2 ಬಾರಿ ಬಲವಂತವಾಗಿ ಗರ್ಭಪಾತ.. ಈ ಸ್ಟಾರ್‌ ನಟನ ಎರಡನೇ ಪತ್ನಿ ಗಂಭೀರ ಆರೋಪ

ಚಿತ್ರರಂಗದಲ್ಲಿ ಒಂದಲ್ಲ ಒಂದು ರೀತಿ ವಿವಾದಗಳು ನಡೆಯುತ್ತಲೇ ಇರುತ್ತೆ. ಕೆಲವೊಮ್ಮೆ ಈ ವಿವಾದ ಬೀದಿಗೂ ಬಂದು ಬಿಡುತ್ತೆ. ಇಡೀ ದೇಶವೇ ಚರ್ಚೆಯಾಗುವಂತಹ ವಿಷಯವಾಗಿಬಿಡುತ್ತೆ. ಅದರಲ್ಲೂ ಕೌಟುಂಬಿಕ ವಿಷಯವಾದರಂತೂ ಮುಗಿದೇ ಹೋಯ್ತು. ಇಂತಹದ್ದೇ ಒಂದು ಪರಿಸ್ಥಿತಿಯಲ್ಲಿ ಇಲ್ಲೊಬ್ಬ ನಟನಿಗೂ ಆಗಿದೆ.

ಕಳೆದ ಕೆಲವು ದಿನಗಳಿಂದ ಭೋಜ್‌ಪುರಿ ಚಿತ್ರರಂಗದ ಜನಪ್ರಿಯ ನಟ ಪವನ್ ಸಿಂಗ್ ವೈವಾಹಿಕ ಜೀವನ ಬೀದಿಗೆ ಬಿದ್ದಿದೆ. ಎರಡನೇ ಪತ್ನಿಯೊಂದಿಗಿನ ಕಿತ್ತಾಟ ದೇಶಾದ್ಯಂತ ಸುದ್ದಿಯಾಗಿದೆ. ಎರಡನೇ ಪತ್ನಿಯೊಂದಿಗೆ ವಿಚ್ಚೇದನ, ಕೋರ್ಟ್, ಪೊಲೀಸ್ ಪ್ರಕರಣ ಅಂತ ದೊಡ್ಡ ವಿವಾದವೇ ಹುಟ್ಟಿಕೊಂಡಿದೆ. ಇದು ಪವನ್ ಸಿಂಗ್‌ಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಅದೂ ಬಿಹಾರ ಎಲೆಕ್ಷನ್ ನಡೆಯುವ ವೇಳೆನೇ ಈ ಪ್ರಕರಣ ದೊಡ್ಡ ಮಟ್ಟಕ್ಕೆ ಚರ್ಚೆಯಾಗುವಂತೆ ಮಾಡಿದೆ.

Bhojpuri actor Pawan Singh wife Jyothi Singh said he used to give her abortion pills

ಪವನ್ ಸಿಂಗ್ ವಿರುದ್ಧ ಎರಡನೇ ಪತ್ನಿ ಜ್ಯೋತಿ ಸಿಂಗ್ ಕೂಡ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಪವನ್ ಸಿಂಗ್ ರಾಜಕಾರಣಿಯೂ ಆಗಿರುವುದರಿಂದ ಈ ವಿಚ್ಚೇದನ ಪ್ರಕರಣ ಅವರಿಗೆ ರಾಜಕೀಯ ವೃತ್ತಿ ಬದುಕಿಗೆ ದೊಡ್ಡ ಪೆಟ್ಟು ಕೊಡುವ ಸಾಧ್ಯತೆಯಿದೆ. 2025ರ ಬಿಹಾರ ವಿಧಾನಸಭಾ ಚುನಾವಣೆಯ ತಯಾರಿಯಲ್ಲಿ ಪವನ್ ಸಿಂಗ್ ಬ್ಯುಸಿಯಾಗಿದ್ದಾಗಲೇ ಈ ಘಟನೆ ನಡೆದಿದೆ. ಈ ಎಲ್ಲಾ ಆರೋಪಗಳನ್ನು ಪವನ್ ಸಿಂಗ್ ತಳ್ಳಿ ಹಾಕಿದ್ದರೂ, ರಾಜಕೀಯವಾಗಿ ಹಿನ್ನಡೆಯಾಗಬಹುದೆಂದು ನಿರೀಕ್ಷೆ ಮಾಡಲಾಗಿದೆ.

