ಬೇಬಿ ಬಂಪ್ ಹಿಡಿದು ಸೀರೆಯುಟ್ಟು ಬಂದ ದೀಪಿಕಾ; ಅನಂತ್ ಅಂಬಾನಿ ಸಂಗೀತ್ ಕಾರ್ಯಕ್ರಮಕ್ಕೆ ಬಾಲಿವುಡ್ ಪರೇಡ್ ಹೇಗಿತ್ತು?
ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಎರಡನೇ ಪುತ್ರ ಅನಂತ್ ಅಂಬಾನಿ ವಿವಾಹ ಕಾರ್ಯಕ್ರಮಗಳು ಈಗಾಗಲೇ ಆರಂಭ ಆಗಿವೆ. ಮುಂಬೈನಲ್ಲಿ ನಿನ್ನೆ (ಜುಲೈ 5) ಅದ್ಧೂರಿಯಾಗಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂಗೀತ್ ಸಂಭ್ರಮದಲ್ಲಿ ಬಾಲಿವುಡ್ ತಾರೆಯರಿಗೆ ಆಹ್ವಾನ ನೀಡಲಾಗಿತ್ತು. ಹಿಂದಿ ಚಿತ್ರರಂಗದ ತಾರೆಯರು, ಕ್ರಿಕೆಟ್ ಲೋಕದ ದಿಗ್ಗಜರು ಈ ಸಂಭ್ರಮದಲ್ಲಿ ಭಾಗವಹಿಸಿದ್ದರು.
ಬಾಲಿವುಡ್‌ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಸೀರೆಯುಟ್ಟು ಸಂಗೀತ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ತಾಯಿ ಆಗುತ್ತಿರುವ ಸಂಭ್ರಮದಲ್ಲಿರುವ ದೀಪಿಕಾ ಪಡುಕೋಣೆ ಸೀರೆಯುಟ್ಟು, ಬೇಬಿ ಬಂಪ್ ಹಿಡಿದು ಪೋಸ್ ಕೊಟ್ಟಿರುವ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಡಿಸೈನರ್ ಕರಣ್ ಟೊರಾನಿ ವಿನ್ಯಾಸ ಮಾಡಿದ್ದ ನೇರಳೆ ಬಣ್ಣದ ಸೀರೆಯುಟ್ಟು ಎಲ್ಲರ ಗಮನ ಸೆಳೆದಿದ್ದರು.

ದೀಪಿಕಾ ಪಡುಕೋಣೆ ಧರಿಸಿದ ಸೀರೆ ಟೊರಾನಿ ಕ್ಲಾಸಿಕ್ ಕಲೆಕ್ಷನ್ ಆಗಿದ್ದು, ಇದರ ಬೆಲೆ ಸುಮಾರು 1.3 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಟ್ರೆಡಿಷನ್ ಲುಕ್‌ನಲ್ಲಿ ಸಂಗೀತ್ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಿದ್ದ ಈ ಕಾರ್ಯಕ್ರಮದಲ್ಲಿ ದೀಪಿಕಾ ಪ್ರಮುಖ ಆಕರ್ಷಣೆಯಾಗಿದ್ದರು. ಹಾಗೇ ಸ್ಟಾರ್ ಕಪ್ ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಜೋಡಿಯಾಗಿ ಆಗಮಿಸಿದ್ದರು.
ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಕಪ್ಪು ಬಣ್ಣದ ಕಾಸ್ಟ್ಯೂಮ್ ಥೀಮ್‌ನಲ್ಲಿ ಎಂಟ್ರಿ ಕೊಟ್ಟಿದ್ದರು. ಆಲಿಯಾ ಭಟ್ ಕಪ್ಪು ಬಣ್ಣದ ಲೆಹೆಂಗಾಕ್ಕೆ ಬೆಳ್ಳಿಯ ಕಸೂತಿ ಮಾಡಲಾಗಿತ್ತು. ರಣ್‌ಬೀರ್ ಕಪೂರ್ ಕೂಡ ಬ್ಲಾಕ್ ಕುರ್ತಾ ಹಾಗೂ ಪೈಜಾಮದಲ್ಲಿ ಎಂಟ್ರಿ ಕೊಟ್ಟಿದ್ದರು. ಆಲಿಯಾ ಭಟ್ ಲೆಹೆಂಗಾವನ್ನು ಪ್ರಿಯಾಂಕಾ ಕಪಾಡಿಯಾ ಹಾಗೂ ರಣ್‌ಬೀರ್ ಕಪೂರ್ ಕಾಸ್ಟ್ಯೂಮ್ ಅನ್ನು ಹುಮೈರಾ ಲಕ್ಡಾವಾಲಾ ವಿನ್ಯಾಸಗೊಳಿಸಿದ್ದರು.
ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಕೂಡ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಸಂಗೀತ್ ಕಾರ್ಯಕ್ರಮದಲ್ಲಿ ಮಿಂಚಿದ್ದರು. ಈಕೆಯ ಕಾಸ್ಟ್ಯೂಮ್ ಅನ್ನು ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿದ್ದಾರೆ. ನವಿಲನ್ನು ಹೋಲುವ ಥೀಮ್‌ನಲ್ಲಿ ವಸ್ತ್ರ ವಿನ್ಯಾಸವನ್ನು ಮಾಡಲಾಗಿತ್ತು.

ಇನ್ನು ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಪತ್ನಿ ಕಿಯಾರಾ ಅಡ್ವಾಣಿ ಕೂಡ ಈ ಸಂಗೀತ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸಿಲ್ವರ್ ಬಣ್ಣದ ಕಾಸ್ಟ್ಯೂಮ್‌ನಲ್ಲಿ ಕಿಯಾರಾ ಅಡ್ವಾಣಿ ಮಿಂಚಿದರೆ, ಸಿದ್ದಾರ್ಥ್ ಮಲ್ಹೋತ್ರಾ ಹೊಸ ವಿನ್ಯಾಸದ ಶೇರ್ವಾನಿಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಕಿಯಾರಾ ಅಡ್ವಾನಿ ಕಾಸ್ಟ್ಯೂಮ್ ಅನ್ನು ತರುಣ್ ತಹಿಲಿಯಾನಿ ವಿನ್ಯಾಸ ಮಾಡಿದ್ದಾರೆ.
ಇನ್ನು ಆನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಸಂಗೀತ್ ಕಾರ್ಯಕ್ರಮದಲ್ಲಿ ವರುಣ್ ಧವನ್, ಶಾಹಿದ್ ಕಪೂರ್ ಹಾಗೂ ಪತ್ನಿ ಮೀರಾ, ಆಗಮಿಸಿದ್ರು. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಬ್ಲ್ಯಾಕ್ ಕಲರ್ ಡ್ರೆಸ್ ನಲ್ಲಿ ಮಿಂಚಿದರು. ಅದೇ ದಕ್ಷಿಣ ಭಾರತದ ಸ್ಟಾರ್ ಡೈರೆಕ್ಟರ್ ಅಟ್ಲೀ ಹಾಗೂ ಪತ್ನಿ ಪ್ರಿಯಾ ದಂಪತಿ ರಂಗ್‌ಬಿರಂಗಿ ಕಾಸ್ಟ್ಯೂಮ್‌ನಲ್ಲಿ ಮಿಂಚಿದ್ದಾರೆ. ಬಾಲಿವುಡ್‌ನ ಹಾಟ್ ಬ್ಯೂಟಿ ದಿಶಾ ಪಟಾನಿ ಮಿನುಗುವ ಗೋಲ್ಡನ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











