ಗೋವಿಂದ ಶೋನಲ್ಲಿ ಪಾಪರಾಜಿಗಳ ಜೊತೆ ಬೌನ್ಸರ್ಸ್ ಕಿತ್ತಾಟ; ಬಾಲಿವುಡ್ ನಟ ಎಂಟ್ರಿ ಕೊಟ್ಮೇಲೆ ಏನಾಯ್ತು?

ಬಾಲಿವುಡ್‌ನ ಚಾರ್ಮಿಂಗ್ ನಟ ಗೋವಿಂದ ಈಗ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಸಿನಿಮಾದಿಂದ ಬಹುತೇಕ ದೂರವೇ ಉಳಿದಿದ್ದಾರೆ. ಆದರೆ, ಒಂದಲ್ಲ ಒಂದು ಕಾರಣಕ್ಕೆ ಅವರ ಹೆಸರು ಚಾಲ್ತಿಯಲ್ಲಿ ಇದ್ದೇ ಇರುತ್ತೆ. ವಿವಾದಗಳಿಂದಲೋ, ವಿಚ್ಛೇದನದ ವಿಷಯಕ್ಕೋ, ಇಲ್ಲಾ ರಾಜಕೀಯ ಕಾರಣಕ್ಕೋ ಗೋವಿಂದ ಹೆಸರು ಓಡಾಡುತ್ತಲೇ ಇರುತ್ತೆ. ಈಗೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಬಾಲಿವುಡ್ ನಟ ಗೋವಿಂದ ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಆ ವೇಳೆ ಗೋವಿಂದ ಅವರನ್ನು ನೋಡುವುದಕ್ಕೆ ಜನ ಸಾಗವೇ ಸೇರಿತ್ತು. ಹಾಗೇ ಅವರ ಅಭಿಮಾನಿಗಳು, ಪಾಪರಾಜಿಗಳು ಕೂಡ ಇದ್ದರು. ಇಂತಹ ಸಮಯದಲ್ಲಿ ಒಂದು ಚಿಕ್ಕ ಗಲಾಟೆ ಕೂಡ ನಡೆದಿದೆ. ಈ ವೇಳೆ ಕುದ್ದಾಗಿ ಬಾಲಿವುಡ್ ನಟ ಗೋವಿಂದ ಎಂಟ್ರಿ ಕೊಟ್ಟು ಗಲಾಟೆಯನ್ನು ತಿಳಿಗೊಳಿಸಿದ್ದಾರೆ.

Bollywood actor Govinda bouncers and paparazzi fight at an event video is trending

ಅಷ್ಟಕ್ಕೂ ಗೋವಿಂದ ಹೋಗಿದ್ದ ಕಾರ್ಯಕ್ರಮದಲ್ಲಿ ಏನಾಯ್ತು? ಬೌನ್ಸರ್ಸ್ ಹಾಗೂ ಪಾಪರಾಜಿಗಳು ಕಿತ್ತಾಡಿಕೊಂಡಿದ್ದು ಏಕೆ? ಗೋವಿಂದ ನಡೆದುಕೊಂಡ ರೀತಿಗೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿರೋದು ಯಾಕೆ? ಆ ವಿಡಿಯೋ ಇಷ್ಟೊಂದು ಟ್ರೆಂಡ್ ಆಗ್ತಿರೋದು ಯಾಕೆ? ತಿಳಿಯುವುದಕ್ಕೆ ಮುಂದೆ ಓದಿ.

ಗೋವಿಂದ 90ರ ದಶಕದ ಸೂಪರ್‌ಸ್ಟಾರ್. ಯಾವ ಖಾನ್‌ಗಳಿಗೂ ಸಿಗದಷ್ಟು ಜನಪ್ರಿಯತೆ ಸಿಕ್ಕಿತ್ತು. ಒಂದರ ಹಿಂದೊಂದು ಸಿನಿಮಾಗಳು ಇವರನ್ನು ಹುಡುಕಿಕೊಂಡು ಬರುತ್ತಿತ್ತು. ಆ ಮಟ್ಟಿಗೆ ಬ್ಯುಸಿಯಾಗಿದ್ದ ನಟ. ಆದರೆ, ವೃತ್ತಿ ಬದುಕಿನ ಯಾವುದೋ ಒಂದು ಹಂತದಲ್ಲಿ ಗೋವಿಂದ ಎಡವಿದ್ದಾರೆ. ಹೀಗಾಗಿ ಸಿನಿಮಾಗಳಲ್ಲಿ ಅವಕಾಶಗಳು ಕಮ್ಮಿಯಾಗಿವೆ. ಆದರೆ, ಅವರ ಜನಪ್ರಿಯತೆ ಮಾತ್ರ ಇನ್ನೂ ಕಮ್ಮಿಯಾಗಿದೆ. ಅವರು ಹೋದಲ್ಲೆಲ್ಲ ಜನರು ಅವರನ್ನು ನೋಡುವುದಕ್ಕೆ ಮುತ್ತಿಕೊಳ್ಳುತ್ತಾರೆ.

Also Read
62ನೇ ವರ್ಷದಲ್ಲಿ ಅನೈತಿಕ ಸಂಬಂಧ ; ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದ ಗೋವಿಂದ- ಆ ನಟಿಗೆ ಧನ್ಯವಾದ ಹೇಳಿದ್ದೇಕೆ ?
62ನೇ ವರ್ಷದಲ್ಲಿ ಅನೈತಿಕ ಸಂಬಂಧ ; ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದ ಗೋವಿಂದ- ಆ ನಟಿಗೆ ಧನ್ಯವಾದ ಹೇಳಿದ್ದೇಕೆ ?