ಇನ್ನು ಪವನ್ ಸಿಂಗ್ ವಿರುದ್ಧ ಎರಡನೇ ಪತ್ನಿ ಜ್ಯೋತಿ ಸಿಂಗ್ 30 ಕೋಟಿ ರೂಪಾಯಿ ಜೀವನಾಂಶ ಕೇಳಿದ್ದೂ ಕೂಡ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ಭೋಜ್‌ಪುರಿ ಪವನ್ ಸಿಂಗ್ ಮೊದಲ ಪತ್ನಿ ಸಾವಿನ ನಂತರ, ಜ್ಯೋತಿ ಸಿಂಗ್ ಅವರೊಂದಿಗೆ ಹತ್ತಿರವಾಗಿದ್ದರು. 2018ರಲ್ಲಿ ಪವನ್ ಸಿಂಗ್ ಹಾಗೂ ಜ್ಯೋತಿ ಸಿಂಗ್ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೆಲವು ವರ್ಷಗಳಲ್ಲಿಯೇ ಬಿರುಕು ಮೂಡಿತು. ಜ್ಯೋತಿ ಸಿಂಗ್ ಈಗ ಪತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. "ನನ್ನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿದ್ದಾರೆ. ಎರಡು ಬಾರಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹಾಕಿದ್ದಾರೆ" ಎಂದು ಆರೋಪಿಸಿದ್ದಾರೆ.

ಎರಡನೇ ಪತ್ನಿಯ ಆರೋಪಗಳು ಇಲ್ಲಿಗೆ ನಿಂತಿಲ್ಲ. ಪವನ್ ಸಿಂಗ್ ಕಾಟವನ್ನು ತಾಳಲಾರದೆ ಸುಮಾರು 25 ಮಾತ್ರೆಗಳನ್ನು ಸೇವಿಸಿ ಆತ್ಮ*ಹತ್ಯೆಗೂ ಯತ್ನಿಸಿದ್ದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಇತ್ತ ಗಾಯಕ, ನಟ, ರಾಜಕಾರಣಿ ಪವನ್ ಸಿಂಗ್ ಮಾತ್ರ ತಾನು ಮಾಡಿದ ಎಲ್ಲಾ ಆರೋಪಗಳನ್ನು ಪವನ್ ಸಿಂಗ್ ತಳ್ಳಿ ಹಾಕಿದ್ದಾರೆ.

Bhojpuri actor Pawan Singh wife Jyothi Singh said he used to give her abortion pills

ಇತ್ತೀಚೆಗೆ, ಪವನ್ ಸಿಂಗ್ ಪತ್ನಿ ಜ್ಯೋತಿ ಸಿಂಗ್ ಬಿಹಾರ ಮತ್ತು ಉತ್ತರ ಪ್ರದೇಶದ ಎರಡು ರಾಜ್ಯಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಾರೆ. ಇವರು ದಾಖಲಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ಬಿಹಾರ ಚುನಾವಣೆಯಲ್ಲಿ ಪವನ್ ಸಿಂಗ್ ಸ್ಪರ್ಧೆ ಮಾಡುವತ್ತ ಗಮನ ಹರಿಸಿದ್ದರು. ಆದ್ರೀಗ ಕೌಟುಂಬಿಕ ವಿವಾದ ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೇಂದ್ರ ಬಿಂದುವಾಗಿದೆ. ಅಲ್ಲದೆ ಪವನ್ ಸಿಂಗ್ ಈ ವಿವಾದವನ್ನು ಹೇಗೆ ಎದುರಿಸುತ್ತಾರೆಂದು ರಾಜಕೀಯ ವಲಯ ಎದುರು ನೋಡುತ್ತಿದೆ.

ಭೋಜ್‌ಪುರ ನಟ ಪವನ್ ಸಿಂಗ್ ಸದ್ಯಕ್ಕೀಗ ಉದ್ಯಮಿ ಅಶ್ನೀರ್ ಗ್ರೋವರ್ ನಿರೂಪಿಸುತ್ತಿರುವ 'ರೈಸ್ ಅಂಡ್ ಫಾಲ್' ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗೆ, ಪವನ್ ಸಿಂಗ್ ಮತ್ತೊಬ್ಬ ವಿವಾದಿತ ನಟಿ ಧನಶ್ರೀ ವರ್ಮಾ ಅವರೊಂದಿಗೆ ಡ್ಯಾನ್ಸ್ ಮಾಡಿದ್ದು ವೈರಲ್ ಆಗಿದೆ. ಇಷ್ಟೇ ಅಲ್ಲದೆ ಧನಶ್ರೀ ವರ್ಮಾಗೆ ಗುಲಾಬಿ ಬಣ್ಣದ ಸೀರೆಯನ್ನು ಉಡುಗೊರೆಯಾಗಿ ನೀಡಿ ಪವನ್ ಸಿಂಗ್ ಸುದ್ದಿಯಲ್ಲಿ ಇದ್ದರು.

More from Filmibeat

English summary
Bhojpuri actor Pawan Singh wife Jyothi Singh said he used to give her abortion pills.
Read more about: actress controversy divorce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X