ಏರ್‌ಪೋರ್ಟ್‌ನಲ್ಲಿ ಛೋಟಾ ಅಭಿಮಾನಿಯನ್ನು ಅಪ್ಪಿಕೊಂಡ ಸಲ್ಮಾನ್ ಖಾನ್: ವಿಡಿಯೋ ವೈರಲ್!
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್‌ಗೂ ಅವರ ಅಭಿಮಾನಿಗಳಿಗೂ ಒಂದು ಅವಿನಾಭಾವ ಸಂಬಂಧವಿದೆ. ಅವರ ಅಭಿಮಾನಿಗಳು ಎಲ್ಲೇ ಕಂಡರೂ ಅವರೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುತ್ತಾರೆ. ಅದರಲ್ಲೂ ಮಕ್ಕಳನ್ನು ಕಂಡರಂತೂ ಬಲು ಪ್ರೀತಿ.
ತಮ್ಮ ಛೋಟಾ ಅಭಿಮಾನಿಗಳನ್ನು ಸಲ್ಮಾನ್ ಖಾನ್ ತುಂಬಾನೇ ಇಷ್ಟ ಪಡುತ್ತಾರೆ. ನಿನ್ನೆ(ಮೇ 26) ಇಂತಹದ್ದೇ ಒಂದು ದೃಶ್ಯ ಮುಂಬೈ ಏರ್‌ಪೋರ್ಟ್‌ನಲ್ಲಿ ಕಂಡು ಬಂದಿದೆ. ಸಲ್ಮಾನ್ ಖಾನ್ ತಮ್ಮ ಛೋಟಾ ಅಭಿಮಾನಿಯನ್ನು ಅಪ್ಪಿಕೊಂಡ ಘಟನೆ ಮುಂಬೈ ಏರ್‌ಪೋರ್ಟ್‌ನಲ್ಲಿ ನಡೆದಿದೆ.

ಸಲ್ಮಾನ್ ಖಾನ್ ಏರ್‌ಪೋರ್ಟ್‌ಗೆ ಎಂಟ್ರಿ ಕೊಡುತ್ತಿದ್ದಂತೆ ಅವರ ಪುಟ್ಟ ಅಭಿಮಾನಿಗಳು ನೋಡಲು ಓಡೋಡಿ ಬರುತ್ತಿದ್ದ. ಇದನ್ನು ನೋಡಿದ ಸಲ್ಮಾನ್ ಖಾನ್ ತಕ್ಷಣವೇ ನಿಂತು. ತಮ್ಮ ಅಭಿಮಾನಿಗೆ ಒಂದು ಅಪ್ಪುಗೆ ಕೊಟ್ಟು ಮುಂದೆ ಸಾಗಿದರು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಬು ಧಾಬಿಗೆ ಹೊರಟಿದ್ದ ಸಲ್ಮಾನ್ ಖಾನ್
ಮೂಲಗಳ ಪ್ರಕಾರ, ಸಲ್ಮಾನ್ ಖಾನ್ ಅಬು ಧಾಬಿಗೆ ಹೊರಟಿದ್ದರು. ಅಲ್ಲಿ ನಡೆಯುತ್ತಿರುವ ಐಫಾ ಈವೆಂಟ್‌ನಲ್ಲಿ ಸಲ್ಮಾನ್ ಖಾನ್ ಭಾಗಿಯಾಗುತ್ತಿದ್ದಾರೆ. ಐಫಾ ಅಬು ಧಾಬಿಯ ಯಾಸ್ ಐಲ್ಯಾಂಡ್‌ನಲ್ಲಿ ಆಯೋಜನೆ ಮಾಡಲಾಗಿದೆ.
