ರಿಸೆಪ್ಷನ್ ನಲ್ಲಿ ಸ್ಪೋರ್ಟ್ಸ್ ಶೂ ಧರಿಸಿದ್ದ ಸೋನಂ ಪತಿ: ಟ್ರೋಲಿಗರಿಗೆ ಆನಂದ್ ಆಹುತಿ.!

By Harshitha

ಹರೆಯದ ಹುಡುಗಿಯರ ಪಾಲಿಗೆ ನಟಿ ಸೋನಂ ಕಪೂರ್ ಸ್ಟೈಲ್ ಐಕಾನ್. ಪ್ರತಿ ಸಿನಿಮಾಗಳಲ್ಲೂ ಹೊಸ ಹೊಸ ಲುಕ್ ಟ್ರೈ ಮಾಡುವುದರಲ್ಲಿ ಸೋನಂ ಕಪೂರ್ ಸದಾ ಮುಂದು. ಬಣ್ಣದ ಲೋಕದಲ್ಲಿ ಬಿಜಿಯಿರುವಾಗಲೇ, ನಟಿ ಸೋನಂ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಉದ್ಯಮಿ ಆನಂದ್ ಅಹುಜಾ ಜೊತೆಗೆ ನವ ಜೀವನಕ್ಕೆ ಸೋನಂ ಕಪೂರ್ ಅಡಿಯಿಟ್ಟರು. ಮೇ 8 ರಂದು ಸೋನಂ ಕಪೂರ್-ಆನಂದ್ ಅಹುಜಾ ವಿವಾಹ ಮಹೋತ್ಸವ ಹಾಗೂ ರಿಸೆಪ್ಷನ್ ಪಾರ್ಟಿ ನಡೆಯಿತು.

ಸಿಖ್ ಸಂಪ್ರದಾಯದಂತೆ ಮದುವೆ ಆದ ಬಳಿಕ ಸಂಜೆ ಮುಂಬೈನ 'ದಿ ಲೀಲಾ' ಹೋಟೆಲ್ ನಲ್ಲಿ ಸೋನಂ-ಆನಂದ್ ರಿಸೆಪ್ಷನ್ ಪಾರ್ಟಿ ನಡೆಯಿತು. ಆರತಕ್ಷತೆ ಕಾರ್ಯಕ್ರಮದಲ್ಲಿ ಗ್ರೇ ಕಲರ್ ಲೆಹೆಂಗಾ ತೊಟ್ಟು ಸೋನಂ ಕಪೂರ್ ಕಂಗೊಳಿಸಿದರು. ಇನ್ನೂ 'ವರ' ಆನಂದ್ ಗಮನ ಸೆಳೆದಿದ್ದೇ ಬೇರೆ ವಿಷಯಕ್ಕೆ.!

ರಿಸೆಪ್ಷನ್ ಗೆ ನೈಕಿ ಸ್ಪೋರ್ಟ್ಸ್ ಶೂ ಧರಿಸಿ ಬಂದಿದ್ದ ಆನಂದ್ ಅಹುಜಾ ಸದ್ಯ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಮುಂದೆ ಓದಿರಿ..

ಸ್ಫೋರ್ಟ್ ಶೂ ಹಾಕೊಂಡಿದ್ದ ಆನಂದ್ ಅಹುಜಾ

ಸ್ಫೋರ್ಟ್ ಶೂ ಹಾಕೊಂಡಿದ್ದ ಆನಂದ್ ಅಹುಜಾ

'ವಧು' ಸೋನಂ ಧರಿಸಿದ್ದ ಉಡುಪಿಗೆ ಹೊಂದಾಣಿಕೆ ಆಗುವಂತೆ ಕಪ್ಪು ಬಣ್ಣದ ಕುರ್ತಾ ಹಾಗೂ ಬಿಳಿ ಬಣ್ಣದ ಪೈಜಾಮಾ ಧರಿಸಿದ್ದರು 'ವರ' ಆನಂದ್ ಅಹುಜಾ. ಇಷ್ಟೇ ಆಗಿದ್ದರೆ ಪರ್ವಾಗಿಲ್ಲ. ಆದ್ರೆ, ಕುರ್ತಾ-ಪೈಜಾಮಾ ಧರಿಸಿ ಕಾಲಿಗೆ ನೈಕಿ ಸ್ಫೋರ್ಟ್ಸ್ ಶೂ ಹಾಕೊಂಡು ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಆನಂದ್ ಅಹುಜಾ. ಇದನ್ನ ನೋಡಿದವರು ಟ್ವಿಟ್ಟರ್ ನಲ್ಲಿ ಆಡಿಕೊಳ್ತಿದ್ದಾರೆ.

ಮದುವೆಯಿಂದ ಓಡಿ ಹೋಗಲು ಸ್ಪೋರ್ಟ್ಸ್ ಶೂ ಧರಿಸಿದ್ರಂತೆ.!

ಮದುವೆಯಿಂದ ಓಡಿ ಹೋಗಲು ಸ್ಪೋರ್ಟ್ಸ್ ಶೂ ಧರಿಸಿದ್ರಂತೆ.!

