ನಟಿ ಶ್ರೀದೇವಿಗಾಗಿ ಕಿತ್ತಾಡಿಕೊಂಡಿದ್ದರು ಅನಿಲ್ ಕಪೂರ್ ಮತ್ತು ಬೋನಿ ಕಪೂರ್ ಸಹೋದರರು

ಭಾರತೀಯ ಚಿತ್ರರಂಗದ ಖ್ಯಾತ ನಟಿ ಶ್ರೀದೇವಿ ನಿಧನಹೊಂದಿ 3 ವರ್ಷಗಳಾಗಿವೆ. ದುರಂತ ಅಂತ್ಯ ಕಂಡ ಬಾಲಿವುಡ್ ಚಾಂದನಿ ಈಗ ನೆನಪು ಮಾತ್ರ. ಶ್ರೀದೇವಿ ಇಲ್ಲವಾದರು ಅವರ ಹೆಸರು ಆಗಾಗ ಸುದ್ದಿಯಲ್ಲಿರುತ್ತೆ.

Recommended Video

ಕೆಲಸವಿಲ್ಲದೆ ಬೀದಿಗಳಲ್ಲಿ ಹಣ್ಣು ಮಾರುತ್ತಿದ್ದಾರೆ ಬಾಲಿವುಡ್ ನಟ | Filmibeat Kannada

ಸದ್ಯ ಶ್ರೀದೇವಿ ಹೆಸರು ಮತ್ತೆ ಸದ್ದು ಮಾಡುತ್ತಿದೆ. ಬಾಲಿವುಡ್ ಖ್ಯಾತ ನಟಿ ಶ್ರೀದೇವಿಗಾಗಿ, ಪತಿ ಬೋನಿ ಕಪೂರ್ ಮತ್ತು ಅನಿಲ್ ಕಪೂರ್ ಇಬ್ಬರು ಕಿತ್ತಾಡಿಕೊಂಡಿರುವ ವಿಚಾರ ಈಗ ವೈರಲ್ ಆಗಿದೆ.ಲಾಕ್ ಡೌನ್ ಸಮಯದಲ್ಲಿ ಬೋನಿ ಕಪೂರ್ ಮತ್ತು ಅನಿಲ್ ಕಪೂರ್ ಗಲಾಟೆಯ ಮ್ಯಾಟ್ರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಶ್ರೀದೇವಿಗಾಗಿ ಇಬ್ಬರು ಕಿತ್ತಾಡಿಕೊಂಡಿದ್ದೇಕೆ? ಮುಂದೆ ಓದಿ..

ಅನಿಲ್ ಕಪೂರ್ ಮತ್ತು ಬೋನಿ ಕಪೂರ್ ಸಹೋದರರು

ಅನಿಲ್ ಕಪೂರ್ ಮತ್ತು ಬೋನಿ ಕಪೂರ್ ಸಹೋದರರು

ಬಾಲಿವುಡ್ ಖ್ಯಾತ ನಟ ಅನಿಲ್ ಕಪೂರ್ ಮತ್ತು ಬೋನಿ ಕಪೂರ್ ಸಹೋದರರು ಎನ್ನುವುದಕ್ಕಿಂತ ಉತ್ತಮ ಸ್ನೇಹಿತರು. ಈಗಲು ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಆದರೆ ಒಂದು ಕಾಲದಲ್ಲಿ ಬೋನಿ ಕಪೂರ್ ಶ್ರೀದೇವಿ ಅವರನ್ನು ಮದುವೆ ಆಗುವ ಮೊದಲೆ, ಇಬ್ಬರು ಶ್ರೀದೇವಿ ವಿಚಾರದಲ್ಲಿ ಕಿತ್ತಾಡಿಕೊಂಡು ಮುನಿಸಿಕೊಂಡಿದ್ದರು.

