ಅನಂತ್ ಅಂಬಾನಿ-ರಾಧಿಕಾ ಮದುವೆಯಲ್ಲಿ ಹಾಡಲು ದುಬಾರಿ ಸಂಭಾವನೆ ಪಡೆದ ಪಾಪ್ ತಾರೆ ಜಸ್ಟಿನ್ ಬೀಬರ್
ಮುಂಬೈ: ಭಾರತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆಗೆ ಇನ್ನೇನು ಕೆಲವು ದಿನಗಳು ಬಾಕಿ ಉಳಿದಿವೆ. ಕಳೆದ ಒಂದು ವರ್ಷದಿಂದ ಗ್ರ್ಯಾಂಡ್ ಆಗಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಆ ಕಾರ್ಯಕ್ರಮದಲ್ಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ಸೆಲೆಬ್ರೆಟಿಗಳು ಪರ್ಫಾಮೆನ್ಸ್ ಮಾಡಿದ್ದರು. ಈಗ ಮದುವೆಗೂ ಹಾಗೇ ಸಿದ್ಧತೆಗಳು ಜೋರಾಗಿವೆ.
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಮೂರು ದಿನಗಳು ನಡೆಯುತ್ತಿರುವ ಈ ಸಮಾರಂಭದಲ್ಲಿ ಅಂತರಾಷ್ಟ್ರೀಯ ಪಾಪ್ ತಾರೆ ಜಸ್ಟಿನ್ ಬೀಬರ್ ಹಾಡಲಿದ್ದಾರೆ. ಅದಕ್ಕಾಗಿ ಈಗಾಗಲೇ ಜಸ್ಟಿನ್ ಬೀಬರ್ ಮುಂಬೈಗೂ ಬಂದು ಇಳಿದಿದ್ದು ಆಗಿದೆ.

ಅಂಬಾನಿ ಮಗನ ಮದುವೆ ದೊಡ್ಡ ಹಬ್ಬದಂತೆ ನಡೆಯುತ್ತೆ. ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳೇ ಇದಕ್ಕೆ ಸಾಕ್ಷಿ. ಜುಲೈ 12ರಂದು ಮದುವೆ ನಡೆಯುತ್ತಿದ್ದು, ಅದರಕ್ಕೂ ಮುನ್ನ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಂದ್ಹಾಗೆ ಜುಲೈ 5ರ ಸಂಜೆ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಜಸ್ಟಿನ್ ಬೀಬರ್ ಕಾರ್ಯಕ್ರಮವನ್ನು ನೀಡುತ್ತಿದ್ದಾರೆ. ಈ ಕಾರ್ಯಕ್ರಮ ವೀಕ್ಷಿಸಲು ಬಾಲಿವುಡ್ ತಾರೆಯರ ದಂಡೇ ಸೇರಲಿದೆ.
ಜಸ್ಟಿನ್ ಬೀಬರ್ ಬರೋಬ್ಬರಿ ಏಳು ವರ್ಷಗಳ ಬಳಿಕ ಭಾರತಕ್ಕೆ ಬಂದಿದ್ದಾರೆ. ಅನಂತ್ ಅಂಬಾನಿ ಮದುವೆಗೂ ಮುನ್ನವೇ ಭಾರತದಲ್ಲಿ ಕಾರ್ಯಕ್ರಮ ನೀಡಬೇಕಿತ್ತು. 2022ರಲ್ಲಿ ಜಸ್ಟಿನ್ ಬೀಬರ್ ಮ್ಯೂಸಿಕ್ ಕಾನ್ಸರ್ಟ್‌ಗೆ ಆಯೋಜನೆ ಮಾಡಲಾಗಿತ್ತು. ಆದರೆ, ಆರೋಗ್ಯ ಸಮಸ್ಯೆಯಿಂದ ಇದು ಸಾಧ್ಯವಾಗಿರಲಿಲ್ಲ. ಈಗ ಅನಂತ್ ಅಂಬಾನಿ ಮದುವೆ ನೆಪದಲ್ಲಿ ಜಸ್ಟಿನ್ ಬೀಬರ್ ಭಾರತಕ್ಕೆ ಬರುವಂತಾಗಿದೆ.

ಆದ್ರೀಗ ಜಸ್ಟಿನ್ ಬೀಬರ್ ಭಾರತಕ್ಕೆ ಬಂದಿದ್ದರ ಬಗ್ಗೆ ಚರ್ಚೆಯಾಗುತ್ತಿಲ್ಲ. ಬದಲಿಗೆ, ಮುಕೇಶ್ ಅಂಬಾನಿ ಮಗನ ಮದುವೆಯ ಕಾರ್ಯಕ್ರಮದಲ್ಲಿ ಪಾಪ್ ತಾರೆ ಪಡೆಯುತ್ತಿರುವ ಸಂಭಾವನೆ ಬಗ್ಗೆ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಒಂದು ಸಂಗೀತ್ ಕಾರ್ಯಕ್ರಮದಲ್ಲಿ ಪರ್ಫಾಮ್ ಮಾಡುವುದಕ್ಕೆ ಜಸ್ಟಿನ್ ಬೀಬರ್ ಪಡೆದ ಸಂಭಾವನೆ ಊಹಿಸಿಕೊಳ್ಳುವುದೂ ಕಷ್ಟ.
ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಸಂಗೀತ್ ಕಾರ್ಯಕ್ರಮದಲ್ಲಿ ಜಸ್ಟಿನ್ ಬೀಬರ್‌ಗೆ ಸುಮಾರು 83 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆಯಂತೆ. ಇದು ಜಸ್ಟಿನ್ ಬೀಬರ್ ಕೊಟ್ಟಿರೋ ಹಣದ ಬಗ್ಗೆ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಹಾಗೇ ಜಸ್ಟಿನ್ ಬೀಬರ್ ಜೊತೆಗೆ ಅಡೆಲೆ, ಡ್ರೇಕ್ ಮತ್ತು ಲಾನಾ ಡೆಲ್ ರೇ ಕೂಡ ಪರ್ಫಾಮೆನ್ಸ್ ಮಾಡುತ್ತಾರೆಂದು ಹೇಳಲಾಗುತ್ತಿದೆ.
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಜುಲೈ 12 ರಿಂದ ಆರಂಭ ಆಗುತ್ತಿದೆ. ಮೊದಲ ದಿನ ಮದುವೆ ನಡೆಯಲಿದೆ. ಜುಲೈ 13ಕ್ಕೆ ನವ ಜೋಡಿಗೆ ಆಶೀರ್ವಾದ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಗೇ ಜುಲೈ 13ರಂದು ಆರತಕ್ಷತೆ ಕಾರ್ಯಕ್ರಮ ಜರುಗಲಿದೆ. ಬಾಲಿವುಡ್ ತಾರೆಯರು, ಉದ್ಯಮಿಗಳು ಹಾಗೂ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.


Click it and Unblock the Notifications











