ಫೇಸ್‌ಬುಕ್‌ನಲ್ಲಿ ಲೈವ್ ಬಂದು ಆತ್ಮಹತ್ಯೆ ಮಾಡಿಕೊಂಡ ನಟಿ
ಭೋಜಪುರಿ ಚಿತ್ರರಂಗದ ನಟಿ ಅನುಪಮಾ ಪಾಠಕ್, ಮುಂಬೈನ ದಹಿಸಾರ್‌ನಲ್ಲಿನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗಸ್ಟ್ 2ರಂದೇ ಅವರು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ. ಈ ಘಟನೆ ತಡವಾಗಿ ವರದಿಯಾಗಿದೆ. ಸಾಯುವ ಒಂದು ದಿನ ಮುನ್ನ ಫೇಸ್‌ಬುಕ್‌ನಲ್ಲಿ ಲೈವ್ ಬಂದಿದ್ದ ಅನುಪಮಾ, ತಾವು ವಂಚನೆಗೆ ಒಳಗಾಗಿದ್ದು, ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ ಎಂದು ಹೇಳಿಕೊಂಡಿದ್ದರು.
Recommended Video
ಆರ್ಥಿಕ ಸಂಕಷ್ಟ ಸೇರಿದಂತೆ ವಿವಿಧ ಕಾರಣಗಳಿಂದ ಸಿನಿಮಾ ಮತ್ತು ಕಿರುತೆರೆ ಕಲಾವಿದರು ಹಾಗೂ ತಂತ್ರಜ್ಞರು ಜೀವ ಕಳೆದುಕೊಳ್ಳುವ ಘಟನೆಗಳು ಹೆಚ್ಚು ಹೆಚ್ಚು ವರದಿಯಾಗುತ್ತಿರುವುದು ಮನರಂಜನಾ ವಲಯದಲ್ಲಿ ಆತಂಕ ಮೂಡಿಸಿದೆ. ಗುರುವಾರವಷ್ಟೇ ಹಿಂದಿ ಕಿರುತೆರೆ ನಟ ಸಮೀರ್ ಶರ್ಮಾ ಅವರ ಮೃತದೇಹ ಮುಂಬೈನ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮುಂದೆ ಓದಿ.

ಸಮಸ್ಯೆಗೆ ಸಿಕ್ಕಿಕೊಳ್ಳಲು ಬಯಸುವುದಿಲ್ಲ
'ನೀವು ಯಾರನ್ನಾದರೂ ನಂಬಿಕೊಂಡಿದ್ದರೆ, ನೀವು ಕೆಲವು ಸಮಸ್ಯೆಗಳಿಗೆ ಒಳಗಾಗಿದ್ದು ಮತ್ತು ಆತ್ಮಹತ್ಯೆ ಮಾಡಿಕೊಳ್ಳುವಂತೆ ಅನಿಸುತ್ತಿದ್ದರೆ, ಆ ವ್ಯಕ್ತಿ ಎಷ್ಟೇ ಒಳ್ಳೆಯ ಸ್ನೇಹಿತರಿರಲಿ ನಿನ್ನ ಸಮಸ್ಯೆಗಳಿಂದ ದೂರ ಇರು ಎಂದು ಕೂಡಲೇ ಹೇಳುತ್ತಾರೆ. ಏಕೆಂದರೆ ನೀವು ಸತ್ತ ಬಳಿಕ ಅವರು ಸಂಕಷ್ಟಕ್ಕೆ ಸಿಲುಕಿಕೊಳ್ಳಲು ಬಯಸುವುದಿಲ್ಲ.

