ಅನಿಲ್ ಕಪೂರ್ ನನ್ನ ಬಲವಂತವಾಗಿ 'ಕಿಸ್' ಮಾಡಿದರು. ಕಣ್ಣೀರಾದ ಗೋಲ್ಡನ್ ಸ್ಟಾರ್ ಗಣೇಶ್ ನಾಯಕಿ..!
ಹೆಣ್ಣ್ ಮಕ್ಕಳ ಪಾಲಿಗೆ ಸಿನಿಮಾ ಅಂದರೆ ಕೇವಲ ಥಳುಕು ಬಳುಕಷ್ಟೇ ಅಲ್ಲ, ಅದು ಕೊಳಕು ಮತ್ತು ಹುಳುಕಿನ ಪ್ರಪಂಚವೂ ಹೌದು. ಅಮಾಯಕ ಹೆಣ್ಣು ಮಕ್ಕಳಿಗಾಗಿಯೇ ಇಲ್ಲಿ ಒಂದು ವರ್ಗ ಹೊಂಚು ಹಾಕಿ ಕುಂತಿರುತ್ತೆ. ಇದಕ್ಕೆ ಸಾಕ್ಷಿ ಅನ್ನುವಂತೆ ಅದೆಷ್ಟೋ ನಾಯಕಿಯರು ಇಲ್ಲಿಯವರೆಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಚಿತ್ರರಂಗದಲ್ಲಿ ತಾವು ಅನುಭವಿಸಿದ ನೋವು-ಅವಮಾನದ ಕಥೆಯನ್ನು ಹಂಚಿಕೊಂಡಿದ್ದಾರೆ. ಪರಿಸ್ಥಿತಿಯ ಲಾಭವನ್ನು ಪಡೆದು ಹೇಗೆ ತಮ್ಮನ್ನು ಬಳಸಿಕೊಂಡರು ಎನ್ನುವುದನ್ನು ಹೇಳಿಕೊಂಡಿದ್ದಾರೆ. ಇದಕ್ಕೆ ಅಂಜನಾ ಸುಖಾನಿ ಸದ್ಯದ ಉದಾಹರಣೆ.
ಹೌದು, ಅಂಜನಾ ಸುಖಾನಿ. ಜೈಪುರದ ಚೆಲುವೆ. ಯಾವ ಗಾಡ್ ಫಾದರ್ ಇಲ್ಲದೇ ಬಾಲಿವುಡ್‌ನಲ್ಲಿ ನೆಲೆಯೂರುವ ಕನಸು ಕಂಡಿದ್ದವರು ಇವರು. ಈ ದಿಸೆಯಲ್ಲಿ 2005ನೇ ಇಸ್ವಿಯಲ್ಲಿ ಪ್ರಯತ್ನವನ್ನು ಶುರು ಮಾಡಿದ್ದ ಅಂಜನಾ ಹಮ್ ದಮ್, ಸುನ್ ಜರಾ, ಜಾನಾ ಚಿತ್ರಗಳಲ್ಲಿ ಕಾಣಿಸಿಕೊಂಡರು. ಆದರೆ ಇವರಿಗೆ ಬೇಕಿದ್ದ ಹೆಸರು ಸಿಗಲಿಲ್ಲ.

