ಪ್ರಜ್ಞೆತಪ್ಪಿದ ಬಾಲಿವುಡ್ ನಟ ಗೋವಿಂದ; ಆಸ್ಪತ್ರೆಗೆ ದಾಖಲು

ಬಾಲಿವುಡ್‌ಗೆ ಶಾಕ್ ಮೇಲೆ ಶಾಕ್ ಆಗುತ್ತಲೇ ಇದೆ. ಚಿತ್ರರಂಗದ ಗಣ್ಯರು ಅನಾರೋಗ್ಯದಿಂದ ಆಸ್ಪತ್ರೆ ಸೇರುತ್ತಿದ್ದಾರೆ. ಇತ್ತೀಚೆಗೆ ಬಾಲಿವುಡ್ ದಿಗ್ಗಜ ಧರ್ಮೇಂದ್ರ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ಇನ್ನೊಂದು ಕಡೆ ಮತ್ತೊಬ್ಬ ದಿಗ್ಗಜ ಪ್ರೇಮ್ ಚೋಪ್ರಾ ಕೂಡ ವಯೋಸಹಜ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸುದ್ದಿಗಳ ನಡುವೆಯೇ ಬಾಲಿವುಡ್‌ ಮತ್ತೊಬ್ಬ ನಟ ಗೋವಿಂದ ಅವರನ್ನು ಕೂಡ ತಡರಾತ್ರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗೋವಿಂದ ನಿನ್ನೆ (ನವೆಂಬರ್ 11) ರಾತ್ರಿ ಮುಂಬೈನ ಅವರ ನಿವಾಸದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದರು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಗೋವಿಂದ ಪ್ರಜ್ಞೆತಪ್ಪಿ ಕುಸಿದು ಬಿದ್ದ ವಿಷಯವನ್ನು ಅವರ ಸ್ನೇಹಿತ ಹಾಗೂ ಗೆಳೆಯ ಲಲಿತ್ ಬಿಂದಲ್ ಖಚಿತ ಪಡಿಸಿದ್ದಾರೆ. ಸದ್ಯ ಗೋವಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗತ್ಯ ಪರೀಕ್ಷೆಗಳನ್ನು ಮಾಡಲಾಗಿದೆ.

Bollywood actor Govinda hospitalized after losing consciousness at home

ಗೋವಿಂದ ತಡರಾತ್ರಿ ಇದ್ದಕ್ಕಿದ್ದ ಹಾಗೇ ಮುಂಬೈನ ತಮ್ಮ ನಿವಾಸದಲ್ಲಿ ಪ್ರಜ್ಞೆತಪ್ಪಿದ್ದರು. ಕೂಡಲೇ ವೈದ್ಯರನ್ನು ಸಂಪರ್ಕಿಸಿದ ಬಳಿಕ ಅವರನ್ನು ತಡರಾತ್ರಿ ಆಸ್ಪತ್ರೆಗೆ ದಾಖಲಿಸಲಾಯ್ತು. ರಾತ್ರಿಯಿಂದಲೇ ಅವರನ್ನು ಎಮರ್ಜೆನ್ಸಿ ವಾರ್ಡ್‌ನಲ್ಲಿ ಚಿಕಿತ್ಸೆಯನ್ನು ನೀಡಲಾಗಿತ್ತು. ತಕ್ಷಣವೇ ಅವರಿಗೆ ಹಲವು ಪರೀಕ್ಷೆಗಳನ್ನು ಮಾಡಲಾಗಿದೆ. ಆ ಪರೀಕ್ಷೆಗಳ ವರದಿ ಇನ್ನೂ ಲಭ್ಯವಾಗಿಲ್ಲ.

