"ಜವಾನ್’ ಸಿನಿಮಾ ನೋಡುವುದಕ್ಕೆ ಜೋಷ್‌ನಲ್ಲಿ ಥಿಯೇಟರ್‌ಗೆ ಹೋಗಿ": ಅಭಿಮಾನಿಗಳಿಗೆ ಕರೆ ನೀಡಿದ ಕಿಂಗ್ ಖಾನ್

ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್ ಖಾನ್ ಇತ್ತೀಚೆಗೆ 'ಪಠಾಣ್' ಅಂತಹ ಮೆಗಾ ಬ್ಲಾಕ್‌ ಬಸ್ಟರ್ ಸಿನಿಮಾವನ್ನು ಕೊಟ್ಟು ಗೆದ್ದಿದ್ದಾರೆ. ಈಗ ಮತ್ತೊಂದು ಸಿನಿಮಾದ ಪ್ರಚಾರವನ್ನು ಈಗಾಗಲೇ ಶುರುಮಾಡಿದ್ದಾರೆ. ಅದುವೇ ತಮಿಳಿನ ಆಟ್ಲಿ ನಿರ್ದೇಶನ 'ಜವಾನ್'.

'ಪಠಾಣ್' ಜೊತೆ ಜೊತೆನೇ ಶಾರುಖ್ ಖಾನ್ 'ಜವಾನ್' ಸಿನಿಮಾದಲ್ಲಿ ನಟಿಸುತ್ತಿದ್ದರು. ಈ ಸಿನಿಮಾವೀಗ ಬಿಡುಗಡೆಗೆ ರೆಡಿಯಾಗುತ್ತಿದೆ. ಈಗಾಗಲೇ 'ಜವಾನ್' ಸಿನಿಮಾವನ್ನು ಸೆಪ್ಟೆಂಬರ್ 7ಕ್ಕೆ ಜಗತ್ತಿನಾದ್ಯಂತ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಪ್ಲಾನ್ ಮಾಡಿಟ್ಟುಕೊಂಡಿದೆ. ಈ ಸಿನಿಮಾ ಬಿಡುಗಡೆಗೆ ಇನ್ನೂ ಕೇವಲ ಎರಡೂವರೆ ತಿಂಗಳಿದೆಯಷ್ಟೆ. ಆದರೂ ಶಾರುಖ್ ಖಾನ್ ಅಥವಾ ಚಿತ್ರತಂಡ ಸಿಕ್ಕದೊಂದು ಸುಳಿವನ್ನು ಬಿಟ್ಟುಕೊಟ್ಟಿಲ್ಲ.

Bollwyood Superstar Shah Rukh Khan says watch Jawan movie with josh

ಈಗ ಬಾಲಿವುಡ್ ಕಿಂಗ್ ಶಾರುಖ್ ಖಾನ್ 'ಜವಾನ್' ಸಿನಿಮಾದ ಕುರಿತು ಒಂದು ಮಹತ್ವದ ಸುಳಿವನ್ನು ನೀಡಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಆಗಾಗ ಟ್ವಿಟರ್ ನಲ್ಲಿ #AskSRK ಎಂಬ ಪ್ರಶ್ನೋತ್ತರ ಸೆಷನ್‌ನಲ್ಲಿ ಭಾಗವಹಿಸೋ ಶಾರುಖ್ ಮತ್ತೆ ಅಂತಹದ್ದೇ ಒಂದು ಪ್ರಶ್ನೋತ್ತರದಲ್ಲಿ ಭಾಗಿಯಾಗಿದ್ದರು.

