"ನನ್ನ ಹಿಂಭಾಗವನ್ನು ಎರಡೆರಡು ಬಾರಿ ಟಚ್ ಮಾಡಿ ಕಿರುಕುಳ ಕೊಟ್ಟಿದ್ದ"; ಕಹಿ ಘಟನೆ ನೆನೆದ ನಟಿ ಯಾರು?

ಬಾಲಕಲಾವಿದೆಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಈ ನಟಿ ಬಹುತೇಕ ಸಿನಿಪ್ರಿಯರಿಗೆ ಚಿರಪರಿಚಿತ. 2008ರಲ್ಲಿ ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಬಾಲಿಕಾ ವಧು' ಪ್ರಸಾರವಾಗಿತ್ತು. ಈ ವೇಳೆ ಅವಿಕಾ ಗೋರ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಇಲ್ಲಿಂದ ಬಣ್ಣದ ಪ್ರಪಂಚದಲ್ಲಿ ಮಿಂಚುತ್ತಲೇ ಇದ್ದಾರೆ.

'ಬಾಲಿಕಾ ವಧು' ಧಾರಾವಾಹಿ ಬಳಿಕ ಅವಿಕಾ ಗೋರ್ ಮತ್ತೆ ತಿರುಗಿ ನೋಡಲೇ ಇಲ್ಲ. ಕಿರುತೆರೆಯ ಜೊತೆ ಸಿನಿಮಾಗಳಲ್ಲಿಯೂ ನಟಿಸಿ ಯಶಸ್ಸು ಕಂಡಿದ್ದಾರೆ. ಹಿಂದಿ, ತೆಲುಗು ಸೇರಿದಂತೆ ಕನ್ನಡ ಸಿನಿಮಾದಲ್ಲಿಯೂ ಅವಿಕಾ ಗೋರ್ ನಟಿಸಿದ್ದಾರೆ. ಕನ್ನಡದಲ್ಲಿ ಮಾಸ್ಟರ್ ಕಿಶನ್ ನಟನೆಯ 'ಕೇರ್ ಆಫ್ ಫುಟ್‌ಪಾತ್‌ 2'ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

Balika Vadhu fame Avika Gor revealed that she was sexually harassed by a bodyguard

ಇದೇ ನಟಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿದ 'ನಟಸಾರ್ವಭೌಮ' ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು. ಒಂದು ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ದಕ್ಷಿಣ ಭಾರತದಲ್ಲೂ ಫೇಮಸ್ ಆಗಿದ್ದಾರೆ. ಇತ್ತೀಚೆಗೆ ಈ ನಟಿ ನೀಡಿದ ಸಂದರ್ಶನವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ತನ್ನ ಬಾಡಿಗಾರ್ಡ್ ಒಬ್ಬ ಲೈಂಗಿಕ ಕಿರುಕುಳ ನೀಡಿದ್ದ ಎಂದು ಹೇಳಿಕೊಂಡಿದ್ದಾರೆ. ಈ ಹೇಳಿಕೆ ಈಗ ವೈರಲ್ ಆಗುತ್ತಿದೆ.

