ಅನಂತ್ ಅಂಬಾನಿ ಮದುವೆಯಲ್ಲಿ ಮಹೇಶ್ ಬಾಬು ಪಕ್ಕದಲ್ಲಿ ನಯನತಾರಾ: ಒಂದೇ ಫ್ರೇಂನಲ್ಲಿ ಸೌತ್ ಸ್ಟಾರ್ಸ್

ಎರಡು ಸಂದರ್ಭಗಳಲ್ಲಿ ಸಿನಿಮಾ ತಾರೆಯರು ಒಟ್ಟಿಗೆ ಸೇರಿ ಸಂಭ್ರಮಿಸುತ್ತಾರೆ. ಒಂದು ಯಾರದ್ದಾದರೂ ಮದುವೆ ನಡೆಯಬೇಕು. ಇನ್ನೊಂದು ಪ್ರಶಸ್ತಿ ಪ್ರಧಾನ ಸಮಾರಂಭಗಳು ನಡೆಯಬೇಕು. ಈ ಎರಡು ಸಂದರ್ಭಗಳಲ್ಲಿ ದಕ್ಷಿಣ ತಾರೆಯರನ್ನು ಒಟ್ಟಿಗೆ ಸೇರುವುದನ್ನು ನೋಡಬಹುದು. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಯಲ್ಲೂ ಈ ದೃಶ್ಯ ಕಂಡು ಬಂದಿದೆ.

ಜುಲೈ 12ರಂದು ಮುಂಬೈನಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಪಂಡಿತ್ ವಿವಾಹ ಅದ್ಧೂರಿಯಾಗಿ ನಡೆದಿತ್ತು. ಬೇರೆ ಬೇರೆ ಭಾಷೆಯ ಚಿತ್ರರಂಗದ ಗಣ್ಯರನ್ನು ಈ ಸಮಾರಂಭಕ್ಕೆ ಆಹ್ವಾನ ನೀಡಲಾಗಿತ್ತು. ಅದರಂತೆ ಹಾಲಿವುಡ್‌ನಿಂದ ಹಿಡಿದು ತೆಲುಗು, ತಮಿಳು ಹಾಗೂ ಕನ್ನಡ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಈ ಸಂಬಂಧ ಅನಂತ್ ಅಂಬಾನಿ ಮದುವೆಗೆ ಸ್ಟಾರ್ ಕಳೆ ಬಂದಿದ್ದಂತೂ ನಿಜ. ಅದಕ್ಕೆ ಈ ಫೋಟೊ ಮತ್ತಷ್ಟು ಮೆರುಗು ಕೊಟ್ಟಿದೆ.

Anant Ambani wedding Mahesh Babu Nayanthara Surya Jyothika Genelia in happy mood photo goes viral

ಅನಂತ್ ಅಂಬಾನಿ ಹಾಗೂ ರಾಧಿಕಾ ಪಂಡಿತ್ ಮದುವೆ ಸಮಾರಂಭದಲ್ಲಿ ದಕ್ಷಿಣ ಸ್ಟಾರ್ ನಟರು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಯನತಾರಾ ಪತಿ ವಿಘ್ನೇಶ್ ಶಿವನ್ ಶೇರ್ ಮಾಡಿಕೊಂಡಿರುವ ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ದಕ್ಷಿಣದ ಸೂಪರ್‌ಸ್ಟಾರ್‌ಗಳನ್ನು ಒಂದೇ ಫ್ರೇಮ್‌ನಲ್ಲಿ ನೋಡಿ ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ.

ಭಾರತದ ನಂ 1 ಶ್ರೀಮಂತ ಮುಕೇಶ್ ಅಂಬಾನಿ ಹಿರಿಯ ಪುತ್ರ ಅನಂತ್ ಅಂಬಾನಿ ಮದುವೆಗೆ 10 ಸಾವಿರ ಮಂದಿಗೂ ಅಧಿಕ ಮಂದಿ ಅತಿಥಿಗಳು ಬಂದಿದ್ದರು. ಅವರಲ್ಲಿ ಉದ್ಯಮಿಗಳು, ಕ್ರಿಕೆಟ್ ತಾರೆಯರು, ಸಿನಿಮಾ ತಾರೆಯರಿದಂತೆ ಹಲವರಿಗೆ ಆಹ್ವಾನ ನೀಡಲಾಗಿತ್ತು. ಇದರಲ್ಲಿ ದಕ್ಷಿಣ ಭಾರತದ ತಾರೆಯರು ಹೆಚ್ಚು ಸದ್ದು ಮಾಡಿದ್ದರು. ಸೂಪರ್‌ಸ್ಟಾರ್ ರಜನಿಕಾಂತ್, ಸೂರ್ಯ, ಮಹೇಶ್ ಬಾಬು, ಯಶ್, ರಾಮ್ ಚರಣ್, ನಯನತಾರಾ ಸೇರಿದಂತೆ ಹಲವು ಮಂದಿ ಭಾಗಿಯಾಗಿದ್ದರು.

ಅದರಲ್ಲಿ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಪಕ್ಕದಲ್ಲಿ ನಯನತಾರಾ ಕೂತಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಶೇಷ ಅಂದರೆ, ಈ ಫೋಟೊವನ್ನು ನಯನತಾರಾ ಪತಿ ವಿಘ್ನೇಶ್ ಶಿವನ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊವನ್ನು ನೋಡಿ ನೆಟ್ಟಿಗರು ಮಸ್ತ್ ಆಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಮುಂದಿನ ಸಾಲಿನಲ್ಲಿ ಮಹೇಶ್ ಬಾಬು ಪಕ್ಕದಲ್ಲಿ ನಯನತಾರಾ ಕೂತಿದ್ದರೆ, ಮಹೇಶ್ ಬಾಬು ಪಕ್ಕದಲ್ಲಿ ವಿಘ್ನೇಶ್ ಶಿವನ್ ಹಾಗೂ ನಯನಾತಾರಾ ಪಕ್ಕದಲ್ಲಿ ಮಹೇಶ್ ಬಾಬು ಪತ್ನಿ ಕಾಣಿಸಿಕೊಂಡಿದ್ದರು. ಹಿಂದಿನ ಸಾಲಿನಲ್ಲಿ ಸೂರ್ಯ, ಜ್ಯೋತಿಕಾ, ಜೆನಿಲಿಯಾ ಡಿಸೋಜಾ, ಅಕಿಲ್ ಅಕ್ಕಿನೇನಿ ಹಾಗೂ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದಾರೆ.

More from Filmibeat

English summary
Mahesh Babu Nayanthara and South stars in Anant Ambani and Radhika Merchant Wedding:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X