'ರಕ್ತ ಚರಿತ್ರ' ನಟನಿಗೆ ಇನ್‌ಸ್ಟಾಗ್ರಾಂ 56 ಲಕ್ಷ ಫಾಲೋವರ್ಸ್; ಸಿಕ್ಕಿದ ವೋಟು 155.. ಯಾರೀ ನಟ?

2024ರ ಮುಂಬೈ ವಿಧಾನ ಸಭೆ ಚುನಾವಣೆ ರೋಚಕವಾಗಿತ್ತು. ಯಾರ ಕಡೆಗೆ ಜನರ ಒಲವು ಇದೆ ಅನ್ನೋದನ್ನು ಕುತೂಹಲದಿಂದ ರಾಜಕೀಯ ವಲಯ ನೋಡುತ್ತಿತ್ತು. ಕೊನೆಗೂ ಮುಂಬೈ ವಿಧಾನ ಸಭೆ ಚುನಾವಣೆಯ ಫಲಿತಾಂಶ ಬಂದಿದೆ. ಈ ವೇಳೆ ಕೆಲವರು ಹೀನಾಯವಾಗಿ ಈ ಚುನಾವಣೆಯಲ್ಲಿ ಸೋತಿದ್ದಾರೆ. ಅವರಲ್ಲಿ ನಟ ಏಜಾಜ್ ಖಾನ್ ಕೂಡ ಒಬ್ಬರು.

ಬಾಲಿವುಡ್‌ ಕಿರುತೆರೆ ಹಾಗೂ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಏಜಾಜ್ ಖಾನ್ ಮುಂಬೈ ಮಂದಿಗೆ ಚಿರಪರಿಚಿತ. ಅದರಲ್ಲೂ ಹಿಂದಿ ಭಾಷೆಯನ್ನು ಮಾತಾಡುವ ಏರಿಯಾಗಳಲ್ಲಿ ಏಜಾಜ್ ಖಾನ್ ಪರಿಚಯವಿದೆ. ನಟನಾಗಿದ್ದ ಏಜಾಜ್ ಖಾನ್ ರಾಜಕಾರಣಿಯಾಗಿ ಬದಲಾಗಿದ್ದರು. ಈ ಬಾರಿ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಈ ನಟ ಹೀನಾಯವಾಗಿ ಸೋಲುಂಡಿದ್ದಾರೆ.

bollywood Actor Ajaz Khan got only 155 votes

ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ 'ರಕ್ತ ಚರಿತ್ರ 2' ಸಿನಿಮಾದಲ್ಲಿ ಏಜಾಜ್ ಖಾನ್ ನಟಿಸಿದ್ದರು. ಅಲ್ಲದೆ ಬಿಗ್ ಬಾಸ್ ಹಿಂದಿಯಲ್ಲೂ ಸ್ಪರ್ಧಿಯಾಗಿದ್ದರು. ಇಷ್ಟೆಲ್ಲ ಜನಪ್ರಿಯತೆ ಇರುವ ನಟನಿಗೆ ಇನ್‌ಸ್ಟಾಗ್ರಾಂನಲ್ಲಿ ಸುಮಾರು 56 ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ಸ್ ಇದ್ದಾರೆ. ಆದರೆ, ಈ ಫಾಲೋವರ್‌ಗಲ್ಲಿ ಕೇವಲ ಶೇ.1ರಷ್ಟು ಮತಗಳಾಗಿ ಬದಲಾಗಿಲ್ಲ. ಇದರಿಂದ ತೀವ್ರ ಮುಜುಗರವನ್ನು ಅನುಭವಿಸಬೇಕಾಗಿದೆ.

ಏಜಾಜ್ ಖಾನ್ ಮುಂಬೈನ ಪ್ರತಿಷ್ಠಿತ ಕ್ಷೇತ್ರವಾಗಿದ್ದ ವರ್ಸೋವಾದಿಂದ ಕಣಕ್ಕೆ ಇಳಿದಿದ್ದರು. ಚಂದ್ರಶೇಖರ್ ಅಜಾದ್ ಅವರ ಅಜಾದ್ ಸಮಾಜ್ ಪಾರ್ಟಿಯಿಂದ ಕಣಕ್ಕೆ ಇಳಿದಿದ್ದರು. ಆದರೆ, ತಮ್ಮ ಸೋಶಿಯಲ್ ಮೀಡಿಯಾದ ಜನಪ್ರಿಯತೆಯನ್ನು ಮತಗಳಾಗಿ ಪರಿವರ್ತನೆ ಮಾಡುವಲ್ಲಿ ಏಜಾಜ್ ಖಾನ್ ಸೋತಿದ್ದಾರೆ. ಕೇವಲ 155 ಮತಗಳನ್ನು ಪಡೆದು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.

