ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ, 23 ಮಂದಿ ತಾರೆಯರಿಗೆ ಆಹ್ವಾನ; ಗೆಸ್ಟ್ ಲಿಸ್ಟ್‌ನಲ್ಲಿ ಇರೋದ್ಯಾರು?
ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಸಿದ್ಧತೆಗಳು ಅದ್ಧೂರಿಯಾಗಿ ಸಾಗಿದೆ. ಜನವರಿ 22ರಂದು ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಏಳು ದಿನಗಳ ಮುಂಚೆಯಿಂದಲೇ ವಿಧಿ ವಿಧಾನಗಳು ಜೋರಾಗಿಯೇ ನಡೆಯುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಗಣ್ಯರಿಗೆ ಆಹ್ವಾನವನ್ನು ನೀಡಲಾಗಿದೆ. ಉದ್ಯಮಿಗಳು, ಸಿನಿಮಾ ತಾರೆಯರು, ಕ್ರೀಡಾಪಟುಗಳು, ರಾಜಕೀಯ ಮುಖಂಡರು, ಆಧ್ಯಾತ್ಮಿಕ ಗುರುಗಳಿಗೆ ಆಮಂತ್ರಣ ನೀಡಲಾಗಿದೆ. ಅದ್ಧೂರಿಯಾಗಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ನಡೆಸಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮುಂದಾಗಿದೆ.

ಜನವರಿ 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಇವರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧಾನ್ಕರ್, ಯೋಗಿ ಆದಿತ್ಯನಾಥ್, ಮುಖೇಶ್ ಅಂಬಾನಿ, ರತನ್ ಟಾಟಾ, ಗೌತಮ್ ಅದಾನಿ, ಸಚಿನ್ ತೆಂಡೂಲ್ಕರ್, ಅಮಿತಾಭ್ ಬಚ್ಚನ್ ಸೇರಿದಂತೆ ಚಿತ್ರರಂಗ ಗಣ್ಯರು ಭಾಗವಹಿಸಲಿದ್ದಾರೆ.
ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಉದ್ಯಮಿ, ರಾಜಕೀಯ ಮುಖಂಡರ ಜೊತೆಗೆ ಸಿನಿಮಾ ತಾರೆಯರಿಗೆ ಹೆಚ್ಚಾಗಿ ಆಹ್ವಾನ ನೀಡಲಾಗಿದೆ. ಈಗಾಗಲೇ ಸುಮಾರು 23 ಮಂದಿಗೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಇದರಲ್ಲಿ ಕನ್ನಡ ಇಬ್ಬರು ನಟರು ರಿಷಬ್ ಶೆಟ್ಟಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಕೂಡ ಸೇರಿಕೊಂಡಿದ್ದಾರೆ.
ಆಯೋಧ್ಯೆ ರಾಮ ಮಂದಿರದ ಗೆಸ್ಟ್ ಪಟ್ಟಿ ಹೀಗಿದೆ( ಸಿನಿಮಾ)
ಅಮಿತಾಭ್ ಬಚ್ಚನ್
ರಜನಿಕಾಂತ್
ಮೋಹನ್ ಲಾಲ್
ಚಿರಂಜೀವಿ
ರಿಷಬ್ ಶೆಟ್ಟಿ
ಯಶ್
ಪ್ರಭಾಸ್
ಅನುಪಮ್ ಖೇರ್
ಮಾಧುರಿ ದೀಕ್ಷಿತ್
ಅಜಯ್ ದೇವಗನ್
ಜಾಕಿ ಶ್ರಾಫ್
ಸನ್ನಿ ಡಿಯೋಲ್
ಸಂಜಯ್ ಲೀಲಾ ಬನ್ಸಾಲಿ
ಅಕ್ಷಯ್ ಕುಮಾರ್
ಧನುಷ್
ರಣ್‌ದೀಪ್ ಹೂಡ
ರಣ್‌ಬೀರ್ ಕಪೂರ್
ಅನುಷ್ಕಾ ಶರ್ಮಾ
ಕಂಗನಾ ರಣಾವತ್
ಮಧುರ್ ಬಂಡಾರ್ಕರ್
ಟೈಗರ್ ಶ್ರಾಫ್
ಆಯುಷ್ಮಾನ್ ಖುರಾನ
ಆಲಿಯಾ ಭಟ್

ಇನ್ನು ಶ್ರೀರಾಮ ಪ್ರತಿಷ್ಠಾಪನೆಯ ದಿನದಂದು ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಹೀಗಾಗಿ ದೇಶದ ವಿವಿಧ ಭಾಗಗಳಿಂದ ಸಂಗೀತಕಾರರು ಭಾಗವಹಿಸಲಿದ್ದಾರೆ. ಹಾಗೇ ಶ್ರೀರಾಮ ಜರ್ನಿಯನ್ನು ಹೇಳುವ ವಿವಿಧ ಕಾರ್ಯಕ್ರಮಗಳು ಇರುತ್ತೆ ಎನ್ನಲಾಗಿದೆ. ಇವುಗಳಲ್ಲೂ ಸಿನಿಮಾ ತಾರೆಯರು ಭಾಗವಹಿಸುವ ಸಾಧ್ಯತೆಗಳು ಇವೆ.
ಸಿನಿಮಾ ತಾರೆಯರ ಜೊತೆಗೇನೆ ಕ್ರೀಡಾ ಪಟುಗಳಿಗೆ ಹಾಗೂ ರಾಜಕೀಯ ಮುಖಂಡರಿಗೂ ಆಹ್ವಾನ ನೀಡಲಾಗಿದೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಎಂ ಎಸ್ ಧೋನಿ, ದೀಪಿಕಾ ಕುಮಾರಿಗೆ ಗೆಸ್ಟ್ ಪಟ್ಟಿಯಲ್ಲಿದ್ದಾರೆ. ಹಾಗೇ ಉದ್ಯಮಿಗಳ ಪಟ್ಟಿಯಲ್ಲಿ ರತನ್ ಟಾಟಾ, ಗೌತಮ್ ಅದಾನಿ, ಮುಕೇಶ್ ಅಂಬಾನಿ, ಕುಮಾರ ಮಂಗಲಂ ಬಿರ್ಲಾ, ಎನ್ ಚಂದ್ರಶೇಖರನ್, ಅನಿಲ್ ಅಗರ್ವಾಲ್, ಎನ್‌ಆರ್ ನಾರಾಯಣಮೂರ್ತಿಗೆ ಆಹ್ವಾನ ನೀಡಲಾಗಿದೆ.


Click it and Unblock the Notifications










