KGF 2 ಖಳನಟ ಸಂಜಯ್ ದತ್‌ಗೆ ಅರುಣಾಚಲ ಪ್ರದೇಶದ ಸರ್ಕಾರದಿಂದ ಗೌರವ: ರಾಯಭಾರಿಯಾಗಿ ಆಯ್ಕೆ

'ಕೆಜಿಎಫ್‌: ಚಾಪ್ಟರ್‌ 2' ಸಿನಿಮಾ ಮೂಲಕ ಬಾಲಿವುಡ್ ನಟ ಸಂಜಯ್‌ ದತ್‌ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಜೊತೆ ಬಾಲಿವುಡ್ ಅಧೀರನ ಕಾದಾಟವನ್ನು ನೋಡಲು ಕನ್ನಡಿಗರು ಕಾತುರದಿಂದ ಕಾಯುತ್ತಿದ್ದಾರೆ. ಈ ಬೆನ್ನಲ್ಲೇ ಸಂಜಯ್ ದತ್ ಅಭಿಮಾನಿಗಳಿಗೆ ಹೊಸದೊಂದು ಖುಷಿ ಪಡುವ ಸುದ್ದಿ ಸಿಕ್ಕಿದೆ. ಅರುಣಾಚಲ ಪ್ರದೇಶದ ಸರ್ಕಾರ ಕೆಜಿಎಫ್ 2 ಅಧೀರನಿಗೆ ಹಿಂದೆಂದೂ ಸಿಗದ ಗೌರವ ನೀಡಿದೆ.

ರಾಕಿ ಭಾಯ್ ಹಾಗೂ ಅಧೀರನ ಕಾದಾಟವನ್ನು ತೆರೆಮೇಲೆ ನೋಡುವುದೇ ಕಣ್ಣಿಗೆ ಹಬ್ಬ. ಎರಡು ಪವರ್‌ಫುಲ್ ಪಾತ್ರಗಳು ಮುಖಿ-ಮುಖಿಯಾಗುವ ಸನ್ನಿವೇಶ ಸಿನಿಪ್ರಿಯರಿಗೆ ಥ್ರಿಲ್ ಕೊಡುವುದು ಗ್ಯಾರಂಟಿ. ಬಾಲಿವುಡ್‌ನಲ್ಲಿ ಭಿನ್ನ-ವಿಭಿನ್ನ ಪಾತ್ರಗಳ ಮೂಲಕ ರಂಜಿಸಿರುವ ಸಂಜಯ್ ದತ್ ಇದೇ ಮೊದಲ ಬಾರಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಈ ಬಾಲಿವುಡ್‌ನ ಸ್ಟಾರ್ ನಟನನ್ನು ಅರುಣಾಚಲ ಪ್ರದೇಶ ಸರ್ಕಾರ ರಾಯಭಾರಿಯನ್ನಾಗಿ ನೇಮಿಸಿಕೊಂಡಿದೆ.

ಅಧೀರ ಅರುಣಾಚಲ ಪ್ರದೇಶದ ರಾಯಭಾರಿ

ಅಧೀರ ಅರುಣಾಚಲ ಪ್ರದೇಶದ ರಾಯಭಾರಿ

ಬಾಲಿವುಡ್ ನಟ ಸಂಜಯ್ ದತ್ ಅರುಣಾಚಲ ಪ್ರದೇಶ ಸರ್ಕಾರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಇವ್ರೊಂದಿಗೆ ಖ್ಯಾತ ನಿರ್ದೇಶಕ ರಾಹುಲ್ ಮಿತ್ರಾರನ್ನು ಬ್ರ್ಯಾಂಡ್ ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಅರುಣಾಚಲ ಪ್ರದೇಶವೆಂದು ನಾಮಕರಣಗೊಂಡ 50 ನೇ ವರ್ಷದ ವಾರ್ಷಿಕೋತ್ಸವದ ಸುವರ್ಣ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಈ ವಿಶೇಷ ಗೌರವ ನೀಡಲು ಮುಂದಾಗಿದೆ. ಸಂಜಯ್ ದತ್ ಹಾಗೂ ರಾಹುಲ್ ಮಿತ್ರಾ ಇದೇ ಮುಂಬೈನಿಂದ ಅರುಣಾಚಲ ಪ್ರದೇಶದ ದುರ್ಗಾಪುರಕ್ಕೆ ಬಂದು, ಮೆಚುಕಾದ ಪಿಕ್ಚರ್‌ಸ್ಕ್ಯು ವ್ಯಾಲಿ ತೆರೆಳಿದ್ದಾರೆ.

