ಆಸ್ಪತ್ರೆಯಲ್ಲಿ ಕುಳಿತು ಕಣ್ಣೀರಿಟ್ಟ ಬಿಗ್ ಬಿ ಅಮಿತಾಬ್ ಬಚ್ಚನ್

ಕೊರೊನಾ ವೈರಸ್ ಸೋಂಕಿಗೆ ಒಳಗಾದ ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಜುಲೈ 11ರಿಂದ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿವಿಧ ಆರೋಗ್ಯ ಸಮಸ್ಯೆಗಳು ಕೂಡ ಅವರನ್ನು ಕಾಡುತ್ತಿರುವುದರಿಂದ ಅವರು ಅಷ್ಟು ವೇಗವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಅವರೊಂದಿಗೆ ಮಗ ಅಭಿಷೇಕ್ ಬಚ್ಚನ್ ಕೂಡ ಆಸ್ಪತ್ರೆಯಲ್ಲಿಯೇ ಇದ್ದಾರೆ.

Recommended Video

Aishwarya Rai ಗೆ ಸಂತಸದ ಸುದ್ದಿ! | Filmibeat Kannada

ಇತ್ತ ಅವರ ಸೊಸೆ ಐಶ್ವರ್ಯಾ ಮತ್ತು ಮೊಮ್ಮಗಳು ಆರಾಧ್ಯಾ, ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡು ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಮನೆಗೆ ಹಿಂದಿರುಗಿದ್ದಾರೆ. ಈ ಸಂದರ್ಭದಲ್ಲಿ ಎರಡು ವಿಚಾರಗಳನ್ನು ಅಮಿತಾಬ್ ಬಚ್ಚನ್ ಹಂಚಿಕೊಂಡಿದ್ದಾರೆ. ಒಂದು ಖುಷಿಯ ಸಂಗತಿ ಮತ್ತೊಂದು ನೋವಿನ ಸಂಗತಿ. ಮುಂದೆ ಓದಿ...

ಕಣ್ಣೀರು ತಡೆಯಲಾಗುತ್ತಿಲ್ಲ

ಕಣ್ಣೀರು ತಡೆಯಲಾಗುತ್ತಿಲ್ಲ

ಸೊಸೆ ಐಶ್ವರ್ಯಾ ರೈ ಮತ್ತು ಮೊಮ್ಮಗಳು ಆರಾಧ್ಯಾ ಇಬ್ಬರೂ ಚೇತರಿಸಿಕೊಂಡು ಮನೆಗೆ ವಾಪಸ್ ಆಗಿರುವುದು ಅವರಿಗೆ ಖುಷಿ ನೀಡಿದೆ. 'ನನ್ನ ಸೊಸೆ ಮತ್ತು ಮೊಮ್ಮಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ನನ್ನ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇವರೇ ನಿನ್ನ ಆಶೀರ್ವಾದ ಅನಂತವಾದುದು' ಎಂದು ಬಿಗ್ ಬಿ ಸಂತಸ ಹಂಚಿಕೊಂಡಿದ್ದಾರೆ.

ಅಳಬಾರದು ಎಂದ ಆರಾಧ್ಯಾ

ಅಳಬಾರದು ಎಂದ ಆರಾಧ್ಯಾ

ಅಜ್ಜ ಕಣ್ಣೀರಿಡುವುದನ್ನು ಕಂಡು ಆರಾಧ್ಯಾ ಹೇಳಿದ ಮಾತನ್ನು ಕೂಡ ಅಮಿತಾಬ್ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ನೀವೂ ಬೇಗ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬರುತ್ತೀರಿ ಎಂದು ಆತ್ಮವಿಶ್ವಾಸ ತುಂಬಿರುವ ಆರಾಧ್ಯಾ, ಅಳಬಾರದು ಎಂದು ಸಮಾಧಾನಪಡಿಸಿದ್ದಾಳಂತೆ.

ಮೊಮ್ಮಗಳ ಮಾತನ್ನು ನಂಬಬೇಕು

ಮೊಮ್ಮಗಳ ಮಾತನ್ನು ನಂಬಬೇಕು

'ಪುಟಾಣಿ ಮತ್ತು ಸೊಸೆ ಇಬ್ಬರೂ ಮನೆಗೆ ಮರಳಿದರು. ನನ್ನ ಕಣ್ಣಾಲಿಗಳಲ್ಲಿ ನೀರು ತುಂಬಿ ಬಂತು. ಇದರಿಂದ ಪುಟಾಣಿ ನನ್ನನ್ನು ಅಪ್ಪಿಕೊಂಡು, ಅಳಬಾರದು ಎಂದು ಹೇಳಿದಳು. ನೀವು ಬೇಗನೆ ಮನೆಗೆ ಬರುತ್ತೀರಿ ಎಂದು ಭರವಸೆ ನೀಡಿದಳು. ನಾನು ಅವಳನ್ನು ನಂಬಲೇಬೇಕು' ಎಂದು ಭಾವುಕರಾಗಿ ಬರೆದಿದ್ದಾರೆ.

ಅಮಿತಾಬ್ ಸಾವು ಬಯಸಿದ ಅನಾಮಿಕ

ಅಮಿತಾಬ್ ಸಾವು ಬಯಸಿದ ಅನಾಮಿಕ

ಇದರ ಜತೆಗೆ ಮತ್ತೊಂದು ವಿಷಾದಕರ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಕೊರೊನಾ ವೈರಸ್‌ನಿಂದ ನೀವು ಸತ್ತು ಹೋಗಿ ಎಂದು ಹೇಳಿರುವ ಅನಾಮಧೇಯ ವ್ಯಕ್ತಿಗೆ ಪ್ರತಿಕ್ರಿಯಿಸಿರುವ ಅಮಿತಾಬ್, 'ಅನಾಮಿಕನೇ, ನೀನು ನಿನ್ನ ಅಪ್ಪನ ಹೆಸರನ್ನೂ ಬರೆದಿಲ್ಲ. ಏಕೆಂದರೆ ನಿನಗೆ ಜನ್ಮಕೊಟ್ಟವರು ಯಾರು ಎಂದು ತಿಳಿದಿಲ್ಲ. ಇಲ್ಲಿ ಎರಡೇ ಸಂಗತಿಗಳು ಘಟಿಸಲು ಸಾಧ್ಯ. ಒಂದೋ ನಾನು ಸಾಯಬೇಕು, ಇಲ್ಲವೇ ಬದುಕುತ್ತೇನೆ. ನಾನು ಸತ್ತರೆ ನಿನ್ನ ಕೆಟ್ಟ ಹಾರೈಕೆಯನ್ನು ಮತ್ತೆ ಬರೆಯಲು ಅವಕಾಶ ಸಿಗುವುದಿಲ್ಲ ಎಂದು ಅಮಿತಾಬ್ ತೀಕ್ಷ್ಣವಾಗಿ ಹೇಳಿದ್ದಾರೆ.

More from Filmibeat

English summary
Bollywood Big B Amitabh Bachchan said couldn't hold back tears after Aishwarya Rai and Aaradhya discharged from hospital.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X