ಇವೆಂಟ್ ಒಂದರಲ್ಲಿ ನಟಿ ಅವಿಕಾ ಗೋರ್ ಭಾಗವಹಿಸಿದ್ದರು. ಈ ವೇಳೆ ವೇದಿಕೆ ಕಡೆ ನಡೆಯುತ್ತಿರುವಾಗ ಆಕೆಯ ಬಾಡಿಗಾರ್ಡ್ ಹಿಂದೆ ಇದ್ದ. ಕಝಾಕಿಸ್ತಾನ್‌ದಲ್ಲಿ ನಡೆದ ಈ ಇವೆಂಟ್‌ನಲ್ಲಿ ಆಕೆಯ ಬಾಡಿಗಾರ್ಡ್‌ನ ವರ್ತನೆ ಆತಂಕಕಾರಿಯಾಗಿತ್ತು ಎಂದು ಅವಿಕಾ ಗೋರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ ವೇದಿಕೆ ಕಡೆಗೆ ಧಾವಿಸುತ್ತಿರುವಾಗ ಅವಿಕಾ ಗೋರ್ ಹಿಂಭಾಗಯನ್ನು ಯಾರೋ ಟಚ್ ಮಾಡುತ್ತಿದ್ದಾರೆ ಅಂತ ಅನಿಸಿತ್ತು. ಹಿಂತಿರುಗಿ ನೋಡಿದಾಗ ಆಕೆಯ ಬಾಡಿಗಾರ್ಡ್ ಮಾತ್ರ ಇದ್ದ. ಬೇರೆ ಯಾರೂ ಇಲ್ಲದೇ ಇದ್ದಿದ್ದರಿಂದ ಇದು ಆತನದ್ದೇ ಕೆಲಸ ಅನ್ನೋದು ಗೊತ್ತಾಗಿತ್ತು. ಪದೇ ಪದೇ ಹೀಗೆ ಆಗುತ್ತಿದ್ದರಿಂದ ಬಾಡಿಗಾರ್ಡ್ ಕೈಯನ್ನು ಗದರಿದ್ದಾಗಿ ನಟಿ ಹೇಳಿಕೊಂಡಿದ್ದಾರೆ.

Balika Vadhu fame Avika Gor revealed that she was sexually harassed by a bodyguard

" ಇದು ನಿಜಕ್ಕೂ ನಾಚಿಕೆಗೇಡಿನ ಕೆಲಸ.. ನಾನು ದಿಢೀರನೇ ಹಿಂದಕ್ಕೆ ತಿರುಗಿ ಏನು ಎನ್ನುವಂತೆ ಗದರಿದ್ದೆ. ಬಳಿಕ ಅವನು ಕ್ಷಮೆ ಕೇಳಿದ್ದನು. ಆ ಬಳಿಕ ನಾನು ಏನು ಮಾಡಬೇಕು? ಅಲ್ಲಿಗೆ ನಾನು ಬಿಟ್ಟೆ. ಆದರೆ, ಅವನ ವರ್ತನೆ ಬೇರೆಯವರಿಗೆ ಹೇಗೆ ಅನಿಸುತ್ತೆ ಅನ್ನೋದು ಅವನಿಗೆ ಗೊತ್ತಿಲ್ಲ ಅಂತ ಅನಿಸುತ್ತೆ." ಎಂದು ಹೇಳಿದ್ದಾರೆ.

ಆ ಸಂದರ್ಭದಲ್ಲಿ ಅವಿಕಾ ಗೋರ್‌ಗೆ ಏನು ಮಾಡಬೇಕು ಅನ್ನೋದು ಗೊತ್ತಿರಲಿಲ್ಲ. ಆದರೆ, ಈಗ ಇಂತಹ ಸಂದರ್ಭಗಳನ್ನು ಹೇಗೆ ಹ್ಯಾಂಡಲ್ ಮಾಡಬೇಕು ಅನ್ನೋದು ಗೊತ್ತಿದೆ. ಇದು ಮೊದಲೇ ಗೊತ್ತಿದ್ದರೆ, ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬಹುದಿತ್ತು ಎಂದು ಅವಿಕಾ ಗೋರ್ ಹೇಳಿಕೊಂಡಿದ್ದಾರೆ.

ಅವಿಕಾ ಗೋರ್ ಕಿರುತೆರೆಯಷ್ಟೇ ಅಲ್ಲ. ಸಿನಿಮಾರಂಗದಲ್ಲೂ ಜನಪ್ರಿಯ ನಟಿ. ಕಿರುತೆರೆಯಲ್ಲಿ 'ಸಸುರಾಲ್ ಸಿಮರ್‌ ಕಾ', 'ಲಾಡು' ಅಂತಹ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹಾಗೇ ತೆಲುಗಿನಲ್ಲಿ 'ಚಿನ್ನಾರಿ ಪೆಳ್ಳಿಕುಥುರು', 'ಉಯ್ಯಾಲ ಜಂಪಾಲ', 'ನೆಟ್', 'ಥಾಂಕ್ಯೂ', ಹಿಂದಿಯಲ್ಲಿ 'ಬೋಲ್ಡ್ ಈಶ್ಕ್' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Actress Avika Gor revealed that she was sexually harassed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X