ಸೋನಂ ಧರಿಸಿದ್ದ ಲೆಹೆಂಗಾ ತಯಾರು ಮಾಡೋಕೆ ಬೇಕಾಗಿದ್ದು ಬರೋಬ್ಬರಿ 18 ತಿಂಗಳು.!
ಎಲ್ಲರಿಗೂ ಗೊತ್ತಿರುವ ಹಾಗೆ ನಟಿ ಸೋನಂ ಕಪೂರ್ ಬಾಲಿವುಡ್ ನ ಸ್ಟೈಲ್ ಐಕಾನ್. ಎಲ್ಲೇ ಹೋದರೂ, ಸ್ಟೈಲ್ ಮೇನ್ಟೇನ್ ಮಾಡೋದ್ರಲ್ಲಿ ನಟಿ ಸೋನಂ ಕಪೂರ್ ಎತ್ತಿದ ಕೈ. ಅನೇಕ ಫ್ಯಾಶನ್ ಈವೆಂಟ್ ಗಳಲ್ಲಿ ಶೋ ಸ್ಟಾಪರ್ ಆಗಿರುವ ಸೋನಂ ಕಪೂರ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ತಮ್ಮ ಜೀವನದ ಅತ್ಯಮೂಲ್ಯ ಘಟ್ಟಕ್ಕೆ ಕಾಲಿಡುವ ಶುಭ ಸಂದರ್ಭದಂದು ಸೋನಂ ಕಪೂರ್ ಯಾವ ರೀತಿಯ ಉಡುಗೆ ತೊಡಬಹುದು ಎಂದು ಅಭಿಮಾನಿಗಳು ಕಾಯ್ತಿದ್ದರು.
ನಿನ್ನೆ (ಮೇ 7) ಸಂಜೆ ಸನ್ ಟೆಕ್, ಸಿಗ್ನೇಚರ್ ಐಲ್ಯಾಂಡ್ ನಲ್ಲಿ ನಟಿ ಸೋನಂ ಕಪೂರ್ ರವರ ಮೆಹಂದಿ ಶಾಸ್ತ್ರ ಹಾಗೂ ಸಂಗೀತ ಕಾರ್ಯಕ್ರಮ ನೆರವೇರಿತು. ಸಂಗೀತ್ ಸೆರೆಮನಿಯಲ್ಲಿ ಬಿಳಿ ಲೆಹಂಗಾ ತೊಟ್ಟು ನಟಿ ಸೋನಂ ಕಪೂರ್ ಅಕ್ಷರಶಃ ಯುವರಾಣಿಯಂತೆ ಕಂಗೊಳಿಸಿದರು.
ಅಸಲಿಗೆ, ಸೋನಂ ತೊಟ್ಟಿದ್ದ ಲೆಹಂಗಾ ತಯಾರು ಮಾಡೋಕೆ 18 ತಿಂಗಳು ಬೇಕಾಯ್ತು ಅನ್ನೋದು ನಿಮಗೆ ಗೊತ್ತಾ.? ಸೋನಂ ತೊಟ್ಟಿದ್ದ ಲೆಹಂಗಾ ಕುರಿತ ಇಂಟ್ರೆಸ್ಟಿಂಗ್ ಕಥೆ ಇಲ್ಲಿದೆ ಓದಿರಿ...

ಚಿಂಕಂಕಾರಿ ಲೆಹಂಗಾ
ಸಾಂಪ್ರದಾಯಿಕ ಉಡುಗೆಗಳನ್ನ ತಯಾರು ಮಾಡುವುದರಲ್ಲಿ ಭಾರತದಲ್ಲಿಯೇ ಹೆಸರುವಾಸಿ ಆಗಿರುವ ಡಿಸೈನರ್ ಗಳಾದ ಅಬು ಜಾನಿ ಹಾಗೂ ಸಂದೀಪ್ ಕೋಸ್ಲಾ ಸಿದ್ದಪಡಿಸಿದ ಬಿಳಿ ಬಣ್ಣದ ಲೆಹಂಗಾದಲ್ಲಿ ನವ ವಧು ಸೋನಂ ಕಪೂರ್ ಮಿಂಚಿದರು.

18 ತಿಂಗಳು ಬೇಕಾಯಿತು
ಚಿಂಕಂಕಾರಿ ಹಾಗೂ ಸಿಗ್ನೇಚರ್ ಮಿರರ್ ವರ್ಕ್ ಹೊಂದಿರುವ ಈ ಬಿಳಿ ಲೆಹಂಗಾ ತಯಾರು ಮಾಡೋಕೆ ಬರೋಬ್ಬರಿ 18 ತಿಂಗಳು ತೆಗೆದುಕೊಂಡಿದ್ದರಂತೆ ಅಬು ಜಾನಿ ಹಾಗೂ ಸಂದೀಪ್ ಕೋಸ್ಲಾ.

ಎರಡು ವರ್ಷಗಳ ಹಿಂದೆ ಆರ್ಡರ್ ಮಾಡಿದ್ದರಂತೆ ಸೋನಂ.!
ಇಂಥದ್ದೇ ಲೆಹಂಗಾ ಬೇಕು ಅಂತ ಎರಡು ವರ್ಷಗಳ ಹಿಂದೆಯೇ ನಟಿ ಸೋನಂ ಕಪೂರ್ ಆರ್ಡರ್ ಕೊಟ್ಟಿದ್ದರಂತೆ.

ಅಮ್ಮನ ನೆಕ್ಲೇಸ್ ತೊಟ್ಟಿದ್ದ ಸೋನಂ
ಸಂಗೀತ ಕಾರ್ಯಕ್ರಮಕ್ಕಾಗಿ ತಮ್ಮ ತಾಯಿ ಸುನೀತಾ ಕಪೂರ್ ರವರ ಮುತ್ತು ಹಾಗೂ ಕುಂದನ್ ಮಿಶ್ರಿತ ಚೋಕರ್ ನೆಕ್ಲೇಸ್ ತೊಟ್ಟಿದ್ದರು ನಟಿ ಸೋನಂ ಕಪೂರ್.


Click it and Unblock the Notifications











