ಇಂಟರ್ನೆಟ್ ನಲ್ಲಿ ಭಾರೀ ಸದ್ದು ಮಾಡಿದ, ಅಪ್ಪನಿಗೆ ಅಭಿಷೇಕ್ ಬಚ್ಚನ್ ಬರೆದ ಹಳೇ ಪತ್ರ
ಬಾಲಿವುಡ್ ಮೇರು ನಟ ಅಮಿತಾಬ್ ಬಚ್ಚನ್, ತಮ್ಮ ಕುಟುಂಬದ ಜೊತಿಗಿನ ಒಡನಾಟವನ್ನು ಆವಾಗಾವಾಗ ಸಾಮಾಜಿಕ ತಾಣದಲ್ಲಿ ಮೆಲುಕು ಹಾಕುವುದುಂಟು
ಈ ಹಿಂದೆ, ಹಲವು ಬಾರಿ ಪುತ್ರ ಅಭಿಷೇಕ್ ಬಚ್ಚನ್ ಜೊತೆಗಿನ್ ಹಳೇ ಪೋಟೋಗಳನ್ನು ಹಂಚಿ, ಅದಕ್ಕೊಂದು ಆಕರ್ಷಕವಾದ ಶೀರ್ಷಿಕೆ ನೀಡಿ, ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದ್ದರು.
ಅದೇ ರೀತಿ, ಮಗ ಅಭಿಷೇಕ್ ಬರೆದ ಹಳೆಯ ಪತ್ರವನ್ನು ಅಮಿತಾಬ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಆ ಪತ್ರವನ್ನು ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರೆ.
ಅಮಿತಾಬ್ ಹಂಚಿಕೊಂಡ ಮಗನ ಆ ಹಳೇ ಪತ್ರ, ಮೂರು ಸಾವಿರಕ್ಕೂ ಹೆಚ್ಚು ರಿಟ್ವೀಟ್ ಆಗಿದ್ದು, ಸುಮಾರು 56 ಸಾವಿರ ಜನ ಲೈಕ್ ಮಾಡಿದ್ದಾರೆ.

ಮಗ ಅಭಿಷೇಕ್
"ಔಟ್ door ಶೂಟಿಂಗ್ ಗಾಗಿ ಬಹಳ ದಿನ ಮನೆಯಿಂದ ದೂರ ಇರಬೇಕಾಗಿದ್ದ ಸಂದರ್ಭದಲ್ಲಿ, ಮಗ ಅಭಿಷೇಕ್ ಬರೆದ ಪತ್ರ ಇದಾಗಿತ್ತು" ಎಂದು ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.

ನಿಮ್ಮ ನಗುವಿಗಾಗಿ ಪ್ರಾರ್ಥಿಸುತ್ತಿದ್ದೇವೆ
"ಡಾರ್ಲಿಂಗ್ ಪಪ್ಪಾ.. ಹೇಗಿದ್ದೀರಿ ,ನಾವಿಲ್ಲಿ ಕ್ಷೇಮವಾಗಿದ್ದೇವೆ. ಅಮ್ಮ, ಸಹೋದರಿ ಶ್ವೇತಾ ಮನೆಯನ್ನು ನೋಡಿಕೊಳ್ಳುತ್ತಿರುವುದರಿಂದ, ಆತಂಕಬೇಡ. ನಿಮ್ಮ ನಗುವಿಗಾಗಿ ಪ್ರಾರ್ಥಿಸುತ್ತಿದ್ದೇವೆ. ಮತ್ತು, ದೇವರು ನಮ್ಮ ಪ್ರಾರ್ಥನೆಯನ್ನು ಕೇಳುತ್ತಿದ್ದಾನೆ" ಎಂದು ಬರೆದಿರುವ ಪತ್ರ ಅದಾಗಿತ್ತು.

ನಾನು ಕೆಲವೊಮ್ಮೆ ತುಂಬಾ ತುಂಟನಾಗಿರುತ್ತೇನೆ
ಪತ್ರದ ಕೊನೆಯಲ್ಲಿ "ನಾನು ಕೆಲವೊಮ್ಮೆ ತುಂಬಾ ತುಂಟನಾಗಿರುತ್ತೇನೆ" ಎಂದು ಅಭಿಷೇಕ್ ಬರೆದಿದ್ದಾರೆ. ಪುತ್ರನ ಹಳೇ ಪತ್ರವನ್ನು ಶೇರ್ ಮಾಡಿರುವ ಬಾಲಿವುಡ್ ಶೆಹನ್ ಶಾ ಅಮಿತಾಬ್, ಇದಕ್ಕೆ ಹಿಂದಿಯಲ್ಲಿ ಒಂದು ಒಕ್ಕಣೆಯನ್ನೂ ಬರೆದಿದ್ದಾರೆ.

ಮಗ ಗುಣವಂತನಾಗಿದ್ದರೆ, ಅವನಿಗಾಗಿ ಯಾಕೆ ಸಂಪಾದನೆ ಮಾಡಬೇಕು
"ಮಗ ಗುಣವಂತನಾಗಿದ್ದರೆ, ಅವನಿಗಾಗಿ ಯಾಕೆ ಸಂಪಾದನೆ ಮಾಡಬೇಕು, ಯಾಕೆಂದರೆ ಸಂಪಾದನೆಯ ದಾರಿಯನ್ನು ಅವನೇ ಕಂಡುಕೊಳ್ಳುತ್ತಾನೆ. ಮಗ ಗುಣವಂತನಲ್ಲದಿದ್ದರೂ, ಅವನಿಗಾಗಿ ಏನೂ ಉಳಿಸಬಾರದು, ಯಾಕೆಂದರೆ, ಅದನ್ನು ಅವನು ದುರುಪಯೋಗ ಪಡಿಸಿಕೊಳ್ಳುತ್ತಾನೆ" ಎಂದು ಅಮಿತಾಬ್ ಬರೆದಿದ್ದಾರೆ.

ಶ್ವೇತಾಳ ಹಳೆಯ ಬ್ಲ್ಯಾಕ್ ಎಂಡ್ ವೈಟ್ ಫೋಟ್
ಕಳೆದ ಜೂನ್ ತಿಂಗಳಲ್ಲಿ ಮಗಳು ಶ್ವೇತಾಳ ಹಳೆಯ ಬ್ಲ್ಯಾಕ್ ಎಂಡ್ ವೈಟ್ ಫೋಟ್ ವನ್ನು ಅಮಿತಾಬ್ ಹಂಚಿಕೊಂಡಿದ್ದರು. "ಮಗಳು ಹೀಗಿದ್ದಳು, ಆಮೇಲೆ ಒಮ್ಮೆಲೇ ಬೆಳೆದು ಹೋದಳು, ನನಗದು ಗೊತ್ತಾಗಲೇ ಇಲ್ಲ" ಎಂದು ಅಮಿತಾಬ್ ಅದಕ್ಕೆ ಒಕ್ಕಣೆ ನೀಡಿದ್ದರು.


Click it and Unblock the Notifications











