ಸುಶಾಂತ್ ಸಿಂಗ್ ರಜಪೂತ್ 'ದೇವರ ಮಗ' ಎಂದು ನೆನೆದ ಮಾಜಿ ಪ್ರೇಯಸಿ

ಹಸನ್ಮುಖಿ, ಸ್ಫುರದ್ರೂಪಿ ಹಾಗೂ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಕಣ್ಮರೆಯಾಗಿ ಇಂದಿಗೆ (ಜುಲೈ 14) ಒಂದು ತಿಂಗಳು. ಅವರ ಸಾವು ಮೂಡಿಸಿರುವ ಆಘಾತದಿಂದ ಹೊರಬರಲು ಇನ್ನೂ ಅನೇಕರಿಗೆ ಸಾಧ್ಯವಾಗಿಲ್ಲ. ಅವರ ಆತ್ಮಹತ್ಯೆ ಪ್ರಕರಣ ಸುತ್ತ ಎದ್ದಿರುವ ಅನುಮಾನಗಳು, ಬಾಲಿವುಡ್‌ನ ಸ್ವಜನಪಕ್ಷಪಾತದ ವಿರುದ್ಧ ನಡೆಯುತ್ತಿರುವ ಚರ್ಚೆಗಳು ಮತ್ತೊಂದು ಹಂತದಲ್ಲಿದೆ.

Recommended Video

ಅಂದು ನನ್ನ ಅಮ್ಮನ ಕಾಲಿಗೆ ಬಿದ್ದು ಕೊಟ್ಟ ಮಾತನ್ನ ಉಳಿಸಿಕೊಂಡರು ಶಿವಣ್ಣ | Shiva Rajkumar | Filmibeat Kannada

ಈ ನಡುವೆ ಸುಶಾಂತ್ ಅವರ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಮತ್ತು ಗೆಳತಿ ರಿಯಾ ಚಕ್ರಬೊರ್ತಿ ಯಾವುದೇ ಹೇಳಿಕೆ ನೀಡದೆ ಇರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಸುಶಾಂತ್ ನಿಧನರಾಗಿ ಒಂದು ತಿಂಗಳ ಬಳಿಕ ಅಂಕಿತಾ ಕೊನೆಗೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ಮನೆಯ ದೇವರಕೋಣೆಯಲ್ಲಿ ಹೂವುಗಳಿಂದ ಅಲಂಕರಿಸಿದ ಸಣ್ಣದೊಂದು ಹಣತೆ ಹಚ್ಚಿಟ್ಟು ಸುಶಾಂತ್‌ಗೆ ಗೌರವ ಸಲ್ಲಿಸಿರುವ ಅಂಕಿತಾ 'ದೇವರ ಮಗ' ಎಂದು ಕ್ಯಾಪ್ಷನ್ ನೀಡಿದ್ದಾರೆ.

Ankita Lokhande Remembers Sushant Singh Rajput And Lights A Lamp For Him

ಜುಲೈ 13ರಂದು ಅಂಕಿತಾ ಸಾಮಾಜಿಕ ಜಾಲತಾಣದಲ್ಲಿ ಕೊನೆಯ ಬಾರಿಗೆ ವಿಡಿಯೋವೊಂದನ್ನು ಪ್ರಕಟಿಸಿದ್ದರು. ನಂತರ ಸುಶಾಂತ್ ಸಾವಿನ ಕುರಿತು ಅವರು ಒಂದೂ ಹೇಳಿಕೆ ನೀಡದೆ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದರು.

Ankita Lokhande Remembers Sushant Singh Rajput And Lights A Lamp For Him

ಸುಶಾಂತ್ ಸಿಂಗ್ ಸಾವಿನಿಂದ ಆಘಾತಕ್ಕೆ ಒಳಗಾಗಿದ್ದ ಅಂಕಿತಾ ಬಗ್ಗೆ ಅನೇಕರು ಅನುಕಂಪ ವ್ಯಕ್ತಪಡಿಸಿದ್ದರು. ಮುಂಬೈನಲ್ಲಿ ಸುಶಾಂತ್ ಮನೆಗೆ ತೆರಳಿ ಅವರ ಕುಟುಂಬದವರನ್ನು ಭೇಟಿ ಮಾಡಿದ್ದ ಅಂಕಿತಾ, ಅವರಿಗೆ ಧೈರ್ಯ ತುಂಬಿದ್ದರು. ಆದರೆ ಸ್ವತಃ ಅಂಕಿತಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆ ನೋವಿನಿಂದ ಹೊರಬರಲು ಅವರಿಗೆ ಅನೇಕ ದಿನಗಳು ಬೇಕಾಗಿತ್ತು ಎಂದು ಅವರ ಹತ್ತಿರದವರು ಹೇಳಿದ್ದಾರೆ.

More from Filmibeat

English summary
Sushant Singh Rajput's ex girlfriend Ankita Likhande lights a lamp on his one month death anniversary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X