ಶಾರುಖ್-ಸಲ್ಮಾನ್ ಒಂದು ಮಾಡಿದ್ದ ರಾಜಕೀಯ ಮುಖಂಡನ ಹತ್ಯೆ; ಯಾರಿದು ಬಾಬಾ ಸಿದ್ಧಿಕಿ?
ಮಹಾರಾಷ್ಟ್ರದಲ್ಲಿ ಅಜಿತ್ ಪವರ್ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ರಾಜಕೀಯ ಮುಖಂಡ ಬಾಬಾ ಸಿದ್ಧಿಕಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮುಂಬೈನ ಬಾಂದ್ರಾದಲ್ಲಿರುವ ಪುತ್ರ ಜೀಶನ್ ಅವರ ಆಫೀಸ್‌ನಿಂದ ಹೊರ ಬರುವ ವೇಳೆ ಮೂವರು ದುಷ್ಕರ್ಮಿಗಳು ಏಕಾಏಕಿ ಗುಂಡು ಹಾರಿಸಿದ್ದರು. ಕೂಡಲೇ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಮೂರು ಕಡೆ ಗುಂಡು ಹಾರಿ ಬಾಬಾ ಸಿದ್ಧಿಕಿ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಅವರನ್ನು ಬದುಕಿಕೊಳ್ಳುವುದಕ್ಕೆ ಆಗಲಿಲ್ಲ. ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ರಾಜಕೀಯ ಮುಖಂಡ ಬಾಬಾ ಸಿದ್ಧಿಗೆ 66 ವರ್ಷ ವಯಸ್ಸಾಗಿತ್ತು. ಬಾಬಾ ಸಿದ್ಧಿಕಿ ಹತ್ಯೆಯನ್ನು ರಾಜಕೀಯ ಮುಖಂಡರು ಹಾಗೂ ಬಾಲಿವುಡ್ ಸಿನಿಮಾ ಮಂದಿ ಕಂಡಿಸಿದ್ದಾರೆ.

ಬಾಬಾ ಸಿದ್ಧಿಕಿ ರಾಜಕೀಯದಲ್ಲಿ ಹೇಗೆ ಗುರುತಿಸಿಕೊಂಡಿದ್ದರೋ ಹಾಗೇ ಸಿನಿಮಾರಂಗದಲ್ಲೂ ಅಷ್ಟೇ ಜನಪ್ರಿಯರಾಗಿದ್ದರು. ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಶಾರುಖ್ ಖಾನ್, ಸಲ್ಮಾನ್ ಖಾನ್, ಸಂಜಯ್ ದತ್ ಅಂತ ಸ್ಟಾರ್ ನಟರಿಗೆ ಬಾಬಾ ಸಿದ್ಧಿಕಿ ಫೇವರಿಟ್ ಆಗಿದ್ದರು. ಅದರಲ್ಲೂ ಈದ್ ಸಮಯದಲ್ಲಿ ಇವರು ನೀಡುತ್ತಿದ್ದ ಇಫ್ತಾರ್ ಕೂಟದಿಂದ ಸಿಕ್ಕಾಪಟ್ಟೆ ಜನಪ್ರಿಯತೆ ಜನಪ್ರಿಯತೆ ಗಳಿಸಿದ್ದರು.
ರಾಜಕೀಯ ವಲಯದಲ್ಲಿ ಬಾಬಾ ಸಿದ್ಧಿಕಿ ರಾಜಕೀಯ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಅದೇ ಬಾಲಿವುಡ್ ಮಂದಿಗೆ ಬಾಬಾ ಸಿದ್ಧಿಕಿ ಮಧ್ಯವರ್ತಿ. ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳ ಮಧ್ಯೆ ಏನೇ ಸಮಸ್ಯೆಗಳಾದರೂ ಅದನ್ನು ನಯವಾಗಿ ಬಗೆ ಹರಿಸುತ್ತಿದ್ದಿದ್ದು ಇದೇ ಬಾಬಾ ಸಿದ್ಧಿಕಿ. ಇದಕ್ಕೊಂದು ಉದಾಹರಣೆ ಅಂದರೆ, ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಕೋಲ್ಡ್ ವಾರ್ ಪ್ರತ್ಯಕ್ಷ ಉದಾಹರಣೆ.
