Asha Bhosle: ಕೇವಲ ಗಾಯಕಿ ಅಷ್ಟೇ ಅಲ್ಲ.. 5 ದೇಶಗಳಲ್ಲಿದೆ ಆಶಾಸ್ ರೆಸ್ಟೋರೆಂಟ್; ಏನೇನು ಸಿಗುತ್ತೆ ಗೊತ್ತೇ?

ಭಾರತದ ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ ಇಂದು (ಏಪ್ರಿಲ್ 12) ಇಹಲೋಕ ತ್ಯಜಿಸಿದ್ದಾರೆ. ನಿನ್ನೆ (ಏಪ್ರಿಲ್ 11) ಹೃದಯ ಸ್ತಂಭನದಿಂದಾಗಿ ಆಶಾ ಭೋಸ್ಲೆಯವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ, ಇಂಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ವಿಶ್ವದಾದ್ಯಂತ ಇರುವ ಅವರ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.

ಸುಮಾರು 20ಕ್ಕೂ ಅಧಿಕ ಪ್ರಾದೇಶಿಕ ಭಾಷೆಗಳಲ್ಲಿ ಹಾಡಿರುವ ಆಶಾ ಭೋಸ್ಲೆ ಸಂಗೀತಪ್ರಿಯ ಅಚ್ಚು ಮೆಚ್ಚು. ಹಿಂದಿ, ಮರಾಠಿ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಆಶಾ ಭೋಸ್ಲೆ ಹಾಡಿದ್ದು, ಲೆಕ್ಕವಿಲ್ಲದಷ್ಟು ಹಾಡುಗಳು. ಬಹುತೇಕ ಮಂದಿ ಆಶಾ ಭೋಸ್ಲೇ ಅವರನ್ನು ಕೇವಲ ಗಾಯಕಿಯಾಷ್ಟೇ ನೋಡಿದ್ದಾರೆ. ಆದರೆ, ಅವರೊಬ್ಬ ಯಶಸ್ವಿ ಉದ್ಯಮಿ, ಅಡುಗೆ ಮಾಡುವುದರಲ್ಲಿ ಎಕ್ಸ್‌ಪರ್ಟ್ ಅನ್ನೋದು ಹಲವರಿಗೆ ಗೊತ್ತೇ ಇಲ್ಲ.

Asha Bhosle was owned international award winning Ashas restaurants in 5 Countries

ಆಶಾ ಭೋಸ್ಲೇ ಒಡೆತನ ರೆಸ್ಟೋರೆಂಟ್‌ಗಳು ವಿಶ್ವದ ಆರು ಪ್ರಮುಖ ನಗರಗಳಲ್ಲಿ ಇವೆ. ಅವೆಲ್ಲವೂ ವಿಶ್ವದ ಮಟ್ಟದಲ್ಲಿ ಸದ್ದು ಮಾಡಿವೆ ಅನ್ನೋದು ನಿಮಗೆ ಗೊತ್ತೇ. ಆ ರೆಸ್ಟೋರೆಂಟ್‌ಗಳು ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ಪಡೆದಿವೆ. ಹಾಗಿದ್ದರೆ, ಆಶಾ ಭೋಸ್ಲೆಯ ಆ ರೆಸ್ಟೋರೆಂಟ್‌ ಹೆಸರೇನು? ಯಾವ್ಯಾವ ದೇಶಗಳಲ್ಲಿ ಆ ರೆಸ್ಟೋರೆಂಟ್‌ಗಳು ಇವೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ ಶಿಸ್ತಿ ಅನ್ನು ಮೈಗೂಡಿಸಿಕೊಂಡವರು. ಲೈಫ್‌ನ ಪ್ರತಿಯೊಂದು ಹಂತದಲ್ಲಿಯೂ ಆಶಾ ಭೋಸ್ಲೆ ಕಟ್ಟುನಿಟ್ಟಾಗಿ ಇದ್ದವರು. ಗಾಯಕಿಯಾಗಿ ಸಾಕಷ್ಟು ಪ್ರಯೋಗಗಳನ್ನು ಮಾಡಿದವರು. ಪಾಪ್ ಜೊತೆ ಪ್ಯೂಷನ್ ಅನ್ನು ಸೇರಿಸಿ ಹಾಡುವುದಕ್ಕೆ ಆರಂಭಿಸಿದ್ದರು. ಆಗಿನ್ನೂ ಈ ಪ್ರಕಾರ ಮುನ್ನೆಲೆಗೆ ಬಂದಿರಲೇ ಇಲ್ಲ. ಹೀಗೆ ಬದುಕಿನಲ್ಲಿ ಕೇವಲ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದರು.

