ನಟಿ ಅನುಷ್ಕಾ ಶರ್ಮಾ ಮನೆಯಲ್ಲಿ ತಪ್ಪಿಸಿಕೊಂಡು ಬಂದ ಡೈನೋಸರ್!: ವೈರಲ್ ವಿಡಿಯೋ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮನೆಗೆ ಡೈನೋಸರ್ ಬಂದಿದೆ! ಡೈನೋಸರ್ ಸಂತತಿ ನಾಶವಾಗಿರುವಾಗ ಇದೆಲ್ಲಿಂದ ಬಂತು ಎನ್ನುತ್ತೀರಾ? ಈ ಡೈನೋಸರ್ ಬೇರಾವುದೂ ಅಲ್ಲ ಕ್ರಿಕೆಟಿಗ ವಿರಾಟ್ ಕೊಹ್ಲಿ.

ಡೈನೋಸರ್ ರೀತಿ ಪತಿ ಕೊಹ್ಲಿ ಎರಡೂ ಕೈಗಳನ್ನು ಇರಿಸಿಕೊಂಡು ಮೆಲ್ಲನೆ ನಡೆಯುತ್ತಾ ಕೂಗುವ ವಿಡಿಯೋವನ್ನು ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ತಮಾಷೆಯ ವಿಡಿಯೋ ವೈರಲ್ ಆಗಿದ್ದು, ಅನೇಕ ಮೀಮ್ಸ್‌ಗಳಿಗೂ ಆಹಾರವಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಕೊಹ್ಲಿ ಮತ್ತು ಅನುಷ್ಕಾ ಇಂತಹ ತರಲೆ ತಮಾಷೆಯ ವಿಡಿಯೋಗಳನ್ನು ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ. ಮುಂದೆ ಓದಿ...

ಡೈನೋಸರ್ ಕೊಹ್ಲಿ

ಇನ್‌ಸ್ಟಾಗ್ರಾಂನಲ್ಲಿ ಚಿಕ್ಕ ವಿಡಿಯೋ ಹಾಕಿರುವ ಅನುಷ್ಕಾ ಶರ್ಮಾ, 'ಸೆರೆಯಿಂದ ತಪ್ಪಿಸಿಕೊಂಡು ಬಂದಿರುವ ಡೈನೋಸರ್‌ಅನ್ನು ನಾನು ಪತ್ತೆಹಚ್ಚಿದ್ದೇನೆ' ಎಂದು ಬರೆದಿದ್ದಾರೆ. ಕೊಹ್ಲಿ ಜುರಾಸಿಕ್ ಪಾರ್ಕ್ ಚಿತ್ರ ಸರಣಿಯಲ್ಲಿ ತೋರಿಸಿರುವಂತೆ ಡೈನೋಸರ್ ರೀತಿ ನಡೆಯುತ್ತಾ ಕೊನೆಯಲ್ಲಿ ಘರ್ಜಿಸುತ್ತಾರೆ.

ಕೊಹ್ಲಿ ಫಿಟ್ನೆಸ್ ವಿಡಿಯೋ

ಕೊಹ್ಲಿ ಇನ್ನೊಂದೆಡೆ ವೇಯ್ಟ್ ಲಿಫ್ಟ್ ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ. ತೂಕವನ್ನು ಸಲೀಸಾಗಿ ಎತ್ತಬಲ್ಲೆ ಎಂಬುದನ್ನು ತೋರಿಸಿದ್ದಾರೆ. ಅದಕ್ಕೆ 'ಗಳಿಸಿಕೊಳ್ಳಿ, ಅದಕ್ಕಾಗಿ ಬೇಡಿಕೆ ಇರಿಸಬೇಡಿ' ಎಂಬ ಸ್ಫೂರ್ತಿದಾಯಕ ಸಾಲನ್ನು ಹಾಕಿದ್ದಾರೆ. ಈ ವಿಡಿಯೋ 'ಬೆಂಕಿ'ಯಾಗಿದೆ ಎಂದು ಭಾರತ ಕ್ರಿಕೆಟ್ ತಂಡದ ತರಬೇತುದಾರ ನಿಕ್ ವೆಬ್, ಕ್ರಿಕೆಟಿಗರಾದ ಎಬಿ ಡಿವಿಲಿಯರ್ಸ್, ಹರ್ಭಜನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು ಸದ್ದಿನ ಕಾರಣ

ಈ ವಿಡಿಯೋ ಅನೇಕ ಮೀಮ್‌ಗಳಿಗೆ ತಮಾಷೆಯ ವಸ್ತುವಾಗಿ ಸಿಕ್ಕಿದೆ. ಬೆಂಗಳೂರಿನಲ್ಲಿ ಬುಧವಾರ ಮಧ್ಯಾಹ್ನ ಅನೇಕರಿಗೆ ಭಾರಿ ಸದ್ದು ಕೇಳಿಸಿತ್ತು. ಈ ಶಬ್ಧ ಎಲ್ಲಿಯದು ಎನ್ನುವುದು ನಿಗೂಢವಾಗಿದೆ. ಈ ಶಬ್ಧಕ್ಕೆ ನೈಜ ಕಾರಣ ಇದು ಎಂದು ಕೊಹ್ಲಿ ಡೈನೋಸರ್ ರೀತಿ ಕೂಗುವ ವಿಡಿಯೋವನ್ನು ಟ್ರೋಲ್ ಪುಟಗಳು ಬಳಸಿಕೊಂಡಿವೆ.

ಮಧ್ಯರಾತ್ರಿ ಕಿಚನ್‌ಗೆ ಹೋಗುವಾಗ

ಮಧ್ಯರಾತ್ರಿ ಕಿಚನ್‌ಗೆ ಹೋಗುವಾಗ

ಮಧ್ಯರಾತ್ರಿ 2 ಗಂಟೆಗೆ ನಾನು ಐಸ್ ಕ್ರೀಮ್ ತಿನ್ನಲು ಕಿಚನ್‌ನಲ್ಲಿ ಫ್ರಿಜ್ ಕಡೆಗೆ ಹೋಗುವಾಗ ಎಂದು ಕೆಲವು ಕೊಹ್ಲಿ ಫೋಟೊ ಬಳಸಿಕೊಂಡಿದ್ದಾರೆ, ಇನ್ನು ಕೆಲವರು ಕಿಚನ್‌ನಲ್ಲಿನ ಜಿರಲೆಗಳು ಹೀಗೆ ಇರುತ್ತವೆ ಎಂದಿದ್ದಾರೆ.

More from Filmibeat

English summary
Bollywood actress Anushka Sharma has posted a video of Virat Kohli who walked and roar like a dinosaur.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X