ಇದೇ ಸಮಯದಲ್ಲಿ ಸಲಾಂ ಎ ಇಷ್ಕ್ ಎಂಬ ಚಿತ್ರಕ್ಕೆ ಅಂಜನಾ ನಾಯಕಿಯಾಗಿ ಆಯ್ಕೆಯಾಗಿದ್ದರು. ದೊಡ್ಡ ಬ್ಯಾನರ್‌ನ ದೊಡ್ಡ ಚಿತ್ರ ಇದು. ತಾರಾಬಳಗದಲ್ಲಿ ಅನಿಲ್ ಕಪೂರ್, ಗೋವಿಂದ, ಸಲ್ಮಾನ್ ಖಾನ್, ಪ್ರಿಯಾಂಕ ಚೋಪ್ರಾ, ಜೂಹಿ ಚಾವ್ಲಾ, ಜಾನ್ ಅಬ್ರಾಹಿಂ, ಅಕ್ಷಯ್ ಖನ್ನಾ, ಆಯೇಶಾ ಟಾಕೀಯಾ, ವಿದ್ಯಾ ಬಾಲನ್, ಸೊಹೈಲ್ ಖಾನ್, ಇಶಾ ಕೊಪ್ಪಿಕರ್ ಇದ್ದರು. ಇಂತಹ ಚಿತ್ರದಲ್ಲಿ ಅವಕಾಶ ಸಿಕ್ಕಾಗ ಅಂಜನಾ ಸುಖಾನಿ ಕುಣಿದಾಡಿ ಹೋಗಿದ್ದರು. ಕಣ್ಮುಚ್ಚಿಕೊಂಡು ಪಾತ್ರವನ್ನು ಕೂಡ ಒಪ್ಪಿಕೊಂಡರು.
ಆದರೆ ಆ ಕ್ಷಣದಲ್ಲಿ ಅಂಜನಾ ಸುಖಾನಿ ಅವರಿಗೆ ಮುಂದಾಗಲಿರುವ ಅನಾಹುತದ ಸುಳಿವು ಕೂಡ ಇರಲಿಲ್ಲ. ಚಿತ್ರದ ಚಿತ್ರೀಕರಣ ಆರಂಭವಾಗುತ್ತಿದ್ದಂತೆಯೇ ಚಿತ್ರದ ನಿರ್ದೇಶಕ ನಿಖಿಲ್ ಅಡ್ವಾಣಿ ತನ್ನ ಬುದ್ದಿ ತೋರಿಸಲು ಶುರು ಮಾಡಿದ್ದ. ಅಂಜನಾ ಸುಖಾನಿಗೆ ಮಾನಸಿಕ ಕಿರುಕುಳ ನೀಡಲು ಶುರುಮಾಡಿದ್ದ. ಬಾಲಿವುಡ್‌ಗೆ ಹಂಗಾಮಗೆ ನೀಡಿದ ಸಂದರ್ಶನದಲ್ಲಿ ಅಂಜನಾ ತಮ್ಮ ಈ ಅನುಭವವನ್ನು ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ನನ್ನ ಮತ್ತು ಅನಿಲ್ ಕಪೂರ್ ಅವರ ನಡುವೆ ಒಂದು ಸನ್ನಿವೇಶ ಇದೆ ಆದರೆ ಆ ಸನ್ನಿವೇಶದ ಕುರಿತು ನನಗೆ ನಿರ್ದೇಶಕರು ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ ಎಂದಿರುವ ಅಂಜನಾ ನನ್ನನ್ನು ಹೊರತು ಪಡಿಸಿ ಅನಿಲ್ ಕಪೂರ್ ಅವರಿಗೆ ಮತ್ತು ಚಿತ್ರದ ತಂತ್ರಜ್ಞರಿಗೆ ಎಲ್ಲರಿಗೆ ಕೂಡ ಆ ಸನ್ನಿವೇಶದ ಕುರಿತು ಸ್ಪಷ್ಟ ಕಲ್ಪನೆ ಇತ್ತು ಎಂದು ಹೇಳಿದ್ದಾರೆ.
