6 ವರ್ಷ ಸಹ ಜೀವನ.. 2 ಗಂಡು ಮಕ್ಕಳು.. 53ನೇ ವರ್ಷಕ್ಕೆ ನಿಶ್ವಿತಾರ್ಥ.. ಅರ್ಜುನ್ ರಾಮ್‌ಪಾಲ್ ಮದ್ವೆ ಯಾವಾಗ?

ಬಾಲಿವುಡ್‌ ನಟರು ವಿದೇಶದ ಸಂಸ್ಕೃತಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ. ಬಾಲಿವುಡ್ ಮಂದಿಯಲ್ಲಿ ಮದುವೆ ಅನ್ನೋದು ಕೇವಲ ಸಮಾಜಕ್ಕೆ ತೋರಿಸುವ ಒಂದು ಸಂಭ್ರಮ ಆಗಿದೆಯೇ? ಇಂತಹದ್ದೊಂದು ಪ್ರಶ್ನೆ ಮೂಡುತ್ತೆ. ಯಾಕಂದ್ರೆ, ಬಾಲಿವುಡ್‌ನ ಬಹುತೇಕ ನಟರು ಮೊದಲು ಸಹ ಜೀವನ ಆಮೇಲೆ ನಿಶ್ವಿತಾರ್ಥ ಮದುವೆ ಎಂದು ಹೇಳುತ್ತಿದ್ದಾರೆ.

ಇತ್ತೀಚೆಗೆ ಆಮಿರ್ ಖಾನ್ ಕೂಡ ಮೂರನೇ ಮದುವೆ ತಯಾರಿ ನಡೆಸುತ್ತಿದ್ದಾರೆ. ಅದಕ್ಕೂ ಮುನ್ನ ಪ್ರೇಯಸಿ ಗೌರಿಯವರೊಂದಿಗೆ ಸಹ ಜೀವನ ನಡೆಸುತ್ತಿದ್ದಾರೆ. ಹೃತಿಕ್ ರೋಷನ್ ತನ್ನ ಪ್ರೇಯಸಿ ಸಬಾ ಜೊತೆ ಲಿವ್ ಇನ್‌ನಲ್ಲಿ ಇದ್ದಾರೆ. ಹೀಗೆ ಬಾಲಿವುಡ್ ಸ್ಟಾರ್ ಜೋಡಿಗಳು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇವೆ. ಅಂತಹ ಸಂಬಂಧದಲ್ಲಿ ನಂಬಿಕೆ ಇಟ್ಟವರಲ್ಲಿ ಬಾಲಿವುಡ್‌ನ ಮತ್ತೊಬ್ಬ ಹ್ಯಾಂಡ್‌ಸಮ್ ನಟ ಅರ್ಜುನ್ ರಾಮ್‌ಪಾಲ್‌ ಕೂಡ ಒಬ್ಬರು.

Arjun Rampal engaged with Gabriella Dimitriades at 53 after 6 years of live in Relationship

ಅರ್ಜುನ್ ರಾಮ್‌ಪಾಲ್‌ ಬಾಲಿವುಡ್‌ನ ಜನಪ್ರಿಯ ನಟ. ಕಳೆದ ಆರು ವರ್ಷಗಳಿಂದ ದಕ್ಷಿಣ ಆಫ್ರಿಕಾದ ಮಾಡಲ್ ಗ್ಯಾಬ್ರಿಯೆಲ್ಲಾ ಡೆಮೆಟ್ರಿಯಡೆಸ್ ಅವರೊಂದಿಗೆ ಲಿವ್ ಇನ್‌ ರಿಲೇಷನ್‌ಶಿಫ್‌ನಲ್ಲಿ ಇದ್ದರು. ಇವರಿಗೆ ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಈಗ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಅನೌನ್ಸ್ ಮಾಡಿದ್ದಾರೆ. 53 ವರ್ಷದ ಈ ನಟನ ಮದುವೆ ಯಾವಾಗ? ಎಷ್ಟನೇ ಮದುವೆ? ಇಬ್ಬರಲ್ಲೂ ಸಂಬಂಧ ಬೆಳೆದಿದ್ದು ಹೇಗೆ? ತಿಳಿಯುವುದಕ್ಕೆ ಮುಂದೆ ಓದಿ.

53ನೇ ವಯಸ್ಸಿನಲ್ಲಿ 2ನೇ ನಿಶ್ವಿತಾರ್ಥ

ಅರ್ಜುನ್ ರಾಮ್‌ಪಾಲ್ ಬಾಲಿವುಡ್‌ನ ಫಿಟ್ ನಟರಲ್ಲಿ ಒಬ್ಬರು. ಹೀರೋ ಆಗಿ, ವಿಲನ್ ಆಗಿ ನಟಿಸುತ್ತಿದ್ದಾರೆ. ಸಿನಿಮಾ ಅಷ್ಟೇ ಅಲ್ಲದೆ, ವೆಬ್ ಸೀರಿಸ್‌ನಲ್ಲಿಯೂ ಅರ್ಜುನ್ ರಾಮ್‌ಪಾಲ್ ನಟಿಸಿ ಯಶಸ್ಸು ಗಳಿಸಿದ್ದಾರೆ. 'ಡಾನ್', 'ಓಂ ಶಾಂತಿ ಓಂ', 'ರಾಜ್‌ನೀತಿ', 'ರಾ ವನ್', 'ಧುರಂಧರ್' ಅಂತಹ ಸಿನಿಮಾಗಳಲ್ಲಿ ನಟಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ. ತಮ್ಮ ಸಿನಿಮಾ ಮೂಲಕ ಎಷ್ಟು ಫೇಮಸ್ ಆಗಿದ್ದಾರೋ, ಅಷ್ಟೇ ವೈಯಕ್ತಿಕ ಜೀವನದಲ್ಲೂ ಫೇಮಸ್ ಆಗಿದ್ದಾರೆ. ಈಗ 53ನೇ ವಯಸ್ಸಿನಲ್ಲಿ ನಿಶ್ವಿತಾರ್ಥ ಮಾಡಿಕೊಂಡು ಸುದ್ದಿಯಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ಮಾಡೆಲ್ ಜೊತೆ ಸಹ ಜೀವನ