ಯಾರೊಂದಿಗೂ ಸಮಸ್ಯೆ ಹೇಳಿಕೊಳ್ಳಬೇಡಿ
ಹಾಗೆಯೇ ಜನರು ನಿಮ್ಮ ಬಗ್ಗೆ ಬೇರೆಯವರ ಎದುರು ತಮಾಷೆ ಮಾಡುತ್ತಾರೆ ಮತ್ತು ಅಗೌರವದಿಂದ ಮಾತನಾಡುತ್ತಾರೆ. ಹೀಗಾಗಿ ಯಾರೊಂದಿಗೂ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಡಿ ಮತ್ತು ಯಾರನ್ನೇ ಆದರೂ ನಿಮ್ಮ ಸ್ನೇಹಿತರು ಎಂದು ಪರಿಗಣಿಸಬೇಡಿ ಎಂದು ಅವರು ಫೇಸ್ ಬುಕ್ ಲೈವ್‌ನಲ್ಲಿ ಹೇಳಿಕೊಂಡಿದ್ದರು.

ಜನರು ಬಹಳ ಸ್ವಾರ್ಥಿಗಳು
ನೀವು ಎಲ್ಲರೂ ನಂಬುವಂತಹ ವ್ಯಕ್ತಿಯಾಗಿ, ಆದರೆ ನೀವು ಮಾತ್ರ ಯಾರನ್ನೂ ನಂಬಬೇಡಿ. ಇದನ್ನು ನನ್ನ ಜೀವನದಲ್ಲಿ ಕಲಿತುಕೊಂಡಿದ್ದೇನೆ. ಜನರು ಬಹಳ ಸ್ವಾರ್ಥಿಗಳು. ಅವರು ಬೇರೆಯವರ ಬಗ್ಗೆ ಕಾಳಜಿ ಹೊಂದಿರುವುದಿಲ್ಲ ಎಂದೂ ಅವರು ಸಾಯುವ ಹಿಂದಿನ ದಿನ ಹೇಳಿದ್ದರು. ಬಿಹಾರದ ಪೂರ್ಣಿಯಾ ಜಿಲ್ಲೆಯವರಾದ 40 ವರ್ಷದ ಅನುಪಮಾ, ಕೆಲಸದ ನಿಮಿತ್ತ ಮುಂಬೈನಲ್ಲಿ ನೆಲೆಸಿದ್ದರು. ಅವರು ಅನೇಕ ಭೋಜಪುರಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದರು.

ಡೆತ್ ನೋಟ್ ಪತ್ತೆ
ಅವರ ಮೃತದೇಹ ದೊರೆತ ಸ್ಥಳದಲ್ಲಿ ಆತ್ಮಹತ್ಯೆಯ ಟಿಪ್ಪಣಿ ಪತ್ತೆಯಾಗಿದೆ. ಅದರಲ್ಲಿ ಅವರು ಮಲಾಡ್‌ನಲ್ಲಿ ವಿಸ್ಡಮ್ ಪ್ರೊಡ್ಯೂಸರ್ ಕಂಪೆನಿ ಎಂಬ ಸಂಸ್ಥೆಯಲ್ಲಿ 10,000 ರೂ ಹೂಡಿಕೆ ಮಾಡಿದ್ದು, ಡಿಸೆಂಬರ್‌ನಲ್ಲಿ ಅದು ಮೆಚ್ಯುರ್ ಆಗಿದ್ದರೂ ತಮಗೆ ಹಣ ವಾಪಸ್ ಸಿಕ್ಕಿಲ್ಲ ಎಂದು ಬರೆದುಕೊಂಡಿದ್ದಾರೆ. ಜತೆಗೆ ಮನೀಶ್ ಝಾ ಎಂಬಾತನ ಹೆಸರನ್ನು ಅವರು ಉಲ್ಲೇಖಿಸಿದ್ದಾರೆ ಎನ್ನಲಾಗಿದ್ದು, ಲಾಕ್ ಡೌನ್ ಸಮಯದಲ್ಲಿ ತಮ್ಮ ದ್ವಿಚಕ್ರ ವಾಹನ ಕೊಂಡೊಯ್ದರೂ ಅದನ್ನು ಮರಳಿಸಿರಲಿಲ್ಲ ಎಂದು ಆರೋಪಿಸಿದ್ದಾರೆ.


Click it and Unblock the Notifications











