ಅನಾರೋಗ್ಯ ಸುದ್ದಿ ಹಬ್ಬಿದ ಬೆನ್ನಲ್ಲೇ ಸಚಿನ್ ಜೊತೆ ಕಾಣಿಸಿಕೊಂಡ ಅಮಿತಾಭ್ ಬಚ್ಚನ್; ಬಿಗ್‌ಬಿ ಹೇಳಿದ್ದೇನು?

ಕೆಲವೇ ದಿನಗಳ ಹಿಂದಷ್ಟೇ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ಮುಂಬೈನ ಕೋಕಿಲಾಬೇನ್ ಧೀರುಬಾಯ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿಯಾಗಿತ್ತು. ಇದು ಅಮಿತಾಭ್ ಬಚ್ಚನ್ ಅಭಿಮಾನಿಗಳ ಆತಂಕಕ್ಕೂ ಕಾರಣವಾಗಿತ್ತು. ಆದರೆ, ಈ ಬಗ್ಗೆ ಬಿಗ್‌ ಬಿ ಕುಟುಂಬ ಯಾವುದೇ ಹೇಳಿಕೆಗಳನ್ನು ಕೊಟ್ಟಿರಲಿಲ್ಲ.

ಅಮಿತಾಭ್ ಬಚ್ಚನ್ ದಿಢೀರನೇ ಉಸಿರಾಟದ ಸಮಸ್ಯೆ ಎದುರಾಗಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಆಂಜಿಯೋಪ್ಲಾಸ್ಟಿ ಮಾಡಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದು ಓಡಾಡಿತ್ತು. ಆದರೆ, ನಿನ್ನೆ (ಮಾರ್ಚ್ 15) ನಡೆದ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ನಲ್ಲಿ (ISPL) ಬಿಗ್ ಬಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

Amitabh Bachchan says hospitalisation and angioplasty is fake news

ಅನಾರೋಗ್ಯಕ್ಕೆ ಒಳಗಾದ ಅಮಿತಾಭ್ ಬಚ್ಚನ್‌ರನ್ನು ISPL ಕಂಡವರು ಒಮ್ಮೆ ಶಾಕ್ ಆಗಿದ್ದರು. ಬಳಿಕ ISPL ಮುಗಿಸಿ ಹೋಗುವಾಗ ಅಲ್ಲಿದ್ದವರೊಬ್ಬರು ಬಿಗ್‌ಬಿಯ ಆರೋಗ್ಯವನ್ನು ವಿಚಾರಿಸಿದ್ದರು. ಆ ವೇಳೆ ಅಮಿತಾಭ್ ಬಚ್ಚನ್ ನಾನು ಆರೋಗ್ಯವಾಗಿದ್ದೇನೆ ಇದು ಸುಳ್ಳು ಸುದ್ದಿ ಎಂದು ಹೇಳಿ ಹೊರಟು ಹೋದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಹೌದು, ಅಮಿತಾಭ್ ಬಚ್ಚನ್ ಆರೋಗ್ಯವಾಗಿದ್ದಾರೆ. ಅವರು ಯಾವುದೇ ಆಸ್ಪತ್ರೆಗೂ ದಾಖಲಾಗಿರಲಿಲ್ಲ. ಅವರಿಗೆ ವೈದ್ಯರು ಆಂಜಿಯೋಪ್ಲಾಸ್ಟಿಯನ್ನೂ ಮಾಡಿಲ್ಲ. ಅಮಿತಾಭ್ ಬಚ್ಚನ್ ಮುಂಬೈನಲ್ಲಿ ಐಎಸ್‌ಪಿಲ್ ಫೈನಲ್ ಮುಗಿಸಿ ಮನೆಗೆ ಹೋಗುವಾಗ ಪಾಪರಾಜಿಗಳ ಕಣ್ಣುಗೆ ಬಿದ್ದಿದ್ದಾರೆ.

ಈ ವೇಳೆ ಅದೇ ಗುಂಪಿನಲ್ಲಿದ್ದವರೊಬ್ಬರು ಬಿಗ್ ಬಿಗೆ "ಹೇಗಿದ್ದೀರಾ.. ಎಲ್ಲಾ ಕ್ಷೇಮವೇ" ಎಂದು ಆರೋಗ್ಯದ ಬಗ್ಗೆ ಕೇಳಿದ್ದರು. ತಕ್ಷಣ ನಿಂತ ಬಿಗ್ ಬಿ ಅವರೆಡೆಗೆ ಕೈ ಮಾಡಿ "ಸುಳ್ಳು ಸುದ್ದಿ" ಎಂದು ಮುಂದಕ್ಕೆ ಹೋಗುತ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಅಮಿತಾಭ್ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಅಮಿತಾಭ್ ಬಚ್ಚನ್ ISPL ಫೈನಲ್‌ನಲ್ಲಿ ಸಿಕ್ಕಾಪಟ್ಟೆ ಜೋಷ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪುತ್ರ ಅಭಿಷೇಕ್ ಬಚ್ಚನ್ ಜೊತೆ ಬಿಗ್‌ ಬಿ ISPLಗೆ ಬಂದಿದ್ದರು. ಇದೇ ವೇಳೆ ಕ್ರಿಕೆಟ್ ಲೆಜೆಂಟ್ ಸಚಿತ್ ತೆಂಡೂಲ್ಕರ್ ಜೊತೆ ಗಂಭೀರವಾದ ಚರ್ಚೆ ಮಾಡುವ ಫೋಟೊಗಳನ್ನು ಅವರೇ ತಮ್ಮ ಎಕ್ಸ್‌ ಖಾತೆಯಲ್ಲಿ (ಟ್ವಿಟರ್) ಹಂಚಿಕೊಂಡಿದ್ದಾರೆ. ಈ ವೇಳೆ ಜೋಷ್‌ನಲ್ಲಿ ಇರುವಂತೆ ಕಾಣಿಸಿಕೊಂಡಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾರೆ, ಬಿಗ್ ಬಿ ಅಮಿತಾಭ್ ಬಚ್ಚನ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್, ದೀಪಿಕಾ ಪಡುಕೋಣೆ ನಟಿಸುತ್ತಿರುವ 'ಕಲ್ಕಿ 2898 ಎಡಿ' ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಸದ್ಯ ಬಿಗ್‌ ಬಿಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದು. ಇನ್ನು ರಜನಿಕಾಂತ್ ನಟಿಸುತ್ತಿರುವ 'ವೆಟೈಯಾನ್' ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

More from Filmibeat

English summary
Amitabh Bachchan hospitalisation is fake news video goes viral:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X