ಬಾಂಗ್ಲಾದೇಶಿ ನೀಲಿತಾರೆ ರಿಯಾ ಬಾರ್ಡೆ ಭಾರತದಲ್ಲಿ ಬಂಧನ: ಶಿಲ್ಪಾ ಶೆಟ್ಟಿ ಪತಿಗೂ ಈಕೆಗೂ ಏನು ಸಂಬಂಧ?

ಬಾಂಗ್ಲಾದೇಶದ ನೀಲಿತಾರೆಯನ್ನು ಭಾರತದಲ್ಲಿ ಬಂಧಿಸಲಾಗಿದೆ. ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾದೇಶದ ನೀಲಿ ಚಿತ್ರಗಳ ನಟಿ ರಿಯಾ ಬಾರ್ಡೆ ಉರ್ಫ್ ಆರೋಹಿ ಬಾರ್ಡೆಯನ್ನು ಬಂಧಿಸಲಾಗಿದೆ. ಈಕೆ ನಕಲಿ ಪಾಸ್‌ಪೋರ್ಟ್ ಅನ್ನು ಇಟ್ಟುಕೊಂಡು ಭಾರತದಲ್ಲಿ ಕೆಲವು ದಿನಗಳಿಂದ ನೆಲೆಸಿದ್ದರು. ಅದು ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಆಕೆಯನ್ನು ಅರೆಸ್ಟ್ ಮಾಡಲಾಗಿದೆ.

ಮುಂಬೈನಿಂದ 50 ಕಿ.ಮೀ. ದೂರದಲ್ಲಿ ಇರುವ ಉಲ್ಲಾಸ್‌ನಗರದ ಹಿಲ್ ಲೈನ್ ಪೊಲೀಸ್ ಬಾಂಗ್ಲಾದೇಶದ ಈ ನಟಿಯನ್ನು ಬಂಧಿಸಿದ್ದಾರೆ. ಅಂಬೇರ್ನಾಥ್ ಎಂಬಲ್ಲಿ ನಕಲಿ ದಾಖಲೆಗಳೊಂದಿಗೆ ರಿಯಾ ಬಾರ್ಡೆ ಕುಟುಂಬವೊಂದರ ಜೊತೆ ನೆಲೆಸಿದ್ದಳು. ಇದು ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಕಾರ್ಯಾಚರಣೆ ಮಾಡಿ ಅರೆಸ್ಟ್ ಮಾಡಿದ್ದರು.

Bangladeshi Adult star Riya Barde aka Arohi Barde arrested in India here is the reason

ಈಕೆ ಸಹೋದರಿ ರೀತು ಅಲಿಯಾಸ್ ಮೋನಿ ಶೇಕ್, ಸಹೋದರ ರಿಯಾಜ್ ಶೇಕ್ ಅನ್ನು ಪೊಲೀಸರು ಹುಡುಕುತ್ತಿದ್ದಾರೆ. ಅಮರಾವತಿಯ ವ್ಯಕ್ತಿಯೊಬ್ಬ ರಿಯಾ ಬಾರ್ಡೆ ಸೇರಿದಂತೆ ಇನ್ನೂ ಮೂವರು ಭಾರತದಲ್ಲಿ ನೆಲೆಸಲು ಫೇಕ್ ಡಾಕ್ಯೂಮೆಂಟ್‌ಗಳನ್ನು ಮಾಡಿಕೊಟ್ಟಿರುವ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ಹಿಲ್ ಲೈನ್ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದಾರೆ. ಅಷ್ಟಕ್ಕೂ ಈಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್‌ ಕುಂದ್ರಾ ಪ್ರೊಡಕ್ಷನ್‌ನ ಭಾಗವಾಗಿದ್ದರು ಎನ್ನಲಾಗಿದೆ.

