ಬಾಲಿವುಡ್ ಮಂದಿ ಪಕ್ಕ ನಿಂತು ಅವ್ರಿಂದ್ಲೇ ₹25 ಲಕ್ಷ ಪೀಕುವ ಈ ವ್ಯಕ್ತಿ ಯಾರು? ಈತನ ಹಿನ್ನೆಲೆಯೇನು?
ರಿಯಾಲಿಟಿ ಶೋ ಬಿಗ್ ಬಾಸ್ ಹಿಂದಿಗೆ ಹೋಗಿ ಬಂದ್ಮೇಲೆ ಈತ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿದ್ದಾನೆ. ಬಾಲಿವುಡ್ ಮಂದಿ ಹೋಗುವ ಪ್ರತಿಯೊಂದು ಪಾರ್ಟಿಗಳಲ್ಲೂ ಈತ ಪ್ರೆಸೆಂಟ್ ಇರುತ್ತಾನೆ. ಸೆಲೆಬ್ರಿಟಿಗಳ ಜೊತೆನೇ ಓಡಾಡುತ್ತಾನೆ. ಅವರೊಂದಿಗೆ ನಿಂತು ಫೋಟೊ ತೆಗೆಸಿಕೊಳ್ಳುತ್ತಾನೆ. ಆ ಮಟ್ಟಿಗೆ ಈತ ಫೇಮಸ್. ಈತನ ಹೆಸರು ಒರ್ಹಾನ್ ಅವತ್ರಮಣಿ ಉರ್ಫ್ ಒರ್‍ರಿ.
ಒರ್‍ರಿ ಅಲಿಯಾಸ್ ಒರ್ಹಾನ್ ಅವತ್ರಮಣಿ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿಲ್ಲ. ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಂಡಿಲ್ಲ. ಟಿವಿ ಸೀರಿಯಲ್‌ಗಳಲ್ಲೂ ನಟಿಸಿಲ್ಲ. ಹೀಗಿದ್ದರೂ, ಬಾಲಿವುಡ್ ನಟ-ನಟಿಯರ ಫೇವರಿಟ್ ನಟನೀತ. ಒರ್‍ರಿ ಅಂದರೆ ಬಾಲಿವುಡ್ ಮಂದಿಗೆ ಎಲ್ಲಿಲ್ಲದ ಪ್ರೀತಿ. ತನ್ನ ಹಿಂದೆ ಮುಂದೆ ಓಡಾಡಿಸಿಕೊಂಡು ಇರುತ್ತಾರೆ.

ಒರ್ಹಾನ್ ಅವತ್ರಮಣಿ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ. ಈ ವೇಳೆ ಸೆಲೆಬ್ರಿಟಿಗಳು ತನ್ನನ್ನು ಯಾಕೆ ಇಷ್ಟ ಪಡುತ್ತಾರೆ? ಫಾರ್ಮ್‌ಹೌಸ್‌ಗೆ ಕರೆಸಿಕೊಂಡು ತನ್ನನ್ನು ಟಚ್ ಮಾಡುವುದಕ್ಕೆ 25 ಲಕ್ಷ ರೂಪಾಯಿ ಕೊಡುತ್ತಾರೆ ಅಂತ ಹೇಳಿ ಸಂಚಲನ ಸೃಷ್ಟಿಸಿದ್ದಾರೆ. ಬರೀ ಟಚ್ ಮಾಡಿಸಿಕೊಂಡು ಲಕ್ಷ ದುಡಿಯುವ ಈತನ ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಏನು? ಬಾಲಿವುಡ್‌ನಲ್ಲಿ ಈತನ ಪ್ಲ್ಯಾನ್ ಏನು? ಅನ್ನುವುದನ್ನು ತಿಳಿಯಲು ಮುಂದೆ ಓದಿ..
ಒರ್‍ರಿ ಇತ್ತೀಚೆಗೆ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ ಈವೆಂಟ್‌ನಲ್ಲಿ ಭಾಗಿಯಾಗಿದ್ದ. ಈ ವೇಳೆ ಅಂತರಾಷ್ಟ್ರೀಯ ಮಟ್ಟದ ಪಾಪ್ ಸಿಂಗರ್ ರಿಹಾನ್ನ ಜೊತೆ ಫೋಟೊ ನಿಂತು ಪೋಸ್ ಕೊಟ್ಟಿದ್ದ. ಆ ವೇಳೆನೂ ಒರ್‍ರಿ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು.

