ಐಶ್ವರ್ಯಾ, ಸುಶ್ಮಿತಾ ಸೇನ್ ಜೊತೆ ಪೈಪೋಟಿಗೆ ಬಿದ್ದಿದ್ದ ಈ ನಟಿಯೀಗ ಸನ್ಯಾಸಿ; ಬಣ್ಣದ ಬದುಕು ತೊರೆದಿದ್ದೇಕೆ?

ಇತ್ತೀಚೆಗೆ ಬಾಲಿವುಡ್ ನಟಿಯರು ಬಣ್ಣದ ಲೋಕಕ್ಕೆ ಗುಡ್‌ ಬೈ ಹೇಳಿ ಕಣ್ಮರೆಯಾದ ಉದಾಹರಣೆಗಳು ಸಾಕಷ್ಟಿವೆ. ಅದರಲ್ಲೂ ಬಾಲಿವುಡ್ ನಟಿಯರೇ ಹೆಚ್ಚು. ಯಶಸ್ಸು ಅನ್ನೋದು ಅವರ ಕಾಲ ಬುಡಕ್ಕೆ ಬಂದು ನಿಂತಿದ್ದರೂ, ಅವರು ಆ ಹಾದಿಯಲ್ಲಿ ಮುಂದುವರೆಯುವುದಕ್ಕೆ ಇಷ್ಟ ಪಡಲೇ ಇಲ್ಲ. ಬಾಲಿವುಡ್‌ನಲ್ಲಿ ಇಂತಹ ನಟಿಯ ಪಟ್ಟಿ ದೊಡ್ಡದೇ ಇದೆ. ಇದರೊಬ್ಬ ನಟಿಯ ನಡೆ ಸಖತ್ ಇಂಟ್ರೆಸ್ಟಿಂಗ್ ಆಗಿದೆ.

ಇತ್ತೀಚೆಗೆ ದಂಗಲ್ ನಟಿ ಝೈರಾ ವಾಸಿಮ್, ಸನಾ ಖಾನ್ ಅಂತ ನಟಿಯರು ನಟನೆಗೆ ಗುಡ್‌ಬೈ ಹೇಳಿದ್ದರು. ಕೆಲವರಂತೂ ಸೋಶಿಯಲ್ ಮೀಡಿಯಾದಿಂದಲೂ ದೂರವೇ ಉಳಿದಿದ್ದಾರೆ. ಹೀಗೆ ಬಣ್ಣದ ಲೋಕದ ಸಹವಾಸವೇ ಬೇಡವೆಂದು ಸನ್ಯಾಸಿಯಾದ ಸುಂದರಿಯ ನಟಿಯ ನಿರ್ಧಾರ ಕೂಡ ಅಷ್ಟೇ ಕುತೂಹಲಕಾರಿಯಾಗಿದೆ.

Beauty queen enters Bollywood to compete with Aishwarya Rai Sushmitha Sen becomes a monk Who is she

ಈ ನಟಿ ಐಶ್ವರ್ಯಾ ರೈ ಬಚ್ಚನ್, ಸುಶ್ಮಿತಾ ಸೇನ್‌ರಂತಯೇ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಬಳಿಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಬಾಲಿವುಡ್‌ನಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿದರು. ಕಿರುತೆರೆಯಲ್ಲೂ ಮಿಂಚಿದರು. ಇಷ್ಟೆಲ್ಲ ಯಶಸ್ಸು ಸಿಕ್ಕಿದರೂ, ಈ ನಟಿಗೆ ಗ್ಲಾಮರ್ ವರ್ಲ್ಡ್‌ ಬೇಡ ಅಂತ ಅನಿಸಿತ್ತು. ಕೊನೆಗೆ ಸನ್ಯಾಸಿಯಾಗುವುದಕ್ಕೆ ನಿರ್ಧರಿಸಿಬಿಟ್ಟರು. ಆ ನಟಿಯ ಹೆಸರು ಬರ್ಕಾ ಮದನ್.

