ಗೋವಿಂದ ಕಾಲಿಗೆ ಗುಂಡು, ಆಸ್ಪತ್ರೆಗೆ ದಾಖಲು; ಮಿಸ್‌ಫೈರ್ ಆಗಿದ್ದು ಹೇಗೆ?

ಬಾಲಿವುಡ್‌ ನಟ ಗೋವಿಂದ ಅವರನ್ನು ಇಂದು (ಅಕ್ಟೋಬರ್ 1) ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ತನ್ನ ಲೈಸೆನ್ಸ್ ರಿವಾಲ್ವರ್‌ನಿಂದ ಅಚಾನಕ್ ಆಗಿ ಗುಂಡು ಹಾರಿ ಕಾಲಿಗೆ ತಗುಲಿತ್ತು. ಈ ಸಂಬಂಧ ಬೆಳ್ಳಂಬೆಳಗ್ಗೆ ಗೋವಿಂದಾ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇಂದು (ಅಕ್ಟೋಬರ್ 1) ಬೆಳಗ್ಗೆ ಸರಿ ಸುಮಾರು 4.45ಕ್ಕೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ತನ್ನ ರಿವಾಲ್ವರ್ ಎಂದಿನಂತೆ ಜೊತೆಯಲ್ಲಿ ಇಟ್ಟುಕೊಂಡು ಕೊಲ್ಕತ್ತಾಗೆ ಹೊರಡಲು ಸಜ್ಜಾಗಿದ್ದರು. ಈ ವೇಳೆ ರಿವಾಲ್ವರ್ ಕೆಳಗೆ ಬಿದ್ದು ಮಿಸ್‌ ಫೈರ್ ಆಗಿದೆ ಎನ್ನಲಾಗಿದೆ. ಈ ವೇಳೆ ಅವರ ಕಾಲಿಗೆ ಗುಂಡು ತಗುಲಿದ್ದು, ತಕ್ಷಣವೇ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.

Bollywood actor Govinda shoots himself accidentally and is admitted to Mumbai Hospital

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಗೋವಿಂದ ಅವರ ಮೊಣಕಾಲಿನ ಸಮೀಪ ಗುಂಡು ತಗುಲಿದ್ದು, ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಬಾಲಿವುಡ್ ನಟ ಗೋವಿಂದ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಗೋವಿಂದ ಕುಟುಂಬ ಈ ಬಗ್ಗೆ ಮಾಹಿತಿಯನ್ನು ಇನ್ನೂ ಹಂಚಿಕೊಂಡಿಲ್ಲ.

ನಟ ಗೋವಿಂದ ಇಂದು (ಅಕ್ಟೋಬರ್ 1) ಬೆಳ್ಳೆಗೆ ಕೊಲ್ಕತ್ತಾಗೆ ಪಯಣ ಬೆಳೆಸಬೇಕಿತ್ತು. ಹೀಗಾಗಿ ಬೆಳ್ಳಂಬೆಳಗ್ಗೆ ರೆಡಿಯಾಗಿ ತನ್ನ ಲೈಸೆನ್ಸ್ ಇರುವ ಗನ್ ಅನ್ನು ಇಟ್ಟಿಕೊಂಡಿದ್ದರು. ಈ ವೇಳೆ ಗನ್ ಕೆಳಗೆ ಬಿದ್ದ ಪರಿಣಾಮ ಗುಂಡು ಹಾರಿದ್ದಾಗಿ ವರದಿಯಾಗಿದೆ. ಕೂಡಲೇ ಗೋವಿಂದಾ ಅವರನ್ನು ಬೆಳಗ್ಗೆ 5.15ಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗೋವಿಂದ ಅಪಾಯದಿಂದ ಪಾರಾಗಿದ್ದಾರೆಂದು ವರದಿಯಾಗಿದೆ.

ಮುಂಬೈ ಪೊಲೀಸರು ಈ ಘಟನೆ ಸಂಬಂಧ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಘಟನೆ ಬಗ್ಗೆ ಗೋವಿಂದ ಮ್ಯಾನೇಜರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ಕೂಡ ಕೊಟ್ಟಿದ್ದಾರೆ. " ಬಾಲಿವುಡ್ ನಟ ಹಾಗೂ ಶಿವಸೇನೆ ನಾಯಕ ಗೋವಿಂದ ಕೊಲ್ಕತ್ತಾಗೆ ಹೊರಡುವುದಕ್ಕೆ ರೆಡಿಯಾಗುತ್ತಿದ್ದರು. ಅವರು ತಮ್ಮ ಲೈಸೆನ್ಸ್ ಇರುವ ರಿವಾಲ್ವರ್ ಅನ್ನು ಕೇಸ್‌ನಲ್ಲಿ ಇಟ್ಟುಕೊಳ್ಳುತ್ತಿರುವಾಗಲೇ ಕೈ ತಪ್ಪಿ ಕೆಳಗೆ ಬಿದ್ದಿದೆ. ಈ ವೇಳೆ ಫೈರ್ ಆಗಿ ಅವರ ಕಾಲಿಗೆ ಗುಂಡು ಹೊಕ್ಕಿದೆ. ಈಗ ಅವರ ಕಾಲಿನಿಂದ ಗುಂಡನ್ನು ತೆಗೆಯಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಸದ್ಯ ಅವರು ಆಸ್ಪತ್ರೆಯಲ್ಲಿದ್ದಾರೆ" ಎಂದು ಶಶಿ ಸಿನ್ಹಾ ಹೇಳಿದ್ದಾರೆ.

ಗೋವಿಂದ ಬಾಲಿವುಡ್‌ನ ಜನಪ್ರಿಯ ನಟ. ಹಿಂದಿ ಚಿತ್ರರಂಗದಲ್ಲಿ ಸೂಪರ್‌ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಟ ಇತ್ತೀಚೆಗೆ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶಿವಸೇನೆ ಪಕ್ಷದೊಂದಿಗೆ ಗೋವಿಂದ ಗುರುತಿಸಿಕೊಂಡಿದ್ದು, ಸಿನಿಮಾಗಿಂತ ಹೆಚ್ಚಾಗಿ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ರಂಗೀಲ ರಾಜ ಅನ್ನೋ ಸಿನಿಮಾದಲ್ಲೂ ಗೋವಿಂದ ನಟಿಸಿದ್ದರು. ಆ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಗೆಲ್ಲಲಿಲ್ಲ.

ಗೋವಿಂದ 'ಕೂಲಿ ನಂ 1', 'ಸಾಜನ್ ಚಲೇ ಸಸುರಾಲ್', 'ರಾಜಾ ಬಾಬು', 'ರಜನಿ', 'ಪಾರ್ಟ್ನರ್', ಹಸೀನಾ ಮಾನ್ ಜಾಯೇಗಿ' ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 90ರ ದಶಕದಲ್ಲಿ ಗೋವಿಂದ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟು ಸಿನಿಪ್ರಿಯರನ್ನು ರಂಜಿಸಿದ್ದರು. 2007ರಿಂದ ಗೋವಿಂದ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋಲುಂಡಿದ್ದವು. ಹೀಗಾಗಿ ರಾಜಕೀಯದಲ್ಲಿ ಹೆಚ್ಚಾಗಿ ಸಕ್ರಿಯರಾಗಿದ್ದರು.

More from Filmibeat

English summary
Bollywood actor Govinda shoots himself accidentally and is admitted to Mumbai Hospital:
Read more about: govinda bollywood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X