ಅರುಣಾಚಲ ಪ್ರದೇಶದಿಂದ ಸಂಜಯ್ ದತ್‌ಗೆ ಭವ್ಯ ಸ್ವಾಗತ

ಸರ್ಕಾರ ಬಾಲಿವುಡ್‌ನ ಈ ಇಬ್ಬರು ದಿಗ್ಗಜರಿಗೆ ಅರುಣಾಚಲ ಪ್ರದೇಶಕ್ಕೆ ಭವ್ಯ ಸ್ವಾಗತವನ್ನು ಟ್ವಿಟರ್ ಮೂಲಕ ಕೋರಿದೆ. "ಬಾಲಿವುಡ್‌ನ ಇಬ್ಬರು ದಿಗ್ಗಜರಿಗೆ ಅರುಣಾಚಲ ಪ್ರದೇಶದಿಂದ ಹೃದಯಪೂರ್ವಕ ಸ್ವಾಗತವನ್ನು ಕೋರುತ್ತದೆ. ಅರುಣಾಚಲ ಪ್ರದೇಶದ 50 ವರ್ಷದ ಈ ಸಂಭ್ರಮಾಚರಣೆಯಲ್ಲಿ ಸಂಜಯ್ ದತ್‌ರನ್ನು ರಾಯಭಾರಿಯಾಗಿಯೂ, ರಾಹುಲ್ ಮಿತ್ರಾರನ್ನು ಸಲಹೆಗಾರರಾಗಿಯೂ ಆಯ್ಕೆ ಮಾಡಿದೆ. ಇವರಿಗೆ ನಾವು ನಮ್ಮ ಕೃತಜ್ಞತೆಯನ್ನು ಸಲ್ಲಿಸಿ, ಮುಂದೆ ಇವರೊಂದಿಗೆ ಸಹಯೋಗವನ್ನು ಎದುರು ನೋಡುತ್ತಿದ್ದೇವೆ." ಎಂದು ಬರೆದು ಕೊಂಡಿದೆ. ಜನವರಿ 20ನೇ ತಾರೀಕಿನಿಂದ ಒಂದು ತಿಂಗಳ ಕಾಲ ರಾಜ್ಯ ಸರ್ಕಾರ ಈ ಸಂಭ್ರಮಾಚರಣೆಯನ್ನು ರಾಜ್ಯಾದ್ಯಾಂತ ನಡೆಸಲಿದೆ.

ಕ್ಯಾನ್ಸರ್ ಗೆದ್ದು ಬಂದಿದ ಸಂಜಯ್ ದತ್

ಕ್ಯಾನ್ಸರ್ ಗೆದ್ದು ಬಂದಿದ ಸಂಜಯ್ ದತ್

ಸಂಜಯ್ ದತ್ ಇತ್ತೀಚೆಗೆ ಶ್ವಾಸಕೋಶದ ಕ್ಯಾನ್ಸರ್‌ಗೆ ಒಳಗಾಗಿದ್ದರು. ಸಂಜಯ್‌ ದತ್‌ ಬೇಗ ಗುಣಮುಖರಾಗುತ್ತಾರೋ ಇಲ್ಲವೋ ಎಂಬ ಚಿಂತೆ ಅಭಿಮಾನಿಗಳನ್ನು ಕಾಡುತ್ತಿತ್ತು. ಆದರೆ, ಸಂಜಯ್ ಬಹುಬೇಗನೇ ಕ್ಯಾನ್ಸರ್‌ ಗೆದ್ದು ಬಂದಿದ್ದಾರೆ. ಒಂದಿಷ್ಟು ದಿನ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದ ಸಂಜಯ್ ದತ್ ಈ ಮತ್ತೆ ಸಿನಿಮಾ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೇಗಿದೆ KGF 2 ಸಿನಿಮಾ ಅಧೀರ ಪಾತ್ರ

ಹೇಗಿದೆ KGF 2 ಸಿನಿಮಾ ಅಧೀರ ಪಾತ್ರ

ಸಂಜಯ್ ದತ್ ಹುಟ್ಟುಹಬ್ಬದಂದು ಕೆಜಿಎಫ್ 2 ತಂಡ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿತ್ತು. ಅದೇ ಪೋಸ್ಟರ್ ನೋಡಿದ ಮೇಲಂತೂ ಸಂಜಯ್ ದತ್ ಪಾತ್ರವನ್ನು ತೆರೆಮೇಲೆ ನೋಡುವ ತವಕ ಮತ್ತಷ್ಟು ಹೆಚ್ಚಾಗಿದೆ. ಅಲ್ಲದೆ ನಿರ್ದೇಶಕ ಪ್ರಶಾಂತ್ ನೀಲ್ ಸಂಜಯ್ ದತ್ ಪಾತ್ರ ಕ್ರೂರವಾಗಿರುತ್ತೆ ಅನ್ನುವುದನ್ನು ಸಾರಿ ಹೇಳಿದ್ದರು. ಹೀಗಾಗಿ ಸಂಜಯ್ ದತ್ ಪಾತ್ರ ರಾಕಿಭಾಯ್ ಪಾತ್ರದಷ್ಟೇ ಪವರ್‌ಫುಲ್ ಆಗಿರುತ್ತೆ.

More from Filmibeat

English summary
Bollywood Actor KGF 2 villain Sanjay Dutt who has been appointed as the brand ambassador for the Government of Arunachal Pradesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X