1994 ಭಾರತದ ಮಿಸ್ ವರ್ಲ್ಡ್ ಹಾಗೂ ಮಿಸ್ ಯೂನಿವರ್ಸ್ ಎರಡೂ ಕಿರೀಟವನ್ನು ಗೆದ್ದಿತ್ತು. ಐಶ್ವರ್ಯಾ ರೈ ಮಿಸ್ ವರ್ಲ್ಡ್ ಆಗಿದ್ದರೆ, ಸುಶ್ಮಿತಾ ಸೇನ್ ಮಿಸ್ ಯೂನಿವರ್ಸ್ ಆಗಿ ಹೊರ ಹೊಮ್ಮಿದ್ದರು. ಈ ಕಾಂಪಿಟೇಷನ್‌ನಲ್ಲಿ ಭಾಗವಹಿಸುವುದಕ್ಕೂ ಮುನ್ನ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಬೇಕು. 94ರಲ್ಲಿ ನಡೆದ ಇದೇ ಮಿಸ್ ಇಂಡಿಯಾದಲ್ಲಿ ಬರ್ಕಾ ಮದನ್ ಕೂಡ ಸ್ಪರ್ಧಿಯಾಗಿದ್ದರು. ಮಿಸ್ ಟೂರಿಸಂ ಅನ್ನುವ ಟೈಟಲ್ ಸಿಕ್ಕಿತ್ತು. ಹಾಗಾಗಿ ಮಿಸ್ ಟೂರಿಸಂ ಇಂಟರ್‌ನ್ಯಾಷನಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಮಾಡಲ್ ಆಗಿ ಗುರುತಿಸಿಕೊಂಡಿದ್ದ ಬರ್ಕಾ ಮದನ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಂತೆ ಬಾಲಿವುಡ್ ಕೈ ಬೀಸಿ ಕರೆದಿತ್ತು. ಅಕ್ಷಯ್ ಕುಮಾರ್, ರೇಖಾ ನಟಿಸಿದ್ದ 'ಕಿಲಾಡಿಯೊಂಕಾ ಕಿಲಾಡಿ' ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಬರ್ಕಾ ಮದನ್‌ಗೆ ಜನಮನ್ನಣೆ ಸಿಕ್ಕಿತ್ತು. ಬಳಿಕ ಇಂಡೊ-ಡಚ್ ಸಿನಿಮಾದಲ್ಲಿಯೂ ನಟಿಸಿದ್ದರು. ಆಯ್ಕೆ ಮಾಡಿ ಸಿನಿಮಾಗಳಲ್ಲಿ ನಟಿಸುತ್ತಿದ್ದ ಬರ್ಕಾ ಮದನ್‌ಗೆ ಅಂದಿನ ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ್ದ 'ಭೂತ್' ಸಿನಿಮಾ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.

Beauty queen enters Bollywood to compete with Aishwarya Rai Sushmitha Sen becomes a monk Who is she

'ಭೂತ್' ಸಿನಿಮಾದಲ್ಲಿ ದೆವ್ವದ ಪಾತ್ರದಲ್ಲಿ ನಟಿಸಿದ್ದರು. ಇದು ಬರ್ಕಾ ಮದನ್ ವೃತ್ತಿ ಬದುಕಿಗೆ ಟರ್ನಿಂಗ್ ಪಾಯಿಂಟ್ ಆಗಿತ್ತು. ಆದರೂ ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ. ಕಿರುತೆರೆಯ ಕಡೆಗೆ ಮುಖ ಮಾಡಿದರು. ಅಲ್ಲೂ ಸುಮಾರು 20 ಟಿವಿ ಶೋಗಳಲ್ಲಿ ಭಾಗವಹಿಸಿದ್ದರು. ಅಲ್ಲೂ ಯಶಸ್ಸು ಸಿಕ್ಕಿತ್ತು. ಲೈಫ್‌ನಲ್ಲಿ ಎಲ್ಲಾ ಇದೆ ಅನ್ನುವಾಗಲೇ ಬರ್ಕಾ ಮದನ್‌ಗೆ ಇದೆಲ್ಲವೂ ಬೇಡ ಅಂತ ಅನಿಸುವುದಕ್ಕೆ ಶುರುವಾಗಿತ್ತು.

2012ರಲ್ಲಿ ಬರ್ಕಾ ಮದನ್ ಬೌದ್ಧ ಸನ್ಯಾಸಿಯಾಗುವುದಕ್ಕೆ ನಿರ್ಧರಿಸಿದ್ದರು. ಸಿನಿಮಾಗೆ ಗುಡ್‌ಬೈ ಹೇಳಿದರು. ಭೌದ್ದ ಗುರು ದಲಾಯಿ ಲಾಮ ಅವರ ಫಾಲೋವರ್ ಆಗಿದ್ದ ಬರ್ಕಾ ಮದನ್ ಸನ್ಯಾಸ ಸ್ವೀಕರಿಸಿ, ಈಗ ಹಿಮಾಲಯದ ಪರ್ವತಗಳಲ್ಲಿರುವ ಮಠಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಈಗ ಈಕೆಯನ್ನು ವೆಂ. ಗ್ಯಾಲ್ಟೆನ್ ಸ್ಯಾಮ್ಟೆನ್ ಎಂದು ಕರೆಯುತ್ತಾರೆ.

More from Filmibeat

English summary
Who is She? Bollywood actress who becomes a monk
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X