ಅರ್ಜುನ್ ರಾಮ್‌ಪಾಲ್ ಹಾಗೂ ಗ್ಯಾಬ್ರಿಯೆಲ್ಲಾ ಡೆಮೆಟ್ರಿಯಡೆಸ್ 2018ರಿಂದ ಲಿವ್ ಇನ್ ರಿಲೇಷನ್‌ಶಿಫ್‌ನಲ್ಲಿ ಇದ್ದಾರೆ. ಈ ಜೋಡಿ ಅರಿವ್ ಹಾಗೂ ಅರಿಕ್ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ. ಗ್ಯಾಬ್ರಿಯೆಲ್ಲಾ ಡೆಮೆಟ್ರಿಯಡೆಸ್ ಮೂಲತ: ದಕ್ಷಿಣ ಆಫ್ರಿಕಾದ ಮಾಡಲ್ ಹಾಗೂ ಫ್ಯಾಷನ್ ಡಿಸೈನರ್. ಇವರಿಬ್ಬರಲ್ಲೂ ಪ್ರೀತಿ ಬೆಳೆದು ಲಿವ್ ಇನ್‌ ರಿಲೇಷನ್‌ಶಿಫ್‌ನಲ್ಲಿ ಇದ್ದರು. ಇಬ್ಬರಿಗೂ ಐಪಿಎಲ್ ಸಂಭ್ರಮಾಚರಣೆಯ ವೇಳೆ ಪರಿಚಯ ಆಗಿತ್ತು ಎನ್ನಲಾಗಿದೆ. ಹೆಚ್ಚು ಕಡಿಮೆ ಆರು ವರ್ಷಗಳ ಕಾಲ ಸಹ ಜೀವನ ನಡೆಸಿದ ಬಳಿಕ ಈಗ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ.

Arjun Rampal engaged with Gabriella Dimitriades at 53 after 6 years of live in Relationship

ಅರ್ಜುನ್‌ಗೆ 2ನೇ ಮದುವೆ?

ಅರ್ಜುನ್ ರಾಮ್‌ಪಾಲ್ ಭಾರತದ ಸೂಪರ್‌ ಮಾಡೆಲ್ ಮೆಹರ್ ಜೆಸಿಯಾ ಅವರನ್ನು 1998ರಲ್ಲಿ ವಿವಾಹವಾಗಿದ್ದರು. ಅವರಿಗೆ ಮಹಿಕಾ ಮತ್ತು ಮೈರಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುಮಾರು 20 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ಬಳಿಕ ಅರ್ಜುನ್ ರಾಮ್‌ಪಾಲ್ ಹಾಗೂ ಮೆಹರ್ ಜೆಸಿಯಾ ಪರಸ್ಪರ ಒಪ್ಪಂದದ ಮೇರೆಗೆ ಬೇರೆಯಾಗುವುದಕ್ಕೆ ನಿರ್ಧರಿಸಿದ್ದರು. 2018ರಲ್ಲಿ ಕೌಟುಂಬಿಕ ನ್ಯಾಯಾಲಯದಿಂದ ಬೇರೆಯಾದರು. ಆ ಬಳಿಕ ಗ್ಯಾಬ್ರಿಯೆಲ್ಲಾ ಡೆಮೆಟ್ರಿಯಡೆಸ್ ಜೊತೆ ಲಿವ್ ಇನ್‌ ರಿಲೇಷನ್‌ಶಿಪ್‌ನಲ್ಲಿ ಇದ್ದರು.

ಮದುವೆ ಯಾವಾಗ?

ಅರ್ಜುನ್ ರಾಮ್‌ಪಾಲ್‌ಗೆ ಯಾವಾಗಲೂ ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇತ್ತು. ಹೀಗಾಗಿ ಇತ್ತೀಚೆಗಿನ ಪಾಡ್‌ಕಾಸ್ಟ್ ಒಂದರಲ್ಲಿ ಅರ್ಜುನ್ "ನಾವು ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ಶೀಘ್ರದಲ್ಲೇ ಮದುವೆ ಕೂಡ ಆಗಲಿದ್ದೇವೆ" ಎಂದು ಘೋಷಿಸುವ ಮೂಲಕ ಈಗಾಗಲೇ ಕೇಳುತ್ತಿದ್ದ ಪ್ರಶ್ನೆಗಳಿಗೆ ತೆರೆ ಎಳೆದಿದ್ದಾರೆ. ಆದರೆ, ಮದುವೆ ಯಾವಾಗ ಅನ್ನೋದನ್ನು ಅರ್ಜುನ್ ಇನ್ನೂ ಬಿಟ್ಟುಕೊಟ್ಟಿಲ್ಲ.

More from Filmibeat

English summary
Arjun Rampal engaged with Gabriella Dimitriades at 53 after 6 years of live in Relationship.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X