ಅಸಲಿಗೆ ವಿಷಯ ಏನಂದರೆ, ಕೆಲ ದಿನಗಳ ಹಿಂದಷ್ಟೇ ಗೋವಿಂದ ಕಾರ್ಯಕ್ರಮ ಒಂದಕ್ಕೆ ಹೋಗಿದ್ದರು. ಆ ವೇಳೆ ಗೋವಿಂದ ಅವರನ್ನು ನೋಡುವುದಕ್ಕೆ ಸಹಜವಾಗಿಯೇ ನೂಕು ನುಗ್ಗಲು ಶುರುವಾಗಿತ್ತು. ಇದನ್ನು ಕಂಟ್ರೋಲ್ ಮಾಡುವುದಕ್ಕೆ ಬೌನ್ಸರ್‌ಗಳು ಇದ್ದರು. ಗೋವಿಂದರನ್ನು ಕಂಟ್ರೋಲ್ ಮಾಡುವುದಕ್ಕೆ ಬೌನ್ಸರ್‌ಗಳು ಹರ ಸಾಹಸ ಮಾಡುತ್ತಿದ್ದರು. ಇತ್ತ ಪಾಪರಾಜಿಗಳು ಕೂಡ ಗೋವಿಂದ ಅವರ ವಿಜ್ಯೂವಲ್ ಅನ್ನು ತೆಗೆದುಕೊಳ್ಳುವುದಕ್ಕೆ ಪರದಾಡುತ್ತಿದ್ದರು. ಅಲ್ಲದೆ ಕಾರ್ಯಕ್ರಮದ ವ್ಯವಸ್ಥೆ ಕೂಡ ಸರಿಯಾಗಿ ಇಲ್ಲದೇ ಇದ್ದಿದ್ದರಿಂದ ಗೊಂದಲವೇ ಸೃಷ್ಟಿಯಾಗಿತ್ತು.

ಗೋವಿಂದ ಕಾರ್ಯಕ್ರಮಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಜನರು ಥ್ರಿಲ್ ಆಗಿದ್ದರು. ಗೋವಿಂದ ಕೂಡ ಅವರನ್ನು ರಂಜಿಸುವುದಕ್ಕೆ ಭರ್ಜರಿ ಸ್ಟೆಪ್ಸ್ ಹಾಕಿದ್ದರು. ಮಾಡಲ್‌ಗಳ ಜೊತೆ ಡ್ಯಾನ್ಸ್ ಮಾಡಿದ್ದರು. ಈ ವೇಳೆ ನೂಕುನುಗ್ಗಲು ಶುರುವಾಯ್ತು. ಆಗ ಬೌನ್ಸರ್‌ಗಳು ಜನರನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದರು. ಈ ನಡುವೆ ಬೌನ್ಸರ್‌ಗಳು ಹಾಗೂ ಪಾಪರಾಜಿಗಳನ್ನು ತಡೆಯುವ ಪ್ರಯತ್ನ ಮಾಡಿದರು. ಇದು ಅವರಿಬ್ಬರ ನಡುವೆ ವಾಗ್ವಾದಕ್ಕೂ ಕಾರಣವಾಗಿತ್ತು. ಪಾಪರಾಜಿಗಳು ಕೆಂಡಾಮಂಡಲವಾದರು.

ಇನ್ನೇನು ಪರಿಸ್ಥಿತಿ ಹದಗೆಡುತ್ತಿತ್ತು. ಬೌನ್ಸರ್‌ಗಳು ಹಾಗೂ ಪಾಪರಾಜಿಗಳ ನಡುವೆ ವಾಗ್ವಾದ ಹೆಚ್ಚಾಗುತ್ತಿತ್ತು. ಅದನ್ನು ಗಮನಿಸಿದ ಗೋವಿಂದ ಎಂಟ್ರಿ ಕೊಟ್ಟು ಇಬ್ಬರನ್ನೂ ಶಾಂತಗೊಳಿಸಿದರು. ಪಾಪರಾಜಿಗಳಿಗೆ ಅಲ್ಲಿನ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಡುವಲ್ಲಿ ಯಶಸ್ವಿಯಾದರು. ಇಂತಹ ಸಂದರ್ಭದಲ್ಲಿ ಗೋವಿಂದ ಆರಾಮಾಗಿ ಅಲ್ಲಿಂದ ನಿರ್ಗಮಿಸಬಹುದಿತ್ತು. ಆದರೆ, ಹಾಗೆ ಮಾಡಲಿಲ್ಲ. ಇಬ್ಬರನ್ನು ಶಾಂತಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಗೋವಿಂದ ಅವರ ಈ ನಡೆಗೆ ನೆಟ್ಟಿಗರು ಭೇಷ್ ಎಂದಿದ್ದಾರೆ. ಸ್ಟಾರ್ ಆಗಿದ್ದರೂ ಅವರು ನಡೆದುಕೊಂಡ ರೀತಿಯನ್ನು ಜನರು ಮೆಚ್ಚಿಕೊಂಡಿದ್ದಾರೆ.

English summary
Bollywood actor Govinda bouncers and paparazzi fight at an event video is trending.
Read more about: govinda paparazzi video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X