ಸಾಂಗ್ ರಿಲೀಸ್ ಆದ ದಿನವೇ ವಾರಾಣಾಸಿ ಹೊಟೇಲ್‌ನಲ್ಲಿ ಆತ್ಮಹತ್ಯೆಗೆ ಶರಣಾದ ನಟಿ ಆಕಾಂಕ್ಷಾ ದುಬೆ
ಉದಯನ್ಮುಖ ನಟಿ ಆಕಾಂಕ್ಷಾ ದುಬೈ ಮೃತದೇಹ ವಾರಣಾಸಿಯ ಹೊಟೇಲ್‌ನಲ್ಲಿ ಪತ್ತೆಯಾಗಿದೆ. 25 ವರ್ಷದ ನಟಿ ಬಹುತೇಕ ಬೋಜ್‌ಪುರಿ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸುತ್ತಿದ್ದರು. ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ಮುಂದಿನ ಸಿನಿಮಾ 'ನಾಯಕ್' ಶೂಟಿಂಗ್‌ಗಾಗಿ ಬಂದಿದ್ದರು.
ವಾರಾಣಾಸಿಯ ಸರ್ನಾಥ್ ಏರಿಯಾದಲ್ಲಿ ಹೊಟೇಲ್ ಒಂದರಲ್ಲಿ ಆಕಾಂಕ್ಷಾ ದುಬೆ ತಂಗಿದ್ದರು. ಮೂಲಗಳ ಪ್ರಕಾರ, ಭಾನುವಾರ ಆಕಾಂಕ್ಷಾ ದುಬೈ ಮೊದಲ ದಿನದ ನಾಯಕ್ ಶೂಟಿಂಗ್ ಮುಗಿಸಿ ಹೊಟೇಲ್‌ಗೆ ಹಿಂತಿರುಗಿದ್ದರು. ಬೆಳಗ್ಗೆ ನಟಿ ರೂಮಿನ ಬಳಿ ಮೇಕಪ್ ತೆರಳಿದಾಗ, ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರು ನಟಿ ಆಕಾಂಕ್ಷಾ ದುಬೆ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ನಟಿಯ ಕುಟುಂಬಕ್ಕೆ ವಿಷಯ ಮುಟ್ಟಿಸಿದ್ದಾರೆ. ಆದರೆ, ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಪೋಸ್ಟ್ ಮಾರ್ಟಮ್ ರಿಪೋರ್ಟ್ ಬಳಿಕವೇ ಸಾವಿಗೆ ಕಾರಣ ತಿಳಿಯಲಿದೆ.
ಆಕಾಂಕ್ಷಾ ದುಬೆ ಬೋಜ್‌ಪುರಿ ಸಿನಿಮಾರಂಗದ ಜನಪ್ರಿಯ ನಟಿ. ಸುಮಾರು 50 ರಿಂದ 60ಕ್ಕೂ ಅಧಿಕ ಸೂಪರ್ ಹಿಟ್ ಮ್ಯೂಸಿಕ್ ಆಲ್ಬಮ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡಲ್ ಕಮ್ ನಟಿಯಾಗಿ ಗುರುತಿಸಿಕೊಂಡಿದ್ದ ಆಕಾಂಕ್ಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು.
ಬೋಜ್‌ಪುರಿ ಚಿತ್ರರಂಗದ ಸೂಪರ್‌ಸ್ಟಾರ್‌ಗಳ ಜೊತೆ ಆಕಾಂಕ್ಷಾ ದುಬೆ ನಟಿಸಿದ್ದಾರೆ. ಸಮರ್ ಸಿಂಗ್, ಖೇಸರಿ ಲಾಲ್ ಯಾದವ್, ಪವನ್ ಸಿಂಗ್ ಮತ್ತು ಪ್ರದೀಪ್ ಪಾಂಡೇ ಅಂತಹ ಹೀರೊಗಳಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಬೋಜ್‌ಪುರಿಯ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿರೋ ಆಕಾಂಕ್ಷಾ, 'ಮುಜ್‌ಸೇ ಶಾದಿ ಕರೋಗಿ', 'ವೀರೋಂ ಕೆ ವೀರ್', 'ಫೈಟರ್ ಕಿಂಗ್' ಅಂತಹ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಆಕಾಂಕ್ಷಾ ನಟಿಸಿದ್ದಾರೆ. ದುರಾದೃಷ್ಟವಷಾತ್ ಇಂದು( ಮಾರ್ಚ್ 26) ಆಕಾಂಕ್ಷಾ ನಟಿಸಿದ ಭೋಜ್‌ಪುರಿ ಹೊಚ್ಚ ಹೊಸ ಹಾಡು ರಿಲೀಸ್ ಆಗಿತ್ತು.
ಭೋಜ್‌ಪುರಿಯ ಗಾಯಕ ಕಮ್ ಸ್ಟಾರ್ ನಟ ಪವನ್ ಕುಮಾರ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಆಕಾಂಕ್ಷಾ ದುಬೆ ಸ್ಟಾರ್ ನಟ ಪವನ್ ದುಬೆ ಜೊತೆ 'ಯೇ ಆರಾ ಕಭಿ ನಹೀ ಹಾರಾ' ಸಾಂಗ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ವಿಷಯವನ್ನು ಸ್ವತ: ಆಕಾಂಕ್ಷಾ ದುಬೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.


Click it and Unblock the Notifications











