರ್ಕ್. ನನಗೆ ಇದು ಅರ್ಥವಾಗುತ್ತಿಲ್ಲ' ಎಂದು ಸರ್ದಾರ್ ಸಿಂಗ್ ಕುಶ್ವಾಹ್ ಟೀಕಿಸಿದ್ದಾರೆ.

ಜನರಿಗೆ ಊಟ ಇಲ್ಲ...

ಜನರಿಗೆ ಊಟ ಇಲ್ಲ...

ಎಂತಹ ಹಾಳಾದ ಮಗು ಇದು! ಜನರು ಊಟಕ್ಕಿಲ್ಲದೆ ಪರದಾಡುತ್ತಿದ್ದಾರೆ. ಆದರೆ ಈಕೆ ಗೌನ್ ಮತ್ತು ಟೊಪ್ಪಿ ಧರಿಸಲು ಬಯಸಿದ್ದಾಳೆ. ಕೆಲಸದವರು ಹೊಲಿದಿದ್ದಾ ಇದು? ಲಾಕ್ ಡೌನ್ ಸಮಯದಲ್ಲಿ ಶ್ರೀಮಂರಿಕೆಯ ದರ್ಪದವರ ಬೇಡಿಕೆಯಂತೆ ಜನರನ್ನು ಕೆಲಸಕ್ಕೆ ತೊಡಗಿಸಿದ್ದಾರೆಯೇ? ಎಂದು ಪ್ರಾಚಿ ದೇಸಾಯಿ ಎಂಬುವವರು ಕಿಡಿಕಾರಿದ್ದಾರೆ.

More from Filmibeat

English summary
Amitabh Bachchan's family hosted a ceremony to celebrate Shwetha Bacchan Nanda'd Daughter Navya Naveli graduation from New York's Fordham University.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X