ಅಕ್ಕಿನೇನಿ ಕುಡಿಗೆ ಟಕ್ಕರ್ ಕೊಟ್ಟ 'ಡಿನೋ ಮೋರಿಯಾ': ಹೇಗಿದೆ 'ಏಜೆಂಟ್' ಲುಕ್
ಟಾಲಿವುಡ್‌ನಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸೋಕೆ ಸಜ್ಜಾಗಿದೆ. ಅಕ್ಕಿನೇನಿ ಎರಡನೇ ಕುಡಿ ಅಖಿಲ್ ನಟನೆಯ 'ಏಜೆಂಟ್' ಸಿನಿಮಾ ಬಿಡುಗಡೆ ಸಜ್ಜಾಗಿದೆ. ಈ ಕ್ರೇಜ್ ಪ್ರಾಜೆಕ್ಟ್ ಸಿನಿಪ್ರೇಮಿಗಳಿಗೆ ಹೊಸ ಅಪ್‌ಡೇಟ್ ಕೊಟ್ಟಿದೆ.
ಅಖಿಲ್ ಅಕ್ಕಿನೇನಿ ಸಿನಿಮಾದಲ್ಲಿ ಸ್ಟಾರ್ ನಟರೇ ಕಾಣಿಸಿಕೊಂಡಿದ್ದಾರೆ. ಅಖಿಲ್‌ಗೆ ನಾಯಕಿಯಾಗಿ ಸಾಕ್ಷಿ ವೈದ್ಯ ನಟಿಸುತ್ತಿದ್ದಾರೆ. ಹಾಗೇ ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ಏಜೆಂಟ್' ಸಿನಿಮಾ ತಂಡ ಇಂದು ಮತ್ತೊಂದು ಪಾತ್ರವನ್ನು ಸಿನಿಪ್ರೇಮಿಗಳಿಗೆ ಪರಿಚಯ ಮಾಡಲಾಗಿದೆ. ಬಾಲಿವುಡ್‌ನ ಸ್ಟಾರ್ ನಟ ಡಿನೋ ಮೋರಿಯಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಆ ಪಾತ್ರದ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡುತ್ತಿದ್ದಾರೆ.
ಅಂದ್ಹಾಗೆ, ಡಿನೋ ಮೋರಿಯಾರನ್ನು ಈ ಸಿನಿಮಾದಲ್ಲಿ 'ದಿ ಗಾಢ್' ಎಂದು ಪರಿಚಯ ಮಾಡಲಾಗಿದೆ. ಬಾಲಿವುಡ್‌ನಲ್ಲಿ 'ರಾಝ್', 'ಅಕ್ಸರ್', 'ಜೂಲಿ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಿಯೋ ಮೋರಿಯಾ 'ಏಜೆಂಟ್' ಲುಕ್ ಕಿಲ್ಲಿಂಗ್ ಆಗಿದ್ದು, ಉದ್ದವಾದ ಕೇಶರಾಶಿ, ಮುಖದ ಮೇಲೆ ಗಾಯದ ಗುರುತು, ಕೈಯಲ್ಲಿ ಗನ್ ಹಿಡಿದು ಡಿನೋ ಮೋರಿಯಾ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

'ಏಜೆಂಟ್' ಪ್ಯಾನ್ ಇಂಡಿಯಾ ಸಿನಿಮಾ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಾಕಿದೆ. ಈಗಾಗಲೇ ಹಾಡುಗಳು ಕ್ರೇಜ್ ಹುಟ್ಟಿಸಿವೆ. ಅಲ್ಲದೆ 'ಏಜೆಂಟ್' ಝಲಕ್ ಇದು ನೆಕ್ಸ್ಟ್ ಲೆವೆಲ್ ಸಿನಿಮಾ ಅಂತ ನಿರೀಕ್ಷೆ ಮಾಡಲಾಗಿದೆ. ನಿನ್ನೆ ರಿಲೀಸ್ ಆಗಿರುವ ರಾಮ ಶ್ರೀಕೃಷ್ಣ ಎಂಬ ಹಾಡು ಕೂಡ ಬಜ್ ಕ್ರಿಯೇಟ್ ಮಾಡಿದೆ.
'ಏಜೆಂಟ್' ಸಿನಿಮಾದಲ್ಲಿ ಹೈವೋಲ್ಟೇಜ್ ಆಕ್ಷನ್ ದೃಶ್ಯಗಳಿವೆ. ಈ ಸಿನಿಮಾವನ್ನು 'ರಾಮ ಬ್ರಹ್ಮಂ ಸುಂಕರ AK ಎಂಟರ್ಟೈನ್ಮೆಂಟ್ಸ್ ಹಾಗೂ ಸುರೇಂದ್ರ 2 ಸಿನಿಮಾ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಅಖಿಲ್ ಅಕ್ಕಿನೇನಿ ನಟಿಸುತ್ತಿರುವ ದುಬಾರಿ ಸಿನಿಮಾವಿದು. ಹೀಗಾಗಿ ತೆಲುಗು ಚಿತ್ರರಂಗದಲ್ಲಷ್ಟೇ ಅಲ್ಲ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕುತೂಹಲ ಗಗನಕ್ಕೇರಿದೆ.
ಅಖಿಲ್ ಅಕ್ಕಿನೇನಿ ಅಭಿನಯದ 'ಏಜೆಂಟ್' ಸಿನಿಮಾಗೆ ವಕ್ಕನಾಥಂ ವಂಶಿ ಕಥೆ ಬರೆದಿದ್ದಾರೆ. ಅಲ್ಲದೆ ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಎಡಿಟಿಂಗ್ ಮಾಡಿದ್ದಾರೆ. ಅಲ್ಲದೆ ಅವಿನಾ ಕೊಲ್ಲ ಆರ್ಟ್ ಡೈರೆಕ್ಷನ್ ಮಾಡಿದ್ರೆ, ಅಜೇಯ್ ಸುಂಕರ, ಪಾತಿ ದೀಪ ರೆಡ್ಡಿ ಸಹ ನಿರ್ಮಾಣ ಮಾಡಿದ್ದಾರೆ. ಥಮೀಜಾ ಸಂಗೀತ ನೀಡಿದ್ದು, 'ಏಜೆಂಟ್' ಸಿನಿಮಾದ ರಸೂಲ್ ಎಲ್ಲೋರೆ ಕ್ಯಾಮೆರಾವರ್ಕ್ ಇದೆ .
ಅಖಿಲ್ ಅಕ್ಕಿನೇನಿ ಕರಿಯರ್‌ನಲ್ಲಿ ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿರುವ ಸಿನಿಮಾವಿದು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಇದೇ ಏಪ್ರಿಲ್ 18ಕ್ಕೆ ಥಿಯೇಟರ್‌ಗೆ ಅಖಿಲ್ ಅಕ್ಕಿನೇನಿ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದು, ಕೆರಿಯರ್‌ಗೆ ಬೆಸ್ಟ್ ಸಿನಿಮಾ ಸಿಗುತ್ತಾ? ಅನ್ನೋದನ್ನು ನೋಡಲು ಟಾಲಿವುಡ್ ಕಾಯುತ್ತಿದೆ.


Click it and Unblock the Notifications