''ನೈಕಿ ಟ್ರೇನರ್ ಶೂ ಧರಿಸಿ ಆನಂದ್ ಅಹುಜಾ ರಿಸೆಪ್ಷನ್ ಗೆ ಆಗಮಿಸಿದ್ದರು. ಬಹುಶಃ ಮದುವೆಯಿಂದ ಓಡಿ ಹೋಗಲು ಆನಂದ್ ಅಹುಜಾ ಹೀಗೆ ಮಾಡಿರಬೇಕು'' ಎಂದು ಟ್ವೀಟಿಗರೊಬ್ಬರು ಲೇವಡಿ ಮಾಡಿದ್ದಾರೆ.

ಆತುರದಲ್ಲಿದ್ರಾ.?

ಆತುರದಲ್ಲಿದ್ರಾ.?

''ಆರತಕ್ಷತೆಗೆ ವರ ಆನಂದ್ ಅಹುಜಾ ಸ್ಪೋರ್ಟ್ಸ್ ಶೂ ಧರಿಸಿದ್ದಾರೆ ಅಂದ್ರೆ ಅವರು ಎಷ್ಟು ಆತುರದಲ್ಲಿ ಇದ್ದಿರಬಹುದು.?'' ಎಂದು ಟ್ವೀಟಿಗರೊಬ್ಬರು ಆನಂದ್ ಕಾಲೆಳೆದಿದ್ದಾರೆ.

ಜಸ್ಟ್ ಡೂ ಇಟ್.!

ಜಸ್ಟ್ ಡೂ ಇಟ್.!

''ಆನಂದ್ ಅಹುಜಾ ನೈಕಿ ಶೂ ಧರಿಸಿದ್ದು ಆತ್ಮವಿಶ್ವಾಸಕ್ಕಾಗಿ. ಯಾಕಂದ್ರೆ, ನೈಕಿ ಕಂಪನಿಯ ಟ್ಯಾಗ್ ಲೈನ್ ಜಸ್ಟ್ ಡೂ ಇಟ್ (ಸುಮ್ಮನೆ ಮಾಡಿಬಿಡಿ)'' ಎನ್ನುತ್ತಿದ್ದಾರೆ ನೆಟ್ಟಿಗರು.

ಲಿಯೋನಲ್ ಮೆಸ್ಸಿಗೆ ಲವ್ ಆಗಿದ್ಯಂತೆ

ಲಿಯೋನಲ್ ಮೆಸ್ಸಿಗೆ ಲವ್ ಆಗಿದ್ಯಂತೆ

ಆನಂದ್ ಅಹುಜಾ ರವರ ಸ್ಟೈಲ್ ಸ್ಟೇಟ್ ಮೆಂಟ್ ಲಿಯೋನಲ್ ಮೆಸ್ಸಿಗೆ ಇಷ್ಟ ಆಗಿದ್ಯಂತೆ.

ಡ್ಯಾನ್ಸ್ ಮಾಡಿ ಮಾಡಿ ಸುಸ್ತಾಗಿದೆ.!

ಡ್ಯಾನ್ಸ್ ಮಾಡಿ ಮಾಡಿ ಸುಸ್ತಾಗಿದೆ.!

''ಮೆಹಂದಿ, ಸಂಗೀತ ಕಾರ್ಯಕ್ರಮ ಹಾಗೂ ಮದುವೆಯಲ್ಲಿ ಕುಣಿದು ಕುಪ್ಪಳಿಸಿ ಕಾಲು ನೋವಾದ್ಮೇಲೆ, ಯಾರಿಗೂ ಕೇರ್ ಮಾಡದ ಆನಂದ್ ಅಹುಜಾ ಆರತಕ್ಷತೆಯಲ್ಲಿ ಇನ್ನೂ ಹೆಚ್ಚು ಡ್ಯಾನ್ಸ್ ಮಾಡಲು ಕಮ್ಫರ್ಟ್ ಆಗಿರುವ ಸ್ಫೋರ್ಟ್ಸ್ ಶೂ ಧರಿಸಿದ್ದರು'' ಎಂದು ಟ್ರೋಲ್ ಮಾಡಿದ್ದಾರೆ ನೆಟ್ಟಿಗರೊಬ್ಬರು.

ಹೊಗಳುವವರೂ ಇದ್ದಾರೆ.!

ಹೊಗಳುವವರೂ ಇದ್ದಾರೆ.!

ಒಂದ್ಕಡೆ ಆನಂದ್ ಅಹುಜಾ ಟ್ರೋಲ್ ಆಗುತ್ತಿದ್ದರೆ, ಇನ್ನೊಂದು ಕಡೆ ಅವರನ್ನ ಹೊಗಳುವವರೂ ಇದ್ದಾರೆ. ಸ್ಪೋರ್ಟ್ಸ್ ಶೂ ಆನಂದ್ ಡ್ರೆಸ್ ಗೆ ಮ್ಯಾಚಿಂಗ್ ಆಗಿದೆ. ತಮ್ಮ ಲುಕ್ ನ ಅವರು ಕ್ಯಾರಿ ಮಾಡಿರುವ ರೀತಿ ಮೆಚ್ಚುವಂಥದ್ದು ಎಂದು ಕೆಲವರು ಆನಂದ್ ಗೆ ಭೇಷ್ ಎನ್ನುತ್ತಿದ್ದಾರೆ.

More from Filmibeat

English summary
Bollywood Actress Sonam Kapoor's husband Anand Ahuja trolled for wearing sports shoes at Wedding Reception.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X