ಆಸ್ಕರ್ ವಿಜೇತ ಚಿತ್ರದಿಂದ ನನಗೆ ಈಗಲೂ ಸಂಭಾವನೆ ಬರ್ತಿದೆ.. ಮೊನ್ನೆ ಎಷ್ಟು ಬಂತು ಗೊತ್ತಾ? ಅನಿಲ್ ಕಪೂರ್

2026 ಆಸ್ಕರ್ ಸಂಭ್ರಮ ಮುಗಿಲು ಮುಟ್ಟಿದೆ. ಈ ಬಾರಿ ಭಾರತದ ಯಾವುದೇ ಸಿನಿಮಾ ನಾಮಿನೇಷನ್ ಪಟ್ಟಿ ಕೂಡ ಸೇರಲಿಲ್ಲ. 'ಸಿನ್ನರ್ಸ್' ಚಿತ್ರ ಭರ್ಜರಿಯಾಗಿ ಆಸ್ಕರ್ ಬೇಟೆಯಾಗಿದೆ. ಇದನ್ನೆಲ್ಲಾ ಪಕ್ಕಕ್ಕಿಟ್ಟರೆ ಕೆಲ ವರ್ಷಗಳ ಹಿಂದೆ ಆಸ್ಕರ್ ವೇದಿಕೆಯಲ್ಲಿ ಸದ್ದು ಮಾಡಿದ್ದ 'ಸ್ಲಮ್ ಡಾಗ್ ಮಿಲೇನಿಯರ್' ಚಿತ್ರದ ಬಗ್ಗೆ ಬಾಲಿವುಡ್ ನಟ ಅನಿಲ್ ಕಪೂರ್ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ. ಅಂದು ಯಾವುದೇ ಸಂಭಾವನೆ ಪಡೆಯದೇ ಚಿತ್ರದಲ್ಲಿ ನಟಿಸಿದ್ದ ಅವರಿಗೆ ಈಗಲೂ ರಾಯಲ್ಟಿ ಆಗಿ ಹಣ ಬರ್ತಿದೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಅನಿಲ್ ಕಪೂರ್ ಹಂಚಿಕೊಂಡಿದ್ದಾರೆ.

ಹಾಲಿವುಡ್ ನಿರ್ದೇಶಕ ಡ್ಯಾನಿ ಬೋಯ್ಲೆ 'ಸ್ಲಮ್ ಡಾಗ್ ಮಿಲೇನಿಯರ್' ಚಿತ್ರ ನಿರ್ದೇಶನ ಮಾಡಿದ್ದರು. ಇದು ಭಾರತದಲ್ಲಿ ನಿರ್ಮಾಣವಾಗಿ ಬ್ರಿಟೀಷ್ ಸಿನಿಮಾ. ಎ. ಆರ್ ರಹಮಾನ್, ಅನಿಲ್ ಕಪೂರ್ ಸೇರಿದಂತೆ ಭಾರತದ ಕಲಾವಿದರು, ತಂತ್ರಜ್ಞರು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದರು. 2009ರಲ್ಲಿ 10 ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ಈ ಚಿತ್ರ ನಾಮಿನೇಟ್ ಆಗಿತ್ತು. 8 ಪ್ರಶಸ್ತಿಗಳನ್ನು ಗೆದ್ದು ದಾಖಲೆ ಬರೆದಿತ್ತು. ಚಿತ್ರದಲ್ಲಿ ಗೇಮ್ ಶೋ ಹೋಸ್ಟ್ ಪಾತ್ರದಲ್ಲಿ ಅನಿಲ್ ಕಪೂರ್ ಬಣ್ಣ ಹಚ್ಚಿದ್ದರು.