Also Read
"ನನ್ನ ಬಳಿ ಕನ್ನಡ ಹಾಡು ಹಾಡಿಸಲಿಲ್ಲ" ಎಂದಿದ್ದ ಆಶಾ ಭೋಸ್ಲೆ; ಲೆಜೆಂಡರಿ ಗಾಯಕಿ ಹಾಡಿದ 3 ಕನ್ನಡ ಗೀತೆಗಳಿವು

ಇಂತಹ ಪ್ರಯೋಗಗಳಲ್ಲಿ ಒಂದು ರೆಸ್ಟೋರೆಂಟ್. ಆಶಾ ಭೋಸ್ಲೆ ಅವರ ಒಡೆತನ ರೆಸ್ಟೋರೆಂಟ್ ಭಾರತದಲ್ಲಿ ಇಲ್ಲ. ಮೊದಲು ದುಬೈನ ವಾಫಿ ಸಿಟಿಯಲ್ಲಿ ಆರಂಭಗೊಂಡಿತ್ತು. 2002ರಲ್ಲಿ ಮೊದಲು ಈ ರೆಸ್ಟೋರೆಂಟ್ ಅನ್ನು ಆಶಾ ಭೋಸ್ಲೆ ಆರಂಭಿಸಿದ್ದರು. ಇದು ಯಶಸ್ವಿಯಾಗಿ ನಡೆಯುತ್ತಿದೆ. ಉತ್ತರ ಹಾಗೂ ಪಶ್ಚಿಮ ಭಾರತದ ಆಹಾರಗಳನ್ನು ಇಲ್ಲಿ ನೀಡಲಾಗುತ್ತದೆ. ಅಂದ್ಹಾಗೆ ಈ ರೆಸ್ಟೋರೆಂಟ್‌ನ ಹೆಸರು 'ಆಶಾಸ್' ರೆಸ್ಟೋರೆಂಟ್.

Asha Bhosle was owned international award winning Ashas restaurants in 5 Countries

ದುಬೈನಲ್ಲಿ ಆರಂಭ ಆಗಿದ್ದ 'ಆಶಾಸ್' ರೆಸ್ಟೋರೆಂಟ್ ಮುಂದೆ ಬೇರೆ ಬೇರೆ ನಗರಗಳಲ್ಲಿ ಶುರುವಾಗಿತ್ತು. ನಂತರ ಅಬುದಾಭಿ, ಖತಾರ್, ಕುವೈತ್, ಬಹರೇನ್‌ನಲ್ಲಿ ಆರಂಭಿಸಿದ್ದರು. ಇದರೊಂದಿಗೆ ಯುಕೆಯ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭಿಸಿದರು. ಈ ಎಲ್ಲಾ ಕಡೆಗಳಲ್ಲಿಯೂ ಆಶಾ ಭೋಸ್ಲೆಯ ಆಶಾಸ್ ರೆಸ್ಟೋರೆಂಟ್ ಸಿಕ್ಕಾಪಟ್ಟೆ ಜನಪ್ರಿಯವಾಗಿದೆ. ಇಲ್ಲಿ ರೆಡಿಯಾಗುವ ಬಟರ್ ಚಿಕನ್, ಕಿಬಾಬ್ ಅತ್ಯುತ್ತಮ ಆಹಾರ ಪ್ರಶಸ್ತಿ ಬಂದಿದೆ.

ದುಬೈನ ಬೆಸ್ಟ್ ಇಂಡಿಯನ್ ರೆಸ್ಟೋರೆಂಟ್‌ಗಳಲ್ಲಿ ಆಶಾಸ್ ಕೂಡ ಒಂದಾಗಿದೆ. ಬಿರಿಯಾನಿ, ಬಟರ್ ಚಿಕನ್, ಕಿಬಾಬ್ ಫೇಮಸ್. ಆಶಾ ಭೋಸ್ಲೆಗೆ ಅಡುಗೆಯಲ್ಲೂ ಆಸಕ್ತಿ ಹೆಚ್ಚು. ಹೀಗಾಗಿ ಅವರೇ ಖುದ್ದಾಗಿ ಕೆಲವು ರೆಸಿಪಿಗಳನ್ನು ತಮ್ಮ ರೆಸ್ಟೋರೆಂಟ್‌ಗಳಲ್ಲಿ ಸಿದ್ಧಪಡಿಸಿದ್ದರು. ಅದನ್ನು ಖುದ್ದಾಗಿ ರೆಸ್ಟೋರೆಂಟ್‌ಗಳಿಗೆ ಹೋಗಿ ಪರೀಕ್ಷೆ ಕೂಡ ಮಾಡಿದ್ದರು. ವಿದೇಶಗಳಲ್ಲಿ ಇದು ದೊಡ್ಡ ಉದ್ಯಮವಾಗಿ ಬೆಳೆದಿದೆ.

More from Filmibeat

English summary
Asha Bhosle was owned international award winning Ashas restaurants in 5 Countries.
Read more about: asha bhosle business
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X