twitter
    For Quick Alerts
    ALLOW NOTIFICATIONS  
    For Daily Alerts

    'ಆದಿಪುರುಷ್ ಸಿನಿಮಾವನ್ನು ಕೂಡಲೇ ಬ್ಯಾನ್ ಮಾಡಿ': ಅಯೋಧ್ಯೆ ಪ್ರಧಾನ ಅರ್ಚಕರ ಆಗ್ರಹ!

    |

    ಪ್ರಭಾಸ್ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಆದಿಪುರುಷ್' ಟೀಸರ್ ರಿಲೀಸ್ ಆದಲ್ಲಿಂದ ಸುದ್ದಿಯಲ್ಲಿದೆ. ಸಿನಿಮಾ ಟೀಸರ್ ನೋಡಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಕಳೆಪೆ ವಿಎಫ್‌ಎಕ್ಸ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.

    'ಆದಿಪುರುಷ್' ಸಿನಿಮಾದ ಟೀಸರ್ ಕಂಡು ಜನರು ಕಿಡಿಕಾರುತ್ತಿದ್ದಾರೆ. ಐತಿಹಾಸಿಕ ಪಾತ್ರಗಳನ್ನು ತಿರುಚಿರುವ ಆರೋಪವನ್ನು 'ಆದಿಪುರುಷ್' ಎದುರಿಸುತ್ತಿದೆ. ಟೀಸರ್ ರಿಲೀಸ್ ಆದಲ್ಲಿಂದ ಸಿನಿಮಾಗೆ ಹಿನ್ನೆಡೆಯಾಗುತ್ತಿದೆ.

    'ಆದಿಪುರುಷ್' ಗ್ರಾಫಿಕ್ಸ್ ಬಗ್ಗೆ ರೊಚ್ಚಿಗೆದ್ದ ಫ್ಯಾನ್ಸ್: ಬಹಿರಂಗ ಪತ್ರ ಬರೆದ ಗ್ರಾಫಿಕ್ಸ್ ಕಂಪನಿ!'ಆದಿಪುರುಷ್' ಗ್ರಾಫಿಕ್ಸ್ ಬಗ್ಗೆ ರೊಚ್ಚಿಗೆದ್ದ ಫ್ಯಾನ್ಸ್: ಬಹಿರಂಗ ಪತ್ರ ಬರೆದ ಗ್ರಾಫಿಕ್ಸ್ ಕಂಪನಿ!

    ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಒಂದೆಡೆಯಾದರೆ, ಇನ್ನೊಂದು ಕಡೆ ಸಿನಿಮಾ ಬ್ಯಾನ್ ಮಾಡುವಂತೆ ಒತ್ತಡಗಳು ಕೇಳಿ ಬರುತ್ತಿವೆ. ಆಯೋಧ್ಯೆ ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕರು 'ಆದಿಪುರುಷ್' ಸಿನಿಮಾವನ್ನು ಬ್ಯಾನ್ ಮಾಡುವಂತೆ ಆಗ್ರಹ ಮಾಡಿದ್ದಾರೆ.

    'ಆದಿಪುರುಷ್' ಸಿನಿಮಾ ಬ್ಯಾನ್ ಮಾಡಲು ಒತ್ತಾಯ!

    'ಆದಿಪುರುಷ್' ಸಿನಿಮಾ ಬ್ಯಾನ್ ಮಾಡಲು ಒತ್ತಾಯ!

    'ಆದಿಪುರುಷ್' ವಿರುದ್ಧ ಆಯೋಧ್ಯೆ ಶ್ರೀರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಕಿಡಿಕಾರಿದ್ದಾರೆ. "ಈ ಸಿನಿಮಾದಲ್ಲಿ ರಾಮಾಯಣವನ್ನೇ ತಿರುಚಲಾಗಿದೆ. ಶ್ರೀರಾಮ, ಹನುಮಾನ್ ಹಾಗೂ ರಾವಣ ಪಾತ್ರಗಳನ್ನು ತಪ್ಪಾಗಿ ತೋರಿಸಲಾಗಿದೆ. ಸಿನಿಮಾದಲ್ಲಿ ತೋರಿಸಲಾಗಿರುವ ಈ ಮೂರು ಪಾತ್ರಗಳನ್ನು ಹೀಗೇ ಇವೆ ಅನ್ನೋದು ಮಹಾಗ್ರಂಥ ಕನ್ಫರ್ಮ್ ಮಾಡಿಲ್ಲ. ಈ ಕಾರಣಕ್ಕೆ 'ಆದಿಪುರುಷ್' ಸಿನಿಮಾವನ್ನು ಕೂಡಲೇ ಬ್ಯಾನ್ ಮಾಡಬೇಕು. ಸಿನಿಮಾ ನಿರ್ಮಾಣ ಮಾಡೋದು ಕ್ರೈಂ ಅಲ್ಲ. ಆದರೆ, ಲೈಮ್‌ಲೈಟ್‌ಗೆ ಬರೋಕೆ ವಿವಾದ ಮಾಡಿಕೊಳ್ಳಬಾರದು" ಎಂದು ಹೇಳಿದ್ದಾರೆ.