ಮುಂದುವರೆದು ಆ ಸೀನ್ ವಿವರಣೆ ನೀಡಿರುವ ಅಂಜನಾ ನೈಟ್ ಕ್ಲಬ್ ತರ ಸೆಟ್ ಹಾಕಲಾಗಿತ್ತು. ನೈಟ್ ಕ್ಲಬ್ ಶೈಲಿಯ ಕಾಸ್ಟೂಮ್‌ಗಳನ್ನು ನನಗೆ ನೀಡಲಾಗಿತ್ತು. ನಾನು ಚಿತ್ರೀಕರಣದ ಸ್ಥಳಕ್ಕೆ ಹೋದಾಗ ನನಗೆ ಆಶ್ಚರ್ಯವಾಗಿತ್ತು ಯಾಕೆಂದರೆ ನನಗೆ ಕಥೆ ಹೇಳುವಾಗ ಈ ತರಹದ ಸನ್ನಿವೇಶಗಳಿರಲಿಲ್ಲ ಎಂದಿರುವ ಅಂಜನಾ ಆದರೂ ಆಕ್ಷನ್ ಎಂದು ಹೇಳಿದ ತಕ್ಷಣ ನಾನು ಅಭಿನಯಿಸಲು ಶುರು ಮಾಡಿದೆ ಆದರೆ ಮುಂದೆ ಆದ ಘಟನೆ ನನಗೆ ತುಂಬಾ ಆಘಾತಕ್ಕೀಡು ಮಾಡಿತು ಎಂದು ಹೇಳಿದ್ದಾರೆ.
ಸನ್ನಿವೇಶದಲ್ಲಿ ಅನಿಲ್ ಕಪೂರ್ ಅಭಿನಯಿಸುತ್ತಾ ನನ್ನ ಬಳಿ ಬಂದು ನನ್ನ ತುಟಿಗೆ ತುಟಿ ಸೇರಿಸಿದರು ಅವರು ನನಗೆ ಚುಂಬಿಸುತ್ತಿದ್ದಂತೆಯೇ ನಾನು ಮಾನಸಿಕವಾಗಿ ಅಲ್ಲಿಯೇ ಕುಗ್ಗಿ ಹೋದೆ ಎಂದಿರುವ ಅಂಜನಾ, ನನಗೇನಾಗುತ್ತಿದೆ ಎನ್ನುವುದೇ ಅರ್ಥವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಆತಂಕ ಮತ್ತು ಭಯ ನನ್ನಲ್ಲಿ ಮನೆ ಮಾಡಿತ್ತು, ದೃಶ್ಯವನ್ನು ನನ್ನ ಗಮನಕ್ಕೆ ತಾರದೇ ಚಿತ್ರೀಕರಣ ಮಾಡಲಾಗುತ್ತಿತ್ತು, ನನ್ನ ಸಮ್ಮತಿ ಇಲ್ಲದೇ ಅನಿಲ್ ಕಪೂರ್ ಬಲವಂತವಾಗಿ ನನ್ನನ್ನು ಚುಂಬಿಸಿದ್ದರು ಎಂದಿರುವ ಅಂಜನಾ ದೃಶ್ಯ ಚಿತ್ರೀಕರಣವಾದ ನಂತರ ನಿರ್ದೇಶಕರು ಶಹಬ್ಭಾಶ್ ಸೀನ್ ತುಂಬಾ ಚೆನ್ನಾಗಿ ಬಂದಿದೆ ಎಂದು ಹೇಳಿದರು ಎಂದು ನೆನಪಿಸಿಕೊಂಡಿದ್ದಾರೆ. ನನ್ನ ಜಾಗದಲ್ಲಿ ಸ್ಟಾರ್‌ಗಳ ಮಕ್ಕಳಾಗಿದ್ದರೆ ಆಗಲೂ ಕೂಡ ಇವರು ಸನ್ನಿವೇಶವನ್ನು ವಿವರಿಸದೇ ಇವರ ಮನಸೋ ಇಚ್ಚೆಯಂತೆ ಚಿತ್ರೀಕರಣ ಮಾಡುತ್ತಿದ್ದರಾ ಎಂದು ಪ್ರಶ್ನೆ ಮಾಡಿದ್ದಾರೆ.