ಮಿ.ಇಂಡಿಯಾ ಸಿನಿಮಾದ ಚಿತ್ರೀಕರಣದ ಸಮಯ

ಮಿ.ಇಂಡಿಯಾ ಸಿನಿಮಾದ ಚಿತ್ರೀಕರಣದ ಸಮಯ

ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿರುವ ಮಿ.ಇಂಡಿಯಾ ಚಿತ್ರದಲ್ಲಿ ಶ್ರೀದೇವಿ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಬೋನಿ ಕಪೂರ್ ಮತ್ತು ಅನಿಲ್ ಕಪೂರ್ ಇಬ್ಬರು ಜಗಳವಾಡಿಕೊಂಡಿದ್ದರು. ಇದರ ಪರಿಣಾಮ ಅನಿಲ ಕಪೂರ್ ಕೋಪಮಾಡಿಕೊಂಡು ಚಿತ್ರೀಕರಣ ಸೆಟ್ ನಿಂದ ಹೊರಟೋಗಿದ್ದರು.

ಬೋನಿ ಕಪೂರ್ ನಿರ್ಮಾಣದ ಸಿನಿಮಾ

ಬೋನಿ ಕಪೂರ್ ನಿರ್ಮಾಣದ ಸಿನಿಮಾ

ಮಿ.ಇಂಡಿಯಾ ಬೋನಿ ಕಪೂರ್ ನಿರ್ಮಾಣದ ಸಿನಿಮಾ. ಚಿತ್ರಕ್ಕೆ ನಟ ಅನಿಲ್ ಕಪೂರ್ ಸಹ ಬಂಡವಾಳ ಹೂಡಿದ್ದಾರೆ. ಬೋನಿ ಕಪೂರ್ ಇನ್ನೂ ಶ್ರೀದೇವಿಯನ್ನು ಮದುವೆ ಆಗಿರಲಿಲ್ಲ. ಈ ಸಿನಿಮಾಗೆ ಶ್ರೀದೇವಿಯೆ ನಾಯಕಿಯಾಗಿಬೇಕೆನ್ನುವುದು ಬೋನಿ ಕಪೂರ್ ಆಸೆ. ಅಂದರಂತೆ ಬೋನಿ ಕಪೂರ್ ಸಿನಿಮಾಗಾಗಿ ಶ್ರೀದೇವಿಯನ್ನು ಅಪ್ರೋಚ್ ಮಾಡಿದ್ದಾರೆ. ಆದರೆ ಶ್ರೀದೇವಿ ಸಿನಿಮಾದ ಆಫರ್ ನಿರಾಕರಿಸಿದ್ದಾರೆ.

ಸಂಭಾವನೆ ವಿಚಾರಕ್ಕೆ ಕಿರಿಕ್

ಸಂಭಾವನೆ ವಿಚಾರಕ್ಕೆ ಕಿರಿಕ್

ಸಂಭಾವನೆ ವಿಚಾರಕ್ಕೆ ನಟಿ ಶ್ರೀದೇವಿ ಮೊದಲು ಮಿ.ಇಂಡಿಯಾ ಸಿನಿಮಾದ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರೆ. ಆನಂತರ 10 ಲಕ್ಷ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ. ಆದರೆ ಬೋನಿ ಕಪೂರ್, ಶ್ರೀದೇವಿ ಕೇಳಿದ ಸಂಭಾವನೆಗಿಂತ ಹೆಚ್ಚಿನ ಮೊತ್ತದ ಹಣ ಅಂದರೆ 11 ಲಕ್ಷ ಕೊಡಲು ಮುಂದಾಗಿದ್ದಾರೆ. ಇದು ಅನಿಲ್ ಕಪೂರ್ ಕೋಪಕ್ಕೆ ಕಾರಣವಾಯಿತು. ದೊಡ್ಡ ಮೊತ್ತದ ಸಂಭಾವನೆ ಕೊಡಲು ಅನಿಲ್ ಕಪೂರ್ ಒಪ್ಪಲಿಲ್ಲ.

