"100 ಕೋಟಿ ರೂ. ಜೀವನಾಂಶ ಕೊಟ್ರೂ ಕಮ್ಮಿನೇ.." ಸೂಪರ್‌ಸ್ಟಾರ್ ವಿರುದ್ಧ ಕಿಡಿಕಾಡಿದ ನಟಿ
ಸ್ಟಾರ್‌ಗಳ ಬದುಕಿನಲ್ಲಿ ದಿನಕ್ಕೊಂದು ಟ್ವಿಸ್ಟ್ ಟರ್ನ್ ಇದ್ದೇ ಇರುತ್ತೆ. ಇವರ ಬದುಕಿನಲ್ಲಿ ಏರಿಳಿತಗಳು ಅನ್ನೋದು ಕಾಮನ್. ಅದರಲ್ಲೂ ಪ್ರೀತಿ-ಪ್ರೇಮದ ವಿಚಾರದಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಇದು ಎಲ್ಲಾ ಚಿತ್ರರಂಗದಲ್ಲಿಯೂ ಕಾಮನ್. ಇತ್ತೀಚೆಗೆ ಸ್ಟಾರ್‌ಗಳ ಜೀವನದಲ್ಲಿ ವಿಚ್ಚೇದನದ ಪ್ರಕರಣಗಳು ಹೆಚ್ಚಾಗಿವೆ. ಕೆಲವು ವಿವಾದಕ್ಕೆ ಸಿಕ್ಕಿಕೊಳ್ಳುತ್ತವೆ. ಇನ್ನು ಕೆಲವು ಸೈಲೆಂಟ್ ಆಗಿ ಅಂತ್ಯ ಕಾಣುತ್ತವೆ.
ಒಂದು ವೇಳೆ ವಿಚ್ಛೇದನ ಪ್ರಕರಣಗಳು ವಿವಾದಕ್ಕೆ ಎಡೆ ಮಾಡಿಕೊಟ್ಟರೆ, ಪ್ರತಿ ದಿನ ಸುದ್ದಿಯಲ್ಲಿ ಇರುತ್ತಾರೆ. ಸದ್ಯ ಭೋಜಪುರಿ ಚಿತ್ರರಂಗದ ಜನಪ್ರಿಯ ನಟ ಹಾಗೂ ಗಾಯಕ ಪವನ್ ಸಿಂಗ್ ಜೀವನ ಕೂಡ ಹಾಗೇ ಆಗಿದೆ. ಕಳೆದ ಕೆಲವು ದಿನಗಳಿಂದ ಇವರ ವೈಯಕ್ತಿಕ ಜೀವನ ಸುದ್ದಿಯಲ್ಲಿದೆ. ಈ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡುತ್ತಿದೆ.

ಭೋಜಪುರಿ ಚಿತ್ರರಂಗದ ಜನಪ್ರಿಯ ನಟ ಪವನ್ ಸಿಂಗ್ ಆಗಾಗ ವಿವಾದಗಳಿಗೆ ಸಿಕ್ಕಿಕೊಳ್ಳುತ್ತಲೇ ಇದ್ದರು. ಆದರೆ, ಪತ್ನಿ ಜ್ಯೋತಿ ಸಿಂಗ್ ಜೊತೆಗಿನ ವೈಮನಸ್ಸು ಈಗ ಕೋರ್ಟ್ ಮೆಟ್ಟಿಲೇರಿದೆ. ಪತ್ನಿ ಜೀವನಾಂಶ ಕೊಡಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇಂತಹ ಸಂದರ್ಭದಲ್ಲಿ ಪವರ್‌ಸ್ಟಾರ್ ಪವನ್ ಸಿಂಗ್ ಬಗ್ಗೆ ಅವರದ್ದೇ ಚಿತ್ರರಂಗದ ನಟಿಯೊಬ್ಬರು ಕಿಡಿಕಾರಿದ್ದಾರೆ. ಅದೇನು ಅಂತ ನೋಡುವುದಾರೇ,
ಪವರ್‌ಸ್ಟಾರ್ ಪವನ್ ಸಿಂಗ್ ಹಾಗೂ ಪತ್ನಿ ಜ್ಯೋತಿ ಸಿಂಗ್ ನಡುವೆ ವೈಮನಸ್ಸು ಉಂಟಾಗಿದೆ. ಈ ಕಾರಣಕ್ಕೆ ಈ ಜೋಡಿ ವಿಚ್ಛೇದನಕ್ಕೆ ಮುಂದಾಗಿದ್ದು, ಈ ಪ್ರಕರಣವು ಈಗ ಕೌಟುಂಬಿಕ ನ್ಯಾಯಾಲಯದಲ್ಲಿದೆ. ಇತ್ತೀಚೆಗೆ ನಡೆದ ಕೋರ್ಟ್‌ನಲ್ಲಿ ನಡೆದ ವಿಚಾರಣೆಗೆ ಜ್ಯೋತಿ ಸಿಂಗ್ ಹಾಜರಾಗಿದ್ದರು, ಆದರೆ ಪವನ್ ಸಿಂಗ್ ನ್ಯಾಯಾಲಯಕ್ಕೆ ಬರಲಿಲ್ಲ. ಕೆಲ ಹೊತ್ತು ಕಾದ ಜ್ಯೋತಿ ಸಿಂಗ್ ಹಿಂತಿರುಗಿದರು ಎಂದು ಸುದ್ದಿಯಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 24ರಂದು ನಡೆಯಲಿದೆ.
