ಮದ್ವೆಯಾದ 2 ತಿಂಗಳಲ್ಲೇ ನಟಿಯೊಂದಿಗೆ ಸರಸ; ಪತ್ನಿಯ ಕೈಯಲ್ಲಿ ಸಿಕ್ಕಿಬಿದ್ದ ಆ ಬಾಲಿವುಡ್‌ನ ಸ್ಟಾರ್ ಯಾರು?
ಬಾಲಿವುಡ್ ತಾರೆಯರ ಮದುವೆ ಒಂದು ಹಬ್ಬವಿದ್ದಂತೆ. ಐಷಾರಾಮಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಕೋಟಿ ಲೆಕ್ಕದಲ್ಲಿ ಹಣ ಸುರಿದು ಮದುವೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ, ದೀಪಿಕಾ ಪಡುಕೋಣೆ-ರಣ್‌ವೀರ್ ಸಿಂಗ್, ಕಿಯಾರಾ ಅಡ್ವಾಣಿ-ಸಿದ್ಧಾರ್ಥ್ ಮಲ್ಹೋತ್ರಾ ಹೀಗೆ ಸಾಕಷ್ಟು ಸ್ಟಾರ್‌ಗಳ ಮದುವೆ ಸಾಕ್ಷಿಯಾಗಿ ಸಿಗುತ್ತವೆ.
ಇಂತಹ ಸೆಲೆಬ್ರಿಟಿಗಳ ಮದುವೆಯ ಸುಂದರ ಕ್ಷಣಗಳನ್ನು ಸೆರೆ ಹಿಡಿಯುವುದಕ್ಕೆ ಅಂತಲೇ ಒಂದು ಟೀಮ್ ಇರುತ್ತೆ. ಸಿನಿಮಾಗಿಂತ ಅದ್ಭುತವಾಗಿ ಅವರ ಮದುವೆ ಕ್ಷಣಗಳನ್ನು ಸೆರೆ ಹಿಡಿಯುತ್ತಾರೆ. ಅಂತಹವರಿಗೆ ಬಾಲಿವುಡ್ ಮಂದಿ ಕೊಟ್ಟಿರುವ ಹೆಸರು ವೆಡ್ಡಿಂಗ್ ಫಿಲ್ಮ್‌ಮೇಕರ್. ಸದ್ಯ ಅಂತಹವರಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ಫಿಲ್ಮ್ ಮೇಕರ್ 'ದಿ ವೆಡ್ಡಿಂಗ್ ಫಿಲ್ಮರ್'ನ ಮಾಲೀಕ ವಿಶಾಲ್ ಪಂಜಾಬಿ.

ವಿಶಾಲ್ ಪಂಜಾಬಿ ಬಾಲಿವುಡ್ ಸೆಲೆಬ್ರಿಟಿಗಳ ವೆಡ್ಡಿಂಗ್ ವಿಡಿಯೋ ಮಾಡುತ್ತಾರೆ. ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ, ದೀಪಿಕಾ ಪಡುಕೋಣೆ-ರಣ್‌ವೀರ್ ಸಿಂಗ್ ಅಂತಹ ದಿಗ್ಗಜರ ಮದುವೆಗಳನ್ನು ತಮ್ಮದೇ ಶೈಲಿಯಲ್ಲಿ ಸೆರೆ ಹಿಡಿದಿದ್ದಾರೆ.
