Anant Ambani-Radhika pre-wedding: ಶ್ರೀಮಂತ ಉದ್ಯಮಿಯಿಂದ 51 ಸಾವಿರ ಮಂದಿಗೆ ಅನ್ನ ಸೇವೆ!
ಜಗತ್ತಿನ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಕೊನೆಯ ಪುತ್ರ ಅನಂತ್ ಅಂಬಾನಿ ವಿವಾಹಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಮೇ 1 ರಿಂದ 3ರವರೆಗೆ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ನಡೆಯಲಿವೆ. ಅದಕ್ಕೂ ಮುನ್ನ ಸಂಪ್ರದಾಯದಂತೆ 'ಅನ್ನ ಸೇವೆ' ಮಾಡಿದ್ದಾರೆ. ಗುಜರಾತಿನ ಜಾಮ್ನಗರ್‌ನಲ್ಲಿ ನಿನ್ನೆ (ಫೆಬ್ರವರಿ 28) ಅಲ್ಲಿನ ಗ್ರಾಮಸ್ಥರಿಗೆ ಅನ್ನ ಸೇವೆ ನಡೆಸಲಾಗಿದೆ.
ಈ 'ಅನ್ನ ಸೇವೆ' ಕಾರ್ಯಕ್ರಮದಲ್ಲಿ ಉದ್ಯಮಿ ಮುಕೇಶ್ ಅಂಬಾನಿ, ಪುತ್ರ ಅನಂತ್ ಅಂಬಾನಿ, ಭಾವಿ ಪತ್ನಿ ರಾಧಿಕಾ ಮರ್ಚೆಂಟ್ ಹಾಗೂ ಅವರ ಕುಟುಂಬಸ್ಥರು ಈ ಸಂಪ್ರದಾಯಿಕ ಆಚರಣೆಯಲ್ಲಿ ಭಾಗಿಯಾಗಿದ್ದರು. ಜಾಮ್ನಗರ್‌ದ ರಿಯಲನ್ಸ್ ಟೌನ್‌ಶಿಪ್ ಸಮೀಪವಿರುವ ಜೊಗ್ವಾಡ್ ಹಳ್ಳಿಯ ಗ್ರಾಮಸ್ಥರಿಗೆ ಭೂರಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ರಾಧಿಕಾ ಮರ್ಚೆಂಟ್ ಪೋಷಕರು ವಿರೇನ್ ಮತ್ತು ಶೈಲಾ ಮರ್ಚೆಂಟ್ ಕೂಡ ಅನ್ನ ಸೇವೆಯಲ್ಲಿ ಭಾಗಿಯಾಗಿದ್ದರು.

ಅಂಬಾನಿ ಕುಟುಂಬ ಹಮ್ಮಿಕೊಂಡಿದ್ದ ಈ 'ಅನ್ನ ಸೇವೆ' ಕಾರ್ಯಕ್ರಮದಲ್ಲಿ ಸುಮಾರು 51 ಸಾವಿರ ಸ್ಥಳೀಯ ಗ್ರಾಮ ನಿವಾಸಿಗಳಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಇನ್ನು ಕೆಲವು ದಿನಗಳು ಇದು ಮುಂದುವರೆಯುತ್ತೆ ಎಂದು ವರದಿಯಾಗಿದೆ. ಇದೇ ವೇಳೆ ಭೋಜನ ಸ್ವೀಕರಿಸಿದವರಿಗೆ ಜಾನಪದ ಸಂಗೀತ ಕೇಳುವ ಅವಕಾಶವನ್ನು ಮಾಡಿಕೊಡಲಾಗಿತ್ತು. ಜನಪ್ರಿಯ ಗುಜರಾತಿ ಗಾಯಕ ಕೀರ್ತಿದನ್ ಗಾಧ್ವಿ ಗ್ರಾಮಸ್ಥರಿಗೆ ಸಂಗೀತದಿಂದ ರಂಜಿಸಿದ್ದಾರೆ.
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಸಮಾರಂಭಕ್ಕೆ ದೇಶ ವಿದೇಶಗಳಿಂದ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಫೇಸ್‌ಬುಕ್ ಸಿಇಓ ಮಾರ್ಕ್ ಜುಕರ್ಬರ್ಗ್, ಅಡೋಬ್ ಸಿಇಓ ಶಾಂತನೂ ನಾರಾಯನ್, ಕತಾರ್ ಪ್ರಧಾನ ಮಂತ್ರಿ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಾಸಿಮ್ ಅಲ್ ಥಾನಿ, ಭೂತಾನ್ ರಾಣಿ ಜೆಟ್ಸುನ್ ಪೆಮ, ಸೌದಿಯ ಅರಾಂಕೊ ಛೇರ್‌ಪರ್ಸನ್ ಯಾಸಿರ್ ಅಲ್ ರೂಮಯ್ಯನ್ ಅಂತಹ ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಸಮಾರಂಭ ಮಾರ್ಚ್ 1 ರಿಂದ 3ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ಸ್ವೀಡನ್ ಪ್ರಧಾನಿ ಕಾರ್ಲ್ ಬಿಲ್ಟ್, ಕೆನಾಡ ಮಾಜಿ ಪ್ರಧಾನಿ ಸ್ಟೆಫನ್ ಹಾರ್ಪರ್, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಕೆವಿನ್ ರುಡ್ ಅಂತಹ ಗಣ್ಯರು ಗೆಸ್ಟ್ ಲಿಸ್ಟ್‌ನಲ್ಲಿ ಇದ್ದಾರೆ. ಹಾಗೆ ಬಾಲಿವುಡ್ ತಾರೆಯರಾ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಅರ್ಜುನ್ ಕಪೂರ್, ಕತ್ರಿನಾ ಕೈಫ್ ಸೇರಿದಂತೆ ಹಲವು ಈ ಪ್ರಿ ವೆಡ್ಡಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.

ಅಂದ್ಹಾಗೆ, ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಜನವರಿ 2023ರಲ್ಲಿ ಮುಂಬೈನಲ್ಲಿರುವ ಆಂಟಿಲಿಯಾದ ನಿವಾಸದಲ್ಲಿ ನಿಶ್ವಿತಾರ್ಥ ಮಾಡಿಕೊಂಡಿದ್ದರು. ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಗೆ ಮೂವರು ಮಕ್ಕಳು. ಇಶಾ ಅಂಬಾನಿ, ಆಕಾಶ್ ಅಂಬಾನಿ ಹಾಗೂ ಅನಂತ್ ಅಂಬಾನಿ. ಈ ಮೂವರು ತಂದೆಯಂತೆಯೇ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಅನಂತ್ ಅಂಬಾನಿ ಕೂಡ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ತಂದೆಯಂತೆಯೇ ಸಕ್ಸಸ್‌ಫುಲ್ ಆಗಿದ್ದಾರೆ.


Click it and Unblock the Notifications