ಪವನ್ ಸಿಂಗ್ ಪತ್ನಿ ಜ್ಯೋತಿ ಸಿಂಗ್ ನ್ಯಾಯಾಲಯದಲ್ಲಿ ವಿಚ್ಚೇದನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನ್ಯಾಯಾಧೀಶರ ಮುಂದೆ ತಮ್ಮ ಪತಿಯೊಂದಿಗೆ ವಾಸ ಮಾಡಲು ಬಯಸುವುದಾಗಿ ಹೇಳಿಕೊಂಡಿದ್ದಾರೆ. ಹೀಗಿದ್ದೂ ತಮ್ಮ ಪತಿ ಪವನ್ ಸಿಂಗ್ ತನ್ನ ಜೊತೆಯಲ್ಲಿ ಜೀವನ ನಡೆಸಲು ಬಯಸದೇ ಇದ್ದಲ್ಲಿ, ತನಗೆ ಜೀವನಾಂಶವನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ. ಪವನ್ ಸಿಂಗ್‌ರಿಂದ ಪತ್ನಿ ಜ್ಯೋತಿ ಸಿಂಗ್ ₹10 ಕೋಟಿ ರೂಪಾಯಿ ಜೀವನಾಂಶ ಕೇಳಿದ್ದಾರೆ.
ಈ ವಿಚ್ಚೇದನ ಪ್ರಕರಣದ ಕುರಿತು ಭೋಜಪುರಿ ನಟಿ ಹಾಗೂ ಪವನ್ ಸಿಂಗ್ ಮಾಜಿ ಪ್ರೇಯಸಿ ಅಕ್ಷರಾ ಸಿಂಗ್ ಹೇಳಿಕೆ ನೀಡಿದ್ದಾರೆ. ಪಾಟ್ನಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡು ವೇಳೆ ಜೀವನಾಂಶದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಅಕ್ಷರಾ ಸಿಂಗ್, "ಯಾವುದಾದರೂ ವ್ಯಕ್ತಿ ಮದುವೆಯಾಗಿ ಹುಡುಗಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದರೆ, ಅಲ್ಲಿಂದ ಆಕೆಯ ಜವಾಬ್ದಾರಿ ಅವನದ್ದೇ. ಆ ಹೆಣ್ಣು ಅವನಿಂದ ಜೀವನಾಂಶ ಪಡೆಯುವುದು ಅವಳ ಹಕ್ಕು" ಎಂದು ಹೇಳಿದ್ದಾರೆ.
ನಟಿ ಅಕ್ಷರಾ ಸಿಂಗ್ ಜೀವನಾಂಶದ ಬಗ್ಗೆ ಕೊಟ್ಟಿರುವ ಹೇಳಿಕೆ ವೈರಲ್ ಆಗುತ್ತಿದೆ. "₹10 ಅಥವಾ ₹20 ಕೋಟಿ ಎಂಬುದು ಚಿಕ್ಕ ವಿಷಯ. ಒಂದು ವೇಳೆ ಯಾವುದಾದರೂ ಹೆಣ್ಣು ತೀವ್ರ ತೊಂದರೆಗಳನ್ನು ಅನುಭವಿಸಿದ್ದರೆ, ಆಕೆಗೆ ₹100 ಕೋಟಿ ರೂಪಾಯಿ ಕೂಡ ಕಡಿಮೆಯಾಗಿಯೇ ಕಾಣುತ್ತದೆ. ಇಂತಹ ಮಹಿಳೆಯರಿಗೆ ಸಮಾಜವು ಬೆಂಬಲ ನೀಡಬೇಕು" ಎಂದು ಅಕ್ಷರಾ ಸಿಂಗ್ ಹೇಳಿಕೆ ಕೊಟ್ಟಿದ್ದು, ವೈರಲ್ ಆಗುತ್ತಿದೆ.
ಜ್ಯೋತಿ ಸಿಂಗ್ ಪತಿ ಪವನ್ ಸಿಂಗ್ ಮತ್ತು ಅವರ ಕುಟುಂಬದ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪವನ್ ಸಿಂಗ್ ಮನೆಯವರು ಹೊಡೆದರು, ಬೈದರು. ಅಷ್ಟೇ ಅಲ್ಲದೆ, ಬಲವಂತವಾಗಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದರು. ಒಪ್ಪದೇ ಇದ್ದಕ್ಕೆ ಜೀವ ಬೆದರಿಕೆ ಹಾಕಿದರೆಂದು ಗಂಭೀರ ಆರೋಪವನ್ನೂ ಮಾಡಿದ್ದಾರೆ. ಅತ್ತೆ ಮತ್ತು ನಾದಿನಿ ಆತ್ಮಹತ್ಯೆಗೂ ಪ್ರಚೋದನೆ ನೀಡಿದ್ದರೆಂದು ಆರೋಪಿಸಲಾಗಿದೆ. ಪವನ್ ಸಿಂಗ್ ಹಾಗೂ ಜ್ಯೋತಿ ಸಿಂಗ್ ಅವರ ಇಡೀ ಪ್ರಕರಣ ನ್ಯಾಯಾಲಯದಲ್ಲಿದ್ದು, ಮುಂದಿನ ವಿಚಾರಣೆ ಏನಾಗುತ್ತೆ ಎಂದು ನೋಡಬೇಕಿದೆ.


Click it and Unblock the Notifications











