ಟೀಮ್ ಸೋತಿದ್ದಕ್ಕೆ ಕಣ್ಣೀರಿಟ್ಟ ಕಾವ್ಯಾ ಮಾರನ್; "ಆಕೆ ನೋಡಿ ಬೇಸರ ಆಯ್ತು" ಎಂದ ಅಮಿತಾಭ್

ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಸಿನಿಮಾ ಅಷ್ಟೇ ಅಲ್ಲ, ಕ್ರಿಕೆಟ್ ಬಗ್ಗೆನೂ ಬಿಗ್‌ಬಿ ಗೆ ಆಸಕ್ತಿ ಹೆಚ್ಚು. ಅದರಲ್ಲೂ ಐಪಿಎಲ್‌ ಪಂದ್ಯಗಳು ನಡೆಯುವ ವೇಳೆ ಅಮಿತಾಭ್ ಬಚ್ಚನ್ ಮುಂಬೈ ತಂಡಕ್ಕೆ ಬೆಂಬಲ ಸೂಚಿಸಿದ್ದರು.

2024ರ ಐಪಿಎಲ್ ಪಂದ್ಯಗಳಿಗೆ ಅಮಿತಾಭ್ ಬಚ್ಚನ್ ಬೆಂಬಲ ಸೂಚಿಸುತ್ತಲೇ ಇದ್ದರು. 17ನೇ ಐಪಿಎಲ್ ಪಂದ್ಯ ಮುಗಿಯುತ್ತಿದ್ದಂತೆ ಬಿಗ್ ಬಿ ತನ್ನ ಟಂಬ್ಲರ್ ಬ್ಲಾಗ್‌ನಲ್ಲಿ ಫೈನಲ್ ಮ್ಯಾಚ್‌ ಬಗ್ಗೆ ಬರೆದು ಪೋಸ್ಟ್ ಮಾಡಿದ್ದಾರೆ. ಕೋಲ್ಕತ್ತಾ ನೈಟ್ ರೈಟರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಮಧ್ಯೆ ಫೈನಲ್ ಪಂದ್ಯಗಳು ನಡೆದಿದ್ದವು. ಇದರಲ್ಲಿ ಹೈದರಾಬಾದ್ ಹೀನಾಯವಾಗಿ ಸೋತು ರನ್ನರ್ ಅಪ್ ಆಗಿ ಹೊರ ಹೊಮ್ಮಿತ್ತು.

Amitabh Bachchan said I felt bad for her about Kavya Maran owner of SRH Ipl team who lost in final

ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕಾವ್ಯಾ ಮಾರನ್ ಮಾಲೀಕತ್ವದ ಸನ್‌ ರೈಸರ್ಸ್ ಹೈದರಾಬಾದ್ ತಂಡಗಳು ಫೈನಲ್ ಪಂದ್ಯದಲ್ಲಿ ಸೆಣೆಸಾಡಿದ್ದವು. ಈ ಪಂದ್ಯದಲ್ಲಿ ಹೈದರಾಬಾದ್ ಸೋತಾಗ, ತಂಡದ ಒಡತಿಯಾಗಿದ್ದ ಕಾವ್ಯಾ ಮಾರನ್ ಬೇಸರದಲ್ಲಿ ಕಣ್ಣೀರು ಹಾಕಿದ್ದರು. ಇವರ ವಿಡಿಯೋ ಹಾಗೂ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಕಾವ್ಯಾ ಮಾರನ್ ಕಣ್ಣೀರಿಟ್ಟ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸಮಾಧಾನಕ್ಕೆ ಮುಂದಾಗಿದ್ದರು. ಇದರ ಹಿಂದೇನೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಬ್ಲಾಗ್‌ನಲ್ಲಿ ಕಾವ್ಯಾ ಮಾರನ್ ಬಗ್ಗೆ ಬರೆದಿದ್ದು " ಆಕೆಯನ್ನು ನೋಡಿ ಬೇಸರ ಆಯ್ತು" ಎಂದು ಬಿಗ್ ಹೇಳಿಕೊಂಡಿದ್ದಾರೆ.