Anil Kapoor Acted in Slumdog Millionaire Without Pay Still Earns from Oscar-Winning Film

'ಇಂಡಿಯಾ ಟುಡೇ ಕಾನ್ಕ್ಲೇವ್ 2026' ನಲ್ಲಿ ಇತ್ತೀಚೆಗೆ ಅನಿಲ್ ಕಪೂರ್ ಭಾಗಿ ಆಗಿದ್ದರು. ಈ ವೇಳೆ ಇಂಟ್ರೆಸ್ಟಿಂಗ್ ಸಂಗತಿ ಹಂಚಿಕೊಂಡಿದ್ದಾರೆ. "2008ರಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದಲ್ಲಿ ನಟಿಸಿದ್ದು ಗೊತ್ತೇಯಿದೆ. ಆ ಚಿತ್ರದಿಂದ ಈಗಲೂ ರಾಯಲ್ಟಿ ಪಡೆಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಮೊನ್ನೆ ಮೊನ್ನೆ 3,000 ಪೌಂಡ್‌ ಹಣ ರಾಯಲ್ಟಿ ಆಗಿ ಪಡೆದಿದ್ದಾಗಿ ವಿವರಿಸಿದ್ದಾರೆ. ಈ ಚಿತ್ರದಿಂದ ಒಟ್ಟು ಆದಾಯ ಸುಮಾರು ಅರ್ಧ ಮಿಲಿಯನ್ ಪೌಂಡ್‌ ಸಿಕ್ಕಂತಾಗುತ್ತದೆ" ಎಂದು ಅವರು ಹೇಳಿದ್ದಾರೆ.

ಸಾಮಾನ್ಯವಾಗಿ ಯಾವುದೇ ಭಾರತೀಯ ಚಿತ್ರಗಳಲ್ಲಿ ಕೆಲಸ ಮಾಡುವ ಕಲಾವಿದರು, ತಂತ್ರಜ್ಞರಿಗೆ ಮೊದಲೇ ಒಂದಷ್ಟು ಸಂಭಾವನೆ ಮಾತನಾಡಿಬಿಡುತ್ತಾರೆ. ಸಿನಿಮಾ ಕೆಲಸಗಳು ಮುಗಿಯುತ್ತಿದ್ದಂತೆ ಸಂಭಾವನೆ ಹಣ ಸಿಗುತ್ತದೆ. ಬಳಿಕ ಆ ಸಿನಿಮಾ ಎಷ್ಟೇ ಆದಾಯ ಗಳಿಸಿದರೂ ಎಲ್ಲವೂ ನಿರ್ಮಾಪಕರಿಗೆ ಸೇರುತ್ತದೆ. ಇತ್ತೀಚೆಗೆ ಕೆಲವರು ಲಾಭದಲ್ಲಿ ಪಾಲು ಪಡೆಯುವ ಪದ್ಧತಿ ಆರಂಭಿಸಿದ್ದಾರೆ. ಅದನ್ನು ಪಕ್ಕಕ್ಕಿಟ್ಟರೆ ಸಿನಿಮಾ ಮುಗಿದ ಬಿಡುಗಡೆಯಾದ ಬಳಿಕ ಬರುವ ಹಣ ಎಲ್ಲವೂ ನಿರ್ಮಾಪಕರಿಗೆ. ಒಂದು ವೇಳೆ ಸಿನಿಮಾ ಸೋತರೂ ನಿರ್ಮಾಪಕರೇ ನಷ್ಟ ಭರಿಸಬೇಕು.