ಶಾರುಖ್ ಖಾನ್ ಚಿತ್ರರಂಗಕ್ಕೆ ಕಾಲಿಟ್ಟು ಇತ್ತೀಚೆಗೆ 31 ವರ್ಷಗಳನ್ನು ಪೂರೈಸಿದ ಬೆನ್ನಲ್ಲೇ ಅಭಿಮಾನಿಗಳೊಂದಿಗೆ ಕನೆಕ್ಟ್ ಆಗಿದ್ದರು. ಈ ಸಂಭ್ರಮವನ್ನು ತಮ್ಮ ಅಭಿಮಾನಿಗಳೊಂದಿಗೆ ಈ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸೆಲೆಬ್ರೆಟ್ ಮಾಡಿದ್ದಾರೆ. ಈ ವೇಳೆ ಸಿನಿಮಾದ ಬಗ್ಗೆ ಚಿಕ್ಕದೊಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ 31 ವರ್ಷಗಳಲ್ಲಿ ನೀವು ನಿರಂತರವಾಗಿ ಪಾಲಿಸುತ್ತಿರುವ ಒಂದು ವಿಷಯ ಏನು? ಎಂಬ ಪ್ರಶ್ನೆಯನ್ನು ಅಭಿಮಾನಿಯೊಬ್ಬ ಶಾರುಖ್ ಮುಂದಿಟ್ಟಿದ್ದ. ಆ ಪ್ರಶ್ನೆಗೆ ಉತ್ತರಿಸಿದ ಕಿಂಗ್ ಖಾನ್ "ಒಂದು ಸಿನಿಮಾವನ್ನು ಒಪ್ಪಿಕೊಂಡ ಬಳಿಕ ನನ್ನ ಪಾತ್ರದ ಹಿಂದಿನ ಕಥೆ ಮತ್ತು ಸಿದ್ಧಾಂತಗಳನ್ನು ಅಂದಾಜು ಮಾಡಿ ಬರೆದಿಟ್ಟುಕೊಳ್ಳುತ್ತೇನೆ. ಕೆಲವೊಮ್ಮೆ ಅದನ್ನು ನಿರ್ದೇಶಕರ ಜೊತೆಗೆ ಹಂಚಿಕೊಳ್ಳುತ್ತೇನೆ. ಅದು ಕಥೆಯ ರೂಪದಲ್ಲಿರಬಹುದು ಅಥವಾ ಕಾವ್ಯದ ರೂಪದಲ್ಲೂ ಇರಬಹುದು. ಕೆಲವೊಮ್ಮೆ ಯಾರಿಗೂ ತೋರಿಸದೆ ಎತ್ತಿಟ್ಟುಕೊಂಡಿದ್ದೂ ಇದೆ" ಎಂದು ಶಾರುಖ್ ಖಾನ್ ಹೇಳಿದ್ದಾರೆ.

Bollwyood Superstar Shah Rukh Khan says watch Jawan movie with josh

ಇಷ್ಟೇ ಅಲ್ಲದೆ ಅಭಿಮಾನಿಯೊಬ್ಬ ತಮಗೆ ಹುಟ್ಟಲಿರುವ ಅವಳಿ ಮಕ್ಕಳಿಗೆ 'ಪಠಾಣ್' ಹಾಗೂ 'ಜವಾನ್' ಎಂದು ಹೆಸರಿಡಬೇಕು ಅಂದುಕೊಂಡಿದ್ದೇನೆ ಎಂದು ಹೇಳಿದ್ದರು. ಅದಕ್ಕೆ ಶಾರುಖ್ "ಹೆಸರೇನೋ ಅದ್ಭುತವಾಗಿದೆ. ಆದರೆ, ಅದಕ್ಕೂ ಮಿಗಿಲಾದ ಇನ್ನೂ ಒಳ್ಳೆಯ ಹೆಸರುಗಳಿವೆ ಅದನ್ನಿಡಿ" ಎಂದು ಸಲಹೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ 'ಜವಾನ್' ಸಿನಿಮಾದ ಬಗ್ಗೆ ಖುಷಿ ಪಡುವ ಮಾಹಿತಿಯೊಂದನ್ನು ಶಾರುಖ್ ಖಾನ್ ಹಂಚಿಕೊಂಡಿದ್ದಾರೆ. "ಜವಾನ್ ಸಿನಿಮಾ ನೋಡುವುದಕ್ಕೆ ಜೋಶ್‌ನಿಂದಲೇ ಚಿತ್ರಮಂದಿರಕ್ಕೆ ಹೋಗಿ. ಸದ್ಯದಲ್ಲೇ ಟೀಸರ್ ಬಿಡುಗಡೆಯಾಗುತ್ತಿದೆ. ಟೀಸರ್ ಚೆನ್ನಾಗಿ ಮೂಡಿಬರುತ್ತಿದ್ದು, ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತದೆ ಎಂಬ ನಂಬಿಕೆ ತಮಗಿದೆ" ಅಭಿಮಾನಿಗಳಿಗೆ ಟೀಸರ್ ಬಗ್ಗೆ ಸುಳಿವು ನೀಡಿದ್ದಾರೆ.

'ಪಠಾಣ್' ಬಳಿಕ ಶಾರುಖ್ ಖಾನ್ ನಟಿಸುತ್ತಿರುವ ದುಬಾರಿ ಸಿನಿಮಾ 'ಜವಾನ್'. ಈ ಸಿನಿಮಾವನ್ನು ಅವರದ್ದೇ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್ ನಿರ್ಮಾಣ ಮಾಡಿದೆ. ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಜನಪ್ರಿಯ ನಟ,ನಟಿಯರೇ ನಿರ್ದೇಶನ ಮಾಡಿದ್ದಾರೆ. ತಮಿಳಿನ ರಾಕ್‌ಸ್ಟಾರ್ ಅನಿರುದ್ಧ್ ರವಿಚಂದರ್ ಟ್ಯೂನ್ ಹಾಕಿದ್ದಾರೆ.

More from Filmibeat

English summary
Bollwyood Superstar Shah Rukh Khan says watch Jawan movie with josh, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X