ನಿಜಾ. ಚಿತ್ರ ಅಂದ ಮೇಲೆ ಅಲ್ಲಿ ರೊಮ್ಯಾಂಟಿಕ್ ದೃಶ್ಯಗಳು ಇರುತ್ತವೆ ಅದಕ್ಕೆ ನನ್ನ ವಿರೋಧ ಇಲ್ಲ ಅಥವಾ ನಾನು ಆ ತರಹದ ದೃಶ್ಯಗಳನ್ನು ಮಾಡುವುದಿಲ್ಲ ಎಂದು ಯಾವತ್ತು ಹೇಳಿಲ್ಲ ಆದರೆ ಕೊನೆ ಪಕ್ಷ ದೃಶ್ಯದ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡದಿದ್ದರೆ ಹೇಗೆ ಎಂದು ಪ್ರಶ್ನೆಯನ್ನು ಮಾಡಿರುವ ಅಂಜನಾ ನನಗೆ ಅರ್ಧ ಗಂಟೆ ಮೊದಲು ಹೇಳಿದ್ದರೂ ಕೂಡ ಮಾನಸಿಕವಾಗಿ ನಾನು ಸಿದ್ಧಳಾಗುತ್ತಿದ್ದೆ, ಆದರೆ ಏಕಾಏಕಿ ಬಂದು ಚುಂಬಿಸಿದಾಗ ನನ್ನ ಪರಿಸ್ಥಿತಿ ಹೇಗಾಗಿರಬೇಡ ಎಂದು ಅಂಜನಾ ತಮ್ಮ ಮನದ ಬೇಸರ ಹೊರ ಹಾಕಿದ್ದಾರೆ. ಇನ್ನು ಅವತ್ತೇ ವಿರೋಧ ವ್ಯಕ್ತಪಡಿಸಬಹುದಿತ್ತು ಎಂದು ಮುಂದೆ ಕೇಳಬಹುದಾದ ಪ್ರಶ್ನೆಗೆ ಕೂಡ ಉತ್ತರವನ್ನು ನೀಡಿರುವ ಅಂಜನಾ ವಿರೋಧ ವ್ಯಕ್ತಪಡಿಸಬೇಕೆಂದು ನಾನು ನಿರ್ಧರಿಸಿದ್ದೆ. ಆದರೆ ನನಗೆ ಯಾವುದೇ ಸಿನಿಮಾ ಹಿನ್ನೆಲೆ ಇರಲಿಲ್ಲ, ಹೀಗಾಗಿ ಪ್ರಶ್ನೆ ಕೇಳಿದರೆ ಚಿತ್ರದಿಂದ ತೆಗೆದು ಬಿಡುವ ಭಯ ನನಗೆ ಇತ್ತು ಹೀಗಾಗಿ ನಾನು ಅನಿವಾರ್ಯವಾಗಿ ಮೌನಕ್ಕೆ ಶರಣಾದೆ ಎಂದಿರುವ ನನ್ನ ಈ ಮೌನವನ್ನು ಸಮ್ಮತಿಯೆಂದುಕೊಂಡು ಆ ನಿರ್ದೇಶಕ ಹಲವು ಬಾರಿ ಚಿತ್ರದ ದೃಶ್ಯಗಳ ನೆಪದಲ್ಲಿ ನನ್ನನ್ನು ದುರುಪಯೋಗ ಪಡೆಸಿಕೊಂಡ ಎಂದು ಹೇಳಿದ್ದಾರೆ.
ಇಂಥಾ ಅಂಜನಾ ಸುಖಾನಿ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಮಳೆಯಲಿ ಜೊತೆಯಲಿ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಯುವಿಕಾ ಚೌಧರಿ ಜೊತೆ ಮತ್ತೊಬ್ಬ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಈ ಚಿತ್ರವೇ ಮೊದಲು ಈ ಚಿತ್ರವೇ ಕೊನೆ ಆ ನಂತರ ಅಂಜನಾ ಮತ್ತೆ ಕನ್ನಡದತ್ತ ಬರಲಿಲ್ಲ.


Click it and Unblock the Notifications