ಹಾಲಿವುಡ್ ಸಿನಿಮಾಗಳಲ್ಲಿ ಕೊಂಚ ಭಿನ್ನವಾಗಿ ಸಂಭಾವನೆ ಲೆಕ್ಕಾಚಾರ ನಡೆಯುತ್ತದೆ. ಸಿನಿಮಾ ಮುಗಿದ ಬಳಿಕ ಕೂಡ ಟಿವಿಯಲ್ಲಿ ಸಿನಿಮಾ ಪ್ರಸಾರವಾದಾಗ, ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವಾಗ ಹೀಗೆ ಚಿತ್ರಕ್ಕೆ ಯಾವುದೇ ರೂಪದಲ್ಲಿ ಆದಾಯ ಬಂದರೂ ಅದರಿಂದ ಒಪ್ಪಂದದ ಪ್ರಕಾರ ಎಲ್ಲರಿಗೂ ರಾಯಲ್ಟಿ ರೂಪದಲ್ಲಿ ಒಂದಷ್ಟು ಹಣ ಬರುತ್ತದೆ. "ನಾನು ಯಾವತ್ತೂ ಆ ಹಣ ಕೇಳಲಿಲ್ಲ. ಆದರೆ ಅವರ ಸಿಸ್ಟಮ್ ಎಷ್ಟು ಪಾರದರ್ಶಕವಾಗಿರುತ್ತದೆ ಅಂದ್ರೆ, ಲಾಭದಲ್ಲಿ ಬರಬೇಕಿದ್ದ ಪಾಲನ್ನು ಇವತ್ತಿಗೂ ಕಳುಹಿಸುತ್ತಿದ್ದಾರೆ" ಎಂದು ಅನಿಲ್ ಕಪೂರ್ ಹೇಳಿದ್ದಾರೆ.

'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದಿಂದ ನನಗೆ ಈವರೆಗೆ ಸುಮಾರು 5.4 ಪೌಂಡ್(5.4 ಕೋಟಿ ರೂ) ಸಂಭಾವನೆ ಬಂದಿದೆ. ತೆರಿಗೆ ಸರಿಯಾಗಿ ಕಟ್ಟುತ್ತಿದ್ದೀನಿ ಅದಕ್ಕಾಗಿ ಹೇಳ್ತೀನಿ ಎಂದು ಬಾಲಿವುಡ್ ನಟ ತಿಳಿಸಿದ್ದಾರೆ. ಡ್ಯಾನಿ ಬೋಯ್ಲೆ ಸಿನಿಮಾ ಆರಂಭಿಸಿದಾಗ ಹೆಚ್ಚು ಬಜೆಟ್ ಇಲ್ಲ. ನೀವು ಕೇಳುವಷ್ಟು ಸಂಭಾವನೆ ಕೊಡಲು ಸಾಧ್ಯವಿಲ್ಲ ಎಂದಿದ್ದರಂತೆ. "ಕಥೆ ನನಗೆ ಬಹಳ ಇಷ್ಟವಾಗಿದೆ. ನನಗೆ ಹಣಕ್ಕಿಂತ ಈ ಚಿತ್ರದ ಭಾಗವಾಗುವುದು ಮುಖ್ಯ. ಬೇಕಿದ್ದರೆ ಉಚಿತವಾಗಿ ನಟಿಸ್ತೀನಿ" ಎಂದು ಹೇಳಿದ್ದರಂತೆ. ಆದರೆ ಒಪ್ಪಂದದ ಪ್ರಕಾರ ಸಂಭಾವನೆ ಜೊತೆ ಲಾಭದಲ್ಲಿ ಕೂಡ ಪಾಲು ಸಿಗುತ್ತಿದೆ.

ಈ ಸಿನಿಮಾ ಮೂಲಕ ಹಾಲಿವುಡ್ ಫಿಲ್ಮ್ ಮೇಕರ್ಸ್ ಕಣ್ಣಿಗೆ ಬಿದ್ದ ಅನಿಲ್ ಕಪೂರ್ 'ಮಿಷನ್ ಇಂಪಾಸಿಬಲ್' ರೀತಿಯ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿದ್ದರು. ಅಂದಹಾಗೆ ಅನಿಲ್ ಕಪೂರ್ ಕನ್ನಡದ 'ಪಲ್ಲವಿ ಅನುಪಲ್ಲವಿ' ಸಿನಿಮಾ ಮೂಲಕ ಬಣ್ಣದಲೋಕಕ್ಕೆ ಪ್ರವೇಶ ಪಡೆದಿದ್ದರು.

More from Filmibeat

Read more about: anil kapoor oscars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X