"ನನ್ನ ವಯಸ್ಸು 60 ಅಲ್ಲ.. 57": 2ನೇ ಮದುವೆ ಬಳಿಕ ವಯಸ್ಸಿನ ಅಂತರದ ಬಗ್ಗೆ ಆಶಿಶ್ ವಿದ್ಯಾರ್ಥಿ ಪ್ರತಿಕ್ರಿಯೆ
ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಎರಡನೇ ಮದುವೆ ಆಗಿ ತಮ್ಮ ಅಭಿಮಾನಿಗಳಿಗೆ ಹಾಗೂ ಚಿತ್ರರಂಗಕ್ಕೆ ಅಚ್ಚರಿ ಮೂಡಿಸಿದ್ದರು. ಆತ್ಮೀಯರ ಸಮ್ಮುಖದಲ್ಲಿ ಅಸ್ಸಾಂನ ಗುವಾಹಾಟಿ ಮೂಲದ ಉದ್ಯಮಿಯನ್ನು ವಿವಾಹವಾಗಿದ್ದಾರೆ.
ಮೇ 25ರಂದು ಫ್ಯಾಷನ್ ಉದ್ಯಮಿ ರೂಪಾಲಿ ಬರುವ ಅವರನ್ನು ಕೊಲ್ಕತ್ತಾ ಕ್ಲಬ್‌ನಲ್ಲಿ ವಿವಾಹವಾಗಿದ್ದಾರೆ. ಮದುವೆ ಬಳಿಕ ಆಶಿಶ್ ವಿದ್ಯಾರ್ಥಿ ಹಾಗೂ ರೂಪಾಲಿ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೇ ಆಶಿಶ್ ವಿದ್ಯಾರ್ಥಿ ಹಾಗೂ ಪತ್ನಿ ರೂಪಾಲಿ ವಯಸ್ಸಿನ ಅಂತರದ ಬಗ್ಗೆನೂ ಚರ್ಚೆಯಾಗಿತ್ತು.

ಎರಡನೇ ಮದುವೆ ಬಗ್ಗೆ ಸುದ್ದಿ ಹೊರಬೀಳುತ್ತಿದ್ದಂತೆ ಆಶಿಶ್ ವಿದ್ಯಾರ್ಥಿ ವಯಸ್ಸಿ ಬಗ್ಗೆ ಚರ್ಚೆಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ನಟನ ಪರ ಹಾಗೂ ವಿರೋಧ ನಿಂತಿದ್ದರು. ಈಗ ಮದುವೆ ಬಗ್ಗೆ ಸ್ವತ: ಆಶಿಶ್ ವಿದ್ಯಾರ್ಥಿ ಈ ಮದುವೆ ಆಗಿದ್ದು ಯಾಕೆ? ಇಬ್ಬರ ನಡುವಿನ ವಯಸ್ಸಿನ ಅಂತರವೆಷ್ಟು? ಮೊದಲ ಪತ್ನಿಯಿಂದ ದೂರ ಆಗಿದ್ದೇಕೆ? ಅನ್ನೋದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
"ನಮ್ಮೆಲ್ಲರ ಬದುಕು ವಿಭಿನ್ನ"
ಆಶಿಶ್ ವಿದ್ಯಾರ್ಥಿ ಯೂಟ್ಯೂಬ್ ಚಾನೆಲ್ ಒಂದನ್ನು ನಡೆಸುತ್ತಿದ್ದಾರೆ. ಇದೇ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಎರಡನೇ ಮದುವೆ ಬಗ್ಗೆ ಮನಸ್ಸು ಬಿಟ್ಟು ಮಾತಾಡಿದ್ದಾರೆ. ನಮ್ಮೆಲ್ಲರ ಬದುಕು ವಿಭಿನ್ನ. ನಾವೆಲ್ಲರೂ ಖುಷಿಯಾಗಿ ಇರಬೇಕು ಅಂತ ಬಯಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