ಕಪ್ಪು ಶರ್ಟ್, ಡಾರ್ಟ್ ಪ್ಲ್ಯಾಂಟ್ ಹಾಗೂ ಲೆದರ್ ಜಾಕೆಟ್ ತೊಟ್ಟು ಸಲ್ಮಾನ್ ಖಾನ್ ಏರ್‌ಪೋರ್ಟ್‌ಗೆ ಬಂದಿದ್ದರು. ಇದೇ ವೇಳೆ ಸಲ್ಮಾನ್ ಹೊಸ ಲುಕ್ ಕೂಡ ವೈರಲ್ ಆಗಿದ್ದು, ಈ ಬಗ್ಗೆನೂ ಚರ್ಚೆಯಾಗುತ್ತಿದೆ.
ವಿಡಿಯೋಗೆ ಪ್ರತಿಕ್ರಿಯೆ
ಸಲ್ಮಾನ್ ಖಾನ್ ತನ್ನ ಪುಟ್ಟ ಅಭಿಮಾನಿಯನ್ನು ಏರ್‌ಪೋರ್ಟ್‌ನಲ್ಲಿ ಅಪ್ಪಿಕೊಂಡ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿಸ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಬಳಿಕ ನೆಟ್ಟಿಗರು ಕಮೆಂಟ್ ಮಾಡಲು ಆರಂಭಿಸಿದ್ದಾರೆ. ಒಬ್ಬರು " ಅತಿ ಹೆಚ್ಚು ತಪ್ಪಾಗಿ ಅರ್ಥೈಸಿಕೊಂಡ ನಟ. ನಿಜಕ್ಕೂ ಇವರು ಸಂಭಾವಿತ ವ್ಯಕ್ತಿ" ಎಂದು ಹೇಳಿದ್ದಾರೆ.
ಮತ್ತೊಬ್ಬರು " ಒಳ್ಳೆಯ ವ್ಯಕ್ತಿ.. ನಿಜವಾದ ಮನುಷ್ಯ.. ಗೌರವ ನೀಡುತ್ತೇನೆ" ಎಂದಿದ್ದಾರೆ. ಹಾಗೇ ಇನ್ನೊಬ್ಬರು " ಸಲ್ಮಾನ್ ಖಾನ್ ಅದ್ಭುತ. ಅವರ ಸ್ಟೈಲ್, ಹೃದಯ ತುಂಬಾ ಚೆನ್ನಾಗಿದೆ. ದೇವರು ಇವರನ್ನು ಚೆನ್ನಾಗಿ ಇಟ್ಟಿರಲಿ. ಇನ್ನೂ ಎತ್ತರಕ್ಕೆ ಬೆಳೆಯಲಿ" ಎಂದು ಕಮೆಂಟ್ ಮಾಡಿದ್ದಾರೆ.
ಸಲ್ಮಾನ್ ಖಾನ್ ಸಿನಿಮಾಗಳು
ಇತ್ತೀಚೆಗೆ ಸಲ್ಮಾನ್ ಖಾನ್ ಅಭಿನಯದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡದೇ ಹೋದರೂ, 175 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈಗ 'ಟೈಗರ್ 3' ಮೇಲೆ ಗಮನ ಹರಿಸಿದ್ದಾರೆ. ಈ ಸಿನಿಮಾದಲ್ಲಿ ಕತ್ರಿನಾ ಕೈಫ್, ಇಮ್ರಾನ್ ಹಾಶ್ಮಿ ಕೂಡ ನಟಿಸಿದ್ದಾರೆ.
'ಟೈಗರ್ 3' ಸಿನಿಮಾದಲ್ಲಿ ಶಾರುಖ್ ಖಾನ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ 'ಕಿಕ್ 2' ಕೂಡ ಶೀಘ್ರದಲ್ಲಿಯೇ ಆರಂಭ ಆಗಲಿದ್ದು, ಬಿಗ್ ಬಾಸ್ ಓಟಿಟಿಗೂ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ 2024ವರೆಗೂ ಸಲ್ಮಾನ್ ಖಾನ್ ಫುಲ್ ಬ್ಯುಸಿ.


Click it and Unblock the Notifications