ಬಾಲಿವುಡ್ ಸ್ಟಾರ್ ಕಿಡ್‌ಗಳ ಜೊತೆ ಓಡಾಡುವ ಒರ್‍ರಿ ಅಲಿಯಾಸ್ ಒರ್ಹಾನ್ ಅವತ್ರಮಣಿ ಎಷ್ಟೇ ಫೇಮಸ್ ಆಗಿದ್ದರೂ, ತನ್ನ ಫ್ಯಾಮಿಲಿ ಬಗ್ಗೆ ಎಲ್ಲೂ ರಿವೀಲ್ ಮಾಡಿಲ್ಲ. ತಂದೆ-ತಾಯಿಯಿಂದ ಹಿಡಿದು ಕುಟುಂಬದ ಸದಸ್ಯರ ಬಗ್ಗೆ ಮಾಹಿತಿ ಹಂಚಿಕೊಂಡಿರಲಿಲ್ಲ. ಅಷ್ಟಕ್ಕೂ ಒರ್‍ರಿ ತನ್ನ ಫ್ಯಾಮಿಲಿ ಬಗ್ಗೆ ಚಿಕ್ಕ ಸುಳಿವು ಇಲ್ಲಿದೆ.
ಒರ್‍ರಿಗೆ ಇಬ್ಬರು ಸಹೋದರು ಇದ್ದಾರೆ. ಒಬ್ಬರು ಅಣ್ಣ. ಇನ್ನೊಬ್ಬ ತಮ್ಮ. ಒರ್‍ರಿ ಇಬ್ಬರು ಸಹೋದರರು ಕೂಡ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಒಬ್ಬರು ನ್ಯೂಯಾರ್ಕ್‌ನಲ್ಲಿ ಇದ್ದರೆ, ಇನ್ನೊಬ್ಬರು ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಆದರೆ, ಒರ್‍ರಿ ಮಾತ್ರ ತನ್ನ ಪೋಷಕರೊಂದಿಗೆ ಇದ್ದಾರೆ. ಆರಂಭದ ದಿನಗಳಲ್ಲಿ ಒರ್‍ರಿ ಜನಪ್ರಿಯತೆ ಕಂಡು ಪೋಷಕರು ಖುಷಿ ಪಟ್ಟಿದ್ದರಂತೆ. ಬಳಿಕ ಅದರಿಂದ ಹೊರಬಂದಿದ್ದಾಗಿ ಹೇಳಿಕೊಂಡಿದ್ದಾರೆ.
ಒರ್‍ರಿ ಬಗ್ಗೆ ಇಷ್ಟೊಂದು ಚರ್ಚೆಯಾಗುವುದಕ್ಕೆ ಕಾರಣವಿದೆ. ತನಗೆ ಕೆಲಸ ಮಾಡುವುದಕ್ಕೆ ಇಷ್ಟವಿಲ್ಲ. ಒಂದು ಕಾರ್ಯಕ್ರಮದಲ್ಲಿ ಭಾಗಿಯಾದರೆ, ಸೆಲೆಬ್ರಿಟಿಗಳೇ 15 ರಿಂದ 30 ಲಕ್ಷ ರೂಪಾಯಿ ಕೊಡುತ್ತಾರೆ ಎಂದು ಹೇಳಿಕೊಂಡಿದ್ದಾನೆ. ಹೀಗಾಗಿ ಕೆಲಸವೇ ಮಾಡದೆ ಒರ್‍ರಿ ದುಡಿಯುವ ಪರಿ ಬಗ್ಗೆ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.


Click it and Unblock the Notifications