ಹಣಕಾಸಿನ ಸಮಸ್ಯೆಯಲ್ಲಿದ್ದ ಶ್ರೀದೇವಿ

ಹಣಕಾಸಿನ ಸಮಸ್ಯೆಯಲ್ಲಿದ್ದ ಶ್ರೀದೇವಿ

ಆಗಲೆ ಶ್ರೀದೇವಿ ದೊಡ್ಡ ನಟಿಯಾಗಿ ಗುರುತಿಸಿಕೊಂಡಿದ್ದರು. ಆದರೂ ಶ್ರೀದೇವಿಗೆ ಹಣಕಾಸಿನ ಸಮಸ್ಯೆ ಎದುರಾಗಿತ್ತು. ತಾಯಿಯ ಚಿಕಿತ್ಸೆಗೆ ಹಣ ಹೊಂದಿಸಲು ಶ್ರೀದೇವಿ ಪರದಾಡುತ್ತಿದ್ದರು. ಇದನ್ನು ಅರಿತ ಬೋನಿ ಕಪೂರ್, ಶ್ರೀದೇವಿ ನೆರವಿಗೆ ಬಂದಿದ್ದಾರೆ. ತಾಯಿಯ ಚಿಕಿತ್ಸೆಯ ಜವಾಬ್ದಾರಿ ವಹಿಸಿಕೊಂಡಿದ್ದು ಮಾತ್ರವಲ್ಲದೆ, ಯುಎಸ್ ಹೋಗಲು ಟಿಕೆಟ್ ಬುಕ್ ಮಾಡಿ ಶ್ರೀದೇವಿ ಅವರನ್ನು ಕಳುಹಿಸಿಕೊಟ್ಟಿದ್ದಾರೆ.

ಚಿತ್ರೀಕರಣ ಸೆಟ್ ನಲ್ಲಿ ಸಿಡಿದೆದ್ದ ಅನಿಲ್ ಕಪೂರ್

ಚಿತ್ರೀಕರಣ ಸೆಟ್ ನಲ್ಲಿ ಸಿಡಿದೆದ್ದ ಅನಿಲ್ ಕಪೂರ್

ಬೋನಿ ಕಪೂರ್ ನಿರ್ಧಾರ, ಸಹೋದರ ಅನಿಲ್ ಕಪೂರ್ ಗೆ ಸ್ಪಲ್ಪವು ಹಿಡಿಸಿರಲಿಲ್ಲ. ಹಾಗಾಗಿ ಮಿ.ಇಂಡಿಯಾ ಸಿನಿಮಾ ಚಿತ್ರೀಕರಣದ ಸೆಟ್ ನಲ್ಲಿಯೆ ಅನಿಲ್ ಕಪೂರ್ ಸಿಡಿದೆದ್ದರು. ಕೋಪ ಮಾಡಿಕೊಂಡು ಚಿತ್ರೀಕರಣ ಅರ್ಧಕ್ಕೆ ಬಿಟ್ಟು ಹೊರಟೋದರು. ಆ ನಂತರ ನಿರ್ದೇಶಕ ಶೇಖರ್ ಕಪೂರ್, ಅನಿಲ್ ಕಪೂರ್ ಮನವಲಿಸಿ ಮತ್ತೆ ಚಿತ್ರೀಕರಣಕ್ಕೆ ಕರೆದುಕೊಂಡು ಬಂದು ಚಿತ್ರೀಕರಣ ಮಾಡಿ ಮುಗಿಸಿದ್ದಾರೆ.

ಮಿ.ಇಂಡಿಯಾ ದೊಡ್ಡ ಮಟ್ಟದಲ್ಲಿ ಯಶಸ್ಸುಕಂಡ ಸಿನಿಮಾ

ಮಿ.ಇಂಡಿಯಾ ದೊಡ್ಡ ಮಟ್ಟದಲ್ಲಿ ಯಶಸ್ಸುಕಂಡ ಸಿನಿಮಾ

ಕಿತ್ತಾಟ, ಮನಸ್ತಾಪದ ನಡುವೆ ಮಿ.ಇಂಡಿಯಾ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿ ತೆರೆಗೆ ಬಂತು. ಮೇ 29ಕ್ಕೆ ಸಿನಿಮಾ ರಿಲೀಸ್ ಆಗಿದ್ದು, ದೊಡ್ಡ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಯಿತು. ಶ್ರೀದೇವಿ ಅಭಿನಯ, ಅಮ್ರೀಶ್ ಪುರಿ ಪಾತ್ರ, ಹಾಡುಗಳು ಭಾರತೀಯ ಚಿತ್ರಾಭಿಮಾನಿಗಳ ನಿದ್ದೆಗೆಡಿಸಿತ್ತು. ಆ ಕಾಲಕ್ಕೆ ಮಿ.ಇಂಡಿಯಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿ ದಾಖಲೆ ಬರೆದ ಸಿನಿಮಾವಾಗಿದೆ.

More from Filmibeat

English summary
Bollywood Actor Anil Kapoor fight with Boney kapoor because of Sridevi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X