ಗೋವಿಂದರನ್ನು ಕುಲಂಕುಶವಾಗಿ ಪರಿಶೀಲಿಸಿದ ಬಳಿಕ ವೈದ್ಯರು ಟೆಸ್ಟ್‌ಗಳ ವರದಿಗಾಗಿ ಕಾಯುತ್ತಿದ್ದಾರೆ. ಹಾಗೇ ನರರೋಗ ತಜ್ಞರನ್ನು ಸಂಪರ್ಕ ಮಾಡುವುದಕ್ಕೆ ಸಲಹೆಯನ್ನು ನೀಡಲಾಗಿದೆ ಎಂದು ಅವರ ಗೋವಿಂದ ಆಪ್ತ ಹಾಗೂ ಅವರ ಕಾನೂನು ಸಲಹೆಗಾರ ಲಲಿತ್ ಬಿಂದಲ್ ಮಾಹಿತಿ ನೀಡಿದ್ದಾಗಿ ಇಂಡಿಯಾ ಟುಡೇಗೆ ವರದಿ ಮಾಡಿದೆ. ಹೀಗಾಗಿ ಗೋವಿಂದ ಪ್ರಜ್ಞೆತಪ್ಪಲು ಅಸಲಿ ಕಾರಣವೇನು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಆದರೆ, ಕೆಲವೇ ಕ್ಷಣಗಳಲ್ಲಿ ವೈದ್ಯರು ಮಾಹಿತಿ ನೀಡುವ ಸಾಧ್ಯತೆಯಿದೆ.

ಕಳೆದ ವರ್ಷವಷ್ಟೇ ಗೋವಿಂದ ಕಾಲಿಗೆ ಗುಂಡು ತಗುಲಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ತಮ್ಮ ಲೈಸೆನ್ಸ್‌ ರಿವಾಲ್ವರ್‌ನಿಂದ ಅಚಾನಕ್ ಹಾರಿದ ಗುಂಡು ಅವರ ಕಾಲಿಗೆ ತಗುಲಿತ್ತು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆ ಬಳಿಕ ಚೇತರಿಸಿಕೊಂಡಿದ ನಟ ಮತ್ತೆ ಎಂದಿನಂತೆ ಆಕ್ಟಿವ್ ಆಗಿದ್ದರು. ಈಗ ಅವರ ಆರೋಗ್ಯದಲ್ಲಿ ಬೇರೆ ರೀತಿಯ ಸಮಸ್ಯೆ ಎದುರಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಈ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

ಬಾಲಿವುಡ್ ದಿಗ್ಗಜ ಧರ್ಮೇಂದ್ರ ಅವರನ್ನು ಆರೋಗ್ಯ ವಿಚಾರಿಸಿಕೊಳ್ಳುವುದಕ್ಕೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಗೋವಿಂದ ಬಂದಿದ್ದರು. ಈ ವೇಳೆ ಆರೋಗ್ಯವಾಗಿಯೇ ಕಾಣಿಸಿಕೊಂಡಿದ್ದರು. ಈಗ ದಿಢೀರನೇ ಆಸ್ಪತ್ರೆಗೆ ದಾಖಲಾಗಿದ್ದು ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಆದರೆ, ಗೋವಿಂದ ಆರೋಗ್ಯ ಸ್ಥಿರವಾಗಿದೆ ಎಂದು ಅವರ ಆಪ್ತ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ, ಇನ್ನೂ ಕುಟುಂಬದ ಕಡೆಯಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಗೋವಿಂದ ಮತ್ತೆ ಬಾಲಿವುಡ್‌ಗೆ ಕಮ್ ಬ್ಯಾಕ್ ಮಾಡುವುದಕ್ಕೆ ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ. 'ಹೀರೋ ನಂ 1', 'ಕೂಲಿ ನಂ 1', 'ರಾಜಾ ಬಾಬು' ಅಂತಹ ಸೂಪರ್‌ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ವರ್ಷಗಳಿಂದ ತಮ್ಮ ಸಿನಿಮಾಗಳ ಮೂಲಕ ರಂಚಿಸುತ್ತಿರುವ ಗೋವಿಂದ ಆದಷ್ಟು ಬೇಗ ಗುಣಮುಖರಾಗಿ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವಂತಾಗಲಿ ಎಂದು ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ.

More from Filmibeat

English summary
Bollywood actor Govinda hospitalized after losing consciousness at home.
Read more about: govinda actor health
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X