ಹತ್ತು ವರ್ಷಗಳ ಹಿಂದೆ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇಬ್ಬರ ಸಂಬಂಧ ಚೆನ್ನಾಗಿರಲಿಲ್ಲ. ಒಂದು ಕಾಲದಲ್ಲಿ ಅತ್ಯುತ್ತಮ ಗೆಳೆಯರಾಗಿದ್ದ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇಬ್ಬರೂ ನಟಿಯೊಬ್ಬರ ವಿಚಾರಕ್ಕೆ ಬೇರೆಯಾಗಿದ್ದರು. ಇಬ್ಬರ ನಡುವಿನ ಕಿತ್ತಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಬಾಲಿವುಡ್‌ನಲ್ಲಿ ಶಾರುಖ್ ಹಾಗೂ ಸಲ್ಮಾನ್ ಖಾನ್ ಎರಡು ಬಣಗಳಾಗಿ ಹೋಗಿತ್ತು. ಇದು ಬಾಲಿವುಡ್ ಮಂದಿಗೆ ದೊಡ್ಡ ತಲೆ ನೋವಾಗಿತ್ತು.
ಆ ವೇಳೆ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಇಬ್ಬರಿಗೂ ಆತ್ಮೀಯರಾಗಿದ್ದ ಬಾಬಾ ಸಿದ್ಧಿಕಿ ಬಳಿ ಬಾಲಿವುಡ್ ಮಂದಿ ದೂರು ನೀಡಿದ್ದರು. ಆಗ ಈ ಇಬ್ಬರು ಸೂಪರ್‌ಸ್ಟಾರ್‌ಗಳನ್ನು ಒಂದು ಮಾಡಿದ್ದು ಮತ್ಯಾರೂ ಅಲ್ಲ ಇದೇ ಬಾಬಾ ಸಿದ್ಧಿಕಿ. ಅದೂ ತಾನು ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಕರೆಸಿ ಇಬ್ಬರನ್ನೂ ಒಂದು ಮಾಡಿದ್ದರು. ಅದು ಇಂದಿಗೂ ಬಾಲಿವುಡ್‌ನಲ್ಲಿ ಅಚ್ಚರಿ ಮೂಡಿಸಿದ ಕ್ಷಣಗಳಲ್ಲಿ ಒಂದು.
2013ರಲ್ಲಿ ಬಾಬಾ ಸಿದ್ಧಿಕಿ ಮುಂಬೈ ಪಶ್ಚಿಮ ಕ್ಷೇತ್ರದ ಎಂಎಲ್‌ಎ ಆಗಿದ್ದರು. ಇವರು ಕೊಡುವ ಇಫ್ತಾರ್ ಪಾರ್ಟಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಅಂದಿನ ಪಾರ್ಟಿಯಲ್ಲಿ ಶಾರುಖ್ ಖಾನ್ ಮೊದಲ ಆಗಮಿಸಿದ್ದರು. ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಅವರ ಪಕ್ಕದಲ್ಲೇ ಕೂರಿಸಲಾಗಿತ್ತು. ಇದೇ ವೇಳೆ ಸಲ್ಮಾನ್ ಖಾನ್ ಕೂಡ ಪಾರ್ಟಿಗೆ ಆಗಮಿಸಿದ್ದರು. ಇಬ್ಬರೂ ಒಬ್ಬರನ್ನೊಬ್ಬರು ನೋಡಿತ್ತಿದ್ದಂತೆ ಅಪ್ಪಿಕೊಂಡರು. ಇಬ್ಬರ ಮಧ್ಯೆ ಬಾಬಾ ಸಿದ್ಧಿಕಿ ಬಂದು ನಿಂತರು. ಫೋಟೋಗ್ರಾಫರ್‌ಗಳಿಗೆ ಫೋಟೋ ಕ್ಲಿಕ್ ಮಾಡುವಂತೆ ಆದೇಶ ನೀಡಿದ್ದರು. ಅಲ್ಲಿಂದ ಬಾಲಿವುಡ್‌ನ ಇಬ್ಬರು ಸೂಪರ್‌ಸ್ಟಾರ್‌ಗಳ ಕೋಲ್ಡ್ ವಾರ್ ಕೊನೆಯಾಗಿತ್ತು. ಇದೇ ವರ್ಷ ಈದ್ ನೀಡಿದ್ದ ಇಫ್ತಾರ್ ಪಾರ್ಟಿಯಲ್ಲೂ ಸಲ್ಮಾನ್ ಖಾನ್ ಭಾಗವಹಿಸಿದ್ದರು.


Click it and Unblock the Notifications