"ಪ್ರತಿಯೊಬ್ಬರ ಬದುಕು ಕೂಡ ವಿಭಿನ್ನ. ಪ್ರತಿಯೊಬ್ಬರಿಗೂ ವಿಭಿನ್ನ ಅವಕಾಶಗಳಿವೆ, ವಿಭಿನ್ನ ಸವಾಲುಗಳಿವೆ, ವಿಭಿನ್ನ ಹಿನ್ನೆಲೆಯಿದೆ. ಹಾಗೇ ವಿಭಿನ್ನ ಶಿಕ್ಷಣವಿದೆ. ನಾವು ಯೋಚನೆ ಮಾಡುವಂತೆ, ವಿಭಿನ್ನ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಾವೆಲ್ಲರೂ ವಿಭಿನ್ನ ಸಮಾಜ, ದೇಶ, ಧರ್ಮ ಹಾಗೂ ನಂಬಿಕೆಯನ್ನು ಹೊಂದಿದ್ದೇವೆ. ಆದರೆ, ಒಂದು ವಿಷಯ ಕಾಮನ್ ಅಂದರೆ, ನಾವೆಲ್ಲರೂ ಖುಷಿಯಾಗಿ ಇರಬೇಕು" ಅಂತ ಬಯಸುತ್ತೇವೆ ಎಂದಿದ್ದಾರೆ.
ಹೊಸ ಪತ್ನಿ ಬಗ್ಗೆ ಅಶಿಶ್ ಹೇಳಿದ್ದೇನು?
ಮೊದಲನೇ ಮದುವೆ ಹಾಗೂ ಮೊದಲ ಪತ್ನಿ ಬಗ್ಗೆನೂ ಆಶಿಶ್ ವಿದ್ಯಾರ್ಥಿ ಮಾತಾಡಿದ್ದಾರೆ. "ಕೆಲವು ವರ್ಷಗಳ ಹಿಂದೆ ಪಿಲೊ ಹಾಗೂ ನಾನು ತುಂಬಾ ಸುಂದರವಾದ ಇನ್ನಿಂಗ್ಸ್ ಕಟ್ಟಿದ್ದೆವು. ಅದಾದ ಬಳಿಕ ನಾವಿಬ್ಬರೂ ಭವಿಷ್ಯವನ್ನು ನೋಡುತ್ತಿರುವ ರೀತಿ ವಿಭಿನ್ನವಾಗಿದೆ ಅಂತ ಅನಿಸುತ್ತು." ಎಂದು ಮೊದಲ ಪತ್ನಿಯೊಂದಿಗಿನ ಸಂಬಂಧದ ಬಗ್ಗೆ ಮಾತಾಡಿದ್ದಾರೆ.
ಹಾಗೆಯೇ "ನಾವು ಸರಿಪಡಿಸಲು ತುಂಬಾನೇ ಪ್ರಯತ್ನ ಪಟ್ಟೆವು. ನಮ್ಮಿಬ್ಬರಲ್ಲಿರುವ ಭಿನ್ನಾಬಿಪ್ರಾಯವನ್ನು ಶಮನ ಮಾಡಲು ಮಾರ್ಗವನ್ನು ಕಂಡುಕೊಂಡೆವು. ಆದರೆ, ಇದು ನಮ್ಮ ಸಂತೋಷವನ್ನು ಕಿತ್ತುಕೊಳ್ಳುತ್ತಿತ್ತು" ಎಂದು ಆಶಿಶ್ ವಿದ್ಯಾರ್ಥಿ ಹೇಳಿದ್ದಾರೆ.
ನನ್ನ ವಯಸ್ಸು 60 ಅಲ್ಲ.. 57!
ಆಶಿಶ್ ವಿದ್ಯಾರ್ಥಿ 2ನೇ ಮದುವೆ ಆಗುತ್ತಿದ್ದಂತೆ ವಯಸ್ಸು ಹಾಗೂ ವಯಸ್ಸಿನ ಅಂತರದ ಬಗ್ಗೆ ಮಾತಾಡಿದ್ದರು. "ನನಗೆ ಮದುವೆ ಆಗಬೇಕು ಅನ್ನೋ ಅಚಲವಾದ ನಂಬಿಕೆ ಇತ್ತು. ನಾನು ಒಬ್ಬರೊಟ್ಟಿಗೆ ಪ್ರಯಾಣ ಮಾಡಲು ಬಯಸಿದ್ದೆ. ನನಗೆ 55 ವರ್ಷವಿದ್ದಾಗ ನಾನು ರುಪಾಲಿಯನ್ನು ಭೇಟಿ ಮಾಡಿದ್ದೆ. ಒಂದು ವರ್ಷದ ಹಿಂದಷ್ಟೇ ಗಂಡ ಹಾಗೂ ಹೆಂಡ್ತಿಯಾಗಿ ಜೀವನ ನಡೆಸೋಣ ಅಂತ ಅನಿಸಿತ್ತು." ಎಂದು ಅಶಿಶ್ ವಿದ್ಯಾರ್ಥಿ ಹೇಳಿದ್ದಾರೆ.
ವಿಡಿಯೋದಲ್ಲಿ ತನ್ನ ಮಾತು ಮುಗಿಸುವ ಮುನ್ನ ಅಶಿಶ್ ವಿದ್ಯಾರ್ಥಿ ವಯಸ್ಸಿನ ಅಂತರದ ಬಗ್ಗೆ ಮಾತಾಡಿದ್ದಾರೆ. " ನನ್ನ ವಯಸ್ಸು 60 ಅಲ್ಲ.. 57. ಹಾಗೇ ರುಪಾಲಿ ವಯಸ್ಸು 50 ವರ್ಷ" ಎಂದು ಅಶಿಶ್ ವಿದ್ಯಾರ್ಥಿ ವಿಡಿಯೋ ಸ್ಪಷ್ಟನೆ ನೀಡಿದ್ದಾರೆ.


Click it and Unblock the Notifications