ಬಾಂಗ್ಲಾದೇಶದ ನೀಲಿತಾರೆ ರಿಯಾ ಬಾರ್ಡೆ ಹಾಗೂ ಮೂರು ಮಂದಿಯ ವಿರುದ್ಧ ಫಾರಿನ್ ಆಕ್ಟ್‌ 1946ರ ಸೆಕ್ಷನ್ 14(A) ಅಡಿಯಲ್ಲಿ ದೂರನ್ನು ದಾಖಲಿಸಲಾಗಿದೆ. ಮೂಲಗಳ ಪ್ರಕಾರ ರಿಯಾ ಬಾರ್ಡೆಯ ಪೋಷಕರು ಕತಾರ್‌ನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಫೇಕ್ ಪಾಸ್‌ಪೋರ್ಟ್‌ ಅನ್ನು ಮಾಡುವುದಕ್ಕೆ ಸಹಾಯ ಮಾಡಿರುವ ಶಂಕೆಯ ಆಧಾರದ ಮೇಲೆ ಆಕೆಯ ಸಂಬಂಧಿಯನ್ನು ಕೂಡ ಪೊಲೀಸರು ಹುಡುಕುತ್ತಿದ್ದಾರೆ.

ನೀಲಿ ತಾರೆ ರಿಯಾ ಬಾರ್ಡೆ ಅಮ್ಮ ರೂಬಿ ಶೇಕ್ ಬಾಂಗ್ಲಾದೇಶದವರು. ಈಕೆ ಅಮರಾವತಿಯ ಅರವಿಂದ್ ಬಾರ್ಡೆ ಎಂಬುವವರೊಂದಿಗೆ ವಿವಾಹವಾಗಿದ್ದರು. ಈಕೆ ತಾನು ಪಶ್ಚಿಮ ಬಂಗಾಳದವರು ಎಂದು ಹೇಳಿಕೊಂಡಿದ್ದರು ಎನ್ನಲಾಗಿದೆ. ಬಳಿಕ ರೂಬಿ ತನ್ನ ಹೆಸರನ್ನು ಅಂಜಲಿ ಎಂದು ಬದಲಾಯಿಸಿಕೊಂಡು ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದರು ಎನ್ನಲಾಗಿದೆ. ಹೀಗಾಗಿ ರಿಯಾ ಬಾರ್ಡೆ ಹಾಗೂ ಅವರ ಕುಟುಂಬದ ಮೇಲೆ ಐಪಿಸಿ ಸೆಕ್ಷನ್ 420, 465, 468, 471 ಹಾಗೂ 34 ಅಡಿಯಲ್ಲಿ ದೂರನ್ನು ದಾಖಲು ಮಾಡಲಾಗಿದೆ.

ಪೊಲೀಸ್ ತನಿಖೆಯ ಬಳಿಕ ರಿಯಾ ಬಾರ್ಡೆ ನೀಲಿ ಚಿತ್ರಗಳಲ್ಲಿ ನಟಿಸಿದ್ದು, ರಾಜ್ ಕುಂದ್ರಾ ಪ್ರೊಡಕ್ಷನ್ ಹೌಸ್ ಜೊತೆ ಗುರುತಿಸಿಕೊಂಡಿದ್ದರು ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕೆಲವು ತಿಂಗಳ ಹಿಂದೆ ರಾಜ್‌ ಕುಂದ್ರಾ ಅವರನ್ನು ಅಶ್ಲೀಲ ಸಿನಿಮಾಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದರು. ರಿಯಾ ಬಾರ್ಡೆ ಇದರಲ್ಲದೆ ಹಲವು ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಕೂಡ ರಿಯಾ ಬಾರ್ಡೆಯನ್ನು ಮತ್ತೊಂದು ಕೇಸ್‌ನಲ್ಲಿ ಬಂಧನ ಮಾಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

More from Filmibeat

English summary
Bangladeshi Adult star Riya Barde aka Arohi Barde arrested in India here is the reason:
Read more about: bangladesh star filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X