    ವಿಹೆಚ್‌ಪಿ ಇಂದಲೂ ಆಕ್ರೋಶ

    ವಿಹೆಚ್‌ಪಿ ಇಂದಲೂ ಆಕ್ರೋಶ

    ಅಯೋಧ್ಯೆಯ ಪ್ರಧಾನ ಅರ್ಚಕರಷ್ಟೇ ಅಲ್ಲ. ವಿಶ್ವ ಹಿಂದೂ ಪರಿಷತ್ ಕೂಡ ವಿರೋಧ ವ್ಯಕ್ತಪಡಿಸಿದೆ. 'ಆದಿಪುರುಷ್' ಟೀಸರ್‌ನಲ್ಲಿ ಶ್ರೀರಾಮ, ಲಕ್ಷ್ಮಣ ಹಾಗೂ ರಾವಣ ಪಾತ್ರಗಳನ್ನು ಬಿಂಬಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. " ಹಿಂದೂ ಸಮಾಜವನ್ನು ಲೇವಡಿ ಮಾಡಲಾಗಿದೆ" ಎಂದು ಆರೋಪಿಸಲಾಗಿದೆ. ಇಷ್ಟೇ ಅಲ್ಲದೆ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ಕೂಡ ನೀಡಿದೆ.

    'ಆದಿಪುರುಷ್' ಟೀಸರ್‌ನಿಂದ ವಿರೋಧ

    'ಆದಿಪುರುಷ್' ಟೀಸರ್‌ನಿಂದ ವಿರೋಧ

    'ಆದಿಪುರುಷ್' ಟೀಸರ್‌ಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ 'ಆದಿಪುರುಷ್' ಟೀಸರ್‌ ವಿರುದ್ಧ ಕಿಡಿಕಾರಿದ್ದಾರೆ. 'ಆದಿಪುರುಷ್' ತಂಡ ಹಿಂದೂ ದೇವತೆಗಳಿಗೆ ಅಗೌರವ ತಂದಿದೆ ಎಂದಿದ್ದಾರೆ. ಇತ್ತ ಮಾಳವಿಕಾ ಅವಿನಾಶ್ ಕೂಡ ಸಿನಿಮಾ ಬಗ್ಗೆ ಟೀಕಿಸಿದ್ದಾರೆ. ಸಿನಿಮಾದ ನಿರ್ದೇಶಕರು ರಾವಣನ ಪಾತ್ರದ ಬಗ್ಗೆ ಯಾವುದೇ ರೀತಿಯ ಸಂಶೋಧನೆ ಮಾಡಿಲ್ಲ ಎಂದು ಆರೋಪಿಸಿದ್ದರು.

    'ಆದಿಪುರುಷ್' ವಿರುದ್ಧ ಕಿಡಿ

    'ಆದಿಪುರುಷ್' ವಿರುದ್ಧ ಕಿಡಿ

    'ಆದಿಪುರುಷ್' ಸಿನಿಮಾ ಪ್ರಭಾಸ್‌ ವೃತ್ತಿ ಬದುಕಿನ ವಿಶಿಷ್ಟ ಸಿನಿಮಾ. ಶ್ರೀರಾಮನಾಗಿ ಪ್ರಭಾಸ್ ಕಾಣಿಸಿಕೊಳ್ಳುತ್ತಾರೆ ಅನ್ನುವಾಗಲೇ ಸಿನಿಪ್ರಿಯರು ಅಲರ್ಟ್ ಆಗಿದ್ದರು. ಈ ಸಿನಿಮಾ ನೋಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಆದರೆ, ಟೀಸರ್ ರಿಲೀಸ್ ಆದ ಬಳಿಕ 'ಆದಿಪುರುಷ್' ಬಗ್ಗೆ ನೆಟ್ಟಿಗರು ಹೇವಿ ಟ್ರೋಲ್ ಮಾಡಿದ್ದರು. ಇದರಿಂದ ಚಿತ್ರತಂಡಕ್ಕೆ ಸಿಕ್ಕಾಪಟ್ಟೆ ಹಿನ್ನೆಡೆಯಾಗಿದೆ.

    English summary
    Ayodhya Ram Mandir Head Priest Wants To Ban Prabhas Adipurush Movie, Know More.
    Thursday, October 6, 2022, 12:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X