ಈತನ ಬಗ್ಗೆ ಯಾಕೆ ಈಗ ಚರ್ಚೆ ಅಂದರೆ, ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಬಾಲಿವುಡ್ ಸ್ಟಾರ್ ನಟನ ಬಗ್ಗೆ ಸಂಚಲನ ಮೂಡಿಸುವಂತಹ ಕಾಮೆಂಟ್ ಒಂದನ್ನು ಮಾಡಿದ್ದಾರೆ. ಬಾಲಿವುಡ್‌ನ ಬಿಗ್ ಸ್ಟಾರ್ ನಟ ಮದುವೆಯಾದ ಎರಡು ತಿಂಗಳಿಗೆ ಬೇರೆಯೊಂದು ನಟಿಯ ಮುಂದೆ ಬೆತ್ತಲಾಗಿ ಪತ್ನಿಯ ಕೈಗೆ ಸಿಕ್ಕಿಬಿದ್ದಿದ್ದ ಅಂತ ಹೇಳಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಡಿಜೆ ಸಿಮ್ಜ್ ಅನ್ನುವವರ ಪಾಡ್‌ಕಾಸ್ಟ್‌ನಲ್ಲಿ ವಿಶಾಲ್ ಪಂಜಾಬಿ ಸೆನ್ಸೇಷನಲ್ ಸೃಷ್ಟಿಸುವ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಯೂಟ್ಯೂಬರ್ ನೀವು ವೆಡ್ಡಿಂಗ್ ವಿಡಿಯೋ ಮಾಡಿದ ಯಾವುದಾದರೂ ಜೋಡಿ ವಿಚ್ಚೇದನಕ್ಕೆ ಮುಂದಾಗಿದ್ದಾರಾ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಆಗ ವಿಶಾಲ್ ಪಂಜಾಬಿ ಬಾಲಿವುಡ್‌ನ ಸ್ಟಾರ್ ನಟನೊಬ್ಬ ಮದುವೆಯಾದ ಎರಡು ತಿಂಗಳಿಗೆ ವ್ಯಾನಿಟಿ ವ್ಯಾನ್‌ನಲ್ಲಿ ನಟಿಯೊಂದಿಗೆ ಬೆತ್ತಲಾಗಿದ್ದ. ಆ ವೇಳೆ ಪತ್ನಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಎಂದು ಹೇಳಿದ್ದಾರೆ.
ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಾಲಿವುಡ್ ಆ ಸ್ಟಾರ್ ನಟ ಯಾರು? ಅಂತ ಹುಡುಕುವುದಕ್ಕೆ ಶುರು ಮಾಡಿದ್ದಾರೆ. ಆ ಬಾಲಿವುಡ್ ನಟ ಯಾರು? ನಟಿ ಯಾರು ಅಂತ ತಲೆಕೆಡಿಸಿಕೊಂಡಿದ್ದಾರೆ. ವಿಶಾಲ್ ಪಂಜಾಬಿ ಈ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಬಾಲಿವುಡ್‌ನ ಆ ಸ್ಟಾರ್ ನಟ ಯಾರು ಅಂತ ತಲೆಗೆ ಹುಳ ಬಿಟ್ಟುಕೊಂಡು ಹುಡುಕುತ್ತಿದ್ದಾರೆ.
ಈ ಘಟನೆಯ ಬಳಿಕ ಆ ಬಾಲಿವುಡ್ ನಟ ಅವರ ವೆಡ್ಡಿಂಗ್ ವಿಡಿಯೋ ಮಾಡಿದ್ದ ವಿಶಾಲ್ ಪಂಜಾಬಿ ಫೋನ್ ಕಾಲ್ ಸ್ವೀಕರಿಸಲೇ ಇಲ್ಲ. ಹಾಗೇ ಆತ ಪತ್ನಿಗೆ ಕರೆ ಮಾಡಿದರೆ, ಆ ವಿಡಿಯೋವನ್ನು ತೆಗೆದುಕೊಳ್ಳುವುದಕ್ಕೆ ಆಸಕ್ತಿ ತೋರಲಿಲ್ಲವಂತೆ. ಇನ್ನೂ ಆ ವೆಡ್ಡಿಂಗ್ ವಿಡಿಯೋಗೆ ಹಣವನ್ನು ಕೊಟ್ಟಿಲ್ಲ. ಹೀಗಾಗಿ ಅವರ ಮದುವೆ ವಿಡಿಯೋ ತನ್ನ ಬಳಿಯೇ ಇದೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ವಿಶಾಲ್ ಪಂಜಾನಿ ಬಾಲಿವುಡ್‌ನ ಜನಪ್ರಿಯ ವೆಡ್ಡಿಂಗ್ ವಿಡಿಯೋ ಫಿಲ್ಮ್‌ಮೇಕರ್ ಎನಿಸಿಕೊಂಡಿದ್ದಾರೆ. 2013ರಲ್ಲಿ ತೆರೆಕಂಡಿದ್ದ, ರಣ್‌ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಬಾಲಿವುಡ್ ಸಿನಿಮಾ 'ಯೆ ಜವಾನಿ ಹೇ ದಿವಾನಿ' ಸಿನಿಮಾದ ಮದುವೆ ಸನ್ನಿವೇಶವನ್ನು ಇವರೇ ಶೂಟ್ ಮಾಡಿದ್ದರು. ಸದ್ಯ ವಿಶಾಲ್ ಪಂಜಾಬಿ ಸಂದರ್ಶನದ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