ಮುಂಬೈನ ವರ್ಸೋವಾ ವಿಧಾನ ಸಭೆ ಕ್ಷೇತ್ರದಲ್ಲಿ ಏಜಾಜ್ ಖಾನ್‌ಗೆ ಸಿಕ್ಕಿರುವ ಮತಕ್ಕಿಂತ ನೋಟಾಗೆ ಹೆಚ್ಚು ವೋಟು ಬಿದ್ದಿವೆ. ಈ ಕ್ಷೇತ್ರದಲ್ಲಿ ನೋಟಾಗೆ 1298 ವೋಟುಗಳು ಬಿದ್ದಿವೆ. ಈ ಮೂಲಕ ಮಹಾರಾಷ್ಟ್ರ ಚುನಾವಣೆಯಲ್ಲಿ ಕೆಟ್ಟದಾಗಿ ಸೋಲುಂಡ ಅಭ್ಯರ್ಥಿಗಳ ಸಾಲಿನಲ್ಲಿ ನಟ ಏಜಾಜ್ ಖಾನ್ ಕೂಡ ಸೇರಿಕೊಂಡಿದ್ದಾರೆ. ಈ ಮೂಲಕ ಸೋಶಿಯಲ್ ಮೀಡಿಯಾದ ಜನಪ್ರಿಯತೆ ರಾಜಕೀಯದಲ್ಲಿ ನಡೆಯುವುದಿಲ್ಲ ಅನ್ನೋದು ಮುಂಬೈ ಅಂತಹ ನಗರದ ಜನರು ಸಾಬೀತು ಮಾಡಿದ್ದಾರೆ.

ನಟ ಏಜಾಜ್ ಖಾನ್ ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಇವರು ಬಹುತೇಕ ಖಳನಾಯಕನಾಗಿ ಕಂಡಿದ್ದೇ ಹೆಚ್ಚು. ತೆಲುಗಿನಲ್ಲಿ ರಾಮ್‌ ಗೋಪಾಲ್ ವರ್ಮಾ ನಿರ್ದೇಶಿಸಿದ 'ರಕ್ತ ಚರಿತ್ರ' ಸಿನಿಮಾದಲ್ಲಿ ನಟಿಸಿದ್ದರು. ಹಾಗೇ ಜೂ.ಎನ್‌ಟಿಆರ್ ನಟನೆಯ 'ಬಾದ್‌ಷಾ', 'ಟೆಂಪರ್', ರಾಮ್‌ ಚರಣ್ ನಟನೆಯ 'ನಾಯಕ್' ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೇ ಕನ್ನಡ ಸಿನಿಮಾ 'ರೋಗ್‌'ನಲ್ಲಿಯೂ ಏಜಾಜ್ ಖಾನ್ ನಟಿಸಿದ್ದರು.

ವರ್ಸೋವಾ ಕ್ಷೇತ್ರದಲ್ಲಿ ಏಜಾಜ್ ಖಾನ್ ಸೋಲು ಅದೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಅಂದ್ಹಾಗೆ ಈ ಕ್ಷೇತ್ರದಿಂದ ಶಿವಸೇನೆಯ ಹರೂನ್ ಖಾನ್ ಗೆಲು ಸಾಧಿಸಿದ್ದಾರೆ. ಸೋಶಿಯಲ್ ಮೀಡಿಯ ಹಾಗೂ ಸಿನಿಮಾ ಜನಪ್ರಿಯತೆ ರಾಜಕೀಯ ಕ್ಷೇತ್ರದಲ್ಲಿ ನಡೆಯುವುದಿಲ್ಲ ಅನ್ನೋದು ಈ ಮೂಲಕ ಸಾಬೀತಾದಂತೆ ಆಗಿದೆ.

ಏಜಾಜ್ ಖಾನ್‌ರಂತೆ ಹಲವು ಕ್ಷೇತ್ರದಲ್ಲಿ ತೀರಾ ಕಡಿಮೆ ಮತಗಳನ್ನು ಪಡೆದ ಅಭ್ಯರ್ಥಿಗಳು ಇದ್ದಾರೆ. ಮುಂಬೈನ ವಿಧಾನ ಸಭೆ ಕ್ಷೇತ್ರ ಫಲಿತಾಂಶ ಹೊರ ಬಿದ್ದಿದ್ದು ಮಹಾಯತಿ ಮೈತ್ರಿಕೂಟ ಸರ್ಕಾರ ರಚನೆಯನ್ನು ಮಾಡಲಿದೆ. ಸರ್ಕಾರ ರಚನೆ ಮಾಡಲು 145 ಸೀಟುಗಳು ಬೇಕಿತ್ತು. ಆದರೆ, ಮಹಾಯತಿ ಮೈತ್ರಿ ಕೂಟ 234 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಫಲಿತಾಂಶ ಬಿಜೆಪಿ ಪಕ್ಷ ಹಾಗೂ ಅದರ ಮೈತಿ ಪಕ್ಷಗಳು ನಿರಾಯಾಸವಾಗಿ ಸರ್ಕಾರ ರಚನೆ ಮಾಡಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ.

More from Filmibeat

English summary
Bollywood Actor Ajaz Khan got only 155 votes who has 56 lakh followers in Instagram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X