ಈ ಬಾಲಿವುಡ್ ನಟಿಯನ್ನು 'ಲೋ ಕ್ಲಾಸ್ ಕಿಮ್ ಕರ್ದಾಶಿಯಾನ್' ಎಂದು ಟ್ರೋಲ್ ಮಾಡುತ್ತಿರೋದೇಕೆ?
ಬಾಲಿವುಡ್‌ನ ಪ್ರತಿಭಾವಂತ ನಟಿಯರ ಪಟ್ಟಿಯಲ್ಲಿ ಭೂಮಿ ಪಡ್ನೇಕರ್ ಹೆಸರು ಕೂಡ ಇದೆ. ರೆಗ್ಯೂಲ್ ಸಿನಿಮಾಗಳಿಗೆ ಬ್ರೇಕ್ ಹಾಕಿ, ವಿಶಿಷ್ಟ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಭಾರಿದ ತೂಕದ ಮಹಿಳೆಯ ಪಾತ್ರದ ಮೂಲಕವೇ ಬಾಲಿವುಡ್‌ಗೆ ಈ ನಟಿಯ ಎಂಟ್ರಿ ಆಗಿತ್ತು. ಸಾಮಾನ್ಯವಾಗಿ ಗ್ಲಾಮರ್ ರೋಲ್‌ಗಳ ಮೂಲಕವೇ ನಟಿಯರು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಇಷ್ಟ ಪಡುತ್ತಾರೆ. ಆದರೆ, ಭೂಮಿ ದಾರಿ ಬೇರೆನೇ ಇತ್ತು.
ಇದೇ ದಾರಿ ಈಗ ಭೂಮಿ ಪೆಡ್ನೇಕರ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇತ್ತೀಚೆಗೆ ಸಿನಿಮಾಗಳಲ್ಲಿ ಅದೆಷ್ಟೇ ಗ್ಲಾಮರ್ ಆಗಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ, ಜನರು ಈ ನಟಿಯನ್ನು ಗ್ಲಾಮರಸ್ ರೋಲ್‌ಗಳಲ್ಲಿ ಅಷ್ಟಾಗಿ ಇಷ್ಟ ಪಡುತ್ತಿಲ್ಲ. ಇನ್ನು ಪಾರ್ಟಿಗಳಿಗೆ ಹೋಗುವಾಗ ಸೆಲೆಬ್ರೆಟಿಗಳ ಡ್ರೆಸ್ ಮೇಲೂ ಕಣ್ಣಿಟ್ಟಿರುತ್ತಾರೆ. ಅವರ ಕಾಸ್ಟ್ಯೂಮ್ ಅಭಿರುಚಿಯ ಬಗ್ಗೆ ವರದಿಗಳಾಗುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತೆ.
ಈಗ ಬಾರಿ ಇದೇ ಬಾಲಿವುಡ್ ನಟಿ ಭೂಮಿ ಪಡ್ನೆಕರ್ ಸೋಶಿಯಲ್ ಮೀಡಿಯಾದಲ್ಲಿ ಹೆವಿಯಾಗಿ ಟ್ರೋಲ್ ಆಗುತ್ತಿದ್ದಾರೆ. ಇತ್ತೀಚೆಗೆ ಓಟಿಟಿ ಸಂಸ್ಥೆ ನೆಟ್‌ಫ್ಲಿಕ್ಸ್ ಬಾಲಿವುಡ್ ಸೆಲೆಬ್ರೆಟಿಗಳಿಗಾಗಿ ಪಾರ್ಟಿಯೊಂದನ್ನು ಅರೇಂಜ್ ಮಾಡಿತ್ತು. ಅದರಲ್ಲಿ ಭೂಮಿ ಟಾಪ್‌ನಲ್ಲಿ ಕಪ್ಪು ಬಣ್ಣದ ಮೆಶ್ ಇರುವ ಡ್ರೆಸ್ ಅನ್ನು ಧರಿಸಿ ಹೋಗದಿದ್ದರು. ಇದೇ ಡ್ರೆಸ್ ಅನ್ನು ಮುಂದಿಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

ಭೂಮಿ ಪೆಡ್ನೇಕರ್ ಔಟ್‌ಫಿಟ್ ನೋಡಿದ ಕೂಡಲೇ ಟ್ರೋಲಿಗರು ಅಲರ್ಟ್ ಆಗಿದ್ದಾರೆ. ಅಮೆರಿಕದ ಮಾಡಲ್ ಕಮ್ ಉದ್ಯಮಿಯಾಗಿರುವ ಕಿಮ್ ಕರ್ದಾಶಿಯಾನ್ ಮುಂದಿಟ್ಟುಕೊಮಡು ಟ್ರೋಲ್ ಮಾಡುತ್ತಿದ್ದಾರೆ. 'ಭೂಮಿ ಪಡ್ನೇಡಕರ್ ಒಬ್ಬ ಲೋ ಕ್ಲಾಸ್ ಕಿಮ್ ಕರ್ದಾಶಿಯಾನ್" ಎಂದು ಟೀಕಿಸಿದ್ದಾರೆ. ಕಿಮ್ ಕೂಡ ಹೆಚ್ಚಾಗಿ ಬ್ಲಾಕ್ ಕಲರ್ ಡ್ರೆಸ್‌ನಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.
ಮತ್ತೆ ಕೆಲವರು ಈ ಫೋಟೊಗಳನ್ನು ನೋಡುತ್ತಿದ್ದಂತೆ, "ತುಟಿಗಳ ಶಸ್ತ್ರಚಿಕಿತ್ಸೆಯಲ್ಲಿ ಎಡವಟ್ಟಾಗಿದೆ" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಉರ್ಫಿಯ ತಂಗಿ ಸಿಕ್ಕಿದಳು" ಎಂದು ಹೇಳುತ್ತಿದ್ದಾರೆ. ನೆಟ್‌ಫ್ಲಿಕ್ಸ್ ಪಾರ್ಟಿಗೆ ಹೋಗಿದ್ದ ಭೂಮಿ ಪೆಡ್ನೇಕರ್ ಟ್ರೋಲ್‌ಗೆ ಸಿಕ್ಕು ಒದ್ದಾಡುವಂತಾಗಿದೆ.

ಕೆಲವು ದಿನಗಳ ಹಿಂದಷ್ಟೇ ಭೂಮಿ ಪೆಡ್ನೇಕರ್ 'ಮಿಸ್ಟರಿ ಮ್ಯಾನ್' ಕಿಕ್ ಮಾಡಿದ್ದರು. ಈ ವಿಚಾರದ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಬಳಿಕ ಆ ವ್ಯಕ್ತಿ ಯಶ್ ಕಠಾರಿಯಾ ಅನ್ನೋ ವ್ಯಕ್ತಿ ಎಂಬುದು ಬೆಳಕಿಗೆ ಬಂದಿದ್ದು, ಇನ್ನೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.


Click it and Unblock the Notifications