" ಐಪಿಎಲ್ ಕೊನೆಗೂ ಮುಕ್ತಾಯಗೊಂಡಿದೆ. ಕೆಕೆಆರ್ ಎಲ್ಲರೂ ಒಪ್ಪುವಂತಹ ಜಯವನ್ನು ಗಳಿಸಿದೆ. ಎಸ್‌ಆರ್‌ಎಚ್ ಮೀರಿಸುವಂತಹ ಆಟ ಆಡಿದೆ. ಎಸ್‌ಆರ್‌ಎಚ್ ಒಂದು ಒಳ್ಳೆಯ ತಂಡ ಆಗಿದ್ದರಿಂದ ಹಲವು ಕಡೆ ನಿರಾಸೆ ಮಾಡಿದೆ ಅಂತ ಅನಿಸಿತ್ತು. ಈ ತಂಡ ಹಲವು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನಗಳನ್ನು ನೀಡಿದ್ದನ್ನು ನೋಡಿದ್ದೇವೆ." ಎಂದು ಅಮಿತಾಭ್ ಬಚ್ಚನ್ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಅಮಿತಾಭ್ ಬಚ್ಚನ್ ಐಪಿಎಲ್ ಫೈನಲ್ ಪಂದ್ಯದ ಅತ್ಯಂತ ಭಾವನಾತ್ಮಕ ಸನ್ನಿವೇಶದ ಬಗ್ಗೆನೂ ಬರೆದಿದ್ದಾರೆ. " ಸ್ಟೇಡಿಯಂನಲ್ಲಿ ಈ ಸುಂದರ ಹುಡುಗಿ, ಎಸ್‌ಆರ್‌ಎಚ್ ತಂಡ ಒಡತಿ ಎಲ್ಲರನ್ನೂ ಭಾವನಾತ್ಮಕವಾಗಿ ಟಚ್ ಮಾಡಿಬಿಟ್ಟರು. ಪಂದ್ಯ ಸೋತ ಬಳಿಕ ಈ ಹುಡುಗಿ ಕಣ್ಣೀರು ಇಟ್ಟಿದ್ದು, ಬಳಿಕ ತನ್ನ ಭಾವನೆಗಳು ಯಾರಿಗೂ ತೋರಿಸದಂತೆ ಮುಖವನ್ನು ಕ್ಯಾಮರಾಗೆ ಕಾಣದಂತೆ ತಿರುಗಿಸಿದ್ದು ಗಮನ ಸೆಳೆದಿತ್ತು. ಆಕೆಯನ್ನು ನೋಡಿ ನನಗೆ ನಿಜಕ್ಕೂ ಬೇಸರ ಆಯ್ತು. ತಲೆಗೆ ಹಾಕಿಕೊಳ್ಳಬೇಡ.. ಮೈ ಡಿಯರ್.. ನಾಳೆ ಅನ್ನೋದು ಮತ್ತೊಂದು ಹೊಸ ದಿನ" ಎಂದು ಅಮಿತಾಭ್ ಬಚ್ಚನ್ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ನೆಟ್ಟಿಗರು ಕೂಡ ಕಾವ್ಯಾ ಮಾರನ್‌ಗೆ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. "ಇಂತಹ ಓನರ್ ಇರಬೇಕು.", "ವಜ್ರಕ್ಕೆ ಸಮನಾದ ಓನರ್", "ತಂಡದವರೊಂದಿಗೆ ಜಗಳ ಆಡುವಂತಹ ಓನರ್ ಅಲ್ಲ" ಎಂದೆಲ್ಲ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಒಟ್ನಲ್ಲಿ ಕಾವ್ಯಾ ಮಾರನ್ ಟೀಮ್ ಸೋತಿದ್ದರೂ, ಈ ಸೀಸನ್‌ನಲ್ಲಿ ಮತ್ತಷ್ಟು ಹೆಚ್ಚು ಅಭಿಮಾನಿಗಳನ್ನು ಗಳಿಸಿದ್ದಾರೆ.

More from Filmibeat

English summary
Amitabh Bachchan about Kavya Maran went viral:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X